ಬೆಂಗಳೂರು:ಸರಕು ಸಾಗಣೆ ಮಾಡುವುದಕ್ಕಿಂತ ಔಷಧಿಗಳನ್ನು ಸಾಗಣೆ ಮಾಡುವುದು ಅತ್ಯಂತ ಮುಖ್ಯವಾಗಿರುತ್ತದೆ. ಆರೋಗ್ಯದ ಮೇಲಿನ ಪರಿಣಾಮಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಔಷಧಾಲಯಗಳು ಸರಿಯಾದ ಸಮಯಕ್ಜೆ ಸರಿಯಾದ ಸ್ಥಳಕ್ಕೆ ತಲುಪಿಸುವುದು ನಿರ್ಣಾಯಕವಾಗಿದೆ. ಕಡಿಮೆ ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ಔಷಧಿಗಳ ಲಭ್ಯತೆಯ ಪರಿಣಾಮ ಗಂಭೀರವಾದ ಪರಿಣಾಮಗಳನ್ನು ಉಂಟು ಮಾಡಬಹುದು. ರೋಗಿಗಳಿಗೆ ಅವುಗಳ ಪರಿಣಾಮಕಾರಿಯತ್ವ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ತಾಪಮಾನ- ಸೂಕ್ಷ್ಮ ಔಷಧಿಗಳು, ಲಸಿಕೆಗಳು ಮತ್ತು ಜೈವಿಕಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕಿದೆ. ಈ ದಿಸೆಯಲ್ಲಿ ಮಹೇಶ್ ಕಾರ್ಗೋ ಮೂವರ್ಸ್ (MCM) ಫಾರ್ಮಾಸ್ಯುಟಿಕಲ್ಸ್ ಉದ್ಯಮದಲ್ಲಿ ರೆಫ್ರಿಜರೇಟೆಡ್ ಸಾರಿಗೆಯಲ್ಲಿ ಪ್ರಮುಖ ಕಂಪನಿಗಳಲ್ಲಿ ಒಂದಾಗಿದೆ.
ಗಿರೀಶ್ ಬಿಯಾನಿ ಅವರ ನಾಯಕತ್ವದಲ್ಲಿ ಮಹೇಶ್ ಕಾರ್ಗೋ ಮೂವರ್ಸ್ 28 ವರ್ಷಗಳ ಹಿಂದೆ ಲಾಜಿಸ್ಟಿಕ್ ಕಂಪನಿಯಾಗಿ ಆರಂಭವಾಯಿತು. ಹವಾಮಾನ ನಿಯಂತ್ರಿತ ಸಾರಿಗೆ ಮತ್ತು ನಿಯಂತ್ರಕ ಅನುಸರಣೆಯಲ್ಲಿ ಉತ್ತಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಸ್ಥೆಯ ಈ ಕಾರ್ಯತಂತ್ರದ ವಿಧಾನವು ಬೆಳವಣಿಗೆ ಮತ್ತು ಕಾರ್ಯಾಚರಣೆಯ ಶ್ರೇಷ್ಠತೆಗೆ ಚಾಲನೆ ನೀಡಿದೆ. 250 ಕ್ಕೂ ಹೆಚ್ಚು ವಾಣಿಜ್ಯ ವಾಹನಗಳು ಮತ್ತು ಸುಧಾರಿತ ಕೋಲ್ಡ್ ಚೈನ್ ತಂತ್ರಜ್ಞಾನದೊಂದಿಗೆ ಸಂಸ್ಥೆಯು ನಿರಂತರ ಸರಕು ಸಾಗಣೆಯನ್ನು ಮಾಡುವುದನ್ನು ಖಾತ್ರಿಪಡಿಸುತ್ತದೆ. ಕೊರೋನ ಗಂಭೀರವಾಗಿದ್ದ ಸಂದರ್ಭದಲ್ಲಿ ಸಂಸ್ಥೆಯ ವಾಹನಗಳು ನೇಪಾಳ, ಭೂತಾನ್ ಮತ್ತು ಕಾಶ್ಮೀರ ಸೇರಿದಂತೆ ದೂರದ ಪ್ರದೇಶಗಳಿಗೆ ಪ್ರತಿದಿನ 50,000 ಕಿಲೋಮೀಟರ್ ಸಂಚರಿಸುವ ಮೂಲಕ ಔಷಧಿಗಳನ್ನು ತಲುಪಿಸಿದೆ. ಈ ಮೂಲಕ ಎಂಸಿಎಂ ಮಾನವ ಆರೋಗ್ಯಕ್ಕೆ ಆದ್ಯತೆ ನೀಡಿತ್ತು. ಸಂಸ್ಥೆಯ ಈ ಸಮರ್ಪಣೆಯ ಸೇವೆಯು ಔಷಧಗಳ ಸಾಗಣೆ ಕ್ಷೇತ್ರದಲ್ಲಿ ತನ್ನದೇ ದಾಖಲೆ ಸ್ಥಾಪಿಸಿದೆ.
