ಮಂಗಳೂರು: ಸಾಹಿತ್ಯ ಎನ್ನುವುದು ಒಂದು ಸಾಹಿತ್ಯದ ಆಶಯ ಹೊತ್ತು ಎಲ್ಲಾ ಕಾಲಕ್ಕೆ ಜೀವಂತವಾಗಿ ಚಲಿಸುವ ವಿಷಯ. ಅದರಲ್ಲಿ ರಾಜಿ ಮಾಡದೆ ಸಮಯಕ್ಕೆ ತಕ್ಕಂತೆ ಅಭಿವೃದ್ಧಿ ಮಾಡಬೇಕು ಎಂದು ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ ಬೆಂಗಳೂರು ಇದರ ಸದಸ್ಯರು ಆದ ರೊನಾಲ್ಡ್ ಫೆರ್ನಾಂಡಿಸ್ ನುಡಿದರು.
ಅವರು ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ಇದರ ಸುವರ್ಣ ಮಹೋತ್ಸವದ ಸಮರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಪತ್ರಿಕೆಯ ಕೆಲಸವನ್ನು ಸಾಹಿತ್ಯ ಮಾಡುವಂತಿಲ್ಲ ಬದಲಿಗೆ ಬದಲಾವಣೆ ಹೇಗೆ ಎಂದು ಸಾತ್ವಿಕ ಆಕ್ರೋಶ ಭರಿತ ಸಲಹೆ ಕೊಡುವುದು ಒಳಿತು ಎಂದರು.
ಇದೇ ಸಂದರ್ಭದಲ್ಲಿ ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ಮೊದಲ ಬಾರಿಗೆ ಘೊಷಣೆ ಮಾಡಿದ 2022 ನೇ ವರ್ಷದ ಐದು ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು. ಜೀವಮಾನ ಸಾಧಕ ಪ್ರಶಸ್ತಿ ರಾಮದಾಸ್ ಗುಲ್ವಾಡಿ, ಜಾನಪದ ಪ್ರಶಸ್ತಿ ಕಲ್ಯಾಣಿಬಾಯಿ ನೀರ್ಕೆರೆ, ಕಾರ್ಯಕರ್ತ ಪ್ರಶಸ್ತಿ ಅಪ್ಪುರಾಯ ಪೈ, ಯುವ ಪ್ರಶಸ್ತಿ ಕ್ಲಾನ್ ವಿನ್ ಫೆರ್ನಾಂಡೀಸ್, ಪುಸ್ತಕ ಪ್ರಶಸ್ತಿ ಕೃತಿಕಾ ಕಾಮತ್ ಅವರಿಗೆ ನೀಡಿ ಗೌರವಿಸಲಾಯಿತು.
ಐವತ್ತು ವರ್ಷಗಳ ಪೂರೈಕೆ ಮಾಡಿದ ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ಇದರ ಸವಿನೆನಪಿಗಾಗಿ ಕೊಂಕಣಿ ಮಾತೃಭಾಷೆ ಮಾತನಾಡುವ ವಿವಿಧ ಧರ್ಮದ ಮತ್ತು ಸಮುದಾಯದ ಐವತ್ತು ಗಣ್ಯರಿಗೆ ಸನ್ಮಾನವನ್ನು ಮಾಡಲಾಯಿತು. ಸ್ಥಾಪಕ ಅಧ್ಯಕ್ಷ ದಿವಂಗತ ಚಾಪ್ರಾ ದೆಕೊಸ್ತಾ ಹಾಗೂ ನಂತರ ಕೆಬಿಎಮ್ ಕೆ ನಡೆಸಿದ ಎಲ್ಲಾ ಹನ್ನೆರಡು ಅಧ್ಯಕ್ಷರನ್ನು ನೆನೆದು ಅವರಿಗೆ ಅಥವಾ ಕುಟುಂಬದ ಸದಸ್ಯರನ್ನು ಗೌರವಿಸಲಾಯಿತು.
