ಮಂಗಳೂರು : ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸ್ತಿದೆ.ನಿರಂತರವಾಗಿ ಹಿಂದೂ ಸಮಾಜದ ಮೇಲೆ ದಬ್ಬಾಳಿಕೆ ಮಾಡ್ತಿದೆ ಎಂದು ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕಾರ್ಯಕರ್ತರ ಗಡೀಪಾರು, ಗೂಂಡಾ ಕಾಯ್ದೆ ಹೇರುತ್ತಿದೆ.ಮಠ, ಮಂದಿರಗಳ ಮೇಲೂ ಸರ್ಕಾರದ ದೌರ್ಜನ್ಯ ಆರಂಭವಾಗಿದೆ.ಅಯೋಧ್ಯೆ ಪ್ರಾಣಪ್ರತಿಷ್ಠೆ ಸಮಯದಲ್ಲೂ ಸರ್ಕಾರಿ ರಜೆ ಕೊಟ್ಟಿಲ್ಲ.ಹನುಮ ಭಕ್ತರು ಹಾಕಿದ ಧ್ವಜವನ್ನ ಅಧಿಕಾರಿಗಳ ಮೂಲಕ ಕಿತ್ತು ಹಾಕಿಸಿದೆ.
ಈ ಮೂಲಕ ಹಿಂದೂ ಸಮಾಜ ಮತ್ತು ರಾಮಭಕ್ತರಿಗೆ ಅಪಮಾನ ಮಾಡಿದೆ.ರಾಮ ಮತ್ತು ಹನುಮ ಭಕ್ತರ ಹೋರಾಟದ ವೇಳೆ ಲಾಠಿ ಚಾರ್ಜ್ ಮಾಡಿದ್ದಾರೆ.ದಬ್ಬಾಳಿಕೆ, ದೌರ್ಜನ್ಯದ ಮೂಲಕ ಹಿಂದೂ ಹೋರಾಟ ದಮನ ಯತ್ನ.
ಸಿದ್ದರಾಮಯ್ಯ ಹಿಂದೆಯೇ ರಾವಣನ ಆಡಳಿತ ಮಾಡಿದವರು.ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂ ಸಮಾಜದ ಮೇಲೆ ದೌರ್ಜನ್ಯ ಮಾಡಿದ್ದಾರೆ.ಗೋ ಹತ್ಯೆ ನಿಷೇಧ ವಾಪಾಸ್ ಯತ್ನ, ಗೋ ರಕ್ಷಕರನ್ನ ಜೈಲಿಗಟ್ಟಿರೋದು ಮಾಡಿದ್ದಾರೆ.
ಗೋ ಹಂತಕರಿಗೆ ಪರಿಹಾರ ಕೊಡೋ ಮೂಲಕ ಹಿಂದೂ ವಿರೋಧಿ ನೀತಿ ಅನುಸರಿಸ್ತಾ ಇದಾರೆ.ಪ್ರಜಾಪ್ರಭುತ್ವದಲ್ಲಿ ಹನುಮ ಧ್ವಜ ಹಾಕಬಹುದು, ಕೇಸರಿ ಧ್ವಜ ಹಾಕೋದು ತಪ್ಪಲ್ಲ, ಅದು ಹಕ್ಕು ಕೇಸರಿ ಧ್ವಜ ಧರ್ಮದ ದೃಷ್ಟಿಯಿಂದ ಅಲ್ಲ, ಅದು ಪರಂಪರೆಯಿಂದ ಬಂದಿದ್ದು.
ಹನುಮಂತನ ಭಕ್ತರು ಇವತ್ತು ಎಲ್ಲಾ ಕಡೆ ಇದ್ದಾರೆ. ರಾಮ ಹೆಸರು ಇಟ್ಟುಕೊಂಡ ಸಿದ್ದರಾಮಯ್ಯ ಹನುಮಂತನಿಗೆ ಅಪಮಾನ ಮಾಡಿದ್ದಾರೆರಾಮನ ಭಕ್ತರಿಗೆ, ಸಮಸ್ತ ಹಿಂದೂ ಸಮಾಜಕ್ಕೆ ಅವಮಾನ ಮಾಡಿದ್ದಾರೆ.
ಲಾಠಿ ಚಾರ್ಜ್ ಮಾಡಿ ಹೋರಾಟ ಹತ್ತಿಕ್ಕೋ ಕೆಲಸ ಸರ್ಕಾರ ಮಾಡ್ತಿದೆ.ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲೂ ಇಂಥ ಹೋರಾಟ ನಡೆದಿತ್ತು. ಅದನ್ನ ಉತ್ತಮ ರೀತಿಯಲ್ಲಿ ನಿಭಾಯಿಸೋ ಬದಲು ಅಧಿಕಾರಿಗಳ ಮೂಲಕ ಭಯ ಪಡಿಸ್ತಿದೆ.
ಇದರ ಜೊತೆಗೆ ಅಧಿಕಾರಿಗಳನ್ನ ಬಲಿ ಕೊಡೋ ಕೆಲಸ ಮಾಡ್ತಿದೆ.ಸಿದ್ದರಾಮಯ್ಯ ವಿಚಾರವಾದಿ, ಕಾಂಗ್ರೆಸ್ ಮಾನಸಿಕತೆ ವ್ಯಕ್ತಿಯೂ ಅಲ್ಲ. ಹೋರಾಟಕ್ಕೆ ಹನುಮನ ಭಕ್ತರು ಎಲ್ಲಿಂದಲೂ ಬರಬಹುದು.ಬೇರೆ ಜಿಲ್ಲೆಯಿಂದ ಜನ ಕರೆಯೋದಲ್ಲ, ರಾಮ ಭಕ್ತರು ಎಲ್ಲಿಂದಲೂ ಬರಬಹುದು ಎಂದು ಮಂಗಳೂರಿನಲ್ಲಿ ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.