ಕ್ಯಾಲೆಂಡ್ನಲ್ಲಿ ಹೊಸ ಪುಟ ತಿರುವಿ ಹಾಕಿ ನಮ್ಮ ಜೀವನದ ಹೊಸ ಅಧ್ಯಾಯದ ಆರಂಭವನ್ನು ಸ್ವಾಗತಿಸುತ್ತಿರುವ ಸಮಯದಲ್ಲಿ, ಹಿಂದಿನದರ ಆತ್ಮಾವಲೋಕನ ಮಾಡಿಕೊಂಡು ಭವಿಷ್ಯತ್ತಿಗೆ ಹೊಸ ಗುರಿಗಳನ್ನು ಇತಿಸಿಕೊಳ್ಳುವುದಕ್ಕೆ ಇದೊಂದು ಅದ್ಭುತ ಕಾಲ. ವರ್ಷದ ಆರಂಭವೆಂದರೆ, ದಿನಾಂಕದ ಬದಲಾವಣೆ ಮಾತ್ರವಲ್ಲ, ಒಬ್ಬರ ಸ್ವಾಸ್ಥ್ಯಕ್ಕೆ ನವೀಕರಣ ಹಾಗೂ ಬದ್ಧತೆಗೆ ಇರುವ ಅವಕಾಶವನ್ನು ಕೂಡ ಸೂಚಿಸುತ್ತದೆ. ನಾವು 2024ಗೆ ಕಾಲಿರಿಸುತ್ತಿದ್ದಂತೆ, ಈ ಕ್ಷಣವನ್ನು ಸೆರೆಹಿಡಿದು ಈ ವರ್ಷ ನಿಮ್ಮ ಮಧುಮೇಹವನ್ನು ನಿರ್ವಹಿಸಲು ನಮ್ಮ ಉದ್ದೇಶಿತ ಗುರಿಗಳನ್ನು ತೀರ್ಮಾನಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳುಬೇಕು.
ಅಬಾಟ್ನ ದಕ್ಷಿಣ ಏಶ್ಯ, ಕೊರಿಯಾ ಹಾಗೂ ತೈವಾಸ್ ಪ್ರದೇಶಗಳ ಡಯಾಬಿಟೀಸ್ ಕೇರ್ ವಿಭಾಗದ ವೈದ್ಯಕೀಯ ವ್ಯವಹಾರಗಳ ಮುಖ್ಯಸ್ಥರಾದ ಡಾ. ಪ್ರಶಾಂತ್ ಸುಬ್ರಮಣಿಯಮ್ “2024ರಲ್ಲಿ, ಮಧುಮೇಹ ಇರುವ ಜನರು, ತಮ್ಮ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸುವ ಬದ್ಧತೆಯ ವಾಗ್ದಾನ ಮಾಡಿಕೊಳ್ಳಬೇಕು. ಅಸಮರ್ಪಕ ಮೇಲುಸ್ತುವಾರಿ, ಲಭ್ಯವಿರುವ ಮಾಹಿತಿಯನ್ನು ಸೀಮಿತಗೊಳಿಸಿ, ಕಾರ್ಯಸ್ಥಗೊಳಿಸಬಹುದಾದ ಅಂತರ್ದೃಷ್ಟಿಗಳ ಮೇಲೆ ಆಧಾರಿತವಾದ ಮಾಹಿತಿಯುಕ್ತ ತೀರ್ಮಾನಗಳನ್ನು ಕೈಗೊಳ್ಳುವುದಕ್ಕೆ ಕಷ್ಟವಾಗುವಂತೆ ಮಾಡುತ್ತದೆ. ಆದ್ದರಿಂದ, ಮಧುಮೇಹದೊಂದಿಗೆ ಜೀವಿಸುತ್ತಿರುವ ಜನರು, ತಮ್ಮ ಗ್ಲುಕೋಸ್ ಮಟ್ಟಗಳನ್ನು ನಿಯಮಿತವಾಗಿ ಮೇಲುಸ್ತುವಾರಿ ಮಾಡಿಕೊಳ್ಳುವ, ಜೀವನಶೈಲಿ ಬದಲಾವಣೆಗಳನ್ನು ಮಾಡಿಕೊಳ್ಳುವ ಹಾಗೂ ಆದಷ್ಟೂ ಗುರಿಗಳಿಗೆ ಬದ್ಧರಾಗಿರುವ ವಾಗ್ದಾನ ಕೈಗೊಳ್ಳಬೇಕು. ಈ ಗುರಿಸಾಧನೆಯನ್ನು ಬೆಂಬಲಿಸಲು ಅನೇಕ ಹೊಸ ತಂತ್ರಜ್ಞಾನಗಳು ಲಭ್ಯವಿವೆ. ಉದಾಹರಣೆಗೆ, ನಿರಂತರ ಗ್ಲುಕೋಸ್ ಮೇಲುಸ್ತುವರಿ (CGM) ಸಾಧನಗಳು ಸ್ಮಾರ್ಟ್ಫೋನ್ಗಳಿಗೆ ಹೊಂದಿಕ್ಯಾಗುತ್ತದೆ ಮತ್ತು ಇವುಗಳ ಮೂಲಕ ನೀವು ಪ್ರಯಾಣದಲ್ಲಿದ್ದರೂ ನಿಮ್ಮ ಗ್ಲುಕೋಸ್ ನಿರ್ವಹಣೆಯನ್ನು ಗರಿಷ್ಟಗೊಳಿಸಿಕೊಳ್ಳಬಹುದು.”ಎಂದು ಹೇಳಿದರು.
