ಬೆಂಗಳೂರು: ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (ಟಿಪಿಐಎಂ), ಭಾರತದ ಪ್ರಮುಖ ಆಟೋಮೊಬೈಲ್ ಕಂಪನಿಯಾದ ಟಾಟಾ ಮೋಟಾರ್ಸ್ನ ಅಂಗಸಂಸ್ಥೆಯಾಗಿದ್ದು, ಗುಜರಾತ್ನ ಸನಂದ್ನಲ್ಲಿರುವ ತನ್ನ ಹೊಸ ಕಾರ್ಖಾನೆಯಿಂದ ಪ್ರಯಾಣಿಕ ವಾಹನಗಳ ತಯಾರಿಕೆಯನ್ನು ಪ್ರಾರಂಭಿಸಿರುವುಗಿ ಇಂದು ಪ್ರಕಟಿಸಿದೆ. ಟಿಪಿಇಎಂನ ವ್ಯವಸ್ಥಾಪಕ ನಿರ್ದೇಶಕ, ಶೈಲೇಶ್ ಚಂದ್ರ ಮತ್ತು ಪ್ಯಾಸೆಂಜರ್ ಮತ್ತು ಎಲೆಕ್ಟ್ರಿಕ್ ವಾಹನಗಳ ವ್ಯವಹಾರಗಳ ನಾಯಕತ್ವ ತಂಡದ ಉಪಸ್ಥಿತಿಯಲ್ಲಿ ಈ ವಿಶ್ವ ದರ್ಜೆಯ ಸೌಲಭ್ಯದಲ್ಲಿ ತಯಾರಾದ ಮೊದಲ ಟಾಟಾ ಬ್ರಾಂಡ್ ಕಾರಿನ ಅನಾವರಣದೊಂದಿಗೆ ಕಂಪನಿಯ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧನೆಯ ಸಂಭ್ರವನ್ನು ಆಚರಿಸಲಾಯಿತು,
ಈ ಮಹತ್ವದ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ, “ಸನಂದ್ನಲ್ಲಿನ ಹೊಸ ಟಿಪಿಇಎಂ ಸೌಲಭ್ಯದ ಮೊದಲ ಕಾರ್ ಅನಾವರಣಕ್ಕೆ ಸಾಕ್ಷಿಯಾಗುವುದು ನಮಗೆ ಹೆಮ್ಮೆಯ ಕ್ಷಣವಾಗಿದೆ. ನಾವು ಈ ಫ್ಯಾಕ್ಟರಿಯನ್ನು 12 ತಿಂಗಳ ಕಡಿಮೆ ಅವಧಿಯಲ್ಲಿ ಯಶಸ್ವಿಯಾಗಿ ಮರುಪರಿಚಯಿಸಿದ್ದೇವೆ. ಈ ಮೂಲಕ ಅಸ್ತಿತ್ವದಲ್ಲಿರುವ ಉತ್ಪನ್ನಗಳ ವ್ಯಾಪಕ ಶ್ರೇಣಿಯನ್ನು ಮತ್ತು ಮುಂಬರುವ ಭವಿಷ್ಯದ ಹೊಸ ಮಾಡೆಲ್ ಗಳನ್ನು ಒದಗಿಸಲು ಘಟಕವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತೇವೆ.
ನಾನು ಅಪೂರ್ವ ಬೆಂಬಲಕ್ಕಾಗಿ ಗುಜರಾತ್ ಸರ್ಕಾರಕ್ಕೆ ಮತ್ತು ನಮ್ಮ ನೌಕರರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ, ಅವರಿಲ್ಲದಿದ್ದರೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ. ಈ ಸೌಲಭ್ಯವು ಟಾಟಾ ಮೋಟಾರ್ಸ್, ವಿಶೇಷವಾಗಿ ಟಿಪಿಇಎಂನ ಹೊಸ ಸಾಧನೆಗಳನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನನಗೆ ವಿಶ್ವಾಸವಿದೆ” ಎಂದು ಹೇಳಿದ್ದಾರೆ.
