ಮೈಸೂರು: ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್ನ ದೃಶ್ಯ ಸಂವಹನ ವಿಭಾಗವು ‘ಸಿನಿರಮಾʼ ಎರಡು ದಿನಗಳ ರಾಷ್ಟ್ರಮಟ್ಟದ ಕಿರುಚಲನಚಿತ್ರೋತ್ಸವವನ್ನು ಆಯೋಜಿಸುತ್ತಿದೆ. ಚಲನಚಿತ್ರ ನಿರ್ಮಾಣ ಕ್ಷೇತ್ರದಲ್ಲಿ ಯುವ ಪ್ರತಿಭೆಗಳ ಆಸಕ್ತಿ ಹಾಗೂ ಕೌಶಲ್ಯಕ್ಕೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಕಿರುಚಲನಚಿತ್ರೋತ್ಸವವನ್ನು ಇದೇ ಫೆಬ್ರವರಿ 16 ಮತ್ತು 17ರಂದು ಏರ್ಪಡಿಸಲಾಗಿದೆ. ಈ ಬಾರಿಯ ‘ಸಿನಿರಮಾʼ ಹಲವು ವಿಶೇಷತೆಗಳನ್ನೊಳಗೊಂಡಿದ್ದು ವಿಭಿನ್ನ ಕೆಟಗರಿಗಳಲ್ಲಿ ಸ್ಪರ್ಧೆ ನಡೆಸಲಾಗುತ್ತಿದೆ.
ಓಪನ್ ಕೆಟಗರಿ
ಕಿರುಚಿತ್ರ ನಿರ್ಮಾಣದಲ್ಲಿ ಆಸಕ್ತಿಯಿರುವ ಎಲ್ಲರೂ ಈ ವಿಭಾಗದಲ್ಲಿ ಭಾಗವಹಿಸಬಹುದಾಗಿದ್ದು, ಜನವರಿ 1, 2023ರ ನಂತರ ನಿರ್ಮಾಣಗೊಂಡ ಯಾವುದೇ ಕಿರುಚಿತ್ರವನ್ನು ಸ್ಪರ್ಧೆಗೆ ಕಳಿಸಬಹುದಾಗಿದೆ. ಕಿರುಚಿತ್ರವು ಯಾವುದೇ ಭಾರತೀಯ ಭಾಷೆಯಲ್ಲಿರಬಹುದಾಗಿದ್ದು, ಇಂಗ್ಲೀಷ್ ಸಬ್ಟೈಟಲ್ಸ್ ಹೊಂದಿರಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ಕಿರುಚಿತ್ರದ ಅವಧಿ 40 ನಿಮಿಷಗಳನ್ನು ಮೀರುವಂತಿಲ್ಲ. ಕಿರುಚಿತ್ರಗಳನ್ನು ಕಳುಹಿಸುವ ಕೊನೆಯ ದಿನಾಂಕ ಫೆಬ್ರವರಿ 4, 2024. ಈ ಕೆಟಗರಿಯ ನೋಂದಣಿ ಶುಲ್ಕ ರೂ.800 ಆಗಿದೆ.
ಓಪನ್ ಕೆಟಗರಿಯಲ್ಲಿ ಮೂರು ಅತ್ಯುತ್ತಮ ಕಿರುಚಿತ್ರಗಳಿಗೆ ಕ್ರಮವಾಗಿ ರೂ. 10,000, ರೂ. 7000 ಹಾಗೂ ರೂ. 5000ಗಳ ನಗದು ಬಹುಮಾನ ನೀಡಲಾಗುವುದು. ವಿಶೇಷ ವಿಭಾಗಗಳಾದ ನಿರ್ದೇಶನ, ಛಾಯಾಗ್ರಹಣ ಹಾಗೂ ಸಂಕಲನಕ್ಕೆ ರೂ. 4000 ಗಳ ವಿಶೇಷ ಬಹುಮಾನವಿದೆ. ಅತ್ಯುತ್ತಮ ನಟನೆ ಹಾಗೂ ಚಿತ್ರಕಥೆಗೆ ರೂ.3000ಗಳ ನಗದು ಬಹುಮಾನ ನೀಡಲಾಗುವುದು.
