ಮಂಗಳೂರು: ಬಿ.ಜೆ.ಪಿ ಜಿಲ್ಲಾಧ್ಯಕ್ಷ ಪದ ಗ್ರಹಣ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಪಂಚಾಯ್ತಿಯಿಂದ ಶಾಸಕರವರೆಗೆ ಸ್ಪರ್ಧಿಸಿದವರು. ಸಾಮಾನ್ಯ ಕಾರ್ಯಕರ್ತರಾಗಿ ಇಂದು ಮತ್ತೆ ಸಂಘಟನೆ ಮಾಡಿ ಪಾರ್ಟಿ ಸಂಘಟಿಸಿ ಬಿಜೆಪಿ ಗೆಲುವಿನ ನೇತೃತ್ವ ವಹಿಸಲಿದ್ದಾರೆ.
ಮಾಜಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಮೂಡಬಿದ್ರಿ ಕೊರೋನಾ ಸಮಯದಲ್ಲೂ ಎಲ್ಲ ಚುನಾವಣೆಗಳಲ್ಲಿ , ಪಂಚಾಯ್ತಿ, ಪಾಲಿಕೆ, ವಿಧಾನಸಭೆಯಲ್ಲಿ 8ರಲ್ಲಿ 6 ಗೆಲ್ಲಿಸಿದ್ದಾರೆ.ಪರಿವರ್ತನೆ ಆರಂಭವಾಗಿದೆ, ಕಾರ್ಯಕರ್ತರು ಉತ್ಸಾಹದಿಂದ ಇದ್ದಾರೆ, ರಾಮ ಪ್ರತಿಷ್ಟೆ ಮೂಲಕ. ಇಂಡಿಯಾ ಚೂರು ಚೂರಾಗ್ತಿದ್ದರೆ, ಬಿಜೆಪಿ ಅಭೂತಪೂರ್ವ ಸಾಧನೆ ಮಾಡ್ತಿದೆ. ದೇಶದೆಲ್ಲೆಡೆ ಮೋದಿ ಮತ್ತು ಶ್ರೀರಾಮ ಹೆಸರೇ. ಮತ್ತೆ ಮೋದಿ ಬರೋದು ಶತಸಿದ್ಧ.
ಹನುಮ ಮೂಲಕ ಹಿಂದೂಗಳಿಗೆ ದ್ರೋಹ ಮಾಡಿದ್ದಾರೆ. ಹನುಮ, ರಾಮನ ಶಾಪ ತಟ್ಟೇ ತಟ್ಟಲಿದೆ. ಸಿದ್ದು ಹಿಂದೆ ಇದ್ದಾಗಲೂ ಇದೇ ಮಾಡಿದ್ದಾರೆ ಜನ ಉತ್ತರ ಕೊಟ್ಟಿದಾರೆ, ಇಂಥ ಕಾರ್ಯಗಳನ್ನು ಸಹಿಸಲ್ಲ, ಹೋರಾಟ ಮಾಡ್ತೀವಿ. 28 ಸ್ಥಾನ ಎಲ್ಲಾ ಗೆಲ್ತೀವಿ, ವಾತಾವರಣ ನಮ್ಮ ಪರವಾಗಿದೆ. ಜಿಲ್ಲೆಯಲ್ಲಿ ಎಂಪಿ ಚುನಾವಣೆಯಲ್ಲಿ ಮತ್ತೆ ಗೆದ್ದೇ ಗೆಲ್ತೇವೆ, ತಾಪಂ, ಜಿ.ಪಂನಲ್ಲೂ ಗೆಲ್ಲಲು ಸಂಘಟಿತರಾಗಬೇಕು.
ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇಂದು ಗ್ಯಾಸ್, ಶೌಚಾಲಯ, ವಿದ್ಯುತ್ ಇಲ್ಲದ ಮನೆಗಳಿಲ್ಲ. ಜನ ಕಾಲ ಮೇಲೆ ನಿಲ್ಲಲು ಶಕ್ತರಾಗಿದ್ದಾರೆ. ಒಂದು ಕಾಲದಲ್ಲಿ ಯುದ್ಧಕ್ಕೆ ಮದ್ದು ಗುಂಡು ಇರಲಿಲ್ಲ. ಪ್ರೋತ್ಸಾಹ ಇರಲಿಲ್ಲ. ಇಂದು ಚೀನಾ ತಡೆಯುವ ಶಕ್ತಿ ಇರೋದು ಭಾರತಕ್ಕೆ ಮಾತ್ರ. ಅದಕ್ಕೆ ಮೋದಿ ಕಾರಣ. ಇನ್ಜು ಮೂರು ವರ್ಷದಲ್ಲಿ ಜಗತ್ತಿನ ಮೂರನೇ ಬಲಾಢ್ಯ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಮತ್ತೆ 10 ವರ್ಷದಲ್ಲಿ ಭಾರತ ನಂ೧ ರಾಷ್ಟ್ರವಾಗಿ ಹೊರಹೊಮ್ಮಲಿದೆ.
