ಮಂಗಳೂರು: ಕ್ರಿಶ್ಚಿಯನ್ ಸ್ಪೋರ್ಟ್ಸ್ ಅಸೋಸಿಯೇಷನ್ ರವರ ವತಿಯಿಂದ ಮೊದಲ ಕ್ರಿಶ್ಚಿಯನ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಅನ್ನು ಜನವರಿ 14, 2024 ರಂದು ಫಾದರ್ ಮುಲ್ಲರ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವು ಬೆಳಿಗ್ಗೆ 9:00 ಗಂಟೆಗೆ ಭವ್ಯವಾದ ಉದ್ಘಾಟನೆಯೊಂದಿಗೆ ಪ್ರಾರಂಭವಾಯಿತು.
ಮುಖ್ಯ ಅತಿಥಿಗಳಾಗಿ ಎಂ ಸಿ ಸಿ ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೋ ಮತ್ತು ಲೆಕ್ಸಾ ಲೈಟೆನಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ರೊನಾಲ್ಡ್ ಡಿಸೋಜಾ ಅವರು ಭಾಗವಹಿಸಿದರು.
ಮೆಲ್ವಿನ್ ಪೆರಿಸ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಅಜಯ್ ಟೆರೆನ್ಸ್ ಸ್ವಾಗತಿಸಿದರು. ಅರುಣ್ ಬ್ಯಾಪ್ಟಿಸ್ಟ್ ಪಂದ್ಯಾವಳಿಯ ಸಂಚಾಲಕರಾಗಿ ದಿನದ ಬಗ್ಗೆ ಮಾಹಿತಿ ನೀಡಿದರು. ಜಾನ್ ಪೈಸ್ ಅವರು ಎಲ್ಲರಿಗೂ ಧನ್ಯವಾದ ಸಲ್ಲಿಸುವುದರೊಂದಿಗೆ ಉದ್ಘಾಟನಾ ಕಾರ್ಯವು ಕೊನೆಗೊಂಡಿತು. ಲಾರೆನ್ಸ್ ಕ್ರಾಸ್ತಾ, ಅನಿಲ್ ಪಿಂಟೋ ಮತ್ತು ಆಗ್ನೆಲ್ ಡಿಸೋಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ಆರು ಉತ್ಸಾಹಿ ತಂಡಗಳು ಭಾಗವಹಿಸಿದ್ದವು. ಸ್ಟೆಲ್ಲರ್ ಸ್ಮಾಷರ್ಸ್,ರೆಡ್ ಇಂಡಿಯನ್ಸ್,ಶಟಲ್ ಬ್ಲಾಕರ್ಸ್,ಪೈಸ್ ಶಟ್ಲರ್ಸ್,ರಾಯ್ ರಾಕರ್ಸ್,ಸ್ಪೋರ್ಟ್ಸ್ ಗ್ಯಾರೇಜ್.
ರೋಚಕ ಅಂತಿಮ ಪಂದ್ಯದಲ್ಲಿ, ಉಡುಪಿಯ ರಾಯ್ ರಾಕರ್ಸ್ ಅಸಾಧಾರಣ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ವಿಜಯಶಾಲಿಯಾದರು, ಮಂಗಳೂರಿನ ಶಟಲ್ ಬ್ಲಾಕರ್ಸ್ ತಂಡವು ರನ್ನರ್ಸ್-ಅಪ್ ಆಗಿ ಶ್ಲಾಘನೀಯ ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸಿದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ಐವನ್ ಪತ್ರಾವೊ, ಪತ್ರಾವೊ ಕೆಟರಾರ್ಸ್ ಇದರ ಮಾಲೀಕರು ಹಾಗೂ ಪ್ರದೀಪ್ ಡಿಸೋಜ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ, ಮಂಗಳೂರು ಇವರು ಬಹುಮಾನ ವಿತರಿಸಿದರು. ರಾಷ್ಟ್ರ ಮಟ್ಟದ ಆಟಗಾರ ಕ್ರಿಸ್ ಅಂಜನ್ ಬ್ಯಾಪ್ಟಿಸ್ಟ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕ್ರೀಡಾಸ್ಫೂರ್ತಿ ಮತ್ತು ಸೌಹಾರ್ದತೆಯ ಮನೋಭಾವನೆಯೊಂದಿಗೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಮುಕ್ತಾಯಗೊಳಿಸಿತು.