ಬೆಂಗಳೂರು : ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಉದ್ಯಮದಲ್ಲಿ ಮೊದಲನೆಯ ಬಾರಿಗೆ ತನ್ನ ಸಿಎನ್ಜಿ ಕಾರುಗಳಲ್ಲಿ ಎಎಂಟಿ ಅನ್ನು ಪರಿಚಯಿಸುವ ಮೂಲಕ ದೇಶದಲ್ಲಿ ಸಿಎನ್ಜಿ ವಿಭಾಗದಲ್ಲಿ ಕ್ರಾಂತಿಯನ್ನು ಮಾಡಿದೆ. ಕಂಪನಿಯು ಇಂದು ಟಿಯಾಗೋ ಮತ್ತು ಟಿಯಾಗೋ ಮತ್ತು ಟಿಗೋರ್ ಎಎಂಟಿ, ಸಿಎನ್ಜಿ ಗೆ ಬುಕಿಂಗ್ ಅನ್ನು ತೆರೆಯಿತು. ಸಿಎನ್ಜಿ ಕಾರುಗಳಲ್ಲಿ ಹೆಚ್ಚು ಅಗತ್ಯವಿರುವ ಬೂಟ್ ಸ್ಪೇಸ್ ಅನ್ನು ಒದಗಿಸಲು ಟ್ವಿನ್ ಸಿಲಿಂಡರ್ ಸಿಎನ್ಜಿ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ, ಟಾಟಾ ಮೋಟಾರ್ಸ್ ಸಿಎನ್ಜಿ ವಾಹನಗಳಲ್ಲಿ ಅಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅನ್ನು ಪರಿಚಯಿಸುವುದರೊಂದಿಗೆ ಹೊಸ ಟ್ರೆಂಡ್ ಅನ್ನು ಪ್ರಾರಂಭಿಸುತ್ತಿದೆ.
ಗ್ರಾಹಕರಿಗೆ ಇದು ಉತ್ತಮ ಕೊಡುಗೆಯಾಗಿದೆ, ಏಕೆಂದರೆ ಈ ಕಾರುಗಳು ಸಿಎನ್ಜಿಯ ಉನ್ನತ ಆರ್ಥಿಕತೆ, ಸ್ವಯಂಚಾಲಿತ ಅನುಕೂಲತೆ, ಸಾಬೀತಾದ ಆರ್ಕಿಟೆಕ್ಚರ್ ಮೂಲಕ ನಿರ್ಮಿಸಲಾದ ಸುರಕ್ಷತೆಯ ಭರವಸೆ ಮತ್ತು ಸೌಕರ್ಯ ಮತ್ತು ಅನುಕೂಲತೆಯ ವೈಶಿಷ್ಟ್ಯಗಳನ್ನು ನೀಡುತ್ತದೆ. ಗ್ರಾಹಕರು ತಮ್ಮ ಹತ್ತಿರದ ಟಾಟಾ ಮೋಟಾರ್ಸ್ ಅಧಿಕೃತ ಡೀಲರ್ಶಿಪ್ ಅಥವಾ ಆನ್ಲೈನ್ನಲ್ಲಿ ರೂ. 21,000 ನೀಡುವ ಮೂಲಕ ತಮ್ಮ ಆಯ್ಕೆಯ ಆದ್ಯತೆಯ ಕಾರನ್ನು ಇಂದಿನಿಂದಲೇ ಬುಕ್ ಮಾಡಬಹುದು.
ಟಿಯಾಗೋ ಐಸಿಎನ್ಜಿ ಎಎಂಟಿ 3 ವೇರಿಯಂಟ್ ಗಳಲ್ಲಿ ಬರುತ್ತದೆ – ಎಕ್ಸ್ಟಿಎ ಸಿಎನ್ಜಿ, ಎಕ್ಸ್ ಝಡ್ ಎ+ ಸಿಎನ್ಜಿ ಮತ್ತು ಎಕ್ಸ್ ಝಡ್ ಎ ಎನ್ ಆರ್ ಜಿ. ಟಿಯಾಗೋ ಐಸಿಎನ್ಜಿ ಎಎಂಟಿ, 2 ವೇರಿಯಂಟ್ ಗಳಲ್ಲಿ ಲಭ್ಯವಿರುತ್ತದೆ – ಎಕ್ಸ್ ಝಡ್ ಎ ಸಿಎನ್ಜಿ ಮತ್ತು ಎಕ್ಸ್ ಝಡ್ ಎ+ ಸಿಎನ್ಜಿ.
