ಮಂಗಳೂರು: ಕೊಂಕಣಿ ಭಾಶಾ ಮಂಡಳ್ ಕರ್ನಾಟಕ್ (ಕೆಬಿಎಮ್ಕೆ) ಜನವರಿ 9, 2024ರಂದು ತನ್ನ ಸುವರ್ಣ ಮಹೋತ್ಸವ ಸಮರೋಪ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಬಿಎಮ್ಕೆ ಅಧ್ಯಕ್ಷ ಕೆ. ವಸಂತ್ ರಾವ್ “ಕೊಂಕಣಿ ಭಾಶಾ ಮಂಡಳ್ ಕರ್ನಾಟಕ್ ಚರಿತ್ರೆಯಲ್ಲಿಯೇ ಮೊದಲ ಬಾರಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಐದು ಸಾಧಕರಿಗೆ ಪ್ರಶಸ್ತಿಗಳನ್ನು ನೀಡಲಾಗುವುದು”
2022ರ ಸಾಲಿನ ನಡೆಯಲಿರುವ ಪ್ರಶಸ್ತಿ ಪ್ರಧಾನ
60 ವರುಷ ಮೇಲ್ಪಟ್ಟ ಹಿರಿಯರು ಕೊಂಕಣಿ ಭಾಷೆಗಾಗಿ ಜೀವಮಾನ ಇಡೀ ದುಡಿದ ರಾಮದಾಸ್ ಗುಲ್ವಾಡಿ ಅವರಿಗೆ ಜೀವಮಾನ ಪ್ರಶಸ್ತಿ, ಲೋಕವೇದ ಕಲಾವಿದರು ಹಾಗೂ ಹಳ್ಳಿಯ ಚಿಕಿತ್ಸಕರಾದ ಕಲ್ಯಾಣಿಬಾಯಿ ನೀರ್ಕೆರೆ ಅವರಿಗೆ ಜಾನಪದ ಪ್ರಶಸ್ತಿ, ಕೊಂಕಣಿ ವಾರಪತ್ರಿಕೆಗೆ ಚಂದಾದಾರರನ್ನು ಮಾಡಿ ಅದರಲ್ಲಿಯೇ ಜೀವನ ನಡೆಸುವ ಸಾಗರದ ಅಪ್ಪುರಾಯ ಪೈ ಅವರಿಗೆ ಕೊಂಕಣಿ ಕಾರ್ಯಕರ್ತ ಪ್ರಸಸ್ತಿ,ಕೊಂಕಣಿ ನಾಟಕ/ಚಲನಚಿತ್ರ ನಟ ಕ್ಲಾನ್ವಿನ್ ಫೆರ್ನಾಂಡಿಸ್ ಅವರಿಗೆ ಯುವ ಪ್ರಶಸ್ತಿ, ಹಾಗೂ 2022 ವರ್ಷದ ಸಾಲಿನ ಮೊದಲ ಕೊಂಕಣಿ ಕೃತಿ ಪ್ರಕಟಿಸಿದ ಕೃತಿಕಾ ಕಾಮತ್ ಅವರಿಗೆ ಪುಸ್ತಕ ಪ್ರಶಸ್ತಿಯನ್ನು ನೀಡಲಾಗುವುದು.
“ವಿದ್ಯಾರ್ಥಿಗಳು ಭಾಷೆಯನ್ನು ಉಳಿಸುವ ಭವಿಷ್ಯದ ಜನರು ಅದಕ್ಕಾಗಿ ಅವರಿಗೆ ವಿವಿಧ ವಿನೋದಾವಳಿಗಳ ಅಂತರ್ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸಲಾಗಿದೆ. ವಿಜೇತರಿಗೆ ನಗದು ಬಹುಮಾನ ಕೊಡಲಾಗುವುದು.” ಎಂದು ಹೇಳಿದರು.
ಕೊಂಕಣಿ ಭಾಶಾ ಮಂಡಳ್ ಕರ್ನಾಟಕ(ಕೆಬಿಎಮ್ಕೆ) ಇದರ ಕಾರ್ಯಕ್ರಮದ ಸಂಚಾಲಕರಾದ ಹಾಗೂ ಕಾರ್ಯದರ್ಶಿಯಾದ ರೇಮಂಡ್ ಡಿಕುನಾ ತಾಕೊಡೆ ಮಾತಾನಾಡಿ “ಜನವರಿ 09ರಂದು ನಡೆಯಲಿರುವ ಸುವರ್ಣ ಮಹೋತ್ಸವ ಸಮಾರೋಪ ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಶನ್ ಸದಸ್ಯರಾದ ರೋನಾಲ್ಡ್ ಫೆರ್ನಾಂಡಿಸ್ ಹಾಗೂ ಗೌರವ ಅಥಿತಿಯಾಗಿ ಕೆಬಿಎಮ್ಕೆ ಇದರ ಸ್ಥಾಪಕ ಖಾಜಾಂಚಿ ಫಾದರ್ ಮಾರ್ಕ್ ವಾಲ್ಡರ್, ಕೊಂಕಣಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಮನೋಹರ್ ಕಾಮತ್, ಎಸ್. ಎಲ್. ಶೇಟ್ ಜ್ಯುವೆಲ್ಲರ್ಸ್ ಆಂಡ್ ಡೈಮಂಡ್ ಹೌಸ್ ಇದರ ಮಾಲಕರು ಪ್ರಶಾಂತ ಶೇಟ್ ವೇದಿಕೆಯಲ್ಲಿ ಉಪಸ್ಥಿತರಿರುವರು.