ಮಾತು ಮುಂದುವರಿಸುತ್ತಾ ಅವರು, ”ಟಾಟಾ ಮೋಟಾರ್ಸ್ ಪ್ಯಾಸೆಂಜರ್ ಮತ್ತು ಎಲೆಕ್ಟ್ರಿಕ್ ವೆಹಿಕಲ್ಸ್ ವ್ಯಾಪಾರವು ಕಳೆದ ಕೆಲವು ವರ್ಷಗಳಿಂದ ಮಾರುಕಟ್ಟೆಯನ್ನು ಗೆಲ್ಲುವ ಬೆಳವಣಿಗೆ ಸಾಧಿಸಿದೆ. ಭವಿಷ್ಯಕ್ಕೆ ಪೂರಕವಾ ನಮ್ಮ “ನ್ಯೂ ಫಾರೆವರ್” ಉತ್ಪನ್ನಗಳ ಸರಣಿಯೊಂದಿಗೆ ಮತ್ತು ಎಲೆಕ್ಟ್ರಿಕ್ ವಾಹನಗಳಲ್ಲಿನ ಹೂಡಿಕೆಗಳೊಂದಿಗೆ ಈ ವೇಗವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಬಲವಾದ ಯೋಜನೆಗಳನ್ನು ಹೊಂದಿದ್ದೇವೆ. ಸ್ಯಾಚುರೇಶನ್ ಮಟ್ಟಕ್ಕೆ ಸಮೀಪವಿರುವ ಸದ್ಯದ ಸಾಮರ್ಥ್ಯಗಳೊಂದಿಗೆ, ಈ ಹೊಸ ಸೌಲಭ್ಯವು ವಾರ್ಷಿಕ 300,000 ಯುನಿಟ್ಗಳ ಹೆಚ್ಚುವರಿ ಅತ್ಯಾಧುನಿಕ ತಯಾರಿಕಾ ಸಾಮರ್ಥ್ಯವನ್ನು ನೀಡುತ್ತದೆ. ಇದು ವಾರ್ಷಿಕವಾಗಿ 420,000 ಯೂನಿಟ್ಗಳಷ್ಟು ತಯಾರಿಕೆಗೆ ಶಕ್ತವಾಗಿದೆ” ಎಂದು ಹೇಳಿದ್ದಾರೆ.
ಪೂರೈಕೆದಾರರ ಪ್ರಬಲ ನೆಟ್ವರ್ಕ್ ಲಭ್ಯತೆಯೊಂದಿಗೆ ಕೈಗಾರಿಕಾ ಕೇಂದ್ರ ಸ್ಥಳವಾದ ಜಿಐಡಿಸಿ ಸನಂದ್ನಲ್ಲಿದೆ. ಈ ಹೊಸ ಸೌಲಭ್ಯವನ್ನು ಫೋರ್ಡ್ ಇಂಡಿಯಾದಿಂದ ಜನವರಿ 10, 2023ರಂದು ಸ್ವಾಧೀನಪಡಿಸಿಕೊಳ್ಳಲಾಗಿದೆ. 460 ಎಕರೆಗಳಲ್ಲಿ ಹರಡಿರುವ ಇದು ಗುಜರಾತ್ನಲ್ಲಿ ಐಸಿಇ ಮತ್ತು ಇವಿ ಮಾದರಿಗಳನ್ನು ತಯಾರಿಸುವ ಟಾಟಾ ಮೋಟಾರ್ಸ್ನ ಎರಡನೇ ಘಟಕವಾಗಿದೆ. ಸ್ಥಾವರವು ಸ್ಟಾಂಪಿಂಗ್, ಬಾಡಿ ಕನ್ಸ್ಟ್ರಕ್ಷನ್, ಪೇಂಟ್ ಮತ್ತು ಫೈನಲ್ ಅಸೆಂಬ್ಲಿ ಶಾಪ್ ಎಂಬ ನಾಲ್ಕು ಪ್ರಮುಖ ಭಾಗಗಳನ್ನು ಹೊಂದಿದ್ದು, ಅವುಗಳು ನಿಖರವಾದ ಉತ್ಪಾದನೆಯನ್ನು ಸಾಧ್ಯವಾಗಿಸಲು ಉನ್ನತ ಮಟ್ಟದ ಯಾಂತ್ರೀಕೃತಗೊಂಡ ಮತ್ತು ಆಧುನಿಕ ತಂತ್ರಜ್ಞಾನದಿಂದ ಸಜ್ಜುಗೊಂಡಿವೆ. ಈ ಸೌಲಭ್ಯವು ಹಲವಾರು ವಿಶ್ವದರ್ಜೆಯ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದು, ಅದು ಉದ್ಯಮದಲ್ಲಿ ಹೊಸ ಮಾನದಂಡವನ್ನು ರೂಪಿಸಲಿದೆ.
