ಮಂಗಳೂರು: ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ಇದರ ಸುವರ್ಣ ಮಹೋತ್ಸವ ಸಮಾರೋಪ ಕಾರ್ಯಕ್ರಮ ಜನವರಿ 9 ಮಂಗಳವಾರ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ಈ ಸಂದರ್ಭಕ್ಕಾಗಿ ವಿದ್ಯಾರ್ಥಿಗಳಿಗೆ ಕೊಂಕಣಿ ಹಿರಿಯ ಕವಿಗಳು ಹಾಗೂ ಲೇಖಕರ ಬಗ್ಗೆ ತಿಳಿದು ಬರೆಯಲು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ವಿಜೇತರು ಈ ಕೆಳಗಿನವರು: ಪ್ರಥಮ ಸೈಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಫ್ರಾಂಕ್ಲಿನ್ ಕ್ರಿಸ್ಟನ್ ಕೆಸ್ಟಲಿನೊ, ದ್ವಿತೀಯ ಕುಮ್ಟಾದ ಸರಸ್ವತಿ ಕಾಲೇಜಿನ ಅಕ್ಷತಾ ವಿನಾಯಕ ಶಾನಭಾಗ್, ತೃತೀಯ ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಎಂಎ ವಿದ್ಯಾರ್ಥಿ ರವಳನಾಥ ಆರ್ ಕಾಮತ್ ಎಂದು ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಹುಮಾನವನ್ನು ಸಮಾರೋಪ ಕಾರ್ಯಕ್ರಮದಲ್ಲಿ ನೀಡಲಾಗುವುದು. ಸ್ಪರ್ಧೆಯ ಸಂಚಾಲಕರಾಗಿ ಶಿಕ್ಷಕಿ ಪೆಲ್ಸಿ ಲೋಬೊ ಸಹಕರಿಸಿದ್ದರು.