ಹೊಸ ವರ್ಷದುದ್ದಕ್ಕೂ, ನಿರ್ದಿಷ್ಟಗೊಳಿಸಲಾಗಿರುವ ಗ್ಲುಕೋಸ್ ಗುರಿ ಶ್ರೇಣಿಯಲ್ಲೆ(ಸಾಮಾನ್ಯವಾಗಿ70 – 180 mg/dl) ಇರಿಸಿಕೊಳ್ಳುವ ಗುರಿ ಹೊಂದಿರಬಹುದು. ಸಿಜಿಎಮ್ ಸಾಧನಗಳ ಜೊತೆಜೊತೆಗೆ, ಡಿಜಿಟಲ್ ಆರೋಗ್ಯದೊಂದಿಗೆ ಇದನ್ನು ಸುಲಭವಾಗಿ ಸಾಧಿಸಬಹುದು. ಇವೆರೆಡೂ ಒಟ್ಟಿಗೇ ಸೇರಿದಾಗ, ಈ ಎರಡೂ ತಂತ್ರಜ್ಞಾನಗಳು ವ್ರಷದುದ್ದಕ್ಕೂ ಅವರ ನಿರ್ವಹಣಾ ಪಯಣದಲ್ಲಿ ಬೆಂಬಲ ಒದಗಿಸುತ್ತವೆ. ಹೆಚ್ಚುವರಿಯಾಗಿ, ಇದು ಜನರು ತಮ್ಮ ವೈದ್ಯರು ಹಾಗೂ ಶುಶ್ರೂಷಕರೊಡನೆ ಅನಾಯಾಸವಾಗಿ ಸಂಪರ್ಕದಲ್ಲಿರುವ ಪರಿಸರವ್ಯವಸ್ಥೆಯನ್ನೂ ಸೃಷ್ಟಿಸುತ್ತದೆ. ಇದು ರೋಗಿಯ ದಿನಚರಿಯಲ್ಲಿ ಶ್ರಮವಿಲ್ಲದೆ ಗ್ಲುಕೋಸ್ ಮೇಲುಸ್ತುವಾರಿಯನ್ನು ಸೇರಿಸಿಕೊಳ್ಳುವಲ್ಲಿ ಹೊಸ ಅಧ್ಯಾಯವನ್ನು ಪ್ರತಿನಿಧಿಸಿ ಅವರು ಹೆಚ್ಚು ಪರಿಪೂರ್ಣವಾದ, ಆರೋಗ್ಯಕರ ಜೀವನವನ್ನು ನಡೆಸುವುದಕ್ಕೆ ನೆರವಾಗುತ್ತದೆ.
2024ರಲ್ಲಿ ಜನರು ಬದ್ಧರಾಗಿರಬೇಕಾದ 5 ಸಂಕಲ್ಪಗಳು
1. ನಿಮ್ಮ ಸಂಖ್ಯೆಗಳನ್ನು ತಿಳಿದುಕೊಳ್ಳಿ: ನಿಮ್ಮ ರಕ್ತದ ಸಕ್ಕರೆ ಮಟ್ಟಗಳನ್ನು ನಿರಂತರವಾಗಿ ಪರೀಕ್ಷಿಸಿಕೊಳ್ಳುತ್ತಿರುವುದು ಬಹಳ ಮುಖ್ಯ. ವಾಸ್ತವ ಸಮಯ ಮೇಲುಸ್ತುವಾರಿಯನ್ನು Freestyle libre ನಂತಹ ಸಿಜಿಎಮ್ ಸಾಧನಗಳಿಂದ ಮಾಡಿಕೊಳ್ಳಬಹುದು, ದಿನದ ಬಹುತೇಕ ಭಾಗದಲ್ಲಿ, ಅಂದರೆ ಸರಿಸುಮಾರು ಒಂದು ದಿನದಲ್ಲಿ 17 ಘಂಟೆಗಳು, ಅತ್ಯಂತ ಸೂಕ್ತವಾದ 70 to 180 mg/dl ರೇಂಜ್ನಲ್ಲಿರಲು ಪ್ರಯತ್ನಿಸಿ. ಇದನ್ನು ಮಾಡುವುದರಿಂದ ನೀವು ನಿಮ್ಮ ಮಧುಮೇಹವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿಕೊಳ್ಳಬಹುದು. ಈ ರೀತಿ, ನೀವು ನಿಮ್ಮ ಮಧುಮೇಹದ ಮೇಲೆ ಹಿಡಿತ ಸಾಧಿಸುತ್ತೀರೇ ಹೊರತು, ಮಧುಮೇಹ ನಿಮ್ಮನ್ನು ಹಿಡಿತಕ್ಕೆ ತೆಗೆದುಕೊಳ್ಳುವುದಿಲ್ಲ.