ಪ್ರಮುಖ ರೀಟೂಲಿಂಗ್ ಮತ್ತು ಟೆಕ್ ಅಪ್ಗ್ರೇಡ್ಗಳು ಹೀಗಿವೆ:
·ಪ್ರೆಸ್ ಶಾಪ್ – ಕ್ರಿಟಿಕಲ್ ಸ್ಕಿನ್ ಪ್ಯಾನೆಲ್ಗಳನ್ನು ಸ್ಟಾಂಪಿಂಗ್ ಮಾಡಲು ಹೊಸ ಡೈಗಳು· ವೆಲ್ಡ್ ಶಾಪ್ – ಹೆಚ್ಚುವರಿ ರೋಬೋಟ್ಗಳು, ಹೊಸ ಗ್ರಿಪ್ಪರ್ಗಳು ಮತ್ತು ಫಿಕ್ಚರ್ಗಳೊಂದಿಗೆ ಎಲ್ಲಾ ಲೈನ್ ಗಳ ಮಾರ್ಪಾಡುಗಳನ್ನು ಮಾಡಲಾಗಿದೆ·
ಪೇಂಟ್ ಶಾಪ್ – ಹ್ಯಾಂಡ್ಲಿಂಗ್ ಸಿಸ್ಟಂಗಳ ಮಾರ್ಪಾಡು, ಬಾಹ್ಯ ರೋಬೋಟ್ ಪ್ರೋಗ್ರಾಮಿಂಗ್, ಆಂತರಿಕ ರೋಬೋಟಿಕ್ ಪೇಂಟಿಂಗ್ ಮತ್ತು ವ್ಯಾಕ್ಸಿಂಗ್ ಸೆಟಪ್· ಅಸೆಂಬ್ಲಿ ಶಾಪ್ – ನಿರ್ವಹಣಾ ವ್ಯವಸ್ಥೆಗಳ ಮತ್ತು ಲೈನ್ ಸಿಸ್ಟಮ್ ನ ಅಂತ್ಯದ ಮಾರ್ಪಾಡುಪ್ಲಾಂಟ್ ಪ್ರಸ್ತುತ 1000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ (ಸಿಬ್ಬಂದಿ ಮತ್ತು ತಂತ್ರಜ್ಞರನ್ನು ಒಳಗೊಂಡು) ಮತ್ತು ಉತ್ಪಾದನಾ ರಾಂಪ್ ಅಪ್ ಯೋಜನೆಗಳಿಗೆ ಅನುಗುಣವಾಗಿ ಈ ಪ್ರದೇಶದಲ್ಲಿ ಮುಂದಿನ 3ರಿಂದ 4 ತಿಂಗಳುಗಳಲ್ಲಿ 1000 ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸುತ್ತದೆ.
ಟಾಟಾ ಮೋಟಾರ್ಸ್ ತನ್ನ ಉದ್ಯೋಗಿಗಳಿಗೆ ಕೌಶಲ್ಯ ಹೆಚ್ಚಿಸಲು ಡಿಪ್ಲೊಮಾ, ಎಂಜಿನಿಯರಿಂಗ್ ಮತ್ತು ಸ್ನಾತಕೋತ್ತರ ಪದವಿಯನ್ನು ಒದಗಿಸುತ್ತದೆ. ಸುಸ್ಥಿರತೆ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್ನ ಬದ್ಧತೆಗೆ ಅನುಗುಣವಾಗಿ, 50 ಕೆಡಬ್ಲ್ಯೂ ಸೌರ ಮೇಲ್ಛಾವಣಿಯನ್ನು ಸ್ಥಾವರದಲ್ಲಿ ಸ್ಥಾಪಿಸಲಾಗಿದೆ. ಇದು ವಾಟರ್ ನ್ಯೂಟ್ರಲ್ ಪ್ಲಾಂಟ್ ಆಗಿದೆ ಮತ್ತು ಡಿಸೆಂಬರ್ 2024ರ ವೇಳೆಗೆ ವಾಟರ್ ಪಾಸಿಟಿವ್ ಕ್ರಮ ಸಾಧಿಸಲಿದೆ ಎಂದು ನಿರೀಕ್ಷಿಸಲಾಗಿದೆ.