ಗೌರವ ಅಥಿತಿಗಳಾದ ಕೊಂಕಣಿ ಅಕಾಡೆಮಿಯ ರಿಜಿಸ್ಟ್ರಾರ್ ಮನೋಹರ ಕಾಮತ್ ಮಾತನಾಡಿ ಎಲ್ಲಾ ಸಮುದಾಯದ ಕೊಂಕಣಿ ಮಾತೃಭಾಷೆ ಜನರನ್ನು ಒಟ್ಟು ಮಾಡಿದ ಪದಾಧಿಕಾರಿಗಳು ಅಭಿನಂದನಾ ಅರ್ಹರು ಎಂದರು.
ಸಂಸ್ಥೆಯ ಕಾರ್ಯಕಾರಿ ಸಲಹದಾರರೂ ಅತಿಥಿಗಳು ಆಗಿದ್ದ ಪ್ರಶಾಂತ್ ಶೇಟ್ ಮಾತನಾಡಿ ಕೊಂಕಣಿ ಮಾತೃಭಾಷೆ ಕೆಲಸದ ಜೊತೆಯಲ್ಲಿ ನಾವು ಇದ್ದೇವೆ. ತಾಯಿಯ ಸೇವೆ ನಮಗೆ ಭಾಗ್ಯವಾಗಿದೆ ಎಂದರು.
ಕೆಬಿಎಮ್ ಕೆ ಅಧ್ಯಕ್ಷ ಕೆ ವಸಂತ ರಾವ್ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಕಳೆದ 2023 ಜನವರಿ ಒಂದು ತಾರೀಖಿನಂದು ಭಾಂಗಾರೋತ್ಸವ್ ಉದ್ಘಾಟನೆ ಮೂವತ್ತೈದು ಕೊಂಕಣಿ ಮಾತೃಭಾಷೆ ಸೇವೆ ಮಾಡುವ ಸಂಸ್ಥೆಗಳು ಮಾಡಿದ್ದವು. ಇಂದು ಅದಕ್ಕಿಂತ ಮಿಗಿಲಾದ ಸಂಸ್ಥೆಗಳು ಇಲ್ಲಿ ನೆರೆದು ಸಮಾರೋಪ ಯಶಸ್ವಿಯಾಗಿ ಪೂರ್ಣವಾಗಿದೆ. ಎಲ್ಲಾ ಜನರಿಗೆ ಧನ್ಯವಾದ ಎಂದರು.
ಮೊದಲಿಗೆ ಕಾರ್ಯಕ್ರಮದ ಸಂಚಾಲಕ ಹಾಗೂ ಕೆಬಿಎಮ್ ಕೆ ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ ಸ್ವಾಗತಿಸಿ ಸಂಸ್ಥೆಯ ನಡೆದು ಬಂದ ದಾರಿ ಹೇಳಿದರು. ಪೆಲ್ಸಿ ಲೋಬೊ ಹಾಗೂ ರಿಯಾನಾ ಡಿಕೂನಾ ನಿರೂಪಣೆ ಮಾಡಿದರು.
ವೇದಿಯಲ್ಲಿ ಸ್ಥಾಪಕ ಖಜಾಂಜಿ ಫಾ ಮಾರ್ಕ್ ವಾಲ್ಡರ್ ಇದ್ದು ಆಶೀರ್ವಚನ ನೀಡಿದರು.
ಕಾರ್ಯಕಾರಿ ಸದಸ್ಯರಾದ ರೊಬರ್ಟ್ ಮೆನೆಜಸ್ ಮಾಜಿ ಅಧ್ಯಕ್ಷರ ಪರಿಚಯ ಮಾಡಿದರು. ಪ್ರಶಸ್ತಿ ಹಾಗೂ ಗೌರವಗಳ ಸಂಚಾಲಕರಾದ ಅರವಿಂದ ಶಾನಭಾಗ ಪ್ರಶಸ್ತಿ ಮತ್ತು ಗೌರವ ಪಡೆಯುವವರ ಪರಿಚಯ ಮಾಡಿದರು. ಗೌರವ ಪಡೆಯುವ ಸಂಸ್ಥೆಗಳ ಪರಿಚಯ ಜೊಸ್ಸಿ ಪಿಂಟೊ ಮಾಡಿದರು.
ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ವಿವಿಧ ಶಾಲೆಗಳು ಹಾಗೂ ಕಾಲೇಜುಗಳು ಕೊಂಕಣಿ ಉಳಿಸುವ ಪ್ರಕ್ರಿಯೆಯ ಅಂಗವಾಗಿ ಇನ್ನೂರು ವಿದ್ಯಾರ್ಥಿಗಳು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ನಗದು ಬಹುಮಾನ ಹಾಗೂ ಭಾಗವಹಿಸುವಿಕೆಯ ಪ್ರಮಾಣ ಪತ್ರ ಪಡೆದರು. ಉಪಾಧ್ಯಕ್ಷ ರತ್ನಾಕರ ಕುಡ್ವಾ ಅವರು ಸಂಘಟಿಸಿ ನಿರೂಪಿಸಿದರು.
ಆಸ್ಟೀನ್ ಡಿಸೋಜ ಪ್ರಭು ಪ್ರಾಯೋಜಿತ ಪ್ರಭಂದ ಸ್ಪರ್ಧೆಯಲ್ಲಿ ವೀಜೇತರಾದ ಪ್ರಥಮ ಫ್ರಾಂಕ್ಲಿನ್ ಕೆಸ್ಟಲಿನೊ, ದ್ವಿತೀಯ ಅಕ್ಷತ ಶಾನ್ ಭಾಗ್, ತೃತೀಯ ರವಳನಾಥ ಕಾಮತ್ ರವರಿಗೆ ಬಹುಮಾನ ವಿತರಿಸಲಾಯಿತು.
ಸಹಕಾರ್ಯದರ್ಶಿ ಜೂಲಿಯೆಟ್ ಫೆರ್ನಾಂಡೀಸ್ ವಂದಿಸಿದರು. ಖಜಾಂಜಿ ಸುರೇಶ್ ಶೆಣೈ, ವೇದಿಕೆಯಲ್ಲಿ ಇದ್ದರು. ಕಾರ್ಯಕಾರಿ ಸದಸ್ಯರಾದ ಮೀನಾಕ್ಷಿ ಪೈ,ಗೀತಾ ಸಿ ಕಿಣಿ,,ಲಾರೆನ್ಸ್ ಪಿಂಟೊ, ನವೀನ ನಾಯಕ್, ವೆಂಕಟೇಶ ಬಾಳಿಗ, ಸಹಕರಿಸಿದರು.
ಅಂದು ಮಧ್ಯಾಹ್ನ ಆಕರ್ಷಕ ಮೆರವಣಿಗೆಯು ಕರ್ನಾಟಕದ ಮೂವತ್ತೊಂದು ಜಿಲ್ಲೆಯ ಪ್ರತಿನಿಧಿಸುವ ಕೊಂಕಣಿ ಘೋಷಣೆಗಳೊಂದಿಗೆ , ಅಲೋಶಿಯಸ್ ಪ್ರೌಡಾಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ಜೊತೆಗೆ ನಡೆಯಿತು. ಕೊನೆಯಲ್ಲಿ ರೇಮಂಡ್ ಡಿಕೂನಾ ತಾಕೊಡೆ ಬರೆದು ಅಲೋಶಿಯಸ್ ಕೊಂಕಣಿ ಸಂಸ್ಥೆಯ ಸಂಯೋಜಕಿ ಪ್ಲೊರಾ ಕಾಸ್ತೆಲಿನೊ ನಿರ್ಧೆಶನ ಮಾಡಿ ಅಲ್ಲಿನ ವಿದ್ಯಾರ್ಥಿಗಳು ಆಡಿತೋರಿಸಿದ ನಾಟಕ ಮುಂಗೈತಲೆ ಆಡಿ ತೋರಿಸಲಾಯಿತು.