ರಾಷ್ಟ್ರ: ಭಾರತೀಯ ಮಾರುಕಟ್ಟೆಗಾಗಿ ಮಾಡಲಾಗಿರುವ ಪ್ರಮುಖ ಮಾರ್ಗಪಥಕ್ಕೆ ಅನುಗುಣವಾಗಿ, ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮವು ತನ್ನ ವಾರ್ಷಿಕ ಭಾರತ ರೋಡ್ಶೋದ 2024 ವೃತ್ತಿಯನ್ನು ಘೋಷಿಸಲು ಹರ್ಷಿಸುತ್ತಿದೆ. ಕಾಮನಬಿಲ್ಲಿನ ರಾಷ್ಟ್ರಕ್ಕಾಗಿ ಪ್ರಯಾಣ ಹಾಗೂ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ಅತ್ಯಾವಶ್ಯಕ ಸಾಧನವಾಗಿರಲಿರುವ ಈ ರೋಡ್ ಶೋ,ಪ್ರಪಥಮ ಬಾರಿಗೆ, ಜೈಪುರದ ಗುಲಾಬಿ ನಗರವನ್ನು ಪ್ರವೇಶಿಸಲಿದೆ. ಫೆಬ್ರವರಿ 12ರಿಂದ 16ರವರೆಗೆ ನಡೆಯಲಿರುವ ಕಾರ್ಯಕ್ರಮವು, ಕ್ರಮವಾಗಿ, ದೆಹಲಿ, ಅಹಮದಾಬಾದ್, ಬೆಂಗಳೂರು ಹಾಗೂ ಮುಂಬೈ ನಗರ ಮುಂತಾದ ಪ್ರಮುಖ ನಗರಗಳಿಗೆ ಮುಂದುವರಿಯಲಿದೆ.
20ನೆ ವಾರ್ಷಿಕ ರೋಡ್ಶೋ ಶೆಡ್ಯೂಲ್, ಭಾರತೀಯ ಮಾರುಕಟ್ಟೆಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮದ ಪ್ರಯತ್ನಗಳಲ್ಲಿ ಅತಿಮುಖ್ಯ ಮೈಲಿಗಲ್ಲಾಗಿದೆ. ಭಾರತೀಯ ಗ್ರಾಹಕರೊಡನೆ ತೊಡಗಿಕೊಳ್ಳುವುದಕ್ಕಾಗಿ ಪ್ರವಾಸೋದ್ಯಮ ಮಂಡಳಿಯ ವರ್ಷದುದ್ದದ ಯೋಜನೆಯ ಅನಾವರಣವನ್ನೂ ಈ ಕಾರ್ಯಕ್ರಮ ಒಳಗೊಂಡಿರುತ್ತದೆ.ಸೂಕ್ಷ್ಮ ದೃಷ್ಟಿಕೋನಕ್ಕೆ ಎಡೆಮಾಡಿಕೊಡುವ ವಿನೂತನ ಅಂತರ್ದೃಷ್ಟಿಗಳು, ಭಾರತದಿಂದ ಹೊರಹೋಗುತ್ತಿರುವ ಪ್ರಯಾಣ ಮಾರುಕಟ್ಟೆಯನ್ನು ಶೋಧಿಸಲು ವ್ಯಾಪಾರ ಭಾಗೀದಾರರಿಗೆ ಅವಕಾಶ ಒದಗಿಸಲಿದೆ. ಜೈಪುರದಲ್ಲಿ ಉದ್ಘಾಟನೆಗೊಳ್ಳಲಿರುವ ಈ ರೋಡ್ಶೋದಲ್ಲಿ ಫೆಬ್ರವರಿ 11, 2024ರಂದು ಪ್ಯಾನೆಲ್ ಚರ್ಚೆ ಕೂಡ ನಡೆಯಲಿದ್ದು, 150 ಪ್ರಮುಖ ಪ್ರತಿನಿಧಿಗಳು ಹಾಗೂ ವ್ಯಾಪಾರ ಭಾಗೀದಾರರನ್ನು ಒಗ್ಗೂಡಿಸಿ, ದಕ್ಷಿಣ ಆಫ್ರಿಕಾದ ದೃಶ್ಯಗಳು, ಧ್ವನಿಗಳು, ಅಡುಗೆ, ಮತ್ತು ಸಂಸ್ಕೃತಿಯ ಪರಿಚಯ ಮಾಡಿಸಲಿದೆ.
