ಬೆಂಗಳೂರು: ಹೊಸ ವರ್ಷಾಚರಣೆಯಂದು ಫೋಟೋಶೂಟ್ ಗೆ ಹೋಗಲು ಪೋಷಕರು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತಳನ್ನು ಜಯನಗರದ ಪ್ರತಿಷ್ಠಿತ ಕಾಲೇಜಿನ ಬಿಬಿಎ ವಿದ್ಯಾರ್ಥಿನಿ ವರ್ಷಿಣಿ (21) ಎಂದು ಗುರುತಿಸಲಾಗಿದೆ. ಸುಧಾಮ ನಗರದ ನಿವಾಸಿ ವರ್ಷಿಣಿ ಕೂಡ ಪೋಟೋಗ್ರಫಿ ಕೋರ್ಸ್ ಓದುತ್ತಿದ್ದಳು.
ಪೊಲೀಸರ ಪ್ರಕಾರ, ವರ್ಷಿಣಿ ಮಾಲ್ ಗೆ ಭೇಟಿ ನೀಡಿ ಅಲ್ಲಿ ಫೋಟೋಶೂಟ್ ಮಾಡಲು ಬಯಸಿದ್ದರು. ಅಲ್ಲಿಗೆ ಹೋಗಲು ಸಿದ್ಧವಾದಾಗ, ಅವಳ ಪೋಷಕರು ಆಕ್ಷೇಪಿಸಿದರು ಮತ್ತು ಅವಳನ್ನು ಹೊರಗೆ ಹೋಗದಂತೆ ತಡೆದರು.
ಪೋಷಕರ ಸಲಹೆ ತಾಳಲಾರದೆ ವರ್ಷಿಣಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ವಿಲ್ಸನ್ ಗಾರ್ಡನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.