ಬೆಂಗಳೂರು: ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ಸಚಿವಾಲಯದ ಅಡಿಯಲ್ಲಿ ಡೈರೆಕ್ಟೊರೇಟ್ ಜನರಲ್ ಆಫ್ ಟ್ರೈನಿಂಗ್ (ಡಿ.ಜಿ.ಟಿ.) ಜನವರಿ 22, 2024ರಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ನ್ಯಾಷನಲ್ ಸ್ಕಿಲ್ ಟ್ರೈನಿಂಗ್ ಇನ್ಸ್ ಟಿಟ್ಯೂಟ್ ನಲ್ಲಿ ಮೆಕಾಟ್ರಾನಿಕ್ ಸಿಸ್ಟಮ್ಸ್ ಮೇಲೆ 2 ವಾರಗಳ ಟ್ರೈನಿಂಗ್ ಆಫ್ ಟ್ರೈನರ್ಸ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಆಯೋಜಿಸಿತ್ತು. ಇದು ಮೆಕಾಂಗ್-ಗಂಗಾ ಕೋಆಪರೇಷನ್(ಎಂಜಿಸಿ) ಅಡಿಯಲ್ಲಿ ಸದಸ್ಯ ದೇಶಗಳು ಮತ್ತು ಭಾರತದ ನಡುವೆ ತಾಂತ್ರಿಕ ಮತ್ತು ವೃತ್ತಿ ಶಿಕ್ಷಣ ಮತ್ತು ತರಬೇತಿ(ಟಿವಿಇಟಿ)ಯ ಅಂತಾರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸಲಿದೆ.
ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ಸಚಿವಾಲಯ(ಎಂ.ಎಸ್.ಡಿ.ಇ) ದ ಅಡಿಯಲ್ಲಿ ಡೈರೆಕ್ಟೊರೇಟ್ ಜನರಲ್ ಆಫ್ ಟ್ರೈನಿಂಗ್ (ಡಿ.ಜಿ.ಟಿ.) ಎ.ಎಸ್./ಡಿ.ಜಿ. ತ್ರಿಷಾಲ್ ಜಿತ್ ಸೇಥಿ ಮುಖ್ಯ ಅತಿಥಿಯಾಗಿದ್ದರು, ವಿದೇಶಾಂಗ ವ್ಯವಹಾರಗಳ ಸಚೊವಾಲಯದ ಇಂಡೋ-ಪೆಸಿಫಿಕ್ ರೀಜನ್ ನ ಜೆ.ಎಸ್. ಪರತಿಮಾ ತ್ರಿಪಾಠಿ ಗೌರವ ಅತಿಥಿಯಾಗಿದ್ದರು, ಎಂ.ಎಸ್.ಡಿ.ಇ.ಯ ಡಿ.ಜಿ.ಟಿ. ಡಿಡಿಜಿ(ದಕ್ಷಿಣ ವಲಯ) ಶ್ರೀ ಅನಿಲ್ ಕುಮಾರ್ ಮತ್ತು ಎಂ.ಎಸ್.ಡಿ.ಇ. ಡಿಜಿಟಿಯ ಜಂಟಿ ನಿರ್ದೇಶಕ ಹೇಮಂತ್ ಡಿ. ಗಂಗರೆ ಉಪಸ್ಥಿತರಿದ್ದರು.
ಮೆಕಾಂಗ್-ಗಂಗಾ ಕೋಆಪರೇಷನ್(ಎಂಜಿಸಿ) ಪ್ರವಾಸೋದ್ಯಮ, ಸಂಸ್ಕೃತಿ, ಶಿಕ್ಷಣ ಮತ್ತು ಸಾರಿಗೆ ಹಾಗೂ ಸಂವಹನಗಳಲ್ಲಿ ಭಾರತ ಮತ್ತು ಐದು ಆಸಿಯಾನ್ ದೇಶಗಳಾದ ಕಾಂಬೋಡಿಯಾ, ಲಾವೊ ಪಿಡಿಆರ್, ಮಯನ್ಮಾರ್, ಥಾಯ್ಲೆಂಡ್ ಮತ್ತು ವಿಯೆಟ್ನಾಂಗಳ ನಡುವಿನ ಆರು ದೇಶಗಳ ಸಹಕಾರದ ಉಪಕ್ರಮವಾಗಿದೆ. ಈ ಉಪಕ್ರಮವು ಸದಸ್ಯ ದೇಶಗಳ ನಡುವೆ ಮಿತ್ರತ್ವ, ಸಹಕಾರ ಮತ್ತು ಉತ್ತಮ ತಿಳಿವಳಿಕೆಯನ್ನುಸದೃಢಗೊಳಿಸುವ ಉಪಕ್ರಮವಾಗಿದೆ ಮತ್ತು ಇಂಡಸ್ಟ್ರಿ 4.0ಕ್ಕೆ ಪೂರಕವಾಗಿ ಬೋಧಕರ ಕೌಶಲ್ಯಗಳನ್ನು ಉನ್ನತೀಕರಿಸಿಕೊಳ್ಳುವ ಮೂಲಕ ಅವರನ್ನು ಉದ್ಯೋಗದ ಭವಿಷ್ಯಕ್ಕೆ ಸಿದ್ಧಗೊಳಿಸುತ್ತದೆ.
