ಬೆಂಗಳೂರು: ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾದ ಕನ್ನಡ ಭಕ್ತಿಗೀತೆಯನ್ನು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ, ಇದನ್ನು ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರು ಶ್ರೀರಾಮನಿಗೆ ಅರ್ಪಿಸಿರುವ ಹಾಡಾಗಿದೆ.
ಪಿಎಂ ಮೋದಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ‘ಎಕ್ಸ್’ ನಲ್ಲಿ ವೀಡಿಯೊವನ್ನು ಹಂಚಿಕೊಂಡು “ಕನ್ನಡದಲ್ಲಿ ಶಿವಶ್ರೀ ಸ್ಕಂದಪ್ರಸಾದ್ ಅವರ ಈ ನಿರೂಪಣೆಯು ಪ್ರಭು ಶ್ರೀರಾಮನ ಭಕ್ತಿಯ ಮನೋಭಾವವನ್ನು ಸುಂದರವಾಗಿ ಎತ್ತಿ ತೋರಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಬಹಳ ದೂರ ಸಾಗುತ್ತವೆ” ಎಂದು ಬರೆದುಕೊಂಡಿದ್ದಾರೆ.
ಎಕ್ಸ್ ನಲ್ಲಿ ಶೇರ್ ಮಾಡಿರುವ ಪೋಸ್ಟ್ ಗೆ ಪ್ರಧಾನಿಯವರು “ಶ್ರೀರಾಮಭಜನ್” ಎಂಬ ಹ್ಯಾಶ್ ಟ್ಯಾಗ್ ಕೂಡ ನೀಡಿದ್ದಾರೆ.3.59 ನಿಮಿಷಗಳ ಹಾಡು 450,000 ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಮೋದಿಯವರ ಪೊಸ್ಟ್ ಗೆ ಪ್ರತಿಕ್ರಿಯಿಸಿದ ಶಿವಶ್ರೀ, “ತುಂಬಾ ಧನ್ಯವಾದಗಳು ಸರ್. ಇದು ಕಲ್ಪನೆಗೂ ಮೀರಿದ ಗೌರವ. ನಿಮಗೆ ನನ್ನ ಪ್ರಣಾಮಗಳು” ಎಂದು ಹೇಳಿದ್ದಾರೆ.
1974 ರಲ್ಲಿ ಬಿಡುಗಡೆಯಾದ ಡಾ.ರಾಜಕುಮಾರ್ ಮತ್ತು ಕಲ್ಪನಾ ಅಭಿನಯದ ಕನ್ನಡ ಚಲನಚಿತ್ರ ‘ಎರಡು ಕನಸು’ ಚಿತ್ರದ “ಪೂಜಿಸಲೆಂದೆ” ಎಂಬ ಹಾಡು, ದಕ್ಷಿಣ ಭಾರತದ ಪ್ರಸಿದ್ಧ ಗಾಯಕಿ ದಿವಂಗತ ಎಸ್. ಜಾನಕಿ ಅವರು ಹಾಡಿರುವ ಜನಪ್ರಿಯ ಕನ್ನಡ ಚಲನಚಿತ್ರ ಗೀತೆಯಾಗಿದೆ.
ಮೋದಿಯವರ ಮೆಚ್ಚುಗೆಯಿಂದ ಶಿವಶ್ರೀ ಖ್ಯಾತಿ ಗಳಿಸಿದ್ದಾರೆ. ಹೂವುಗಳಿಂದ ದೇವರನ್ನು ಪೂಜಿಸಲು ಸಿದ್ಧವಾಗಿರುವ ಭಕ್ತನೊಬ್ಬನ ಶ್ರೀರಾಮನ ಮೇಲಿನ ಭಕ್ತಿಯನ್ನು ಹಾಡು ವಿವರಿಸುತ್ತದೆ.
ಶಿವಶ್ರೀ ಮೂಲತಃ ಸಂಗೀತಗಾರರ ಕುಟುಂಬದವರಾಗಿದ್ದು ಬಾಲ್ಯದಿಂದಲೂ ಸಂಗೀತದ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಂಡವರಾಗಿದ್ದಾರೆ.ಅವರ ಅಜ್ಜ ಜನಪ್ರಿಯ ಸಂಗೀತಗಾರರಾಗಿದ್ದರು ಮತ್ತು ಶಿವಶ್ರೀ ಭರತನಾಟ್ಯ ನೃತ್ಯಗಾರ್ತಿಯೂ ಆಗಿದ್ದಾರೆ.
ಶಿವಶ್ರೀ ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಮತ್ತು 154,000 ಚಂದಾದಾರರನ್ನು ಹೊಂದಿದ್ದಾರೆ.