“ಕೊಂಕಣಿಯಲ್ಲಿ ಸೇವೆಯನ್ನು ಮಾಡಿ ಗುರುತಿಸಲ್ಪಡದ ಕರ್ನಾಟಕದ ಮೂಲೆಮೂಲೆಗಳಲ್ಲಿನ ವಿವಿಧ ಸಮುದಾಯದ ಕೊಂಕಣಿ ಭಾಷಿಗ 50 ಜನರಿಗೆ ಸನ್ಮಾನಿಸಲಾಗುತ್ತದೆ. ಮೀನಾ ಮಲಾನಿ, ಮಂಗ್ಳುರ್,ಗೌರಿ ಮಲ್ಲಾö್ಯ, ಮಂಗ್ಳುರ್,ದೊನಾತ್ ಅಲ್ಮೇಡಾ ತೊಟ್ಟಾಂ, ಉಡುಪಿ,ಪ್ರಾನ್ಸಿಸ್ ಸಲ್ದಾನ್ಹಾ ಕಾಮತ್, ಕೆಲಾರಾಯ್,ಶ್ರೀನಿವಾಸ ಶಾನಭಾಗ್, ಹಾರ್ಸಿಕಟ್ಟಾ,ಅಚಲಾ ಬಿಳಗಿ, ಕೊರ್ಲಕಟ್ಟಾ,ಆಂಟನಿ ಲೂಯಿಸ್, ಮಣಿಪಾಲ್,ಆಲ್ವ್ವಿನ್ ಜೆ ಡಿಕೂನಾ, ದೆರೆಬೈಲ್,ಡೊಲ್ಫಿ ಕಾಸ್ಸಿಯಾ, ವಾಮಂಜೂರು,ಮಟ್ಟಾರ್ ವಿಠ್ಠಲ ಕಿಣಿ, ಮಂಗ್ಳುರ್,ಸಂದೇಶ್ ಬಾಂದೇಕರ್, ಕಾರವಾರ್,ಪಂಚು ಬಂಟ್ವಾಳ್,ಪ್ಲೊರಾ ಕಾಸ್ತೆಲಿನೊ, ಪಾನೀರ್,ಜ್ಞಾನದೇವ್ ಮಲ್ಲಾö್ಯ, ಮಣಿಪಾಲ್,ಉದಯ್ ರಾಯ್ಕರ್, ಧಾರವಾಡ್,ಮಾರ್ಕ್ ಪಿಂಟೊ, ತಾಕೊಡೆ,ಜಯಶ್ರೀ ನಾಯಕ್, ಎಕ್ಕಂಬಿ,ದೀಪಾಲಿ ಸಾಮಂತ್, ದಾಂಡೇಲಿ,ಗೋಪಾಲಕೃಷ್ಣ ಶಾನಭಾಗ್, ಹುಬ್ಬಳ್ಳಿ,ಜೋನ್ ತಾವ್ರೊ, ಮಂಗ್ಳುರ್,ಎಚ್ ಆರ್ ಆಳ್ವಾ, ಮಂಗ್ಳುರ್,ರಾಘವ ಬಾಳೇರಿ, ಹೊನ್ನಾವರ,ಚೇತನ ನಾಯ್ಕ್, ಧಾರವಾಡ,ವನಿತಾ ನಾಯಕ್, ಕುಮಟಾ,ಬಿ ಎಂ ಖಾರ್ವಿ, ಕುಂದಾಪುರ,ಮುರಳಿಧರ್ ಪ್ರಭು, ವಗ್ಗ,ಸಂಜೀವ ಪಾಟೀಲ್, ಉಡುಪಿ,ಲಿಂಗಪ್ಪ ಗೌಡ, ಎಡಪದವು,ಸುನಿತಾ ಶೆಣೈ, ಮಂಗ್ಳುರ್,ಮೀನಾಕ್ಷಿ ನಾಯಕ್, ಮಂಗ್ಳುರ್,ಎಸ್ ಎಮ್ ಅರ್ಶದ್, ಮಂಗ್ಳುರ್,ಚಂದ್ರಾ ನಾಯ್ಕ್ ಎಗ್ಗುಂಜೆ, ಉಡುಪಿ,ರೆಮೊನಾ ಇವೆಟ್ ಪಿರೆರಾ, ಮಂಗ್ಳುರ್,ಎಲಿಯಾಸ್ ಫೆರ್ನಾಂಡಿಸ್ ಪಾಲ್ದಾನೆ, ಮಂಗ್ಳುರ್,ಡಾ ಇಮ್ರಾನ್ ಮೋತಿಶಾಮ್,ಜನಾಬ್ ಮೊಹಮ್ಮದ್ ಅನ್ಸಾರ್ ಸಾಹೇಬ್,ಬಬಿತಾ ಪಿ ನಾಯಕ್, ಮಂಗ್ಳುರ್,ಕುಡ್ಪಿ ಜಗದೀಶ್ ಶೆಣೈ, ಮಂಗ್ಳುರ್ ಇವರನ್ನು ಸನ್ಮಾನಿಸಲಾಗುವುದು.
