ಬೆಂಗಳೂರು: ಪ್ರಮುಖ ಬೆಳವಣಿಗೆಯ ಕ್ಷೇತ್ರಗಳ ಮೇಲೆ ಗಮನವನ್ನು ಕೇಂದ್ರೀಕರಿಸುವುದಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾನ್ಪುರ್ (ಐಐಟಿಕೆ) ಸ್ಯಾಮ್ಸಂಗ್ ಆರ್&ಡಿ ಇನ್ಸ್ಟಿಟ್ಯೂಟ್, ನೋಯ್ಡಾ (ಎಸ್ಆರ್ಐ-ನೋಯ್ಡಾ) ಜೊತೆಗೆ ಐದು ವರ್ಷಗಳ ಅವಧಿಯ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಐಐಟಿ ಕಾನ್ಪುರ್ ವಿದ್ಯಾರ್ಥಿಗಳ, ಅಧ್ಯಾಪಕರ ಮತ್ತು ಸ್ಯಾಮ್ಸಂಗ್ ಎಂಜಿನಿಯರ್ಗಳ ಜಂಟಿ ಸಂಶೋಧನಾ ಯೋಜನೆಗಳು, ವಿದ್ಯಾರ್ಥಿಗಳು ಉದ್ಯಮಕ್ಕೆ ಸಿದ್ಧರಾಗಲು ಸಹಾಯ ಮಾಡುತ್ತವೆ. ಈ ಸಂಶೋಧನಾ ಯೋಜನೆಗಳು ಆರೋಗ್ಯ, ವಿಷ್ಯುಯಲ್, ಚೌಕಟ್ಟು ಮತ್ತು ಬಿ2ಬಿ ಭದ್ರತೆ ಮತ್ತು ಜನರೇಟಿವ್ ಎಐ ಮತ್ತು ಕ್ಲೌಡ್ನಂತಹ ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿರುತ್ತವೆ.
ಸಂಶೋಧನಾ ಯೋಜನೆಗಳೇ ಅಲ್ಲದೆ, ಎಐ, ಕ್ಲೌಡ್ ಮತ್ತು ಇತರ ಹೊಸ ಪ್ರಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸ್ಯಾಮ್ಸಂಗ್ ಇಂಜಿನಿಯರ್ಗಳ ಕೌಶಲಗಳನ್ನು ಹೆಚ್ಚಿಸುವ ಸಲುವಾಗಿ ಅವಕಾಶಗಳನ್ನು ಒದಗಿಸುವುದಕ್ಕೆ ಈ ಎಂಒಯು ನೆರವಾಗುತ್ತದೆ.
ಎಸ್.ಆರ್.ಐ-ನೋಯ್ಡ ದ ವ್ಯವಸ್ಥಾಪಕ ನಿರ್ದೇಶಕ ಕ್ಯೂಂಗ್ಯೂನ್ ರೂ ಮತ್ತು ಐಐಟಿ ಕಾನ್ಪುರದ ಸಂಶೋಧನೆ ಮತ್ತು ಅಭಿವೃದ್ಧಿಯ ಡೀನ್, ಪ್ರೊ. ತರುಣ್ ಗುಪ್ತಾ: ಪ್ರೊ. ಎಸ್ ಗಣೇಶ್, ಐಐಟಿ ಕಾನ್ಪುರದ ನಿರ್ದೇಶಕರು; ಪ್ರೊ. ಸಂದೀಪ್ ವರ್ಮ, ಐಐಟಿ ಕಾನ್ಪುರದ ರಸಾಯನಶಾಸ್ತ್ರ ವಿಭಾಗ; ಪ್ರೊ. ತುಷಾರ್ ಸಂಧಾನ್, ಐಐಟಿ ಕಾನ್ಪುರದ ಇಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗ; ಮತ್ತು ಸ್ಯಾಮ್ಸಂಗ್ನ ಇತರ ಹಿರಿಯ ಪ್ರತಿನಿಧಿಗಳ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿಹಾಕಿದರು.
ಕ್ಯೂಂಗ್ಯೂನ್ ರೂ, ಮ್ಯಾನೇಜಿಂಗ್ ಡೈರೆಕ್ಟರ್, ಎಸ್.ಆರ್.ಐ-ನೋಯ್ಡಾ: “ಐಐಟಿ ಕಾನ್ಪುರದೊಂದಿಗೆ ಒಟ್ಟಾಗಿ ಕೆಲಸಮಾಡಲು ನಾವು ಉತ್ಸುಕರಾಗಿದ್ದೇವೆ. ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಕೈಗಾರಿಕೆಗಳ ಅಗತ್ಯತೆಗಳು ಪರಸ್ಪರ ಪೂರಕವಾಗಿರಬೇಕೆಂಬ ನಮ್ಮ ಬದ್ಧತೆಗೆ ಕನ್ನಡಿ ಹಿಡಿದಂತಿದೆ ಈ ಸಹಯೋಗ. ಈ ನಮ್ಮ ಜಂಟಿ ಪ್ರಯತ್ನ ವಿದ್ಯಾರ್ಥಿಗಳನ್ನು ಉದ್ಯಮಕ್ಕೆ ಸಿದ್ಧರನ್ನಾಗಿಸುತ್ತದೆ. ಕಲ್ಪನೆಗಳು, ಜ್ಞಾನ ಮತ್ತು ಪ್ರತಿಭೆಗಳ ಕ್ರಿಯಾತ್ಮಕ ವಿನಿಮಯಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ. ಖಂಡಿತವಾಗಿಯೂ ಇದು ಅದ್ಭುತ ಯೋಜನೆಗಳನ್ನು ಸ್ಪಹಲಗೊಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಮತ್ತು ಸ್ಯಾಮ್ಸಂಗ್ ಮತ್ತು ಐಐಟಿ ಕಾನ್ಪುರ ಎರಡರ ಬೆಳವಣಿಗೆಗೂ ನೆರವಾಗುತ್ತದೆ.” ಎಂದು ಹೇಳಿದರು.