ಟ್ರೈನಿಂಗ್ ಆಫ್ ಟ್ರೈನರ್ಸ್ ಕಾರ್ಯಕ್ರಮ(ಟಿಒಟಿ)ದ ಭಾಗವಾಗಿ ಭಾರತದ ಪ್ರತಿಷ್ಠಿತ ಸಂಸ್ಥೆಗಳಾದ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸ್ ಟಿಟ್ಯೂಟ್ ಗಳು(ಐಟಿಐಗಳು), ನ್ಯಾಷನಲ್ ಸ್ಕಿಲ್ ಟ್ರೈನಿಂಗ್ ಇನ್ಸ್ ಟಿಟ್ಯೂಟ್ ಗಳು(ಎನ್.ಎಸ್.ಟಿ.ಐ.ಗಳು) ಮತ್ತು ಉದ್ಯಮಗಳಾದ ನ್ಯಾಷನಲ್ ಇನ್ಸ್ ಟ್ರಕ್ಷನಲ್ ಮೀಡಿಯಾ ಇನ್ಸ್ ಟಿಟ್ಯೂಟ್ (ಎನ್.ಐ.ಎಂ.ಐ), ನ್ಯಾಷನಲ್ ಇನ್ಸ್ ಟಿಟ್ಯೂಟ್ ಫಾರ್ ಆಂತ್ರಪ್ರಿನ್ಯೂರ್ ಶಿಪ್ ಅಂಡ್ ಸ್ಮಾಲ್ ಬಿಸಿನೆಸ್ ಡೆವಲಪ್ ಮೆಂಟ್(ಎನ್.ಐ.ಇ.ಎಸ್.ಬಿ.ಯು.ಡಿ.) ವಿಷಯ ತಜ್ಞರು ಮತ್ತು ಇತರೆ ಸದಸ್ಯ ದೇಶಗಳ ಸಹೋದ್ಯೋಗಿಗಳು ಪೂರಕ ಮತ್ತು ಸಹಯೋಗದ ಕಲಿಕಾ ಪರಿಸರ ನಿರ್ಮಿಸಲಿದ್ದು ಅದು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿನಿಮಯ ಉತ್ತೇಜಿಸುತ್ತದೆ, ಆವಿಷ್ಕಾರ ಉತ್ತೇಜಿಸುತ್ತದೆ ಮತ್ತು ಜ್ಞಾನ ಹಂಚಿಕೆಗೆ ಅವಕಾಶ ಕಲ್ಪಿಸುತ್ತದೆ. ಈ ತರಬೇತಿಯು ತರಬೇತುದಾರರಿಗೆ ವಿಷಯ ಜ್ಞಾನ, ಕೌಶಲ್ಯಗಳು ಮತ್ತು ಆಯಾ ಕ್ಷೇತ್ರದಲ್ಲಿ ಉನ್ನತ ಗುಣಮಟ್ಟದ ತರಬೇತಿಗೆ ಬೋಧನೆಯ ತಂತ್ರಗಳೊಂದಿಗೆ ಸನ್ನದ್ಧಗೊಳಿಸುವ ಗುರಿ ಹೊಂದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ಸಚಿವಾಲಯದ ಡೈರೆಕ್ಟೊರೇಟ್ ಜನರಲ್ ಆಫ್ ಟ್ರೈನಿಂಗ್ ನ ಹೆಚ್ಚುವರಿ ಕಾರ್ಯದರ್ಶಿ/ಡೈರೆಕ್ಟರ್ ಜನರಲ್ ಶ್ರೀಮತಿ ತ್ರಿಶಾಲ್ ಜಿತ್ ಸೇಥಿ ಸಿ.ಎಲ್.ಎಂ.ವಿ.ದೇಶಗಳ ಎಲ್ಲ 16 ಅಭ್ಯರ್ಥಿಗಳನ್ನು ಸ್ವಾಗತಿಸಿದರು ಮತ್ತು ಅವರಿಗೆ ಬೆಂಗಳೂರಿನ ಎನ್.ಎಸ್.ಟಿ.ಐ.ನಲ್ಲಿ ಲಭ್ಯವಿರುವ ಮುಂಚೂಣಿಯ ಡಿಜಿಟಿ ಅಧಿಕಾರಿಗಳು ಮತ್ತು ಮೂಲಸೌಕರ್ಯಗಳಾದ ಮೆಕಾಟ್ರಾನಿಕ್ಸ್ ಪ್ರಯೋಗಾಲಯಗಳು ಮತ್ತು ವೆಲ್ಡಿಂಗ್, ಮೆಷಿನಿಂಗ್, ಎಲೆಕ್ಟ್ರಿಕಲ್ ಇತ್ಯಾದಿ ಸೌಲಭ್ಯಗಳ ತಿಳಿವಳಿಕೆ ನೀಡಿದರು. ಡಿಜಿ ಅವರು ಕಲಿಕೆಯು 2 ಮಾರ್ಗದ ಪ್ರಕ್ರಿಯೆ ಮತ್ತು ನಾವು ಕೂಡಾ ಸಿ.