ಜಗತ್ತಿನಾದ್ಯಂತ, ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮಕ್ಕಾಗಿ ಭಾರತವು ಪ್ರಸ್ತುತ ಮೊದಲ ಮೂರು ಕೇಂದ್ರೀಕರಣ ಮಾರುಕಟ್ಟೆಗಳ ಪೈಕಿ ಒಂದಾಗಿದ್ದು, ಮಹತ್ತರವಾದ ಪ್ರಾಮುಖ್ಯತೆಯ ಸ್ಥಾನ ಗಳಿಸಿದೆ. ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮದ ಮಧ್ಯಪ್ರಾಚ್ಯ, ಭಾರತ ಮತ್ತು ಆಗ್ನೇಯ ಏಶ್ಯದ ಹಬ್ ಹೆಡ್ ಆದ ಮಿಸ್ ನೆಲಿಸ್ವ ನ್ಕಾನಿ( Ms. Neliswa Nkani) ನೇತೃತ್ವದ ರೋಡ್ಶೋ, ಕಾಮನಬಿಲ್ಲಿನ ರಾಷ್ಟ್ರಕ್ಕೆ”ಇನ್ನೂ ಹೆಚ್ಚು ಹೆಚ್ಚು’ ಗ್ರಾಹಕರನ್ನು ಆಕರ್ಷಿಸುವ ಅವಿಭಾಜ್ಯ ಅಂಗವಾಗಿ ಉಳಿಯಲಿದೆ.ಬಹಳ ವರ್ಷಗಳಿಂದ, ಭಾರತವು, ಜಗತ್ತಿನಾದ್ಯಂತ ಅನೇಕ ಗಮ್ಯಗಳಿಗೆ ಅತಿದೊಡ್ಡ ಮೂಲ ಮಾರುಕಟ್ಟೆಗಳ ಪೈಕಿ ಒಂದಾಗಿದೆ.ಹೊರಹೋಗುವ ಪ್ರವಾಸೋದ್ಯಮದಲ್ಲಿ ಇತ್ತೀಚೆಗೆ ಆಸಕ್ತಿ ಬೆಳೆಸಿಕೊಂಡಿರುವ ದೇಶಕ್ಕೆ, ಯಾವುದೇ ಪ್ರವಾಸೋದ್ಯಮ ಮಂಡಳಿಯನ್ನು ಕಡೆಗಾಣಿಸುವುದು ಅಸಾಧ್ಯವಾಗಿದೆ.
ಈ ಸಂದರ್ಭದಲ್ಲಿ ಮಾತನಾಡುತ್ತಾ, ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮದ ಮಧ್ಯಪ್ರಾಚ್ಯ, ಭಾರತ ಮತ್ತು ಆಗ್ನೇಯ ಏಶ್ಯದ ಹಬ್ ಹೆಡ್ ಆದ ಮಿಸ್ ನೆಲಿಸ್ವ ನ್ಕಾನಿ( Ms. Neliswa Nkani), “2023ರಲ್ಲಿ ನಾವು ಭಾರತೀಯ ಮಾರುಕಟ್ಟೆಯಿಂದ ಬರುವವರಲ್ಲಿ ಮಹತ್ತರವಾದ ಬೆಳವಣಿಗೆ ಕಾಣುವ ಮೂಲಕ ಮತ್ತೊಂದು ಬೆಳವಣಿಗೆಯ ವರ್ಷ ಅನುಭವಿಸಿದೆವು. ದಕ್ಷಿಣ ಆಫ್ರಿಕಾಕ್ಕೆ ಒಳಬರುವ ಪ್ರವಾಸೋದ್ಯಮದಲ್ಲಿ ಹೆಚ್ಚಳಿಕೆಯನ್ನು ಸೂಚಿಸುವ ನಮ್ಮ ಯಶಸ್ವೀ ತಂತ್ರಗಾರಿಕೆಯು, ಈ ಹಿಂದಿನ ವರ್ಷದಲ್ಲಿ ನಾವು ಕೈಗೊಂಡ ಉಪಕ್ರಮಗಳಿಗೆ ಸಾಕ್ಷಿಯಾಗಿದೆ. ಅತ್ಯಂತ ಎಚ್ಚರಿಕೆಯಿಂದ ರೂಪಿಸಲ್ಪಟ್ಟ ಪ್ರಚಾರಗಳ ಮೂಲಕ, ನಾವು ತೋರಿಸಿದ ದಕ್ಷಿಣ ಆಫ್ರಿಕಾದ ಅಡಗಿದ ಸೌಂದರ್ಯ, ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ಬರುವ ಸಾಂಕ್ರಾಮಿಕ-ಮುನ್ನಿನ-ಮಟ್ಟದ 82% ಚೇತರಿಕೆಯನ್ನು ಸಾಧಿಸಲು ಕಾರಣವಾಯಿತು. “ ಎಂದು ಹೇಳಿದರು.