ಐಐಟಿ ಕಾನ್ಪುರದ ನಿರ್ದೇಶಕ ಪ್ರೊ.ಎಸ್.ಗಣೇಶ್ ಹೀಗೆ ನುಡಿದರು: “ಐಐಟಿ ಕಾನ್ಪುರದ ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಸ್ಯಾಮ್ಸಂಗ್ ಇಂಡಿಯಾದ ಉದ್ಯಮ ಪರಿಣತಿ ಎರಡನ್ನೂ ಒಟ್ಟಾಗಿಸುವ ಮೂಲಕ, ನಾವು ಅತ್ಯಾಧುನಿಕ ಯೋಜನೆಗಳಿಗೆ ಕ್ರಿಯಾತ್ಮಕ ವಾತಾವರಣವೊಂದನ್ನು ಸೃಷ್ಟಿಸುವ ಮತ್ತು ನಮ್ಮ ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ಸುವರ್ಣಾವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ. ಈ ತಿಳಿವಳಿಕೆ ಒಪ್ಪಂದವು ಸೈದ್ಧಾಂತಿಕ ಜ್ಞಾನ ಮತ್ತು ಉದ್ಯಮದ ಪ್ರಾಯೋಗಿಕ ಪರಿಹಾರಗಳ ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ; ಶೈಕ್ಷಣಿಕ ಮತ್ತು ಉದ್ಯಮದ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಐಐಟಿ ಕಾನ್ಪುರದ ನಿರಂತರ ಪ್ರಯತ್ನಗಳಿಗೆ ಇದು ಪೂರಕವಾಗಿರುತ್ತದೆ.
ಐಐಟಿ ಕಾನ್ಪುರ್ನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಪ್ರೊ. ತರುಣ್ ಗುಪ್ತಾ: “ನಮ್ಮ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಕೊಠಡಿಯ ಶಿಕ್ಷಣವನ್ನು ಮೀರಿ ಅವಕಾಶಗಳನ್ನು ಒದಗಿಸಬೇಕೆಂಬ ನಮ್ಮ ಬದ್ಧತೆಯನ್ನು ಈ ಎಂಒಯು ಪ್ರತಿಬಿಂಬಿಸುತ್ತದೆ; ತಾಂತ್ರಿಕ ಪ್ರಗತಿ ಮತ್ತು ನಮ್ಮ ಸಂಸ್ಥೆಯ ಶೈಕ್ಷಣಿಕ ಪರಿಸರದ ಬೆಳವಣಿಗೆಗೆ ಇದು ಗಮನಾರ್ಹ ಕೊಡುಗೆ ನೀಡುತ್ತದೆ. ” ಎಂದರು.
ಜಂಟಿ ಸಂಶೋಧನಾ ಯೋಜನೆಗಳ ಭಾಗವಾಗಿ, ಐಐಟಿ ಕಾನ್ಪುರದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ನೈಜ-ಪ್ರಪಂಚದಲ್ಲಿ ಉದ್ಯಮಗಳು ಎದುರಿಸುವ ಸವಾಲುಗಳ ಬಗ್ಗೆ ಕೆಲಸ ಮಾಡುತ್ತಾರೆ; ರಿಯಲ್ ಮಾರುಕಟ್ಟೆ ಅಗತ್ಯಗಳೊಂದಿಗೆ ತಾದಾತ್ಮ್ಯ ಹೊಂದುತ್ತಾರೆ; ಸ್ಯಾಮ್ಸಂಗ್ ಇಂಜಿನಿಯರ್ಗಳ ಜೊತೆ ಡಿಜಿಟಲ್ ಇಂಡಿಯಾ ಸಂಬಂಧಿತ ವಿಷಯಗಳ ಬಗ್ಗೆ ಕೆಲಸ ಮಾಡುತ್ತಾರೆ.
ಐಐಟಿ ಕಾನ್ಪುರದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಸ್ಯಾಮ್ಸಂಗ್ ಎಂಜಿನಿಯರ್ಗಳ ಜೊತೆಗೂಡಿ ಜಂಟಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಲು ಪ್ರೋತ್ಸಾಹಿಸಲಾಗುತ್ತದೆ.
ಐಐಟಿ ಕಾನ್ಪುರ್, ಸ್ಯಾಮ್ಸಂಗ್ ಇಂಜಿನಿಯರ್ಗಳ ಕೌಶಲಗಳನ್ನು ಉನ್ನತೀಕರಿಸಲು ವಿವಿಧ ಡೊಮೇನ್ಗಳಲ್ಲಿ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತದೆ. ಈ ಇಂಜಿನಿಯರುಗಳಿಗೆ ಸುಪ್ರಸಿದ್ಧ ಐಐಟಿ ಯ ಪರಿಣತಿಯ ಪರಿಚಯವಾಗುತ್ತದೆ: ಪದವಿ ಕಾರ್ಯಕ್ರಮಗಳು, ಪ್ರಮಾಣೀಕರಣಗಳು ಮತ್ತು ಸ್ಯಾಮ್ಸಂಗ್ ಇಂಜಿನಿಯರ್ಗಳ ಕೌಶಲ ಮತ್ತು ಜ್ಞಾನವನ್ನು ಹೆಚ್ಚಿಸಲು ಬೇಕಾದ ವಿಶೇಷ ಕೋರ್ಸ್ಗಳನ್ನು ಐಐಟಿ ಒದಗಿಸುತ್ತದೆ.