ಔಷಧಿಗಳನ್ನು ಸಾಗಿಸುವ ಕಂಟೇನರ್ ಗಳ ಭದ್ರತೆಗೆ ಮೊಬೈಲ್ ಆ್ಯಪ್ ನಿಯಂತ್ರಿತ ಡಿಜಿಟಲ್ ಲಾಕ್ ವ್ಯವಸ್ಥೆ, ವಾರ್ಷಿಕ ನೀರು ಸೋರಿಕೆ ಪರೀಕ್ಷೆ, ಜಿಪಿಎಸ್-ಸುಸಜ್ಜಿತ ವಾಹನಗಳು ಮತ್ತು ನಿರ್ದಿಷ್ಠವಾದ ತಾಪಮಾನ ನಿರ್ವಹಣೆ ಸೇರಿದಂತೆ ಹಲವಾರು ವೈಶಿಷ್ಟ್ಯತೆಗಳನ್ನು ಮಹೇಶ್ ಕಾರ್ಗೋ ಮೂವರ್ಸ್ ವಾಹನಗಳಲ್ಲಿ ಅಳವಡಿಸಲಾಗಿದೆ. ಎಲ್ಲಾ ವಿಧದ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಎಂಸಿಎಂ ಟಾಟಾ ಮೋಟರ್ಸ್ ನ ಇತ್ತೀಚಿನ ತಂತ್ರಜ್ಞಾನಗಳು ಮತ್ತು ವಾಹನಗಳ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದೆ. 200 ಕ್ಕೂ ಹೆಚ್ಚು ಟಾಟಾ ವಾಣಿಜ್ಯ ವಾಹನಗಳನ್ನು ಎಂಸಿಎಂ ಸಂಚರಿಸುತ್ತಿರುವುದು ಈ ಬಲವಾದ ನಂಬಿಕೆಗೆ ಸಾಕ್ಷಿಯಾಗಿದೆ. ಟಾಟಾ ಮೋಟರ್ಸ್ ನ ತಂತ್ರಜ್ಞಾನಗಳು ಸುಧಾರಿತ ಸಾರಿಗೆ ಕ್ಷಮತೆ ಮತ್ತು ಸುರಕ್ಷತೆ, ಜಿಪಿಎಸ್ ಟ್ರ್ಯಾಕಿಂಗ್, ಚಾಲಕ ನೆರವು ವ್ಯವಸ್ಥೆ ಮತ್ತು ಇಂಧನ ಕಾರ್ಯಕ್ಷಮತೆಯನ್ನು ಹೊಂದಿರುವುದರಿಂದ ಎಂಸಿಎಂ ಈ ವಾಹನಗಳ ಅಳವಡಿಕೆಗೆ ಹೆಚ್ಚು ಆಸಕ್ತಿ ತೋರಿದೆ. ಈ ಮೂಲಕ ಟಾಟಾ ಮೋಟರ್ಸ್ ನಾವೀನ್ಯತೆ ಮತ್ತು ಗ್ರಾಹಕರ ತೃಪ್ತಿಗೆ ಸಮರ್ಪಣೆಗೆ ಹೆಸರುವಾಸಿಯಾಗಿದೆ.
