ಬೆಂಗಳೂರು: ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾರತವನ್ನು ಉದ್ಯೋಗ ಸೃಷ್ಟಿಸುವವರ ದೇಶವಾಗಿಸುವ ಗುರಿಗೆ ಅನುಗುಣವಾಗಿ ಭಾರತ ಸರ್ಕಾರದ ಮಾನ್ಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಎಂಟರ್ ಪ್ರಿನ್ಯೂರ್ ಶಿಪ್ ಅಂಡ್ ಸ್ಮಾಲ್ ಬಿಸಿನೆಸ್ ಡೆವಲಪ್ ಮೆಂಟ್(ಎನ್.ಐ.ಇ.ಎಸ್.ಬಿ.ಯು.ಡಿ.), ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಎಂಟರ್ ಪ್ರಿನರ್ ಶಿಪ್(ಐಐಇ) ಮತ್ತು ಸ್ಕಿಲ್ ಇಂಡಿಯಾದ ಮುಂಚೂಣಿಯ ಯೋಜನೆ ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನಾ(ಪಿಎಂಕೆವಿವೈ) ಅಡಿಯಲ್ಲಿ ತರಬೇತಿ ಪಡೆದ 100ಕ್ಕೂ ಹೆಚ್ಚು ಉದ್ಯಮಿಗಳೊಂದಿಗೆ ಸಂವಹನ ನಡೆಸಿದರು- “ಕೌಶಲ್ಯ ಇಕೊಸಿಸ್ಟಂನಿಂದ ಮೊದಲ ಬಾರಿಗೆ ಉದ್ಯಮಿಗಳು ಗಣರಾಜ್ಯೋತ್ಸವ ಸಂಭ್ರಮಾಚರಣೆಯ ಅತಿಥಿಗಳಾಗಿರುವುದು ಮೊಟ್ಟಮೊದಲ ಬಾರಿಕೆ ಆಗಿದ್ದು ಇದು ಮಾನ್ಯ ಪ್ರಧಾನಮಂತ್ರಿಗಳ ದೂರದೃಷ್ಟಿಯ ನಾಯಕತ್ವಕ್ಕೆ ಸಾಕ್ಷಿಯಾಗಿದೆ” ಎಂದು ಧರ್ಮೇಂದ್ರ ಪ್ರಧಾನ್ ಹೇಳಿದರು.
ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಷನಲ್ ಎಜುಕೇಷನ್ ಅಂಡ್ ಟ್ರೈನಿಂಗ್(ಎನ್.ಸಿ.ವಿ.ಇ.ಟಿ.)ಯ ಅಧ್ಯಕ್ಷ ನಿರ್ಮಲ್ ಜಿತ್ ಸಿಂಗ್ ಕಲ್ಸಿ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ಸಚಿವಾಲಯದ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ ಮತ್ತು ಡೈರೆಕ್ಟೊರೇಟ್ ಆಫ್ ಜನರಲ್ ಟ್ರೈನಿಂಗ್(ಡಿಜಿಟಿ)ನ ಡೈರೆಕ್ಟರ್ ಜನರಲ್ ತ್ರಿಷಲ್ ಜಿತ್ ಸೇಥಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಉದ್ಯಮಿಗಳು ಸ್ಕಿಲ್ ಇಂಡಿಯಾ ಮಿಷನ್ ಅಡಿಯಲ್ಲಿ ಕೌಶಲ್ಯಾಭಿವೃದ್ಧಿಯು ಅವರ ಸಾಮರ್ಥ್ಯಗಳು, ಸಮಸ್ಯೆ ಪರಿಹರಿಸುವ ಸಾಮರ್ಥ್ಯಗಳನ್ನು ಹೆಚ್ಚಿಸುತ್ತಿದೆ ಮತ್ತು ಅವರ ಉತ್ಪನ್ನಗಳ ಮಾರ್ಕೆಟಿಂಗ್ ಗೆ ವಿಶಿಷ್ಟ ವ್ಯತ್ಯಾಸಗಳನ್ನು ಸೃಷ್ಟಿಸುತ್ತಿದೆ ಎಂಬ ಕುರಿತು ತಮ್ಮ ಒಳನೋಟಗಳನ್ನು ಹಂಚಿಕೊಂಡರು. ಅವರು ಪ್ರಧಾನಮಂತ್ರಿ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಿಶಿಲತೆಯ ಸಚಿವಾಲಯಕ್ಕೆ ಅವರಿಗೆ ಉದ್ಯೋಗದಲ್ಲಿನ ತರಬೇತಿ ನೀಡಿದ್ದಕ್ಕೆ ಮತ್ತು ಮೌಲಿಕವಾದ ಉದ್ಯಮದ ಪರಿಚಯ ಮಾಡಿಸಿದ್ದಕ್ಕೆ ಹಾಗೂ ಅವರ ಜೀವನಗಳನ್ನು ಪರಿವರ್ತಿಸಿದ್ದಕ್ಕೆ ಹಾಗೂ ಅವರ ಬಯಕೆಗಳನ್ನು ಕಾರ್ಯಸಾಧ್ಯವಾಗಿಸುವ ವಾಸ್ತವವಾಗಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
ಭಾರತ ಸರ್ಕಾರದ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ಮಾನ್ಯ ಸಚಿವರಾದ ಧರ್ಮೇಂದ್ರ ಪ್ರಧಾನ್, “ಇಂದು, ನಮ್ಮ ಕೌಶಲ್ಯದ ಇಕೊಸಿಸ್ಟಂನ ಫಲಾನುಭವಿಗಳೊಂದಿಗೆ ಒಳನೋಟಯುಕ್ತ ಸಂವಹನಗಳಲ್ಲಿ ತೊಡಗುವ ಸೌಕರ್ಯ ದೊರೆತಿದೆ. ಉದ್ಯಮಶೀಲತೆಯಿಂದ ಸ್ವಾವಲಂಬನೆಯತ್ತ ಅವರ ಪ್ರಯಾಣವನ್ನು ಕಾಣುವುದು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಈ ಸಣ್ಣ ಹಾಗೂ ಕಿರು ಉದ್ಯಮಿಗಳು ದೇಶದ ಅಭಿವೃದ್ಧಿಯ ಪ್ರಯಾಣದಲ್ಲಿ ಹೊಸ ಆಯಾಮಕ್ಕೆ ಕೊಡುಗೆ ನೀಡಲಿದ್ದಾರೆ. ಬಡವರು ಮತ್ತು ಅವಕಾಶ ವಂಚಿತರಿಗೆ ಬದ್ಧವಾದ ಮೋದೀಜಿ ಅವರ ಸರ್ಕಾರದಲ್ಲಿ #ಮೋದಿಗ್ಯಾರೆಂಟೀ ಆಹಾರ ಮತ್ತು ವಸತಿಯ ಅಗತ್ಯಗಳಿಂದ ಸಮಗ್ರವಾದ ಕೌಶಲ್ಯಾಭಿವೃದ್ಧಿ ಮತ್ತು ಸಾಮಾಜಿಕ-ಆರ್ಥಿಕ ಭದ್ರತೆಯಂತಹ ಅಗತ್ಯಗಳನ್ನು ಒಳಗೊಂಡಿದೆ. ಸಮಾಜದ ಅವಕಾಶ ವಂಚಿತ ಮತ್ತು ದುರ್ಬಲ ವರ್ಗದವರ ಸಬಲೀಕರಣವು ಈ ಆಡಳಿತದ ಪ್ರಮುಖ ಆದ್ಯತೆಯಾಗಿದ್ದು ಸಾಮಾನ್ಯ ನಾಗರಿಕರಿಗೆ ಮೋದೀಜಿ ಅವರು ಅಪಾರ ಆದ್ಯತೆ ನೀಡುತ್ತಿದ್ದಾರೆ” ಎಂದರು.
