ಬೆಂಗಳೂರು: ಭಾರತದ ವಾಣಿಜ್ಯ ವಾಹನಗಳ ಅತಿ ದೊಡ್ಡ ವಾಹನಗಳ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್ ತನ್ನ ವಾಣಿಜ್ಯ ವಾಹನಗಳ ಗ್ರಾಹಕರ ಸಮಗ್ರ ಸೇವೆಗಾಗಿ `ಕಸ್ಟಮರ್ ಕೇರ್ ಮಹೋತ್ಸವ’ವನ್ನು ಆರಂಭಿಸಿದೆ. ಈ ಮಹೋತ್ಸವವು ಜನವರಿ 14 ರಿಂದ 30 ಮಾರ್ಚ್ 2024 ರವರೆಗೆ ನಡೆಯಲಿದೆ. ದೇಶಾದ್ಯಂತ ಇರುವ ಅಧಿಕೃತ ಟಾಟಾ ಮೋಟರ್ಸ್ ನ ಸರ್ವೀಸ್ ಔಟ್ ಲೆಟ್ ಗಳಲ್ಲಿ ಈ ಮಹೋತ್ಸವವು ನಡೆಯುತ್ತಿದೆ.
ಈ ಕಸ್ಟಮರ್ ಕೇರ್ ಮಹೋತ್ಸವವು ಫ್ಲೀಟ್ ಮಾಲೀಕರು ಮತ್ತು ಟ್ರಕ್ ಚಾಲಕರೊಂದಿಗೆ ಅವರ ಅಗತ್ಯತೆಗಳು ಮತ್ತು ಎಮರ್ಜಿಂಗ್ ಟ್ರೆಂಡ್ ಗಳನ್ನು ಅರ್ಥ ಮಾಡಿಕೊಳ್ಳುವ ಒಂದು ಸೂಕ್ತ ವೇದಿಕೆಯಾಗಿದೆ. ತರಬೇತಿ ಪಡೆದ ತಂತ್ರಜ್ಞರಿಂದ ವಾಹನಗಳ ನಿಖರವಾದ ತಪಾಸಣೆ, ಟಾಟಾ ಬಿಡಿಭಾಗಗಳ ಮೇಲೆ ಆಕರ್ಷಕ ರಿಯಾಯ್ತಿ ಮತ್ತು ವಾರ್ಷಿಕ ನಿರ್ವಹಣೆ ಒಪ್ಪಂದ (AMC), ಫ್ಲೀಟ್ ಮ್ಯಾನೇಜ್ಮೆಂಟ್ ಸಲೂಶನ್ಸ್ (FMS), ಫ್ಲೀಟ್ ಎಡ್ಜ್ ಸೇರಿದಂತೆ ಇನ್ನೂ ಅನೇಕ ಸೇವೆಗಳು ಹಾಗೂ ಪ್ರಯೋಜನಗಳನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.
ಚಾಲಕರು ಸುರಕ್ಷಿತ ಮತ್ತು ಇಂಧನ ಉಳಿತಾಯ ಚಾಲನಾ ಪದ್ಧತಿಗಳ ಬಗ್ಗೆ ಸವಿವರಾದ ಮಾಹಿತಿಗಳು ಮತ್ತು ತರಬೇತಿಯನ್ನು ಈ ಮಹೋತ್ಸವದ ಸಂದರ್ಭದಲ್ಲಿ ಪಡೆದುಕೊಳ್ಳಬಹುದಾಗಿದೆ. ಅದೇ ರೀತಿ, ಆರೋಗ್ಯ ತಪಾಸಣೆಗಳು, ಹೈಜಿನ್ ಕಿಟ್ ಗಳು ಮತ್ತು ಸಂಪೂರ್ಣ ಸೇವಾ 2.0 ಉಪಕ್ರದಡಿ ವಿನ್ಯಾಸಗೊಳಿಸಲಾದ ಇನ್ನೂ ಅನೇಕ ಮೌಲ್ಯವರ್ಧಿತ ಸೇವೆಗಳನ್ನು ಪಡೆದುಕೊಳ್ಳಬಹುದು.
