ಬೆಂಗಳೂರು: ಟಾಟಾ ಮೋಟಾರ್ಸ್ನ ಅಂಗಸಂಸ್ಥೆ ಮತ್ತು ಭಾರತದ ಇವಿ ಕ್ರಾಂತಿಯ ಪ್ರವರ್ತಕ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (ಟಿಪಿಇಎಂ), ಇಂದು ತನ್ನ ಮೊದಲ ಪ್ಯೂರ್ ಇವಿ – ಪಂಚ್.ಇವಿ ಅನ್ನು ಬಿಡುಗಡೆ ಮಾಡಿದೆ. ಇದು ಟಿಪಿಇಎಂ ಇತ್ತೀಚೆಗೆ ಪರಿಚಯಿಸಿದ, ಸುಧಾರಿತ ಪ್ಯೂರ್ ಇವಿ ಆರ್ಕಿಟೆಕ್ಚರ್ ಆ್ಯಕ್ಟಿ.ಇವಿ ಅನ್ನು ಆಧರಿಸಿ ತಯಾರಿಸಿದ ಮೊದಲ ಉತ್ಪನ್ನವಾಗಿದ್ದು, ಪಂಚ್.ಇವಿ ಅದರ ಅತ್ಯಾಧುನಿಕ ತಂತ್ರಜ್ಞಾನ, ಪರಿಸರ ಪ್ರಜ್ಞೆ ಮತ್ತು ವೆಚ್ಚ-ಪರಿಣಾಮಕಾರಿತ್ವದಿಂದಾಗಿ ಅಸಾಮಾನ್ಯವಾಗಿ ಮೂಡಿಬಂದಿದೆ. ಸ್ಮಾರ್ಟ್, ಅಡ್ವೆಂಚರ್ ಮತ್ತು ಎಂಪವರ್ಡ್ ಎಂಬ ಮೂರು ವಿಭಿನ್ನ ಶೈಲಿಗಳಲ್ಲಿ ಕಾರು ಲಭ್ಯವಿದೆ. ಪಂಚ್.ಇವಿ ಬಹುಮುಖ ಮತ್ತು ಬಹು-ಶಕ್ತಿಶಾಲಿ ಎಲೆಕ್ಟ್ರಿಕ್ ವಾಹನವಾಗಿದ್ದು, ಸೊಗಸಾದ ಅದ್ಭುತವಾದ ಕ್ಲಾಸಿಕಲ್ ಎಸ್ಯುವಿ ವಿನ್ಯಾಸ ಹೊಂದಿದೆ. ರೂ.10.99 ಲಕ್ಷದ ಪರಿಚಯಾತ್ಮಕ ಬೆಲೆಯಲ್ಲಿ ಮಾರಾಟಕ್ಕೆ ಲಭ್ಯವಿದೆ. ಪಂಚ್.ಇವಿ ದೇಶಾದ್ಯಂತ ಇರು ಎಲ್ಲಾ ಟಾಟಾ ಮೋಟಾರ್ಸ್ ಶೋರೂಮ್ಗಳ ಅಧಿಕೃತ ಇವಿ ಮಾರಾಟ ಕೇಂದ್ರಗಳಲ್ಲಿ ಮತ್ತು ಟಾಟಾ.ಇವಿ ಸ್ಟೋರ್ಗಳಲ್ಲಿ ಲಭ್ಯವಿರುತ್ತದೆ.
