ಮಂಗಳೂರು: ಬೋಂದೆಲ್ ದೇವಾಲಯದ ನವೀಕೃತ ಯೋಜನೆಗೆ ಸಹಾಯಾರ್ಥವಾಗಿ ಆಲ್ಫ್ರೆಡ್ ಬೆನ್ನಿಸ್ ಕ್ರಿಯೇಶನ್ಸ್ ಮಂಗಳೂರು ಮತ್ತು ಸಂತ ಲಾರೆನ್ಸರ ದೇವಾಲಯ ಮತ್ತು ಪುಣ್ಯಕ್ಷೇತ್ರ.
ಪ್ರಸ್ತುತಪಡಿಸಿದ 16 ನೇ ಸ್ಟ್ಯಾನ್ ನೈಟ್ ಕಾರ್ಯಕ್ರಮವನ್ನು ಫೆಬ್ರವರಿ 4ರಂದು ಆದಿತ್ಯವಾರ ಬೊಂದೆಲ್ ಶಾಲಾ ವಠಾರದಲ್ಲಿ ಆಯೋಜಿಸಲಾಗಿತ್ತು.
ವೇದಿಕೆಯಲ್ಲಿ ಗಣ್ಯ ವ್ಯಕ್ತಿ: ವ| ಫಾ ಆಂಡ್ರ್ಯೂ ಲಿಯೋ ಡಿಸೋಜ, “ಶ್ರೀ ರಾಯ್ ಕಾಸ್ಟೆಲಿನೊ”ಲುವಿ ಪಿಂಟೊ,ಶ್ರೀ ಜೋಸೆಫ್ ಮಾಥಾಯಸ್, ಆಲ್ವಿನ್ ರೊಡ್ರಿಗ್ಸ್”.
ಸ್ಟ್ಯಾನಿ ಮೆಂಡೊನ್ಸಾ,ಆಲ್ಫ್ರೆಡ್ ಬೆನ್ನಿಸ್, ರವಿ ಪಿಂಟೊ, ಸಂತೋಷ್ ಸಿಕ್ವೆರಾ, ಕುಮಾರಿ ಆಂಡ್ರಿಯಾ ಸಿಕ್ವೆರಾ, ಡಾ ಪ್ರೀತಿ ಡಿಸೋಜ, ಜೊನ್ ಡಿ ಸಿಲ್ವಾ , “ಫೆಲಿಕ್ಸ್” ಮೊರಾಸ್ ಉಪಸ್ಥಿತರಿದ್ದರು.
ಬೋಂದೆಲ್ ದೇವಾಲಯದ ನವೀಕೃತ ಯೋಜನೆಗೆ ಸಹಾಯಾರ್ಥವಾಗಿ ರೂ ಐದು ಲಕ್ಷ ಚೆಕ್ , ಆಲ್ಫ್ರೆಡ್ ಬೆನ್ನಿಸ್ ಹಾಗೂ ಸ್ಟ್ಯಾನಿ ಮೆಂಡೊನ್ಸಾ ವ| ಫಾ ಆಂಡ್ರ್ಯೂ ಲಿಯೋ ಡಿಸೋಜರವರಿಗೆ ಹಾಸ್ತಾಂತರ ಮಾಡಿದರು.
ಸಂಜೆ ಗಂಟೆ. 6.೦೦ರಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮಂಗಳೂರಿನ ಹೆಸರಾಂತ ಗಾಯಕ-ಗಾಯಕಿರಿಂದ ಸಂಗೀತ ರಸಮಂಜರಿ, ಜೊಸ್ವಿನ್ ಪಪ್ವಾನರಿಂದ ಸಂಗೀತ , ಮೆಮರಿ ಮಂಗಳೂರು ಕಲಾವಿದರಿಂದ ಹಾಸ್ಯ ಕಾರ್ಯಕ್ರಮ, ಅರ್ಬನ್ ಗ್ರೂವ್ ಅವರಿಂದ ನೃತ್ಯ . ಒಂದೇ ವೇದಿಕೆಯಲ್ಲಿ ಪ್ರೇಕ್ಷಕರಿಗೆ ವಿವಿಧ ಮನೋರಂಜನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು . ಈ ಕಾರ್ಯಕ್ರಮವನ್ನು ಕೊಂಕಣಿ ಭಾಷಿಕರ ಹೆಸರಾಂತ ಕಾರ್ಯನಿರ್ವಾಹಕ ಶ್ರೀಯುತ ಲೆಸ್ಲಿ ರೇಗೊ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮವು ಉಚಿತ ಪ್ರವೇಶವಾಗಿತ್ತು.