ಮುಂದುವರಿದು ಅವರು ಹೇಳುತ್ತಾರೆ:“Thಈ ಅಮೋಘ ಪ್ರತಿಕ್ರಿಯೆಯು, ಭಾರತೀಯ ಮಾರುಕಟ್ಟೆಗೆ ನಮ್ಮ ಬದ್ಧತೆಯನ್ನು ಎತ್ತಿ ತೋರಿಸುವುದು ಮಾತ್ರವಲ್ಲದೆ, ಸಾಂಕ್ರಾಮಿಕ ಮುನ್ನಿನ ಆಗಮನ ಸಂಖ್ಯೆಗಳನ್ನು ಮೀರುವ ನಮ್ಮ ಗುರಿಯೆಡೆಗೆ ಹತ್ತಿರವಾಗುತ್ತಿದೆ. ಇಲ್ಲಿಯವರೆಗೆ ಕಂಡಿರುವ ಪ್ರಬಲವಾದ ಪ್ರಯಾಣಿಕ ಮೊಮೆಂಟಮ್ ಮೇಲೆ ಮುಂದುವರಿಯುವ ಉತ್ಸಾಹದೊಂದಿಗೆ, ನಮ್ಮ 2024 ರೋಡ್ಶೋ ವ್ಯಾಪಾರ ಭಾಗೀದಾರರಿಗೆ ವಿನೂತನವಾದ ಹಾಗೂ ಅಮೂಲ್ಯ ಅಂತರ್ದೃಷ್ಟಿಗಳನ್ನು ಒದಗಿಸುವ ಭರವಸೆ ನೀಡುತ್ತದೆ. ನಮ್ಮ ಪ್ರಯತ್ನಗಳು, ನಮ್ಮ ಭಾರತೀಯ ಕೌಂಟರ್ಪಾರ್ಟ್ಗಳು ತಮ್ಮ ದೃಷ್ಟಿಕೋನವನ್ನು ಮರುವಿವರಿಸಿಕೊಂಡು, ತಮ್ಮನ್ನು ತಾವು ಎಲ್ಲಾ ಅಗತ್ಯ ಸಾಧನಗಳಿಂದ ಸಜ್ಜುಗೊಳ್ಳಲು ನೆರವಾಗುತ್ತವೆ ಎಂಬ ವಿಶ್ವಾಸ ನಮಗಿದೆ.”
ಭಾರತೀಯ ವ್ಯಾಪಾರ ಖರೀದಿದಾರರೊಂದಿಗಿನ ಪರಸ್ಪರ ಪ್ರಯೋಜನವುಂಟು ಮಾಡುವ ಸಹಭಾಗಿತ್ವಗಳಿಗೆ ದಾರಿಮಾಡಿಕೊಡಲಿರುವ ಈ ಸಮಾವೇಶದಲ್ಲಿ ಕಾಮನಬ್ವಿಲ್ಲಿನ ರಾಷ್ಟ್ರದಿಂದ 40ಕ್ಕಿಂತ ಹೆಚ್ಚಿನ ಪ್ರಮುಖ ಪ್ರದರ್ಶಕರು ಹಾಜರಿರಲಿದ್ದು, ಇವರುಗಳ ಪೈಕಿ 14 SMMEಗಳಾಗಿವೆ. ಈ ವರ್ಷ, 40%ಗಿಂತ ಹೆಚ್ಚಿನವು ಹೊಸ ಉತ್ಪನ್ನಗಳು ಎಂಬುದು ಗಮನಾರ್ಹ. ಪ್ರತಿವರ್ಷ, ಭಾರತೀಯ ಹಾಗೂ ದಕ್ಷಿಣ ಆಫ್ರಿಕಾ ವ್ಯಾಪಾರ ಭಾಗೀದಾರರು, ವಾರ್ಷಿಕ ವ್ಯಾಪಾರ ಶೆಡ್ಯೂಲ್ ಸಮಯದಲ್ಲಿ ಒಗ್ಗೂಡಿ ಮುಂದಿನ ಹಂತದ ಬೆಳವಣಿಗೆಯಗೆ ಮಾರ್ಗ ರೂಪಿಸುತ್ತಾರೆ. ಇತಿಯೋಪಿಯನ್ ಏಲೈನ್ಸ್, ದಿ ವೆಸ್ಟಿನ್ ಹೋಟೆಲ್ಸ್-ಕೇಪ್ಟೌನ್, ಎಸ್ಎ ಫಾರೆಸ್ಟ್ ಅಡ್ವೆಂಚರ್ಸ್ ಮುಂತಾದ ಸುಪ್ರಸಿದ್ಧ ಸಂಸ್ಥೆಗಳು ಹಾಗೂ ಜೋಬರ್ಗ್ ಟೂರಿಸಮ್, ವೆಸ್ಗ್ರೋ ಮುಂತಾದ ಸರ್ಕಾರೀ ಪ್ರಾಧಿಕಾರಗಳು, ತಮ್ಮ ಇತ್ತೀಚಿನ ಕೊಡುಗೆಗಳನ್ನು ಪ್ರದರ್ಶಿಸಿ, ಆರಾಮದಾಯಕವಾದ ತಂಗುವಿಕೆ, ಮೈನವಿರೇಳಿಸುವ ಸಾಹಸಗಳು ಹಾಗೂ ಅವಿಸ್ಮರಣೀಯ ಅನುಭವಗಳನ್ನು ಪ್ರೋತ್ಸಾಹಿಸಲಿವೆ.
2023ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮ ದೈತ್ಯ ಹೆಜ್ಜೆ ಮುಂದಿಟ್ಟು, ಭಾರತದಿಂದ ಸಾಂಕ್ರಾಮಿಕ ಪೂರ್ವ ಆಗಮನಗಳನ್ನು ಮಿರುವ ತನ್ನ ಗುರಿಗೆ ಹತ್ತಿರವಾಗಿತ್ತು. ಕಾಮನಬಿಲ್ಲಿನ ರಾಷ್ಟ್ರದಲ್ಲಿ ಸಾಹಸದ ಅತಿದೊಡ್ಡ ಗ್ರಾಹಕರು ಭಾರತೀಯ ಪ್ರಯಾಣಿಕರೇ ಆಗಿದ್ದಾರೆ. ಇಷ್ಟೇ ಅಲ್ಲದೆ, ಭಾರತದಿಂದ ಹೊರಗೆ, ಅತಿದೊಡ್ಡ ಭಾರತೀಯ ಸಂಖ್ಯೆಯ ಚಲನೆ ಇರುವ ದೇಶವೂ ಇದಾಗಿದೆ.ಈ ಎರಡೂ ರಾಷ್ಟ್ರಗಳ ನಡುವೆ ಇ-ವೀಸಾ ಪೈಲಟ್ ಪ್ರೊಗ್ರಾಮ್ ಮತ್ತು ನೇರ ವಿಮಾನ ಸಂಪರ್ಕದ ಮೂಲಕ ಸುಧಾರಿತ ಪ್ರವೇಶಾವಕಾಶದ ಮಾತುಕತೆ ನಡೆಯುತ್ತಿರುವಂತಹ ಸಂದರ್ಭದಲ್ಲಿ, ಈ ಎರಡೂ ದೇಶಗಳ ನಡುವಿನ ಬಾಂಧವ್ಯ ಇನ್ನಷ್ಟು ಹೆಚ್ಚಾಗಲಿದೆ. ಪ್ರಸ್ತುತ, ಎಮಿರೇಟ್ಸ್, ಖಾತಾರ್ ಏರ್ವೇಸ್, ಇತಿಯೋಪಿಯನ್ ಏಲೈನ್, ಕೀನ್ಯ ಏರ್ವೇಸ್ ಮತ್ತು ಏರ್ ಸಿಚಿಲಿಸ್ ಒಳಗೊಂಡಂತೆ, ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಲವಾರು ಸ್ಟಾಪ್-ಓವರ್ ವಿಮಾನಗಳು ಹಾರಾಡುತ್ತಿವೆ.