ಪಂಚ್.ಇವಿಯು ಟಾಟಾ.ಇವಿಯ ಪೋರ್ಟ್ಫೋಲಿಯೊಗೆ ಪ್ರವರ್ತಕ ಮಾದರಿಯ ಸೇರ್ಪಡೆಯಾಗಿದ್ದು, ಸಮಕಾಲೀನ ಗ್ರಾಹಕರ ಅಗತ್ಯತೆಗಳು ಮತ್ತು ಜೀವನಶೈಲಿಯಲ್ಲಿ ಪರಿವರ್ತನೆಯ ಬದಲಾವಣೆಯನ್ನು ತರಲಿದೆ. ಇದು ಪಂಚ್ ಬ್ರಾಂಡ್ನ ವಿಶ್ವಾಸಾರ್ಹತೆಯನ್ನು ವಿದ್ಯುತ್ ವಾಹನ ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರಗತಿಗಳೊಂದಿಗೆ ಸಂಯೋಜಿಸುತ್ತದೆ. ಝೀರೋ ಎಮಿಷನ್ ಗಳೊಂದಿಗೆ ಅಸಾಧಾರಣ ಚಾಲನೆಯ ಅನುಭವವನ್ನು ನೀಡುತ್ತದೆ.
ಪಂಟ್.ಇವಿಯ ಬಿಡುಗಡೆ ಕುರಿತು ಪ್ರತಿಕ್ರಿಯಿಸುತ್ತಾ, ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ನ ಮ್ಯಾನೇಜಿಂಗ್ ಡೆರೈಕ್ಟರ್ ಶ್ರೀ.ಶೈಲೇಶ್ ಚಂದ್ರ, ” ಭಾರತದ ಇವಿ ಪ್ರಯಾಣದಲ್ಲಿ ಇವತ್ತು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ ಕ್ಷಣವಾಗಿದೆ, ಏಕೆಂದರೆ ಟಾಟಾ.ಇವಿ, ಪಂಚ್.ಇವಿ ಅನ್ನು ಬಿಡುಗಡೆ ಮಾಡುವುದರೊಂದಿಗೆ ಸುಸ್ಥಿರ ಚಲನಶೀಲತೆಯ ಹೊಸ ಯುಗದ ಪಥದಲ್ಲಿ ರಾಷ್ಟ್ರವನ್ನು ಮುನ್ನಡೆಸುತ್ತದೆ. ಇವಿ ಅಳವಡಿಕೆಯನ್ನು ವೇಗಗೊಳಿಸುವ ನಿಟ್ಟಿನ ನಮ್ಮ ಯೋಜನೆಯು ಆ ಕ್ಷೇತ್ರವನ್ನು ಮಾರ್ಪಡಿಸಿದೆ, ನವೀನ ಪರಿಹಾರಗಳೊಂದಿಗೆ ಅಡೆತಡೆಗಳನ್ನು ನಿವಾರಿಸಿದೆ. ಈ ಕ್ಷೇತ್ರದಲ್ಲಿ ಬದಲಾವಾಣೆ ತರುವ ಪ್ರಯಾಣವು ನೆಕ್ಸಾನ್.ಇವಿ ಮತ್ತು ಟಿಯಾಗೋ.ಇವಿ ಯಿಂದ ಪ್ರಾರಂಭವಾಯಿತು. ಮುಂದೆ ಸುದೃಢವಾದ ಚಾರ್ಜಿಂಗ್ ಮೂಲಸೌಕರ್ಯವನ್ನು ರಚಿಸುವುದರೆಡೆಗೆ, ನಾವು ನಮ್ಮ ಆದ್ಯತೆಗಳನ್ನು ಮರುರೂಪಿಸಿದ್ದೇವೆ. ಬಿಯಾಂಡ್ ಎವೆರಿ ಡೇ ಎಂಬ ಟ್ಯಾಗ್ ಲೈನ್ ನೊಂಡಿಗೆ ಈಗ ಪಂಚ್.ಇವಿ, ಎಸ್ಯುವಿ ಬಿಡುಗಡೆ ಮಾಡಿದ್ದು, ವಿಕಸನಗೊಳ್ಳುತ್ತಿರುವ ಗ್ರಾಹಕರ ಅಗತ್ಯತೆಗಳಿಗೆ ಹೊಂದಿಕೆಯಾಗುವ ಬಹುಮುಖ ಇವಿ ಅನ್ನು ತಲುಪಿಸುತ್ತಿದ್ದೇವೆ. ಆ ಮೂಲಕ ನಾವು ನಮ್ಮ ಬದ್ಧತೆಯನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದೇವೆ. ಇದು ಭಾರತೀಯ ಇವಿ ಮಾರುಕಟ್ಟೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಮತ್ತು ಭಾರತವನ್ನು ಪ್ಯೂರ್ ಇವಿಗಳ ಯುಗಕ್ಕೆ ಕೊಂಡೊಯ್ಯಲಿದೆ.