ಆದರೆ ಸಿದ್ದು ಸರ್ಕಾರ ದುಃಸ್ಥಿತಿಗೆ ಇಳಿದಿದೆ. ಕಾಂತರಾಜು ವರದಿ ಸಿದ್ಧಪಡಿಸಿದರೂ ಬಿಡುಗಡೆ ಮಾಡಿಲ್ಲ. ಅಂಗೀಕಾರಕ್ಕೆ ಬದ್ಧ ಅಂತ ಹೇಳಿ ಆಯೋಗದ ಅವಧಿಯನ್ನು ಮತ್ತೊಂದು ತಿಂಗಳು ಮುಂದುವರಿಸಿದ್ದಾರೆ. ಅಹಿಂದ ನಾಯಕ ಅಂತಿದ್ರು, ಈಗ ಅಲ್ಪಸಂಖ್ಯಾತ ನಾಯಕ ಎನ್ನುವ ಮಟ್ಟಕ್ಕೆ ತಲುಪಿದ್ದಾರೆ. ರಾಷ್ರ್ಟಪತಿಗೆ ಏಕವಚನದಲ್ಲಿ ನಿಮಗೆ ಅಧಿಕಾರ ಕೊಟ್ಟವರು ಯಾರು? ಅದರೆ ಯಾವಾಗಲಾದರೂ ಸೋನಿಯಾ ಹಾಗೂ ರಾಹುಲ್, ಗಾಂಧಿಯನ್ನು ಏಕವಚನದಲ್ಲಿ ಕರೆದಿದ್ದೀರಾ? ಇದರ ಫಲಿತಾಂಶ ಉಣ್ಣುವ ದಿನ ಕೈಗೆ ಬರಲಿದೆ.
ಮಂಡ್ಯ ಹನುಮ ದ್ವಜ ತೆಗೆಸಿದ್ದೀರಿ. ಲಾಠಿ ಚಾರ್ಜ್ ಮಾಡಿದ್ದೀರಿ, ರಾಜ್ಯದಲ್ಲಿ ಈಗ ನಡೆಯೋ ಚುನಾವಣೆ ಹನುಮ ಭಕ್ತರಿಗೂ ಟಿಪ್ಪು ಭಕ್ತರಿಗೆ ನಡೆವ ಚುನಾವಣೆ. ನಿಶ್ಚಯವಾಗಿ ರಾಮ ಭಕ್ತರು ಗೆದ್ದೇ ಗೆಲ್ತಾರೆ.
ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ರಾಜ್ಯದಲ್ಲಿ ಲೋಕಸಭಾ ಚುನಾವಣೆ ಬರ್ತಿದೆ. ರಾಮ ಮಂದಿರ ಉದ್ಘಾಟನೆ ಮೂಲಕ ಇಡೀ ದೇಶ ರಾಮಮಯವಾಗಿದೆ. ಮೋದಿ ಪ್ರಧಾನಿ ಆಗಬೇಕಂತ ಇಡೀ ದೇಶ ಮಾತನಾಡ್ತಿದೆ. ಆದರೆ ರಾಜ್ಹದಲ್ಲಿ ಕೈ ದುರಾಡಳಿತ ಮಾಡ್ತಿದೆ. ಧ್ವಜಸ್ತಂಭ ನಿರ್ಮಾಣ ಮಾಡಲು 2 ತಿಂಗಳ ಹಿಂದೆ ಗ್ರಾ ಪಂನಲ್ಲಿ 24 ರಲ್ಲಿ 20 ಜನರ ಮೆಜಾರಿಟಿ ತಕೊಂಡು ನಿರ್ಧಾರ ಮಾಡಿದ್ದಾರೆ. ಜನರಿಂದ 6 ಲಕ್ಷ ರು. ಕಲೆಕ್ಟ್ ಮಾಡಿ ನಂತರ ಧ್ವಜ ಹಾರಿಸಿದ್ದಾರೆ. ರಾಷ್ರ್ಟ ಧ್ವಜ ಬಿಟ್ಟು ಉಳಿದ ದಿನ ಹನುಮ ಧ್ವಜ ಹಾರಿಸ್ತಾರೆ, ಕೈ ತಪ್ಪು ತಿಳುವಳಿಕೆ ಹರಡ್ತಿದಾರೆ. ಅಲ್ಲಿ ರಾಷ್ರ್ರ ಧ್ವಜ ಹಾರಿಸಿದ್ದಾರೆ. ನಾವು ರಾ. ಧ್ವಜ ವಿರೋಧ ಅಲ್ಲ. ಆದರೆ ತರಾತುರಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಹಾರಿಸಿ ರಾ.ದ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರ್. ಅಶೋಕ್ ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹೆಸರಿನಲ್ಲೇ ರಾಮ ಇದೆ ಎನ್ನುತ್ತಾರೆ. ಆದರೆ ಅವರ ಹೃದಯ ಮಾತ್ರ ಟಿಪ್ಪು ಟಿಪ್ಪು ಎನ್ನುತ್ತಿದೆ. ಕೋಮುವಾದ ಅಂದರೆ ಕಾಂಗ್ರೆಸ್, ಕಾಂಗ್ರೆಸ್ ಎಂದರೆ ಕೋಮುವಾದ. ಇಂಡಿಯಾ ಒಡೆದ ಮನೆ ಆಗಿದೆ. ರಾಹುಲ್ ಕಾಲಿಟ್ಟಲ್ಲೆಲ್ಲ ಮೋದಿ ಗೆಲ್ತಿದ್ದಾರೆ. ಮುಂದೆಯೂ ಅದೇ ಆಗಲಿದೆ.