ಟಾಟಾ ಮೋಟರ್ಸ್ ನ ಟ್ರಕ್ಸ್ ವಿಭಾಗದ ಉಪಾಧ್ಯಕ್ಷ & ಬ್ಯುಸಿನೆಸ್ ಹೆಡ್ ರಾಜೇಶ್ ಕೌಲ್ ಅವರು ಮಾತನಾಡಿ, “ನಮ್ಮ ಬದ್ಧತೆಯು ಗ್ರಾಹಕರನ್ನು ಮೀರಿದ್ದಾಗಿದೆ. ಮಹೇಶ್ ಕಾರ್ಗೋ ಮೂವರ್ಸ್ ಯಶಸ್ಸಿನಲ್ಲಿ ನಮ್ಮ ಪಾತ್ರ ಇರುವ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ. ಶ್ರೇಷ್ಠತೆಗೆ ನಮ್ಮ ಅಚಲವಾದ ಸಮರ್ಪಣೆಯ ಸೇವೆಯನ್ನು ನೀಡುತ್ತಿದ್ದೇವೆ. ನಮ್ಮ ಪಾಲುದಾರಿಕೆಯ ಮೂಲಕ ನಾವು ಗುಣಮಟ್ಟವನ್ನು ಖಾತ್ರಿಪಡಿಸುತ್ತೇವೆ ಮತ್ತು ಎಂಸಿಎಂ ಸಾಧನೆಗಳಿಗೆ ನಮ್ಮ ಸಮಗ್ರ ಕೊಡುಗೆಯನ್ನು ಒತ್ತಿಹೇಳುತ್ತೇವೆ. ನಮ್ಮ ಎಲ್ಲಾ ಬಳಕೆದಾರರೊಇಗೆ ವಿಶೇಷವಾಗಿ ನಮ್ಮ ಚಾಲಕರಿಗೆ ಆದ್ಯತೆ ನೀಡುವುದು ನಮ್ಮ ಬಹುಮುಖ್ಯವಾದ ಕಾಳಜಿಯಾಗಿದೆ. ಹೆಚ್ಚಿನ ಉತ್ಪಾದಕತೆ ಮತ್ತು ಸೌಲಭ್ಯಗಳಿಗಾಗಿ ಅತ್ಯುತ್ತಮವಾದ ವಾಹನಗಳನ್ನು ಪೂರೈಸುವುದು ನಮ್ಮ ಪ್ರಮುಖ ಗುರಿಯಾಗಿದೆ. ವ್ಯವಹಾರಗಳಿಗಿಂತ ಮುಖ್ಯವಾಗಿ ಒಂದು ಮೌಲ್ಯಯುತವಾದ ಸಮುದಾಯವನ್ನು ಬೆಳೆಸುವ ನಿಟ್ಟಿನಲ್ಲಿ ನಾವು ಹೆಜ್ಜೆ ಇಟ್ಟಿದ್ದೇವೆ. ಈ ಮೂಲಕ ಪ್ರತಿಯೊಬ್ಬರೂ ಪರಸ್ಪರ ಗೌರವ ಪಡೆದುಕೊಳ್ಳುತ್ತಾರೆ. ಈ ಮೌಲ್ಯಯುತವಾದ ಸೇವೆಯನ್ನು ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ನಿರಂತರವಾಗಿ ಗ್ರಾಹಕರ ಅಭಿಪ್ರಾಯಗಳನ್ನು ಆಲಿಸುವುದು, ಕಲಿಯುವುದು ಮತ್ತು ಹೊಸತನವನ್ನು ಕಂಡುಕೊಳ್ಳುವುದು ನಿರ್ಣಾಯಕವಾಗಿದೆ. ಇದು ಕೇವಲ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುವುದಷ್ಟೇ ಅಲ್ಲದೇ, ನಮ್ಮ ಬೆಳವಣಿಗೆಗೆ ಮೂಲಾಧಾರವಾಗಿದೆ’’ ಎಂದು ತಿಳಿಸಿದರು.