ಈ ನಾಲ್ಕು ವರ್ಷಗಳು 100 ಪಟ್ಟು ಬೆಳವಣಿಗೆಗೆ ಸಾಕ್ಷಿಯಾಗಿದೆ. ಆರಂಭದ ಘಟ್ಟವನ್ನು ನೋಡಿದರೆ ಇವಿಗಳು ಈಗ ಮುಖ್ಯವಾಹಿನಿ ವಾಹನಗಳಾಗಿವೆ. ಇವಿಗಳನ್ನು ಒದಗಿಸುವ ಟಾಟಾದ ಬದ್ಧತೆಗೆ ಸಾಕ್ಷಿಯಾಗಿ, ಪಂಚ್.ಇವಿ ಮಾನದಂಡಗಳನ್ನು ಮರುವ್ಯಾಖ್ಯಾನಿಸುವಂತೆ ರೂಪಿಸಲಾಗಿದೆ. ಇಂದು ಮತ್ತು ನಾಳಿನ ಅಗತ್ಯಗಳನ್ನು ಮೀರಿ ಮಾದರಿ ಬದಲಾವಣೆಯನ್ನು ಇದು ಉಂಟುಮಾಡಲಿದೆ. ಇ-ಮೊಬಿಲಿಟಿಯ ಹೊಸ ಯುಗವನ್ನು ನಾವು ಸ್ವಾಗತಿಸುತ್ತಿರುವಾಗ, ಪಂಚ್.ಇವಿ ಖಂಡಿತವಾಗಿಯೂ ನಾವೀನ್ಯತೆ ಮತ್ತು ಪ್ರಗತಿಯ ಸಂಕೇತವಾಗಿ ಹೊರಹೊಮ್ಮಿದೆ. ವಿಶೇಷ ಮಳಿಗೆಗಳು, ಸಹಯೋಗದ ಚಾರ್ಜಿಂಗ್ ಉಪಕ್ರಮಗಳು ಮತ್ತು ಅತ್ಯಾಧುನಿಕ ತಯಾರಿಕಾ ಪರಿಸರ ವ್ಯವಸ್ಥೆಯೊಂದಿಗೆ, ಸುಸ್ಥಿರತೆ, ಸಮುದಾಯ ಮತ್ತು ತಂತ್ರಜ್ಞಾನವು ಒಂದೆಡೆ ಸೇರಿರುವ ಭವಿಷ್ಯವನ್ನು ರೂಪಿಸಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದರು.
ಪಂಚ್.ಇವಿ ಕುರಿತು ಸಂಕ್ಷಿಪ್ತ ಮಾಹಿತಿ
ವಿವಿಧ ಗ್ರಾಹಕ ಬಳಕೆಯನ್ನು ಗಮನದಲ್ಲಿಟ್ಟುಕೊಂಡು, ಪಂಚ್.ಇವಿ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ. ಅದರಲ್ಲಿ ಒಂದು 25 ಕೆಡಬ್ಲ್ಯೂಎಚ್ ಆಗಿದ್ದು, 315 ಕಿಮೀಗಳ ಎಂಐಡಿಸಿ ರೇಂಜ್ ಒದಗಿಸುತ್ತದೆ. ಇನ್ನೊಂದು 35 ಕೆಡಬ್ಲ್ಯೂಎಚ್ ಬ್ಯಾಟರಿ ಆಯ್ಕೆಯಾಗಿದ್ದು, ಇದು 421 ಕಿಮೀಗಳ ಎಂಐಡಿಸಿ ರೇಂಜ್ ಅನ್ನು ನೀಡುತ್ತದೆ. ಈ ಬ್ಯಾಟರಿ ಪ್ಯಾಕ್ ಆಯ್ಕೆಗಳು ಟೂಇ-ಡ್ರೈವ್ ಆಯ್ಕೆಗಳೊಂದಿಗೆ ಬರುತ್ತಿದ್ದು, 60ಕೆಡಬ್ಲ್ಯೂಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಏಸಿ ಮೋಟಾರ್, 114ಎನ್ಎಂ ಉತ್ಪಾದಿಸುತ್ತದೆ ಮತ್ತು 