ಸಂಘ/ ಸಂಸ್ಥೆಗಳು: ಕೊಂಕಣಿ ಲೇಖಕ್ ಸಂಘ್ ಕರ್ನಾಟಕ್, ಮಂಗ್ಳುರ್,ಸೈಂಟ್ಆಲೋಶಿಯಸ್ ಕೊಂಕಣಿ ಸಂಸ್ಥೊ, ಮಂಗ್ಳುರ್,ರಚನಾ, ಕಥೊಲಿಕ್ ಚೇಂಬರ್ ಆಫ್ ಕೋಮರ್ಸ್ ಆಂಡ್ ಇಂಡಸ್ಟ್ರಿ ಮಂಗ್ಳುರ್,ಉತ್ತರ ಕನ್ನಡ ಜಿಲ್ಲಾ ಕೊಂಕಣಿ ಪರಿಷತ್, ಶಿರಸಿ,ಟಿ ಎಮ್ ಎ ಪೈ ಫೌಂಡೇಶನ್, ಮಣಿಪಾಲ್,ಕೊಮೆಡಿ ಕಂಪೆನಿ, ಮಂಗ್ಳುರ್,ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ಮಂಗ್ಳುರ್,ಮಾಂಡ್ ಸೊಭಾಣ್, ಮಂಗ್ಳುರ್,ಕೊಂಕಣಿ ಸಾಂಸ್ಕೃತಿಕ ಸಂಘ್, ಮಂಗ್ಳುರ್,ಕೊಂಕಣಿ ನಾಟಕ್ ಸಭಾ, ಮಂಗ್ಳುರ್
“ಕೊಂಕಣಿ ಯ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಅದರಲ್ಲಿ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಫ್ರಾಂಕ್ಲಿನ್ ಕ್ರಿಸ್ಟನ್ ಕೆಸ್ಟೆಲಿನೊ ಪ್ರಥಮ, ಕುಮಾಟಾದ ಸರಸ್ವತಿ ಪಿಯುಸಿ ಕಾಲೇಜಿನ ಅಕ್ಷತಾ ವಿನಾಯಕ ಶಾನಭಾಗ್ ದ್ವಿತೀಯ, ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಎಂಎ ವಿದ್ಯಾರ್ಥಿ ರವಳನಾಥ ಆರ್ ಕಾಮತ್ ತೃತೀಯ ಸ್ಥಾನವನ್ನು ಗಳಿಸಿದ್ದಾರೆ.”
ಪ್ರಶಸ್ತಿ ವೀಜೆತರ ಫಲಕ ಅನಾವರಣ ಮಾಡಿದ ಎಸ್. ಎಲ್. ಶೇಟ್ ಜ್ಯುವೆಲ್ಲರ್ಸ್ ಆಂಡ್ ಡೈಮಂಡ್ ಹೌಸ್ ಮಾಲಕರು ಪ್ರಶಾಂತ ಶೇಟ್ ಮಾತನಾಡಿ “ಕೊಂಕಣಿ ನಮ್ಮ ತಾಯಿ ಭಾಷೆ. ತಾಯಿ ಭಾಷೆಯನ್ನು ಪ್ರೋತ್ಸಹಿಸುವುದು ಎಲ್ಲಾರ ಆದ್ಯ ಕರ್ತವ್ಯ. ಈ ಕಾರ್ಯಕ್ರಮಕ್ಕೆ ಎಲ್ಲಾ ಕೊಂಕಣಿ ಭಾಷಿಗರು ಸಹಾಕರ ನೀಡಬೇಕು.”
ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ಸಂಚಾಲಕ ಡಾ ಅರವಿಂದ್ ಶಾನಭಾಗ್, ಪೋಷಕರಾದ ಪ್ರಶಾಂತ ಶೇಟ್, ಖಜಾಂಜಿ ಸುರೇಶ್ ಶೆಣೈ, ಉಪಾಧ್ಯಕ್ಷ ರತ್ನಾಕರ್ ಕುಡ್ವಾ, ಸಹ ಕಾರ್ಯದರ್ಶಿ ಜೂಲಿಯೆಟ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.