ಓ ಮೈ ಗಾಡ್, ಇದು ಅಟೋಮ್ಯಾಟಿಕ್ ಕಾರು
· ಪೆಟ್ರೋಲ್ ತರಹದ ಕಾರ್ಯಕ್ಷಮತೆ ಮತ್ತು ಸೌಕರ್ಯವನ್ನು ಒದಗಿಸುವ ಭಾರತದ ಮೊದಲ ಸ್ವಯಂಚಾಲಿತ ಕಾರು.
· ಈ ವಿಭಾಗದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಚಾಲನಾಶೀಲತೆ – ಪೆಟ್ರೋಲ್ ಮತ್ತು ಸಿಎನ್ಜಿ ಚಾಲನಾಶೀಲತೆಯಲ್ಲಿ ವಾಹನದ ಕಾರ್ಯಕ್ಷಮತೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ.
· ಮೃದುವಾದ ಗೇರ್ ಬದಲಾವಣೆ ಗುಣಮಟ್ಟ – ಗೇರ್ ಶಿಫ್ಟಿಂಗ್ ಮೂವ್ಮೆಂಟ್ ಮತ್ತು ಶಿಫ್ಟ್ ಗುಣಮಟ್ಟವು ಸುಗಮವಾಗಿದೆ ಮತ್ತು ಪೆಟ್ರೋಲ್ ಎಎಮ್ಟಿಗೆ ಅನುಗುಣವಾಗಿರುತ್ತದೆ.
· ಹೆಚ್ಚಿನ ರೀಸ್ಟಾರ್ಟ್ ಗ್ರೇಡೇಬಿಲಿಟಿ – ರಿಸ್ಟಾರ್ಟ್ ಸಾಮರ್ಥ್ಯವು ಪೆಟ್ರೋಲ್ಗೆ ಅನುಗುಣವಾಗಿರುತ್ತದೆ ಮತ್ತು ಸೆಗ್ಮೆಂಟ್ ನಲ್ಲಿಯೇ ಅತ್ಯುತ್ತಮದ್ದಾಗಿದೆ.
· ಟ್ರಾಫಿಕ್ ಮತ್ತು ಪಾರ್ಕಿಂಗ್ನಲ್ಲಿ ಸುಲಭ ನಿರ್ವಹಣೆ – ನಗರದ ಟ್ರಾಫಿಕ್ ಪರಿಸ್ಥಿತಿಗಳು ಮತ್ತು ಪಾರ್ಕಿಂಗ್ನಲ್ಲಿ ಸುಲಭವಾಗಿ ಸಾಗುವಂತೆ ರೂಪಿಸಲಾಗಿದೆ.
ಓ ಮೈ ಗಾಡ್! ಇದು ಬುದ್ಧಿವಂತ ಕಾರು!
• ಟ್ವಿನ್ ಸಿಲಿಂಡರ್ ಸಿಎನ್ಜಿ ಟ್ಯಾಂಕ್ಗಳು: ಉದ್ಯಮದಲ್ಲಿ ಮೊದಲನೇಯದು- ಲಗೇಜ್ ಪ್ರದೇಶಗಳ ಕೆಳಗೆ ಟ್ವಿನ್ ಸಿಲಿಂಡರ್ಗಳ ಸ್ಮಾರ್ಟ್ ಪ್ಲೇಸ್ಮೆಂಟ್ ನಿಂದಾಗಿ ಹೆಚ್ಚಿನ ಬೂಟ್ ಸ್ಪೇಸ್ ದೊರೆಯುತ್ತದೆ.