90ಕೆಡಬ್ಲ್ಯೂ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಏಸಿ ಮೋಟಾರ್ 190ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಪರಿಣಾಮವಾಗಿ ವೇಗವು 0 ರಿಂದ 100 ಕಿಮೀ/ಗಂಟೆಗೆ ತಲುಪಲು ಕೇವರ 9.5 ಸೆಕೆಂಡ್ ಸಾಕು. ಈ ವಿದ್ಯುನ್ಮಾನ ಸೀಮಿತ ಕಾರಿನ ಗರಿಷ್ಠ ವೇಗ 140ಕಿಮೀ/ಗಂಟೆಗೆ. ಪಂಚ್.ಇವಿಯ ಬ್ಯಾಟರಿ ಪ್ಯಾಕ್ ಮತ್ತು ಮೋಟಾರ್ IP67 ರೇಟ್ ಮಾಡಲಾಗಿದ್ದು, ಧೂಳು ಮತ್ತು ನೀರಿನಿಂದ ರಕ್ಷಣೆ ಒದಗಿಸಲಿದೆ. 8 ವರ್ಷ ಅಥವಾ 1,60,000 ಕಿಮೀ (ಯಾವುದು ಮೊದಲು ತಲುಪುತ್ತದೋ ಅದು) ವಾರಂಟಿ ನೀಡುವುದರಿಂದ ನಿಮಗೆ ಸಂಪೂರ್ಣ ಮನಸ್ಸಿನ ಶಾಂತಿಯನ್ನು ನೀಡುತ್ತದೆ.
ಹೆಚ್ಚುವರಿಯಾಗಿ, ಪಂಚ್.ಇವಿ ಲಾಂಗ್ ರೇಂಜ್ (ಎಲ್ಆರ್), 3.3ಕೆಡಬ್ಲ್ಯೂ ಮತ್ತು 7.2 ಕೆಡಬ್ಲ್ಯೂ ಏಸಿ ಫಾಸ್ಟ್ ಚಾರ್ಜರ್ ಆಯ್ಕೆಯೊಂದಿಗೆ ಲಭ್ಯವಿದೆ, ಇದನ್ನು ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಸ್ಥಾಪಿಸಬಹುದು. ಡಿಸಿ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ, ಯಾವುದೇ 50 ಕೆಡಬ್ಲ್ಯೂ ಡಿಸಿ ವೇಗದ ಚಾರ್ಜರ್ನಿಂದ 56 ನಿಮಿಷಗಳಲ್ಲಿ 10% ರಿಂದ 80% ವರೆಗೆ ವೇಗವಾಗಿ ಚಾರ್ಜ್ ಮಾಡಬಹುದು.
ವಿನ್ಯಾಸದಲ್ಲಿ ತಂತ್ರಜ್ಞಾನದೊಂದಿಗೆ ಅಪೂರ್ವವಾದ ಇವಿ ಐಡೆಂಟಿಟಿ
ಹೊಸ ಡಿಜಿಟಲ್ ವಿನ್ಯಾಸದ ವಿಧಾನದಿಂದ ರೂಪಿಸಲಾಗಿರುವ ಪಂಚ್.ಇವಿ, ನಾವೀನ್ಯತೆ, ಟೆಕ್-ಫಾರ್ವರ್ಡ್ ಆಗಿದ್ದು ಮತ್ತು ಮಹತ್ವಾಕಾಂಕ್ಷಿ ಕಾರ್ ಆಗಿದೆ. ಐಕಾನಿಕ್ ನೋಟದಿಂದ ಆಧುನಿಕ ಇವಿ ಗುಣ ಪಡೆದಿದೆ. ಕಾರ್ ಅನ್ನು ಸ್ಮಾರ್ಟ್ ಲೈಟಿಂಗ್ ವ್ಯವಸ್ಥೆಗಳಿಂದ ಡಿಜಿಟಲ್ ಆಗಿ ಮಹತ್ವಪೂರ್ಣಗೊಳಿಸಲಾಗಿದೆ.