ಎಲ್.ಎಂ.ವಿ.ಯ ಸಮೃದ್ಧ ಅನುಭವದಿಂದ ಕಲಿಯುತ್ತೇವೆ ಎಂದರು. ಡಿಜಿ ಅವರು ನಮ್ಮ ಮಾನ್ಯ ಪ್ರಧಾನಮಂತ್ರಿಗಳ ಮೇಕ್ ಇನ್ ಇಂಡಿಯಾ ಮತ್ತು ವಿಶ್ವದ ಕೌಶಲ್ಯ ರಾಜಧಾನಿಯಾಗುವ ಕನಸು ನನಸಾಗಿಸಲು ಪ್ರಯತ್ನಿಸುವುದಾಗಿ ಹೇಳಿದರು. ಡಿಜಿ ಅವರು ಎಂಇಎಗೆ ಈ ಮೊದಲ ಸಲದ ಅವಕಾಶಕ್ಕೆ ಕೃತಜ್ಞತೆ ಸಲ್ಲಿಸಿದರು ಮತ್ತು ಇದು ಎಂ.ಇ.ಎ.ಯ ಜೆ.ಎಸ್. ಶ್ರೀಮತಿ ಪರಮಿತಾ ತ್ರಿಪಾಠಿ ಅವರು ಮುಂದುವರಿಸುತ್ತಾರೆ ಮತ್ತು ಅಭ್ಯರ್ಥಿಗಳಿಗೆ ಮಹತ್ತರ ಕಲಿಕೆ ಸಾಧ್ಯವಾಗುತ್ತದೆ ಎಂದರು.
ಇದು ಎರಡು ವಾರಗಳ ತರಬೇತಿ ಕಾರ್ಯಕ್ರಮವಾಗಿದ್ದು 16 ಅಭ್ಯರ್ಥಿಗಳಿದ್ದು ಪ್ರತಿ ಸಿ.ಎಲ್.ಎಂ.ವಿ. ದೇಶಗಳ(ಕಾಂಬೋಡಿಯಾ, ಲಾವೊ ಪಿಡಿಆರ್, ಮಯನ್ಮಾರ್ ಮತ್ತು ವಿಯೆಟ್ನಾಂ) ತಲಾ ಒಬ್ಬರು ಅಭ್ಯರ್ಥಿ ಇದ್ದರು. ಈ ಕಾರ್ಯಕ್ರಮವು ಜನವರಿ 22, 2024ರಿಂದ ಫೆಬ್ರವರಿ 02, 2024ರವರೆಗೆ ಆಫ್ ಲೈನ್ ಮಾದರಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಎಚ್.ಒ.ಡಿ./ಹಿರಿಯ ಉಪನ್ಯಾಸಕ/ ಉಪನ್ಯಾಸಕ/ ಬೋಧಕರು ಹೆಚ್ಚಿನ ಬೇಡಿಕೆಯ ಕೋರ್ಸ್ ಗಳಿಗೆ ವಿಶೇಷ ತರಬೇತಿ ಪಡೆಯಲಿದ್ದು ಅವರಿಗೆ ಉದ್ಯೋಗದಲ್ಲಿನ ತರಬೇತಿ ಮೂಲಕ ಅವರ ಬೋಧನೆಯ ವಿಧಾನಗಳನ್ನು ಸುಧಾರಿಸಲಿದ್ದಾರೆ ಮತ್ತು ಅವರಿಗೆ ವಿದ್ಯಾರ್ಥಿಗಳೊಂದಿಗೆ ಹೆಚ್ಚು ಸಕ್ರಿಯವಾಗಿ ತೊಡಗಿಕೊಳ್ಳಲು ಸನ್ನದ್ಧರಾಗಿಸುತ್ತದೆ.
ಸಚಿವಾಲಯವು ಅತ್ಯುತ್ತಮ ಅಂತಾರಾಷ್ಟ್ರೀಯ ರೂಢಿಗಳ ಗುರಿ ಹೊಂದಿದ್ದು ಜಾಗತಿಕ ಕೌಶಲ್ಯದ ಅಗತ್ಯಗಳನ್ನು ರೂಪಿಸಲಿದೆ, ಭಾರತದ ಕೌಶಲ್ಯದ ಮಾನದಂಡಗಳನ್ನು ನಿಗದಿಪಡಿಸಲಿದೆ, ನಮ್ಮ ತರಬೇತುದಾರರಿಗೆ ಜಾಗತಿಕ ಮಾನದಂಡಗಳ ಅನ್ವಯ ತರಬೇತಿ ನೀಡಲಿದೆ ಮತ್ತು ಕೌಶಲ್ಯದ ವ್ಯವಸ್ಥೆಯಲ್ಲಿ ಪ್ರಸ್ತುತ ಶಿಕ್ಷಣ ಸಂಸ್ಥೆಗಳ ಸಾಮರ್ಥ್ಯವೃದ್ಧಿ ಮಾಡಲಿದೆ.