ಚೆನೈ: ವಿಜಯಕಾಂತ್ ಅವರಿಗೆ ಕೋವಿಡ್ -19 ದೃಡವಾಗಿದ್ದು, ವೆಂಟಿಲೇಟರ್ನಲ್ಲಿ ಇದ್ದ ನಟ ಇಂದು ನಿಧಾನರಾಗಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.
ವಿಜಯಕಾಂತ್, ಮಧುರೈನಲ್ಲಿ ವಿಜಯರಾಜ್ ಆಗಿ ಜನಿಸಿದರು. ಅವರು ತಮ್ಮ ಶಕ್ತಿಯುತ ಆಕ್ಷನ್ ಸೀಕ್ವೆನ್ಸ್ ಮತ್ತು ಖಡಕ್ ಸಂಭಾಷಣೆಗಳಿಗೆ ಹೆಸರುವಾಸಿಯಾಗಿದ್ದರು. ಅವರು 1979 ರಲ್ಲಿ ಇನಿಕುಂ ಇಳಮೈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರ ಜನಪ್ರಿಯ ಚಿತ್ರಗಳು ಸೆಂಟೂರ ಪೂವೆ, ಪುಲನ್ ವಿಸಾರನೈ, ಚತ್ರಿಯಾನ್, ಕ್ಯಾಪ್ಟನ್ ಪ್ರಭಾಕರನ್, ಚಿನ್ನ ಗೌಂಡರ್, ಸೇತುಪತಿ ಐಪಿಎಸ್, ಹಾನೆಸ್ಟ್ ರಾಜ್, ವನತೈ ಪೋಲಾ, ರಮಣ ಇತ್ಯಾದಿ.
ವಿಜಯಕಾಂತ್ ತಮ್ಮದೇ ರಾಜಕೀಯ ಪಕ್ಷವನ್ನು ಸ್ಥಾಪಿಸಿ 2006ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ವಿರುಧಾಚಲಂ ಕ್ಷೇತ್ರದಲ್ಲಿ ಗೆದ್ದಿದ್ದರು. ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಸಂಸ್ಥಾಪಕ ಮತ್ತು ನಟ ವಿಜಯಕಾಂತ್ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಗುರುವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.