• ವಾಹನವು ಚಾರ್ಜ್ ಆಗುತ್ತಿರುವಾಗ ಎಸ್ಓಸಿ ಮಟ್ಟವನ್ನು ಸೂಚಿಸಲು ಉಪಯುಕ್ತವಾದ ಸ್ಮಾರ್ಟ್ ಚಾರ್ಜಿಂಗ್ ಇಂಡಿಕೇಟರ್ ಇದೆ
• ಬೈ-ಫಂಕ್ಷನಲ್ ಎಲ್ಇಡಿಗಳು ಕೇಂದ್ರ ಸ್ಥಾನದ ದೀಪದೊಂದಿಗೆ ಸೇರಿಕೊಂಡು – ಸುತ್ತಮುತ್ತಲಿನ ವಾತಾವರಣವನ್ನು ಬೆಳಗಿಸುತ್ತದೆ
• ಕಾರ್ ಅನ್ನು ಲಾಕ್ ಅಥವಾ ಅನ್ಲಾಕ್ ಮಾಡುವಾಗ ಸ್ವಾಗತ ಮತ್ತು ಗುಡ್ ಬೈ ತಿಳಿಸುತ್ತದೆ
ಕ್ಯಾಬಿನ್ ಅನುಭವ:
ಡಿಜಿಟಲ್ ಫರ್ಸ್ಟ್ – ಹೈ-ಟೆಕ್ ಕ್ಯಾಬಿನ್ ಅನುಭವವನ್ನು ನೀಡಲು ಒಟ್ಟಾರೆ ಡಿಜಿಟೈಸ್ ಮಾಡಿದ ಅನುಭವವನ್ನು ಒದಗಿಸುವ ಪಂಚ್.ಇವಿ, ಮೇಲಿನ 2-3 ವಿಭಾಗಗಳಲ್ಲಿ ಅತ್ಯಪೂರ್ವ ವೈಶಿಷ್ಟ್ಯಗಳನ್ನು ನೀಡುತ್ತದೆ.
• ಎರಡು ಪರದೆಗಳ ಸಂಯೋಜನೆ – 26ಸೆಂಮೀ ಡಿಜಿಟಲ್ ಕಾಕ್ಪಿಟ್ ಜೊತೆಗೆ ಹರ್ಮಾನ್ ಡಿಸ್ಪ್ಲೇಯಿಂದ 26ಸೆಂಮೀನ ಹೈ-ಡೆಫಿನಿಷನ್ ಇನ್ಫೋಟೈನ್ಮೆಂಟ್
• 2 – ಸ್ಪೋಕ್ ಸ್ಟೀರಿಂಗ್ ವೀಲ್ ಮಧ್ಯದಲ್ಲಿ ಪ್ರಕಾಶಮಾನವಾದ ಲೋಗೋ ಡಿಜಿಟಲ್ ವಾತಾವರಣವನ್ನು ಹೆಚ್ಚಿಸುತ್ತದೆ
• ಫಿಜಿಟಲ್ ಕಂಟ್ರೋಲ್ ಪ್ಯಾನೆಲ್ ಭೌತಿಕ ಮತ್ತು ಸ್ಪರ್ಶ ನಿಯಂತ್ರಣಗಳ ಸಾಮರಸ್ಯದ ಸಮ್ಮಿಲನವನ್ನು ಹೊಂದಿದೆ, ಅತ್ಯುತ್ತಮವಾದ ಸೌಂದರ್ಯ ತೃಪ್ತಿಗಾಗಿ ನಿಖರವಾಗಿ ವಿನ್ಯಾಸಗೊಳಿಸಲಾಗಿದೆ
• ವೈರ್ಲೆಸ್ ಆಂಡ್ರಾಯ್ಡ್ ಆಟೋಟಿಎಂ ಮತ್ತು ಆಪಲ್ ಕಾರ್ ಪ್ಲೇಟಿಎಂ ಕಾರ್ಯನಿರ್ವಹಣೆಗಳೊಂದಿಗೆ ಅನುಕೂಲತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ, ಜೊತೆಗೆ ಆರ್ಕೇಡ್.ಇವಿಯ ಗ್ಯಾಜೆಟ್-ರೀತಿಯ ಅನುಭವದೊಂದಿಗೆ- ಗೇಮಿಂಗ್, ಸಂಗೀತ ಮತ್ತಿತರ 17 ಆ್ಯಪ್ಗಳ ಗುಂಪು ಲಭ್ಯವಿದೆ
