ಬೆಂಗಳೂರು: ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಮತ್ತು ಹಣಕಾಸು ವಹಿವಾಟುಗಳನ್ನು ಸರಳಗೊಳಿಸುವ ಭಾರತ ಸರ್ಕಾರದ ದೂರದೃಷ್ಟಿಗೆ ಅನುಗುಣವಾಗಿ, ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ (“ಕೆಎಂಬಿಎಲ್”/“ಕೋಟಕ್”) ಅಸ್ತಿತ್ವದಲ್ಲಿರುವ ನೆಟ್ ಬ್ಯಾಂಕಿಂಗ್ ಜೊತೆಗೆ ಬಹು ಆಯ್ಕೆಗಳ – ಯುಪಿಐ, ಕ್ರೆಡಿಟ್ ಕಾರ್ಡ್ , ಮತ್ತು ಡೆಬಿಟ್ ಕಾರ್ಡ್ – ತಡೆರಹಿತ ಜಿಎಸ್ಟಿ ಪಾವತಿಯನ್ನು ಪ್ರಾರಂಭಿಸುವುದಾಗಿ ಇಂದು ಘೋಷಿಸಿತು.
ಈ ವಿಷಯದಲ್ಲಿ ಕೋಟಕ್ ಭಾರತದ ಪ್ರಪ್ರಥಮ ಬ್ಯಾಂಕ್. ಇನ್ನು ತೆರಿಗೆ ಪಾವತಿದಾರರು ತಮ್ಮ ಆದ್ಯತೆಯ ಡಿಜಿಟಲ್ ಪಾವತಿ ವಿಧಾನದ ಮೂಲಕ ಜಿಎಸ್ಟಿ ಪೋರ್ಟಲ್ನ ‘ಇ-ಪಾವತಿ’ ಆಯ್ಕೆ ಮಾಡಿಕೊಂಡು ತಮ್ಮ ಜಿಎಸ್ಟಿ ವಹಿವಾಟುಗಳನ್ನು ನಿರ್ವಹಿಸಬಹುದಾಗಿರುತ್ತದೆ.
ಕೋಟಕ್ ಮಹೀಂದ್ರಾ ಬ್ಯಾಂಕ್, ಯಾವಾಗಲೂ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕೆ ಉತ್ತಮ ಬೆಂಬಲ ನೀಡುತ್ತ ಬಂದಿದೆ. ಮತ್ತು ಅನೇಕ ನೂತನ ಉಪಕ್ರಮಗಳ ಮೂಲಕ ಡಿಜಿಟಲ್ ಮಾರುಕಟ್ಟೆಯ ಬೆಳವಣಿಗೆಗೆ ನೆರವಾಗುತ್ತಿದೆ. ಹೊಸ ತಡೆರಹಿತ ಮತ್ತು ಬಹು ಪಾವತಿ ಆಯ್ಕೆಗಳೊಂದಿಗೆ ಬೇರೆ ಬ್ಯಾಂಕ್ಗಳ ಗ್ರಾಹಕರೂ (ಕೆಲವು ಪಾವತಿ ಆಯ್ಕೆಗಳಿಗೆ ಹಿಂದೆ ಇದು ಸಾಧ್ಯವಿರಲಿಲ್ಲ), ತಮ್ಮ ಜಿ.ಎಸ್.ಟಿ ಪಾವತಿಗಳನ್ನು ಸಮರ್ಥವಾಗಿ ಮತ್ತು ವಿಶ್ವಸನೀಯವಾಗಿ ಮಾಡಬಹುದು. ಗಮನಾರ್ಹವಾಗಿ, ಕೋಟಕ್ ಕಳೆದ ವರ್ಷ ಕೇಂದ್ರದ ಜಿ.ಎಸ್.ಟಿ ಪೋರ್ಟಲ್ನೊಂದಿಗೆ ಏಕೀಭವಗೊಂಡಿರುವುದರಿಂದ ಅದರ ನೆಟ್ ಬ್ಯಾಂಕಿಂಗ್ ವ್ಯವಸ್ಥೆ ತೆರಿಗೆ ಕಟ್ಟುವವರಿಗೆ ಅತ್ಯುತ್ತಮವಾಗಿದೆ .
ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ನ ಸಾರ್ವಜನಿಕ ವ್ಯವಹಾರಗಳು ಮತ್ತು ಸರ್ಕಾರಿ ವ್ಯವಹಾರದ ಅಧ್ಯಕ್ಷ ರಾಘವೇಂದ್ರ ಸಿಂಗ್, “ವಿಶ್ವಾದ್ಯಂತ ಮಾನ್ಯವಾಗಿರುವ ಮತ್ತು ಅಳವಡಿಸಿಕೊಳ್ಳುತ್ತಿರುವ ಭಾರತ ಸರ್ಕಾರದ ಡಿಜಿಟಲ್ ಪಾವತಿ ಕ್ರಾಂತಿ ಪ್ರಯತ್ನಗಳನ್ನು ನಾವು ಶ್ಲಾಘಿಸುತ್ತೇವೆ. ಬಹು ಜಿ.ಎಸ್.ಟಿ ಪಾವತಿ ಆಯ್ಕೆಗಳನ್ನು ಪ್ರಾರಂಭಿಸಿದ ಭಾರತದ ಮೊದಲ ಬ್ಯಾಂಕ್, ಭವಿಷ್ಯದಲ್ಲಿ ನಮ್ಮ ಗ್ರಾಹಕರಿಗೆ ಮಾತ್ರವಲ್ಲದೆ ಎಲ್ಲ ತೆರಿಗೆ ಪಾವತಿದಾರರಿಗೆ ಭವಿಷ್ಯದ ದೃಷ್ಟಿಯುಳ್ಳ, ಸಮಸ್ಯಾತೀತವಾದ ಡಿಜಿಟಲ್ ಪಾವತಿಗಳ ರೂಪಿಸಲು ನಮಗೆ ಸಂತೋಷವಾಗುತ್ತದೆ.”
ಕೆಎಂಬಿಎಲ್ ಪಾವತಿ ಗೇಟ್ವೇ ಮೂಲಕ ಜಿ.ಎಸ್.ಟಿ ಪಾವತಿಸುವ ವಿಧಾನ:
- www.gst.gov.in ಗೆ ಲಾಗ್ ಇನ್ ಮಾಡಿ
- ಚಲನ್ ಸಿದ್ಧಪಡಿಸಿ ಮತ್ತು ಇ-ಪಾವತಿ ಆಯ್ಕೆಮಾಡಿ
- ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ಯುಪಿಐ ನಂತಹ ಬಹು ಪಾವತಿ ಆಯ್ಕೆಗಳಿಂದ ಯಾವುದನ್ನಾದರೂ ಆಯ್ದುಕೊಳ್ಳಿ
- ಕೋಟಕ್ ಮಹೀಂದ್ರಾ ಬ್ಯಾಂಕ್ ಆಯ್ಕೆಮಾಡಿ*
- ಪಾವತಿ ಮಾಡಿ