ಸ್ಕಿಲ್ ಇಂಡಿಯಾ ಮಿಷನ್ ಅಡಿಯಲ್ಲಿ ಸರಿಯಾದ ಕೌಶಲ್ಯ ತರಬೇತಿಯೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು, ಸವಾಲುಗಳ ಬಗ್ಗೆ ಮಾತನಾಡಲು ಮತ್ತು ತಮ್ಮ ಪ್ರಯೋಗಗಳನ್ನು ಅವಕಾಶಗಳಾಗಿ ಪರಿವರ್ತಿಸಲು ಹೇಗೆ ಸಾಧ್ಯವಾಯಿತು ಎಂಬುದನ್ನು ವಿವರಿಸಲು ಕೆಲವು ಉದ್ಯಮಿಗಳನ್ನು ವೇದಿಕೆಯ ಮೇಲೆ ಆಹ್ವಾನಿಸಲಾಯಿತು. ದಕ್ಷಿಣ ಸಿಕ್ಕಿಂನ ಅಪ್ಪರ್ ಗೋಮ್ ನ ದೂರದೃಷ್ಟಿಯ ಮಹಿಳಾ ಉದ್ಯಮಿ
ಶೀತಲ್ ತಮಾಂಗ್ ತಮ್ಮ ಉದ್ಯಮ ಸಿಕ್ಕಿಂ ಹ್ಯಾಂಡ್ ಲೂಮ್ ಅಂಡ್ ಹ್ಯಾಂಡಿ ಕ್ರಾಫ್ಟ್ಸ್ ಮೂಲಕ ತಮ್ಮ ಉದ್ಯಮದ ಮೂಲಕ ದೇಶದ ಬೆಳವಣಿಗೆಯ ಪಥವನ್ನು ಮರುರೂಪಿಸುತ್ತಿದ್ದಾರೆ. 20 ಉದ್ಯೋಗಿಗಳೊಂದಿಗೆ ಅವರ ನಾಯಕತ್ವದಲ್ಲಿ ತಮಾಂಗ್ ಅವರ ಬದ್ಧತೆಯು ಜೀವನಗಳನ್ನು ಬದಲಾಯಿಸುವುದರಲ್ಲಿ ಪ್ರತಿಧ್ವನಿಸುತ್ತಿದ್ದು ಅದು ಆಕೆಯ ಉದ್ಯಮಶೀಲತೆಯ ಸ್ಫೂರ್ತಿಗೆ ಸಾಕ್ಷಿಯಾಗಿದೆ.
ಅಂತೆಯೇ, 2020 ರಲ್ಲಿ ರೆಫ್ರಿಜರೇಶನ್ ಮತ್ತು ಹವಾನಿಯಂತ್ರಣದಲ್ಲಿ ಕೋರ್ಸ್ ಮಾಡುವ ಮೂಲಕ ಲಾಭದಾಯಕ ಉದ್ಯಮವನ್ನು ಸ್ಥಾಪಿಸಿದ ಇಂದ್ರಜಿತ್ ಸಾಧುಖಾನ್ ಅವರಂತಹ ಉದ್ಯಮಿಗಳು ತೆಗೆದುಕೊಂಡ ದಿಟ್ಟ ಹೆಜ್ಜೆಗಳಿಗೆ ಶ್ಲಾಘನೆ ದೊರೆತಿದ್ದು ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸಿತು. ಕೋವಿಡ್-19 ಸಾಂಕ್ರಾಮಿಕದ ಸವಾಲುಗಳ ನಡುವೆ, ಸಂಜೀತ್ ಅವರು ಅಸಾಧಾರಣ ಸ್ಥಿತಿಸ್ಥಾಪಕತ್ವ ಮತ್ತು ದೃಢತೆಯನ್ನು ಪ್ರದರ್ಶಿಸಿದರು, 2021 ರಲ್ಲಿ ಶ್ರೀ ಎಲೆಕ್ಟ್ರಿಕಲ್ ಅನ್ನು ಸ್ಥಾಪಿಸಿದರು, ಕೌಶಲ್ಯ ಅಭಿವೃದ್ಧಿಯ ಮೂಲಕ ಯಶಸ್ಸನ್ನು ಸಾಧಿಸಿದರು. ಒಡಿಶಾ ಮೂಲದ ಮಹಿಳಾ ಉದ್ಯಮಿ ಜ್ಯೋತಿರ್ಮಯಿ ಸಾಹು ಅವರದೂ ಒಂದು ಸ್ಪೂರ್ತಿದಾಯಕ ಕಥೆ. ಸ್ವಯಂ-ಸಬಲೀಕರಣದ ಕ್ರಿಯಾಶೀಲ ವಿಧಾನವನ್ನು ಹೊಂದಿರುವ ಪದವೀಧರರಾದ ಅವರು ಮಶ್ರೂಮ್ ಗ್ರೋಯರ್ಸ್ ಎಂಟರ್ ಪ್ರಿನ್ಯೂರ್ ಶಿಪ್ ಕೋರ್ಸ್ ಪಡೆದುಕೊಂಡು ಅಣಬೆ ಕೃಷಿಯಲ್ಲಿ ಗಮನಾರ್ಹ ಪ್ರಯಾಣವನ್ನು ಪ್ರಾರಂಭಿಸಿದರು. ಜ್ಯೋತಿರ್ಮಯಿ ಅವರ ಸ್ಟಾರ್ಟಪ್ ಆರು ತಿಂಗಳ ಅವಧಿಯಲ್ಲಿ ಪ್ರವರ್ಧಮಾನಕ್ಕೆ ಬಂದಿತು ಮತ್ತು ಅಪಾರ ಯಶಸ್ಸನ್ನು ಸಾಧಿಸಿತು.
ಫಲಿತಾಂಶದಿಂದ ಪ್ರೇರಿತ, ಲಭ್ಯ ಮತ್ತು ಸಮಗ್ರವಾದ ಉದ್ಯಮಶೀಲತೆಯ ಇಕೊಸಿಸ್ಟಂ, ಹೊಸ ಯಗಕ್ಕೆ ಆದ್ಯತೆ ನೀಡಿರುವ ಇಂಡಸ್ಟ್ರಿ 4.0 ಮತ್ತು ಸುಧಾರಿತ ತಂತ್ರಜ್ಞಾನಗಳಿಂದ ಪ್ರೇರಿತವಾದ ಹಲವಾರು ಯೋಜನೆಗಳನ್ನು ಉದ್ಯಮಿಗಳು, ವಿದ್ಯಾರ್ಥಿಗಳು ಮತ್ತಿತರೆ ಫಲಾನುಭವಿಗಳನ್ನು ಸೂಕ್ತ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ತೀವ್ರವಾಗಿ ಬೆಳೆಯುತ್ತಿರುವ ಉದ್ಯಮದ ಅಗತ್ಯಗಳಿಗೆ ಪೂರಕವಾಗಿ ಸನ್ನದ್ಧವಾಗಿಸಿದೆ. ಇದನ್ನು ಸಾಧಿಸಲು, ಪಿಎಂ ವಿಶ್ವಕರ್ಮ ಮತ್ತು ಸಮಗ್ರ ಡಿಜಿಟಲ್ ಪ್ಲಾಟ್ಫಾರ್ಮ್ – ಸ್ಕಿಲ್ ಇಂಡಿಯಾ ಡಿಜಿಟಲ್ (ಎಸ್ಐಡಿ) ನಂತಹ ಯೋಜನೆಗಳನ್ನು ಶೈಕ್ಷಣಿಕ ಮತ್ತು ಉದ್ಯಮದ ಅಂತರವನ್ನು ಕಡಿಮೆ ಮಾಡಲು ಮತ್ತು ನಾಯಕತ್ವ, ಸೃಜನಶೀಲ ಚಿಂತನೆ, ತಂಡದಲ್ಲಿ ಕೆಲಸ ಮತ್ತು ವ್ಯಾಪಾರದ ಬೆಳವಣಿಗೆಯಂತಹ ಉದ್ಯಮಶೀಲ ಕೌಶಲ್ಯಗಳ ವ್ಯಾಪ್ತಿಯನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಲಾಗಿದೆ. ಮುಂದಿನ ಕೆಲವು ವರ್ಷಗಳಲ್ಲಿ ಭಾರತವು 3 ನೇ ಅತಿದೊಡ್ಡ ಸ್ಟಾರ್ಟ್-ಅಪ್ ಇಕೊಸಿಸ್ಟಂನಿಂದ ನಂಬರ್ ಒನ್ ಆಗಲಿದೆ.