• • ಪಂಚ್.ಇವಿ 6 ಭಾಷೆಗಳಲ್ಲಿ 200ಕ್ಕೂ ಕಮಾಂಡ್ಗಳೊಂದಿಗೆ ಕಾರ್ಯ ನಿರ್ವಹಿಸುವ ಪ್ರಾದೇಶಿಕ “ಹೇ ಟಾಟಾ” ಅಸಿಸ್ಟೆಂಟ್ ಹೊಂದಿದೆ, ಆಪಲ್ ಬಳಕೆದಾರರಿಗೆ ಅಲೆಕ್ಸಾ, ಸಿರಿ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ಅಸಿಸ್ಟೆಂಟ್ ಸೇರಿದಂತೆ ಮಲ್ಟಿಪಲ್ವಾಯ್ಸ್ ಅಸಿಸ್ಟೆಂಟ್ ಸೌಲಭ್ಯ ನೀಡುತ್ತದೆ.
• ಝಡ್ ಕನೆಕ್ಟ್ ಕನೆಕ್ಟೆಡ್ ಕಾರ್ಟೆಕ್ನಾಲಜಿ ಜೊತೆಗೆ ಸ್ಮಾರ್ಟ್ವಾಚ್ ಸಂಪರ್ಕವನ್ನು ಸ್ಟಾಂಡರ್ಡ್ ಆಗಿ ನೀಡುವುದರೊಂದಿಗೆ ಕೆನಕ್ಟೆಡ್ ಕಾರ್ ಅನುಭವವನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
ಪ್ಲಶ್ ಫೀಚರ್ ಅಪ್ಗ್ರೇಡ್ – ವೈರ್ಲೆಸ್ ಚಾರ್ಜಿಂಗ್, ಸ್ವಯಂಚಾಲಿತ ಹೆಡ್ಲ್ಯಾಂಪ್ಗಳು, ರೈನ್-ಸೆನ್ಸಿಂಗ್ ವೈಪರ್ಗಳು ಮತ್ತು ಸ್ವಯಂ-ಡಿಮ್ಮಿಂಗ್ ಐಆರ್ವಿಎಂ ನಂತಹ ವಿಶಿಷ್ಟ ವೈಶಿಷ್ಟ್ಯಗಳೊಂದಿಗೆ, ಪಂಚ್.ಇವಿ ಅನ್ನು ಅಪೂರ್ವ ಚಾಲನಾ ಅನುಭವವನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ವೇಗದ ಚಾರ್ಜಿಂಗ್ ಅನ್ನು 45ಡಬ್ಲ್ಯೂ ಟೈಪ್-ಸಿ ಯುಎಸ್ ಬಿ ಪೋರ್ಟ್ ಮೂಲಕ ಒದಗಿಸಲಾಗುತ್ತದೆ. ಆರಾಮದಾಯಕತೆ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡಿ, ಪಂಚ್.ಇವಿ ನಲ್ಲಿ ಗಾಳಿಯಾಡುವುದು ಸುಲಭವಾಗುವಂತೆ ಲೆಥೆರೆಟ್ ಸೀಟ್ಗಳು, ಎಲೆಕ್ಟ್ರಿಕ್ ಸನ್ರೂಫ್, ಮೂಡ್ ಲೈಟ್ಗಳು ಮತ್ತು ಎಕ್ಯೂಐ ಡಿಸ್ಪ್ಲೇಯೊಂದಿಗೆ ಏರ್ ಪ್ಯೂರಿಫೈಯರ್ ಕೂಡ ಇದೆ. ಹೆಚ್ಚುವರಿಯಾಗಿ, ಪಂಚ್.ಇವಿ ಪ್ಯಾಡಲ್ ಶಿಫ್ಟರ್ಗಳೊಂದಿಗೆ ಬರುತ್ತದೆ, ಇದು 4-ಹಂತದ ಮಲ್ಟಿ-ಮೋಡ್ ರೀಜನರೇಶನ್ ಮತ್ತು ಓವರ್-ದಿ-ಏರ್ ಸಾಫ್ಟ್ ವೇರ್ ಅಪ್ಗ್ರೇಡ್ ಸಾಮರ್ಥ್ಯಗಳನ್ನು ನೀಡುತ್ತದೆ.
