ಬೆಂಗಳೂರು: ದೇಶದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್ಸಂಗ್ ಕಂಪನಿ, ತನ್ನ ಅತ್ಯುತ್ತಮ ಉತ್ಪನ್ನಗಳಾದ ಗ್ಯಾಲಕ್ಸಿ ಸ್ಮಾರ್ಟ್ಫೋನ್ಗಳು, ಲ್ಯಾಪ್ಟಾಪ್ಗಳು, ಟ್ಯಾಬ್ಲೆಟ್ಗಳು, ವೇರಬಲ್ಗಳು, ಸ್ಯಾಮ್ಸಂಗ್ ಟಿವಿಗಳು ಮತ್ತು ಇತರ ಡಿಜಿಟಲ್ ಉಪಕರಣಗಳ ಮೇಲೆ ಬಂಪರ್ ಕೊಡುಗೆಗಳು ಮತ್ತು ಕ್ಯಾಶ್ಬ್ಯಾಕ್ ಬೆನಿಫಿಟ್ಸ್ ನ್ನು ಗ್ರ್ಯಾಂಡ್ ರಿಪಬ್ಲಿಕ್ ಸೇಲ್ ನಲ್ಲಿ ನೀಡುತ್ತಿದೆ. ಈ ಕೊಡುಗೆಗಳು Samsung.com, Samsungshop ಅಪ್ಲಿಕೇಶನ್ ಮತ್ತು Samsung ಎಕ್ಸ್ಕ್ಲೂಸಿವ್ ಸ್ಟೋರ್ಗಳಲ್ಲಿ ಲಭ್ಯವಿದೆ. ಗ್ರಾಹಕರು HDFC, ICICI, Axis ಮತ್ತು ಇತರ ಪ್ರಮುಖ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಲ್ಲಿ ಖರೀದಿ ಮಾಡಿದರೆ 22.5% ಕ್ಯಾಶ್ಬ್ಯಾಕ್ (ರೂ. 25,000 ವರೆಗೆ) ಪಡೆಯಬಹುದು.
ಈ ವಿಶೇಷ ಮಾರಾಟದ ಸಮಯದಲ್ಲಿ, Galaxy A ಸರಣಿ, M ಸರಣಿ, F ಸರಣಿ, S ಸರಣಿ ಮತ್ತು Galaxy Z ಸರಣಿಯ ಪ್ರಮುಖ ಮಾದರಿಗಳನ್ನು ಖರೀದಿಸುವ ಗ್ರಾಹಕರಿಗೆ 57% ವರೆಗೆ ರಿಯಾಯಿತಿ ಸಿಗುತ್ತದೆ. ಇತ್ತೀಚಿನ Galaxy S24 ಸರಣಿಯ ಸ್ಮಾರ್ಟ್ಫೋನ್ಗಳನ್ನು ಮುಂಗಡ ಬುಕಿಂಗ್ ಮಾಡಿಕೊಂಡರೆ ಹೆಚ್ಚುವರಿ ಕೊಡುಗೆಗಳನ್ನು ಪಡೆಯಬಹುದು. ಗ್ರಾಂಡ್ ರಿಪಬ್ಲಿಕ್ ಡೇ ಸೇಲ್ ನಲ್ಲಿ ಗ್ರಾಹಕರು ಕೇವಲ ರೂ. 54,999 ಗೆ Galaxy S23 ಅನ್ನು ಖರೀದಿ ಮಾಡಬಹುದು. Galaxy Book Go, Galaxy Book3, Galaxy Book 3 Pro ನಂತಹ Galaxy ಲ್ಯಾಪ್ಟಾಪ್ ಖರೀದಿ ಮೇಲೆ 46% ವರೆಗೆ ರಿಯಾಯಿತಿ ಪಡೆಯಬಹುದು. Galaxy ಯ ಆಯ್ದ ಮಾದರಿಗಳಲ್ಲಿ ಟ್ಯಾಬ್ಲೆಟ್ಗಳು, ಧರಿಸಬಹುದಾದ ವಸ್ತುಗಳು ಮತ್ತು ಪರಿಕರಗಳ ಮೇಲೆ 50% ವರೆಗೆ ರಿಯಾಯಿತಿ ನೀಡಲಾಗುವುದು.