ಅಮೃತ 60 ಅವರ್ ಫಿಲ್ಮ್ ಮೇಕಿಂಗ್ ಚಾಲೆಂಜ್
60 ಗಂಟೆಗಳೊಳಗಾಗಿ ಚಿತ್ರ ನಿರ್ಮಾಣ ಮಾಡುವ ಒಂದು ವಿಶೇಷ ಸವಾಲನ್ನು ಈ ಬಾರಿಯ ಸಿನಿರಮಾ, ಆಸಕ್ತರಿಗೆ ನೀಡಲಿದೆ. ಈ ಸ್ಪರ್ಧೆಯು ರಾಷ್ಟ್ರಮಟ್ಟದಲ್ಲಿ ನಡೆಯುತ್ತಿದ್ದು, ದೇಶಾದ್ಯಂತದ ಆಸಕ್ತರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. 60 ಗಂಟೆಗಳ ಈ ಸವಾಲು ಇದೇ ಜನವರಿ 25ರಂದು ಸಂಜೆ 7.30ಕ್ಕೆ ಆರಂಭವಾಗಿ ಜನವರಿ 28 ರಂದು ಬೆಳಗ್ಗೆ 7.30ಕ್ಕೆ ಮುಕ್ತಾಯಗೊಳ್ಳಲಿದೆ. ಈ ಸ್ಪರ್ಧೆಯ ನೋಂದಣಿ ಶುಲ್ಕ ರೂ.1000 ಆಗಿದೆ.
ಈ ವಿಭಾಗದ ಅತ್ಯುತ್ತಮ 3 ಚಿತ್ರಗಳು ಕ್ರಮವಾಗಿ ರೂ.10,000, ರೂ. 7000 ಹಾಗೂ ರೂ.4000 ಗಳ ನಗದು ಬಹುಮಾನಕ್ಕೆ ಭಾಜನವಾಗಲಿವೆ.
ಕಾರ್ಯಾಗಾರಗಳು
ಕಿರುಚಿತ್ರೋತ್ಸವದಂದು ಚಲನಚಿತ್ರ ನಿರ್ಮಾಣಕ್ಕೆ ಸಂಬAಧಿಸಿದAತೆ ವಿವಿಧ ಕಾರ್ಯಾಗಾರಗಳು ನಡೆಯಲಿವೆ. ಚಿತ್ರರಂಗದ ಪರಿಣತರು, ಸಾಧಕರು ಈ ಕಾರ್ಯಾಗಾರಗಳಲ್ಲಿ ಭಾಗಿಯಾಗಲಿದ್ದು, ಮುಕ್ತ ಚರ್ಚೆ ಹಾಗೂ ಸಂವಾದಗಳಿಗೆ ಅವಕಾಶವಿದೆ. ಕಿರುಚಿತ್ರ ಸ್ಪರ್ಧೆಗೆ ತಮ್ಮ ಚಿತ್ರಗಳನ್ನು ಕಳುಹಿಸುವ ತಂಡದ ಇಬ್ಬರು ಸದಸ್ಯರು ಉಚಿತವಾಗಿ ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದೆ. ಇತರ ಆಸಕ್ತರು ರೂ.400 ನೋಂದಣಿ ಶುಲ್ಕದೊಂದಿಗೆ ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದೆ. ಈ ನೋಂದಣಿಯೊAದಿಗೆ ಆಸಕ್ತರು ಕಾರ್ಯಾಗಾರಗಳು, ಕಿರುಚಿತ್ರ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಿನಿರಮಾ ಅಧಿಕೃತ ವೆಬ್ಸೈಟ್ https://amritacinerama.in/ ನೋಡಬಹುದಾಗಿದೆ.