ಆ್ಯಕ್ಟಿ.ಇವಿ ಆರ್ಕಿಟೆಕ್ಚರ್ – ಕ್ಲಾಸ್ ಆಗಿರುವ ಉತ್ಪನ್ನ. ಪಂಚ್.ಇವಿ ಎಂಬುದು ಭಾರತದಲ್ಲಿನ ಎಲ್ಲಾ-ಹೊಸ ಮೇಡ್-ಇನ್-ಪ್ಯೂರ್ ಇವಿ ಆರ್ಕಿಟೆಕ್ಚರ್ ಆಕ್ಟಿ.ಇವಿ ಅನ್ನು ಆಧರಿಸಿದ ಟಾಟಾ ಮೋಟಾರ್ಸ್ನ ಮೊದಲ ಉತ್ಪನ್ನವಾಗಿದ್ದು, ಇದು ಅಡ್ವಾನ್ಸ್ಡ್ ಕನೆಕ್ಟೆಡ್ ಟೆಕ್-ಇಂಟೆಲಿಜೆಂಟ್ ಎಲೆಕ್ಟ್ರಿಕ್ ವೆಹಿಕಲ್ ಎಂದು ಗುರುತುಸಿಕೊಂಡಿದೆ. ಆಕ್ಟಿ.ಇವಿ ಆರ್ಕಿಟೆಕ್ಚರ್, ಕಾರ್ಯಕ್ಷಮತೆ, ತಂತ್ರಜ್ಞಾನ, ಮಾಡ್ಯುಲಾರಿಟಿ ಮತ್ತು ಸ್ಪೇಸ್ ಎಫಿಷಿಯನ್ಸಿ ಎಂಬ ಪ್ರಮುಖವಾದ ಪಿಲ್ಲರ್ ಗಳನ್ನು ಆಧರಿಸಿದೆ ಮತ್ತು ಪವರ್ಟ್ರೇನ್, ಚಾಸಿಸ್, ಎಲೆಕ್ಟ್ರಿಕಲ್ ಆರ್ಕಿಟೆಕ್ಚರ್ ಮತ್ತು ಕ್ಲೌಡ್ ಆರ್ಕಿಟೆಕ್ಚರ್ ಎಂಬ ನಾಲ್ಕು ಲೋಯರ್ ಗಳನ್ನು ಒಳಗೊಂಡಿದೆ.