• ಸಿಂಗಲ್ ಅಡ್ವಾನ್ಸ್ ಡ್ ಇಸಿಯು – ಉದ್ಯಮದಲ್ಲಿ ಮೊದಲನೇಯದು – ಪೆಟ್ರೋಲ್ ಮತ್ತು ಸಿಎನ್ಜಿ ಮೋಡ್ಗಳ ನಡುವೆ ಪ್ರಯತ್ನವಿಲ್ಲದ ಮತ್ತು ಜರ್ಕ್ ಮುಕ್ತ ವರ್ಗಾವಣೆಯನ್ನು ನೀಡುತ್ತದೆ.
• ಸಿಎನ್ಜಿ ನಲ್ಲಿ ಡೈರೆಕ್ಟ್ ಸ್ಟಾರ್ಟ್ – ಉದ್ಯಮದಲ್ಲಿ ಮೊದಲನೇಯದು – ಎರಡೂ ಕಾರುಗಳು ನೇರವಾಗಿ ಸಿಎನ್ಜಿ ಮೋಡ್ನಲ್ಲಿ ಪ್ರಾರಂಭವಾಗುತ್ತವೆ. ಆದ್ದರಿಂದ ನೀವು ಡ್ರೈವ್ಗಳ ಸಮಯದಲ್ಲಿ ಸಿಎನ್ಜಿ ಮೋಡ್ಗೆ ಬದಲಾಯಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ. ಇದು ಪ್ರತಿ ಬಾರಿ ನೀವು ಕಾರನ್ನು ಪ್ರಾರಂಭಿಸುವಾಗಲೂ ಇಂಧನವನ್ನು ಉಳಿಸುತ್ತದೆ.
ಓ ಮೈ ಗಾಡ್! ಇದು ಸುರಕ್ಷಿತ ಕಾರು! –
· ಟಿಯಾಗೋ ಐಸಿಎನ್ಜಿ ಎಎಂಟಿ ಮತ್ತು ಟಿಗೋರ್ ಐಸಿಎನ್ಜಿ ಎಎಂಟಿ ಅತ್ಯುತ್ತಮ-ಇನ್-ಕ್ಲಾಸ್ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತವೆ.
· ಇಂಧನ ತುಂಬಿಸುವ ಸಮಯದಲ್ಲಿ ಕಾರನ್ನು ಸ್ವಿಚ್ ಆಫ್ ಮಾಡಲು ಮೈಕ್ರೋ ಸ್ವಿಚ್ – ಇಂಧನ ಮುಚ್ಚಳವನ್ನು ತೆರೆದ ತಕ್ಷಣ ಮೈಕ್ರೋ ಸ್ವಿಚ್ ಇಗ್ನಿಷನ್ ಅನ್ನು ಆಫ್ ಮಾಡುತ್ತದೆ ಮತ್ತು ಮುಚ್ಚಳವನ್ನು ಸುರಕ್ಷಿತವಾಗಿ ಮುಚ್ಚುವವರೆಗೆ ಅದನ್ನು ಆಫ್ ನಲ್ಲಿಯೇ ಇಡುತ್ತದೆ.
· ಥರ್ಮಲ್ ಇನ್ಸಿಡೆಂಟ್ ಪ್ರೊಟೆಕ್ಷನ್ – ಐಸಿಎನ್ಜಿ ತಂತ್ರಜ್ಞಾನವು, ಥರ್ಮಲ್ ಘಟನೆಯ ಸಂದರ್ಭದಲ್ಲಿ ಇಂಜಿನ್ಗೆ ಸಿಎನ್ಜಿ ಪೂರೈಕೆಯನ್ನು ತಕ್ಷಣವೇ ಕಡಿತಗೊಳಿಸುತ್ತದೆ ಮತ್ತು ಸುರಕ್ಷತೆಯ ಕ್ರಮವಾಗಿ ಸಿಲಿಂಡರ್ನಿಂದ ನೇರವಾಗಿ ವಾತಾವರಣಕ್ಕೆ ವಿಶೇಷ ನಳಿಕೆಯ ಮೂಲಕ ಗ್ಯಾಸ್ ಅನ್ನು ಬಿಡುಗಡೆ ಮಾಡುತ್ತದೆ.