ಈ ವಿಶೇಷ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಟಾಟಾ ಮೋಟರ್ಸ್ ನ ಕಾರ್ಯಕಾರಿ ನಿರ್ದೇಶಕ ಗಿರೀಶ್ ವಾಘ್ ಅವರು, “ಟಾಟಾ ಮೋಟರ್ಸ್ ನಲ್ಲಿ ಪ್ರತಿಯೊಂದು ವ್ಯವಹಾರವನ್ನೂ ಗ್ರಾಹಕ ಕೇಂದ್ರಿತವಾಗಿ ನಿರ್ವಹಿಸುತ್ತೇವೆ. ನಮ್ಮ ಕೊಡುಗೆಗಳು ಮತ್ತು ಸೇವೆಗಳು ಗ್ರಾಹಕರ ಪ್ರತಿಕ್ರಿಯೆಗೆ ತಕ್ಕಂತೆ ಇರುತ್ತವೆ. ನಾವು ನೀಡುವ ಸೇವೆಗಳು ನಮ್ಮ ಗ್ರಾಹಕರಿಗೆ ಸಂಪೂರ್ಣವಾದ ನೆಮ್ಮದಿಯನ್ನು ನೀಡುತ್ತವೆ. ಈ ಮಹೋತ್ಸವವು ನಮ್ಮ ಶ್ರೀಮಂತ ಮತ್ತು ವೈವಿಧ್ಯಮಯ ಸೇವಾ ಕೊಡುಗೆಗಳನ್ನು ಪ್ರದರ್ಶಿಸಲು, ಸರಿಯಾದ ವಾಹನ ಮತ್ತು ಚಾಲಕರ ಆರೋಗ್ಯ ತಪಾಸಣೆಗಳನ್ನು ನಡೆಸಲು ಹಾಗೂ ಗ್ರಾಹಕರು ಮತ್ತು ಇತರ ಪಾಲುದಾರರೊಂದಿಗೆ ನಮ್ಮ ಸಂಬಂಧವನ್ನು ಬಲಪಡಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ದೇಶಾದ್ಯಂತ ಇರುವ ನಮ್ಮ ಡೀಲರ್ ಔಟ್ ಲೆಟ್ ಗಳಲ್ಲಿ ಈ ಮಹೋತ್ಸವದಲ್ಲಿ ಎಲ್ಲಾ ವಾಣಿಜ್ಯ ವಾಹನಗಳ ತಪಾಸಣೆ ನಡೆಸಲಾಗುತ್ತದೆ. ನಾವು ನೀಡುವ ಎಲ್ಲಾ ಸೇವೆಗಳು ಅತ್ಯುತ್ತಮವಾಗಿರುತ್ತವೆ. ಟ್ರಕ್ ಗಳು, ಬಸ್ ಗಳು, ವ್ಯಾನ್ ಗಳು ಮತ್ತು ಸಣ್ಣ ಟ್ರಕ್ ಗಳು ಸೇರಿದಂತೆ ನಮ್ಮ ಬ್ರ್ಯಾಂಡ್ ನ ಎಲ್ಲಾ ವಾಣಿಜ್ಯ ವಾಹನಗಳನ್ನು ಈ ಸಂದರ್ಭದಲ್ಲಿ ಪರೀಕ್ಷೆಗೆ ಒಳಪಡಿಸಿಕೊಳ್ಳಲು ಅವಕಾಶವಿರುತ್ತದೆ. ಈ ಮಹೋತ್ಸವದ ಮೂಲಕ ನಮ್ಮ ಗ್ರಾಹಕರಿಗೆ ಅನುಕೂಲಕರ ಮತ್ತು ಮೌಲ್ಯವರ್ಧಿತ ಸೇವೆಗಳನ್ನು ನೀಡುವುದು ನಮ್ಮ ಬದ್ಧತೆಯಾಗಿದೆ. ಅತ್ಯಂತ ಸೂಕ್ಷ್ಮವಾಗಿ ರಚಿಸಲಾಗಿರುವ ಟಾಟಾ ಮೋಟರ್ಸ್ ನ ಸಮಗ್ರ ಶ್ರೇಣಿಯ ಕೊಡುಗೆಗಳನ್ನು ಸಕ್ರಿಯವಾಗಿ ಬಳಸಿಕೊಳ್ಳಲು ಮತ್ತು ವೈಯಕ್ತಿಕವಾಗಿ ಅನುಭವಿಸಲು ನಾವು ಎಲ್ಲಾ ಗ್ರಾಹಕರು ಮತ್ತು ಚಾಲಕರಿಗೆ ಆದರದ ಸ್ವಾಗತವನ್ನು ಬಯಸುತ್ತೇವೆ’’ ಎಂದರು.
ಅತ್ಯುತ್ಕೃಷ್ಠ ದರ್ಜೆಯ ವಾಹನಗಳ ಜೊತೆಗೆ ಟಾಟಾ ಮೋಟರ್ಸ್ ತಡೆರಹಿತವಾದ ವೆಹಿಕಲ್ ಲೈಫ್ ಸ್ಟೈಲ್ ಮ್ಯಾನೇಜ್ಮೆಂಟ್ ನಂತಹ ಮೌಲ್ಯವರ್ಧಿತ ಸೇವೆಗಳನ್ನೂ ನೀಡುತ್ತಿದೆ. ಟಾಟಾ ಮೋಟರ್ಸ್ ನ ಸಂಪೂರ್ಣ ಸೇವಾ 2.0 ವಾಹನ ಖರೀದಿಯೊಂದಿಗೆ ಆರಂಭವಾಗುವ ಸಮಗ್ರ ಆರೈಕೆ ಪ್ಯಾಕೇಜ್ ಅನ್ನು ನೀಡುತ್ತದೆ ಮತ್ತು ವಾಹನದ ಲೈಫ್ ಸೈಕಲ್ ಉದ್ದಕ್ಕೂ ಕಾರ್ಯಾಚರಣೆಯ ಪ್ರತಿಯೊಂದು ಅಂಶವನ್ನೂ ಬೆಂಬಲಿಸುತ್ತದೆ. ಈ ಎಲ್ಲಾ ಅಂತರ್ಗತ ಪರಿಹಾರವು ಬ್ರೇಕ್ ಡೌನ್ ಅಸಿಸ್ಟೆನ್ಸ್, ಗ್ಯಾರೆಂಟೀಡ್ ಟರ್ನ್ ಅರೌಂಡ್ ಟೈಂ, ಆ್ಯನ್ಯುವಲ್ ಮೇಂಟೇನೆನ್ಸ್ ಕಾಂಟ್ರಾಕ್ಟ್ ಗಳು, ನಿಖರವಾದ ಬಿಡಿ ಭಾಗಗಳು ಸೇರಿದಂತೆ ಇನ್ನಿತರ ಸೇವೆಗಳನ್ನು ಒಳಗೊಂಡಿರುತ್ತದೆ.