ರಾಜಿಯಾಗದ ಸುರಕ್ಷತೆ: 6 ಏರ್ಬ್ಯಾಗ್ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಐಸೋಫಿಕ್ಸ್, ರೋಲ್-ಓವರ್ ಮಿಟಿಗೇಶನ್, ಬ್ರೇಕ್ ಡಿಸ್ಕ್ ವೈಪಿಂಗ್, ಹೈಡ್ರಾಲಿಕ್ಫೇಡಿಂಗ್ ಪರಿಹಾರಗಳು ಎಲ್ಲಾ ಮಾಡೆಲ್ ಗಳಲ್ಲಿ ಸ್ಟಾಂಡರ್ಡ್ ಆಗಿ ಲಭ್ಯವಿದೆ. ಪಂಚ್.ಇವಿ ಭಾರತೀಯ ರಸ್ತೆಗಳಲ್ಲಿ ಲಭ್ಯವಿರುವ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಹೆಚ್ಚುವರಿಯಾಗಿ ತನ್ನ ಪ್ರಯಾಣಿಕರಿಗೆ ಇ-ಕಾಲ್ ಮತ್ತು ಬಿ-ಕಾಲ್ನೊಂದಿಗೆ ಎಸ್ಓಎಸ್ ಕಾಲಿಂಗ್, ಆಟೋ ಹೋಲ್ಡ್ ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಅದರ ಉನ್ನತ-ಮಟ್ಟದ ಮಾದರಿಗಳಲ್ಲಿ ಬ್ಲೈಂಡ್ ಸ್ಪಾಟ್ ಮಾನಿಟರ್ನೊಂದಿಗೆ 360 ಸರೌಂಡ್ ವ್ಯೂ ಕ್ಯಾಮೆರಾ ಸಿಸ್ಟಮ್ನಂತಹ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
ಎಲ್ಲವನ್ನೂ ಮೀರಿದ್ದು ಮತ್ತು ಉತ್ತಮವಾದದ್ದು: ಪ್ರಾಯೋಗಿಕವಾದದ್ದು ಮತ್ತು ಕಾರ್ಯಕ್ಷಮತೆ ಆಧಾರಿತವಾಗಿದ್ದು. ಪಂಚ್.ಇವಿ ನಿಜವಾದ ಎಲೆಕ್ಟ್ರಿಕ್ ಎಸ್ ಯು ವಿಯ ಅಗತ್ಯ ಗುಣಲಕ್ಷಣಗಳನ್ನು ಒಳಗೊಂಡಿದೆ. 16-ಇಂಚಿನ ಎಲ್ ಆರ್ ಆರ್ ಟೈರ್ಗಳು, 190ಎಂಎಂ ಗ್ರೌಂಡ್ ಕ್ಲಿಯರೆನ್ಸ್ (ಅನ್ಲ್ಯಾಡೆನ್), 350ಎಂಎಂ ವಾಟರ್ ವೇಡಿಂಗ್ ಕೆಪಾಬಿಲಿಟಿ ಒಳಗೊಂಡಿದೆ.
ಅದರ 90-ಡಿಗ್ರಿ ತೆರೆಯುವ ಬಾಗಿಲುಗಳು, ಫ್ಲಾಟ್ ಸೆಕೆಂಡ್ ರೋ ಫ್ಲೋರ್, 366 ಲೀಟರ್ ಬೂಟ್ ಸ್ಪೇಸ್, ಸ್ಮಾರ್ಟ್ ಸ್ಟೋರೇಜ್ ಗಾಗಿ 32 ಕ್ಯಾಬಿನ್ ಕ್ಯೂಬಿ ಹೋಲ್ಗಳು ಜೊತೆಗೆ ಫ್ರಾಂಕ್ನಲ್ಲಿ 14 ಲೀಟರ್ ಹೆಚ್ಚುವರಿ ಸ್ಥಳಾವಕಾಶ ವೈಶಿಷ್ಟ್ಯಗಳಿಂದ ಪಂಚ್.ಇವಿ ವಿಭಿನ್ನವಾಗಿ ನಿಲ್ಲುತ್ತದೆ..
ಪಂಚ್.ಇವಿ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ಜೊತೆಯಲ್ಲಿರುವ ಉತ್ಪನ್ನ ಟಿಪ್ಪಣಿಯನ್ನು ನೋಡಿ ಅಥವಾ ಟಾಟಾ.ಇವಿಯ ವೆಬ್ಸೈಟ್ಗೆ ಭೇಟಿ ನೀಡಿ.