· ಸಿಎನ್ಜಿ ಸಿಲಿಂಡರ್ಗಳ ಸುರಕ್ಷಿತ ಸ್ಥಳ – ಲಗೇಜ್ ಪ್ರದೇಶದ ಕೆಳಗೆ ಇರುವ ಟ್ವಿನ್ ಸಿಎನ್ಜಿ ಸಿಲಿಂಡರ್ಗಳು ಸುರಕ್ಷಿತ ಪರಿಹಾರವನ್ನು ನೀಡುತ್ತವೆ, ಏಕೆಂದರೆ ಕವಾಟಗಳು ಮತ್ತು ಪೈಪ್ಗಳನ್ನು ಕಾರಿನ ಲೋಡ್ ಇರುವ ನೆಲದ ಕೆಳಗೆ ರಕ್ಷಿಸಲಾಗಿದೆ, ಅದರಿಂದ ಸಂಭಾವ್ಯ ಹಾನಿಯ ಅಪಾಯವನ್ನು ಕಡಿಮೆ ಮಾಡುತ್ತದೆ.
· ಸೋರಿಕೆಯನ್ನು ತಡೆಗಟ್ಟಲು ಐಸಿಎನ್ಜಿ ಕಿಟ್ನಲ್ಲಿ ಅಡ್ವಾನ್ಸ್ ಮೆಟೀರಿಯಲ್ಗಳ ಬಳಕೆ – ಯಾವುದೇ ಅನಿಲ ಸೋರಿಕೆಯನ್ನು ತಡೆಗಟ್ಟುವ ಐಸಿಎನ್ಜಿ ಕಿಟ್ ಅನ್ನು ತಾಪಮಾನ ಮತ್ತು ಒತ್ತಡಗಳಾದ್ಯಂತ ಪರೀಕ್ಷಿಸಲಾಗಿದೆ.
· ಸೋರಿಕೆ ಪತ್ತೆ ವೈಶಿಷ್ಟ್ಯ – ಐಸಿಎನ್ಜಿ ತಂತ್ರಜ್ಞಾನವು ಅನಿಲ ಸೋರಿಕೆಯನ್ನು ತಕ್ಷಣವೇ ಪತ್ತೆ ಮಾಡುತ್ತದೆ ಮತ್ತು ಸಿಎನ್ಜಿ ನಿಂದ ಪೆಟ್ರೋಲ್ ಮೋಡ್ಗೆ ಬದಲಾಯಿಸುತ್ತದೆ.
ಓಹ್ ಮೈ ಗಾಡ್! ಇದು ಶಕ್ತಿಶಾಲಿ ಕಾರು!
• ಈ ಐಸಿಎನ್ಜಿ ಎಎಂಟಿ ಕಾರುಗಳು ಶಕ್ತಿಶಾಲಿಯಾಗಿವೆ, 1.2ಲೀ ರಿವೋಟ್ರಾನ್ ಎಂಜಿನ್ನೊಂದಿಗೆ ಅಪೂರ್ವ ಕಾರ್ಯಕ್ಷಮತೆಯನ್ನು ನೀಡುತ್ತವೆ. ಅಡ್ವಾನ್ಸ್ ಐಸಿಎನ್ಜಿ ತಂತ್ರಜ್ಞಾನವು ಪವರ್ ಮತ್ತು ಪಿಕ್-ಅಪ್ನ ಪರಿಪೂರ್ಣ ಸಂಯೋಜನೆಯೊಂದಿಗೆ ಸಾಟಿಯಿಲ್ಲದ ಕಾರ್ಯಕ್ಷಮತೆಯನ್ನು ನೀಡುತ್ತದೆ.
ಇದಲ್ಲದೆ, ಪ್ರಸ್ತುತ ಬಣ್ಣದ ಪ್ಯಾಲೆಟ್ ಗೆ ಮತ್ತಷ್ಟು ಸೇರಿಸುವ ನಿಟ್ಟಿನಲ್ಲಿ, ಕಂಪನಿಯು ಟಿಯಾಗೋದಲ್ಲಿ ಆಸಕ್ತಿದಾಯಕ ಹೊಸ ಟೊರ್ನಾಡೊ ಬ್ಲೂ, ಟಿಯಾಗೋ ಎನ್ಆರ್ಜಿಯಲ್ಲಿ ಗ್ರಾಸ್ಲ್ಯಾಂಡ್ ಬೀಜ್ ಮತ್ತು ಟಿಗೋರ್ನಲ್ಲಿ ಮಿಟಿಯೋರ್ ಬ್ರೊಂಜ್ ಬಣ್ಣವನ್ನು ಪರಿಚಯಿಸಿದೆ.
