ಬೆಂಗಳೂರು: ಭಾರತದ ಅತಿ ದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (UPSRTC) ಗೆ 1350 ಬಸ್ ಗಳನ್ನು ಪೂರೈಕೆ ಮಾಡುವ ಆರ್ಡರ್ ಅನ್ನು ಪಡೆದುಕೊಂಡಿದೆ. ಟಾಟಾ ಎಲ್ ಪಿಒ 1618 ಬಿಎಸ್6 ಮಾನದಂಡಗಳನ್ನು ಹೊಂದಿರುವ 1350 ಬಸ್ ಗಳನ್ನು ಪೂರೈಕೆ ಮಾಡಲಿದೆ. ಇಂಟರ್ ಸಿಟಿ ಮತ್ತು ದೂರದ ಪ್ರಯಾಣಗಳಿಗೆ ಅನುಕೂಲವಾಗುವ ರೀತಿಯಲ್ಲಿ ಈ ಬಸ್ ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು ಟಾಟಾ ಎಲ್ ಪಿಒ 1618 ಬಿಎಸ್ 6 ಮಾಲಿನ್ಯ ಶಿಷ್ಠಾಚಾರಗಳಿಗೆ ಅನುಗುಣವಾಗಿವೆ. ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಅತ್ಯುತ್ತಮ ಪ್ರಯಾಣಿಕರ ಸೌಕರ್ಯವನ್ನು ನೀಡುತ್ತದೆ ಹಾಗೂ ಅತ್ಯುತ್ತಮ ವರ್ಗದ ಒಟ್ಟು ಮಾಲೀಕತ್ವದ ವೆಚ್ಚವನ್ನು ನೀಡುತ್ತದೆ. ಸರ್ಕಾರದ ಟೆಂಡರ್ ಪ್ರಕ್ರಿಯೆಯ ಮೂಲಕ ನಡೆಸಿದ ಸ್ಪರ್ಧಾತ್ಮಕ ಇ-ಬಿಡ್ಡಿಂಗ್ ಪ್ರಕ್ರಿಯೆಯ ನಂತರ ಟಾಟಾ ಮೋಟರ್ಸ್ ಈ ಆದೇಶವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಹಂತಹಂತವಾಗಿ ಬಸ್ ಗಳನ್ನು ಪೂರೈಕೆ ಮಾಡಲಿದೆ.
ಈ ಆದೇಶವನ್ನು ಪಡೆದುಕೊಂಡು ಮಾತನಾಡಿದ ಟಾಟಾ ಮೋಟರ್ಸ್ ನ ಸಿವಿ ಪ್ಯಾಸೆಂಜರ್ಸ್ ಉಪಾಧ್ಯಕ್ಷ & ಬ್ಯುಸಿನೆಸ್ ಹೆಡ್ ರೋಹಿತ್ ಶ್ರೀವಾಸ್ತವ ಅವರು, “ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಪರಿಣಾಮಕಾರಿಯನ್ನಾಗಿ ಮಾಡುವುದು ನಮ್ಮ ಧ್ಯೇಯವಾಗಿದೆ ಮತ್ತು ಆಧುನಿಕ ಬಸ್ ಚಾಸಿಗಳನ್ನು ಪೂರೈಸಲು ಮತ್ತೊಮ್ಮೆ ಅವಕಾಶವನ್ನು ನೀಡಿರುವ ಉತ್ತರ ಪ್ರದೇಶ ರಾಜ್ಯ ಸರ್ಕಾರ ಮತ್ತು UPSRTC ಗೆ ನಾವು ಕೃತಜ್ಞರಾಗಿದ್ದೇವೆ. ಟಾಟಾ ಎಲ್ ಪಿಒ 1618 ನ ದೃಢವಾದ ನಿರ್ಮಾಣ, ಗುಣಮಟ್ಟದ ಎಂಜಿನಿಯರಿಂಗ್ ಮತ್ತು ಕಡಿಮೆ ನಿರ್ವಹಣೆಯೊಂದಿಗೆ ಅತ್ಯುತ್ತಮ ಕಾರ್ಯನಿರ್ವಹಣೆಗೆ ಪೂರಕವಾಗಿದೆ. ಹೆಚ್ಚಿನ ಅಪ್ ಟೈಂ ಮತ್ತು ಕಾರ್ಯಾಚರಣೆಗಳ ಅತ್ಯುತ್ತಮ ವೆಚ್ಚದೊಂದಿಗೆ ಅತ್ಯುತ್ತಮ ದರ್ಜೆಯ ಉತ್ಪಾದಕತೆಯನ್ನು ತಲುಪಿಸುಯವ ನಿಟ್ಟಿನಲ್ಲಿ ನಾವು ಈ ಚಾಸಿಗಳನ್ನು ವಿನ್ಯಾಸಗೊಳಿಸುತ್ತಿದ್ದೇವೆ. UPSRTC ಯ ಆದೇಶದನ್ವಯ ನಾವು ಚಾಸಿಗಳನ್ನು ಹಂತಹಂತವಾಗಿ ಪೂರೈಕೆ ಮಾಡಲು ಬದ್ಧರಾಗಿದ್ದೇವೆ’’ ಎಂದು ತಿಳಿಸಿದರು.
ಅತ್ಯಾಧುನಿಕ ಬಸ್ ಗಳನ್ನು ಪೂರೈಕೆ ಮಾಡುವಲ್ಲಿ ಮತ್ತು ಸಾರ್ವಜನಿಕ ಸಾರಿಗೆ ಪರಿಹಾರಗಳನ್ನು ಒದಗಿಸುವಲ್ಲಿ ಟಾಟಾ ಮೋಟರ್ಸ್ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ. ದೇಶದ ವಿವಿಧ ನಗರಗಳು ಮತ್ತು ರಾಜ್ಯಗಳಿಗೆ ಬಸ್ ಗಳನ್ನುಯ ಯಶಸ್ವಿಯಾಗಿ ಪೂರೈಕೆ ಮಾಡುತ್ತಿದೆ. ಇದುವರೆಗೆ ದೇಶದಾದ್ಯಂತ ವಿವಿಧ ರಾಜ್ಯಗಳು ಮತ್ತು ನಗರಗಳಿಗೆ 58,000 ಕ್ಕೂ ಹೆಚ್ಚು ಬಸ್ ಗಳನ್ನು ಪೂರೈಸಿದೆ. ದೇಶಾದ್ಯಂತ ಹಲವಾರು ಸಾವಿರ ಬಸ್ ಗಳು ವಿವಿಧ ನಗರಗಳು, ಪಟ್ಟಣಗಳ ನಡುವೆ ಸಂಚರಿಸುತ್ತಿವೆ. ಈ ಮೂಲಕ ಸಾರ್ವಜನಿಕರಿಗೆ ಆರಾಮದಾಯಕ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗುತ್ತಿದೆ.