ಮಂಗಳೂರು: ಎಐಸಿಸಿ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುವ ‘ಭಾರತ್ ಜೋಡೊ ನ್ಯಾಯ ಅಡ್ಡಿಪಡಿಸಿದ ಅಸ್ಸಾಂ ಸರಕಾರ ಪ್ರೇರಿತ ಬಿಜೆಪಿ ಕಾರ್ಯಕರ್ತರ ಕೃತ್ಯವನ್ನು ಖಂಡಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ಮಂಗಳವಾರ ನಗರದ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಲಾಯಿತು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಗೆ ಸಿಗುತ್ತಿರುವ ಅಭೂತಪೂವ ಬೆಂಬಲದಿಂದ ಹತಾಶೆಗೊಂಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಬಿಜೆಪಿ ಗೂಂಡಾಗಳ ವ ತಡೆಯೊಡ್ಡಿದ್ದಾರೆ. ಕಾಂಗ್ರೆಸ್ನಲ್ಲಿದ್ದಾಗ ಎಲ್ಲವನ್ನೂ ಪಡೆದಿದ್ದ ಹಿಮಂತ ಬಿಸ್ವಾ ಶರ್ಮರ ಮೇಲೆ ನರೇಂದ್ರ ಮೋದಿಯ ತನಿಖೆ ನಡೆಸಿತ್ತು. ತನ್ನ ಆ ಹಗರಣದಿಂದ ಪಾರಾಗಲು ಕಾಂಗ್ರೆಸ್ನಿಂದ ಬಿಜೆಪಿ ಸೇರಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಇದೀಗ ಕೇಂದ್ರ ನಾಯಕರನ್ನು ಮೆಚ್ಚಿಸಲು ಇಂತಹ ಬಿಜೆಪಿ ಕಾರ್ಯಕರ್ತರ ಮೂಲಕ ರ್ಯಾಲಿಯನ್ನು ಹಾಳು ಮ ಮುಂದಾಗಿರುವುದು ಖಂಡನೀಯ, ಬಿಜೆಪಿಗರ ಈ ಗೂಂಡಾಗಿರಿಗೆ ಧಿಕ್ಕಾರ ಎಂದರು.
ಅಸ್ಸಾಮಿನ ಬಿಜೆಪಿ ಸರಕಾರದ ನಡೆಯು ಪ್ರಜಾಪ್ರಭುತ್ವಕ್ಕೆ ಮಾಡುವ ಅನ್ಯಾಯವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶಾದ್ಯಂತ ಜನರನ್ನು ಒಗ್ಗೂಡಿಸುವ ಕೆಲಸ ಮಾಡಿದರೆ ಬಿಜೆಪಿಯು ಜನಸಾಮಾನ್ಯರ ಮಧ್ಯೆ ಬಿರುಕು ಸೃಷ್ಟಿಸುತ್ತಿದೆ ಎಂದು ಆಪಾದಿಸಿದರು.
ಪಕ್ಷದ ಮುಖಂಡರಾದ ಲುಕ್ಕಾನ್ ಬಂಟ್ವಾಳ, ಮಿಥುನ್ ರೈ, ರಕ್ಷಿತ್ ಶಿವರಾಮ್, ಶಾಹುಲ್ ಹಮೀದ್ ಕೆ.ಕೆ., ಶಾಲೆಟ್ ಪಿಂಟೋ, ವಿಸ್ವಾಶ್ ಕುಮಾರ್ ದಾಸ್, ವಸಂತ್ ಬೆರ್ನಾಡ್, ಬೇಬಿ ಕುಂದರ್, ಆರ್ ಕೆ ಪೃಥ್ವಿರಾಜ್, ಮೋಹನ್ ಕೋಟ್ಯಾನ್, ಸುರೇಂದ್ರ ಕಂಬಿ, ಜೆ. ಅಬ್ದುಲ್ ಸಲೀಂ, ಪ್ರವೀಣ್ಚಂದ್ರ ಆಳ್ವಾ, ಗಿರೀಶ್ ಆಳ್ವ, ಮಂಜುಳಾ ನಾಯಕ್, ಜೆಸಿಂತಾ ವಿಜಯ ಅಲೈಡ್, ಪದ್ಮನಾಭ ನರಿಂಗಾನ, ಪ್ರಕಾಶ್ ಸಾಲಿಯಾನ್, ಸುಹಾನ್ ಆಳ್ವ ಅಪ್ಪಿ ಪುರುಷೋತ್ತಮ್ ಚಿತ್ರಾಪುರ, ಟಿ.ಕೆ.ಸುಧೀರ್, ದಿನೇಶ್ ಕುಂಪಲ ಮತ್ತಿತರರು ಉಪಸ್ಥಿತರಿದ್ದರು.