2. ಪ್ರಧಾನವಾದ ಆಹಾರ ಯೋಜನೆಗೆ ಆದ್ಯತೆ ನೀಡಿ: ದಿನವಿಡೀ ನೀವು ಏನನ್ನು ತಿನ್ನಲಿದ್ದೀರಿ ಎಂಬುದರ ಯೋಜನೆ ಹಾಕಿಕೊಳ್ಳುವುದು ಬಹಳ ಮುಖ್ಯ. ಯಾವಾಗಲೂ ಕಡಿಮೆ ಕ್ಯಾಲೊರಿ ಇರುವ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ರಕ್ತದ ಸಕ್ಕರೆ ಮಟ್ಟಗಳನ್ನು ಗಣನೀಯವಾಗಿ ಹೆಚ್ಚಿಸುವಂತಹ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಬೇಡಿ. ಚಪಲ ತೀರಿಸಿಕೊಳ್ಳಲು, ಬಹಳ ಸಮಯದವರೆಗೆ ಆಸೆಯುಂಟು ಮಾಡುವ ತಿನಿಸುಗಳನ್ನು ಚಿಕ್ಕ ಚಿಕ್ಕ ಪ್ರಮಾಣದಲ್ಲಿ ತಿನ್ನುವುದು ಒಳ್ಳೆಯದು.
3. ದೇಹವನ್ನು ಚಲಿಸುತ್ತಿರಿ(ನಡೆದಾಡುತ್ತಿರಿ):ಒಳ್ಳೆಯ ಆರೋಗ್ಯ ನಿರ್ವಹಿಸಿಕೊಳ್ಳಲು ದೈಹಿಕ ಚಟುವಟಿಕೆಗೆ ಆದ್ಯತೆ ನೀಡುವುದು ಬಹಳ ಮುಖ್ಯವಷ್ಟೇ ಅಲ್ಲ, ಅದನ್ನು ಹಗುರವಾಗಿಟ್ಟುಕೊಂಡು, ಅತಿಯಾಗಿ ನಿತ್ರಾಣ ಮಾಡಿಕೊಳ್ಳುವುದನ್ನು ತಪ್ಪಿಸುವುದೂ ಅಷ್ಟೇ ಮುಖ್ಯ. ನಡಿಗೆ ಅಥವಾ ಯೋಗದಂತಹ ಸರಳವಾದ ವ್ಯಾಯಾಮಗಳು ಪರಿಣಾಮಕಾರಿಯಾಗಿರಬಲ್ಲದು. ನಿಮ್ಮ ದೇಹವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು, ರಜಾದಿನಗಳಂದು ಸೂಕ್ತವಾದ ಬಟ್ಟೆ ಮತ್ತು ಕಾಲ್ದಿರಿಸುಗಳನ್ನು ಧರಿಸಿರುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಚರ್ಮದಲ್ಲಿ ಏನಾದರೂ ಅಸಹಜತೆ ಕಂಡುಬಂದರೆ, ಸರಿಯಾದ ಆರೈಕೆ ಮತ್ತು ಚಿಕಿತ್ಸೆಯನ್ನು ಖಾತರಿಪಡಿಸಿಕೊಳ್ಳಲು ಕೂಡಲೇ ವ್ಯದ್ಯರನ್ನು ಭೇಟಿಯಾಗುವುದು ಅತ್ಯುತ್ತಮ ಅಭ್ಯಾಸ.
4. ನಿಮ್ಮ ನಿದ್ರೆಯ ಆವರ್ತನವನ್ನು(ಸ್ಲೀಪ್ ಸೈಕಲ್) ನಿಯಮಿತಗೊಳಿಸಿಕೊಳ್ಳಿ: ಕೆಟ್ಟ ಅಭ್ಯಾಸಗಳು ಅಥವಾ ಕೆಲಸದಿಂದಾಗಿ ನಾವು ಅನೇಕ ವೇಳೆ ನಮ್ಮ ನಿದ್ರಾಸಮಯವನ್ನು ಹಾಳುಮಾಡಿಕೊಳ್ಳುತ್ತೇವೆ. ಆದರೆ, ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಗುಣಮಟ್ಟದ, ಸೂಕ್ತವಾದ ಕಾಲಾವಧಿಯ ನಿದ್ರೆ ಬಹಳ ಮುಖ್ಯ. ಇದು, ನಿಮ್ಮ ಹಸಿವು ಅಥವಾ ಚಪಲದ ಮಟ್ಟಗಳ ಮೇಲೆ ಋಣಾತ್ಮಕ ಪ್ರಭಾವ ಬೀರುವ ನಿದ್ರೆ ಕೆಡುವಿಕೆಯನ್ನು ತಪ್ಪಿಸುವುದಕ್ಕೂ ನೆರವಾಗುತ್ತದೆ. ಹೆಚ್ಚುವರಿಯಾಗಿ, ಮಧುಮೇಹವನ್ನು ನಿರ್ವಹಿಸುವುದಕ್ಕೆ ಅತ್ಯಾವಶ್ಯಕವಾದ ಮೆಟಬಾಲಿಸಮ್(ಜೀರ್ಣಕ್ರಿಯೆ)ಗೆ ಬೆಂಬಲ ನೀಡಿ, ರಕ್ತದ ಗ್ಲುಕೋಸ್ ಮಟ್ಟಗಳನ್ನು ನಿಯಂತ್ರಿಸುವಲ್ಲೂ ಇದು ಮುಖ್ಯ ಪಾತ್ರ ವಹಿಸುತ್ತದೆ.
5. ಒತ್ತಡ ನಿರ್ವಹಣೆ: ನಿಮಗೆ ಒತ್ತಡವೇರ್ಪಟ್ಟಾಗ ನಿಮ್ಮ ದೇಹವು ಒತ್ತಡ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ ಮತ್ತು ಇದರಿಂದ ನಿಮ್ಮ ರಕ್ತದ ಸಕ್ಕರೆ ಮಟ್ಟಗಳು ಹೆಚ್ಚಾಗಿ ಇನ್ಸುಲಿನ್ ನಿರೋಧಕತೆ ಏರ್ಪಡುತ್ತದೆ. ಕಾಲಕಳೆದಂತೆ, ಇದು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸಿ, ನೀವು ಹೃದ್ರೋಗ ಏರ್ಪಡಿಸಿಕೊಳ್ಳುವ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ. ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು, ಸಂಗೀತ ಆಲಿಸುವಿಕೆ, ಯೋಗ ಅಥವಾ ನೃತ್ಯ ಮುಂತಾದ ಮೋಜಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಹೆಚ್ಚುವರಿಯಾಗಿ, ನಿಮ್ಮ ಪ್ರೀತಿಪಾತ್ರರೊಡನೆ ಸಮಯ ಕಳೆಯುವುದರಿಂದ ಅಥವಾ ವೃತ್ತಿಪರರೊಡನೆ ಚರ್ಚೆ ನಡೆಸುವುದರಿಂದಲೂ ನಿಮ್ಮ ಒತ್ತಡದ ಮಟ್ಟಗಳನ್ನು ಕಡಿಮೆ ಮಾಡಿಕೊಳ್ಳಬಹುದು.
ಸಾಧಿಸಬಹುದಾದ ಈ ಗುರಿಗಳನ್ನು ತೀರ್ಮಾನಿಸಿಕೊಳ್ಳುವ ಮೂಲಕ ಮಧುಮೇಹ ಇರುವ ವ್ಯಕ್ತಿಗಳು ತಮ್ಮ ಆರೋಗ್ಯವನ್ನು ನಿಯಂತ್ರಿಸಿಕೊಂಡು, ವರ್ಷದುದ್ದಕ್ಕೂ ತಮ್ಮ ಪರಿಸ್ಥಿತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಿಕೊಳ್ಳಬಹುದು. ನೆನಪಿಡಿ, ಪ್ರತಿಯೊಂದು ಹೆಜ್ಜೆಯೂ ಲೆಕ್ಕಕ್ಕೆ ಬರುತ್ತದೆ, ಮತ್ತು ತಾಳ್ಮೆ ಹಾಗೂ ದೃಢನಿಶ್ಚಯದ ಮೂಲಕ ನೀವು ನಿಮ್ಮ ಗುರಿಗಳನ್ನು ಸಾಧಿಸಿಕೊಂಡು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.