28 ಗೆದ್ದರೆ ಈ ಸರ್ಕಾರ ಒಂದು ತಿಂಗಳೂ ಇರಲ್ಲ. ಎಲ್ಲ ಸೀಟ್ ಗೆದ್ದರೆ ಅಂತಹ ಸರ್ಕಾರದ ಪರ ಯಾರೂ ನಿಲ್ಲಲ್ಲ. ಹಾಗಾಗಿ ಎಲ್ಲ 28 ಕ್ಷೇತ್ರಗಳನ್ನು ಗೆಲ್ಲಿಸೋಣ. ಅದಕ್ಕೆ ಪೂರಕ ವಾತಾವರಣವೂ ಇದೆ, ಮೋದಿ ಮತ್ತೆ ಪ್ರಧಾನಿ ಮಾಡೋಣ ಎಂದು ಆರ್. ಅಶೋಕ್ ಹೇಳಿದರು.
ನೂತನ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಪ್ರಯತ್ನ ಮಾಡ್ತೇನೆ. ಕಾರ್ಯಕರ್ತರನ್ನು ಜತೆಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ. ಹೆಚ್ಚು ಮಾತಾಡುದಕ್ಕಿಂತ ಹೆಚ್ಚು ಕೆಲಸ ಮಾಡಲು ಪ್ರಯತ್ನ ಮಾಡಲಿದ್ದೇನೆ. ಕಾರ್ಯಕರ್ತರ ನೋವು, ಭಾವನೆ ಗೊತ್ತಿದೆ, ಯಾರ ಮನಸ್ಸನ್ನೂ ನೋಯಿಸುವ ಕೆಲಸ ಮಾಡಲ್ಲ ಎಂದು ಹೇಳಿದರು. ನಾನೂ ಒಬ್ಬ ಕಾರ್ಯಕರ್ತನಾಗಿ ನಿಮ್ಮೊಂದಿಗೆ ಇದ್ದು ಕೆಲಸ ಮಾಡುತ್ತೇನೆ ಎಂದರು.
ಲೋಕ.ಸಭೆ ಚುನಾವಣೆಯಲ್ಲಿ ಈ ಸಲ 3 ಲಕ್ಷಕ್ಕಿಂತ ಹೆಚ್ಚು ಅಂತರದಲ್ಲಿ ಗೆಲ್ಲಬೇಕು. ಈ ನಿಟ್ಟಿನಲ್ಲಿ ಸಂಘಟಿತರಾಗಿ ಕೆಲಸ ಮಾಡೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿ.ಸಭೆ ವಿ.ನಾಯಕ, ಮಾಜಿ ಸಚಿವ ಅಶ್ವತ್ಥ ನಾರಾಯಣ್, ಸಂಸದ ನಳಿನ್ ಕುಮಾರ್ ಕಟೀಲ್ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜೀವಿ ನಿಕಟ ಪೂರ್ವ ಅಧ್ಯಕ್ಷ ಸುದರ್ಶನ ಮೂಡುಬಿದರೆ ನೂತನ ಜಿಲ್ಲಾ ಅಧ್ಯಕ್ಷ ಸತೀಶ್ ಕೊಂಪಲ ರಾಜ್ಯ ಕಾರ್ಯದರ್ಶಿ ಶರಣ್ ಪಲ್ಲಿಕೇರಿ, ಬೃಜೇಶ್ ಚೌಟ, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಶಾಸಕರಾದ ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಪ್ರಭಾರಿ ಭಾರತೀಶ್, ಸಹ ಪ್ರಭಾರಿ ರಾಜೇಶ್ ಕಾವೇರಿ, ಎಂಎಲ್ಸಿ ಪ್ರತಾಪ್ ಸಿಂಹ ನಾಯಕ್, ರಾಜ್ಯ ಮಾಧ್ಯಮ ಸಹ ಸಂಚಾಲಕ ಪ್ರಶಾಂತ್ ಕಡೆಂಜಿ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪಮೇಯರ್ ಸುನೀತಾ ಮತ್ತಿತರರು ಇದ್ದರು.