ಸ್ಯಾಮ್ಸಂಗ್ ಟೆಲಿವಿಷನ್ಗಳ ಪ್ರೀಮಿಯಂ ಮತ್ತು ಲೈಫ್ಸ್ಟೈಲ್ ಮಾಡೆಲ್ ಖರೀದಿ ಮಾಡಿದರೆ, ರೂ. 15,250 ವರೆಗಿನ ಹೆಚ್ಚುವರಿ ವಿನಿಮಯ ಪ್ರಯೋಜನ ಸಿಗುತ್ತದೆ ಜೊತೆಗೆ 48% ವರೆಗೆ ರಿಯಾಯಿತಿ ಪಡೆಯಬಹುದು. Neo QLED ಮತ್ತು QLED ನ ಆಯ್ದ ಮಾದರಿಗಳನ್ನು ಖರೀದಿಸುವ ಗ್ರಾಹಕರು ಈ ಕೆಳಗಿನ ಯಾವುದಾದರೂ ಒಂದು ಖಚಿತವಾದ ವಿಶೇಷ ಉಡುಗೊರೆಯನ್ನು ಪಡೆಯಬಹುದು. Galaxy ರೂ. 1,24,990 ಮೌಲ್ಯದ S23 ಅಲ್ಟ್ರಾ ರೂ. 69990 ಮೌಲ್ಯದ 50″ Serif TV, ರೂ. 38,990 ಮೌಲ್ಯದ ಸೌಂಡ್ಬಾರ್ (Q700C / C450) ಪಡೆಯಬಹುದು.
ಸ್ಯಾಮ್ ಸಂಗ್ ಆಫರ್ ಗಳು ಇಷ್ಟಕ್ಕೆ ಮುಗಿದಿಲ್ಲ. ರೆಫ್ರಿಜರೇಟರ್ಗಳಂತಹ ಡಿಜಿಟಲ್ ಉಪಕರಣ ಖರೀದಿ ಮೇಲೆ, ಆಯ್ದ ಮಾದರಿಗಳಲ್ಲಿ 52% ವರೆಗೆ ರಿಯಾಯಿತಿ ಕೊಡಲಾಗುವುದು. ಜೊತೆಗೆ ರೂ. 1,5125 ವರೆಗೆ ವಿನಿಮಯ ಪ್ರಯೋಜನ ಪಡೆಯಬಹುದು.
28 ಲೀಟರ್ ಸ್ಲಿಮ್ಫ್ರೈ ಮೈಕ್ರೋವೇವ್ ಮತ್ತು 32 ಲೀಟರ್ ವೈ-ಫೈ ಎನೆಬಲ್ಡ್ ಬೆಸ್ಪೋಕ್ ಮೈಕ್ರೋವೇವ್ ಖರೀದಿಸಿದರೆ, 45% ವರೆಗೆ ರಿಯಾಯಿತಿ ಗ್ರಾಹಕರಿಗೆ ಸಿಗುತ್ತದೆ. ಫುಲಿ ಆಟೋಮ್ಯಾಟಿಕ್ ವಾಶಿಂಗ್ ಮಷೀನ್ Ecobubble TM ಶ್ರೇಣಿಯ ಆಯ್ದ ಮಾದರಿಯ ಅಪ್ಗ್ರೇಡ್ ಬೋನಸ್ ಆಗಿ ರೂ. 3000 ಹೆಚ್ಚುವರಿ ಪ್ರಯೋಜನ ಸಿಗುತದೆ. ಜೊತೆಗೆ 49% ವರೆಗೆ ರಿಯಾಯಿತಿ ಪಡೆಯಬಹುದು.
ಆಯ್ದ ಶ್ರೇಣಿಗಳ ಮೇಲೆ ರಿಯಾಯಿತಿ ದರಗಳು ಇಂತಿವೆ.
● ಆಯ್ದ Galaxy ಸ್ಮಾರ್ಟ್ಫೋನ್ಗಳ ಮೇಲೆ 57% ವರೆಗೆ ಮತ್ತು Samsung ಪ್ರೀಮಿಯಂ ಮತ್ತು ಲೈಫ್ ಸ್ಟೈಲ್ ಟಿವಿಗಳ ಆಯ್ದ ಮಾದರಿಗಳ ಮೇಲೆ 48% ವರೆಗೆ ರಿಯಾಯಿತಿ
● Samsung Galaxy ಟ್ಯಾಬ್ಲೆಟ್ಗಳು, ಪರಿಕರಗಳು ಮತ್ತು ಧರಿಸಬಹುದಾದ ವಸ್ತುಗಳು 50% ರಷ್ಟು ರಿಯಾಯಿತಿಯಲ್ಲಿ ಲಭ್ಯ.
● ರೆಫ್ರಿಜರೇಟರ್ಗಳ ಆಯ್ದ ಮಾದರಿಗಳ ಮೇಲೆ ರೂ.15,125 ವರೆಗಿನ ವಿನಿಮಯ ಬೆನಿಫಿಟ್ ನೊಂದಿಗೆ 52% ವರೆಗೆ ರಿಯಾಯಿತಿ
● ಪ್ರಮುಖ ಕಾರ್ಡ್ಗಳೊಂದಿಗೆ 22.5% ವರೆಗೆ ಕ್ಯಾಶ್ಬ್ಯಾಕ್ (ರೂ. 25,000 ವರೆಗೆ)