ಪ್ರಾರಂಭವಾದಾಗಿನಿಂದಲೂ, ಟಿಯಾಗೋ ಮತ್ತು ಟಿಗೋರ್ ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸಿವೆ, ಟಾಟಾ ಮೋಟಾರ್ಸ್ನ ಹೊಸ ವಿನ್ಯಾಸ ತತ್ವವನ್ನು ಸಾಕಾರಗೊಳಿಸಿವೆ ಮತ್ತು ಭವಿಷ್ಯದ ಮಾಡೆಲ್ ಗಳಿಗೆ ದಾರಿ ಮಾಡಿಕೊಟ್ಟಿವೆ. ಈ ವರ್ಷಗಳಲ್ಲಿ, ಬಹು-ಪವರ್ಟ್ರೇನ್ ಆಯ್ಕೆಗಳು, ಆಕರ್ಷಕ ವಿನ್ಯಾಸ, ಅಸಾಧಾರಣ ಸುರಕ್ಷತಾ ವೈಶಿಷ್ಟ್ಯಗಳು, ವೈಶಿಷ್ಟ್ಯ-ಸಮೃದ್ಧ ಇಂಟೀರಿಯರ್ ಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಸಮಗ್ರೀಕರಣದಿಂದಾಗಿ ಟಿಯಾಗೋ ಮತ್ತು ಟಿಗೋರ್ ಹಲವಾರು ಯುವ ಮತ್ತು ಕ್ರಿಯಾತ್ಮಕ ಗ್ರಾಹಕರಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿವೆ. ಈ ಸೇರ್ಪಡೆಯೊಂದಿಗೆ ಕಂಪನಿಯು ತನ್ನ ಸಿಎನ್ಜಿ ಪೋರ್ಟ್ಫೋಲಿಯೊವನ್ನು ವಿಸ್ತರಿಸುತ್ತಿದೆ ಮತ್ತು ಸಿಎನ್ಜಿಯಲ್ಲಿ ಸ್ವಯಂಚಾಲಿತ ತಂತ್ರಜ್ಞಾನದ ಅಗತ್ಯವನ್ನು ತಿಳಿಸುತ್ತಿದೆ.
ವಾಹನ್ ವರದಿ ಮಾಡಿದಂತೆ ಆರ್ಥಿಕ ವರ್ಷ 23 ಕ್ಕೆ ಹೋಲಿಸಿದರೆ ಸಿಎನ್ಜಿ ಉದ್ಯಮವು ಆರ್ಥಿಕ ವರ್ಷ 24 ರಲ್ಲಿ 40.5% ರಷ್ಟು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಟಾಟಾ ಮೋಟಾರ್ಸ್ ಪ್ರಸ್ತುತ ಸಿಎನ್ಜಿ ವಿಭಾಗದಲ್ಲಿ ವಿಶಾಲವಾದ ಪೋರ್ಟ್ಫೋಲಿಯೊವನ್ನು ಹೊಂದಿದ್ದು, ಟಿಯಾಗೋ, ಟಿಗೋರ್, ಅಲ್ಟ್ರೋಜ್ ಮತ್ತು ಪಂಚ್ಇನ್ ಆಯ್ಕೆಯನ್ನು ನೀಡುತ್ತದೆ. ಸಿಎನ್ಜಿ ಮಾರುಕಟ್ಟೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಆರ್ಥಿಕ ವರ್ಷ 24ರಲ್ಲಿ 67.9% ರಷ್ಟು ಬೆಳವಣಿಗೆಯೊಂದಿಗೆ ಸಿಎನ್ಜಿ ಮಾರಾಟದಲ್ಲಿ ಮಾರುಕಟ್ಟೆಯಲ್ಲಿರುವ ಅಗ್ರ 2 ಬ್ರ್ಯಾಂಡ್ಗಳಲ್ಲಿ ಒಂದಾಗಿದೆ