ಸಚಿವರು ವೃತ್ತಿ ತರಬೇತಿ ಕೈಗೊಳ್ಳುತ್ತಿರುವ ಉದ್ಯಮಿಗಳನ್ನು ಪ್ರಶಂಸೆ ಮಾಡಿದರು ಮತ್ತು ಉತ್ತೇಜಿಸುವ ಮೂಲಕ ಭಾರತದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ಇಕೊಸಿಸ್ಟಂನಲ್ಲಿ ಹೊಸ ಬೆಳಗನ್ನು ಮೂಡಿಸಿದರು. ಒಡಿಶಾ, ಕೇರಳ, ಸಿಕ್ಕಿಂ, ಮಣಿಪುರ, ದೆಹಲಿ, ಪಶ್ಚಿಮ ಬಂಗಾಳ, ತೆಲಂಗಾಣದಂತಹ ರಾಜ್ಯಗಳ ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ ಉದ್ಯಮಿಗಳು ಕಾರ್ಯಕ್ರಮದಲ್ಲಿ ಸಂಯೋಜನೆಗೊಂಡರು ಮತ್ತು ಗಣರಾಜ್ಯೋತ್ಸವ ಪೆರೇಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅವರೆಲ್ಲರೂ ಬ್ಯೂಟಿ ಅಂಡ್ ವೆಲ್ ನೆಸ್, ಕೈಗಳಲ್ಲಿ ತಯಾರಿಕೆ, ಬ್ಯೂಟಿ ಥೆರಪಿಸ್ಟ್, ಟೈಲರ್, ಹೊಲಿಗೆ ಯಂತ್ರ ನಿರ್ವಹಣೆ ಮಾಡುವವರು ಮತ್ತು ಕಂಪ್ಯೂಟರ್ ಆಪರೇಟರ್ ಒಳಗೊಂಡಿದ್ದರು.
ಭಾರತದ ಯುವಜನರಿಗೆ ಕೌಶಲ್ಯ ನೀಡುವುದು ಸ್ಟಾರ್ಟಪ್ ಇಕೊಸಿಸ್ಟಂನಲ್ಲಿ ಮುಖ್ಯವಾಗಿದ್ದು ಎಂ.ಎಸ್.ಡಿ.ಇ.ಯ ಉಪಕ್ರಮಗಳು
ಪ್ರಗತಿಗೆ ಪೂರಕ ವಾತಾವರಣ ಸೃಷ್ಟಿ, ಉದ್ಯೋಗ ಸೃಷ್ಟಿಗೆ ಉತ್ತೇಜನ, ಉತ್ಪಾದಕತೆ ಮತ್ತು ದಕ್ಷತೆಯ ಮೂಲಕ ಸಮಾಜದ ಒಳಿತಿಗೆ ಅನುಕೂಲಕರ ವಾತಾವರಣ ಸೃಷ್ಟಿಗೆ ಸನ್ನದ್ಧವಾಗಿವೆ.