ಬೆಂಗಳೂರು: ಭಾರತದಲ್ಲಿ ಹೆಚ್ಚುತ್ತಿರುವ ನಗರೀಕರಣ ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆಗೆ ಆದ್ಯತೆ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಶುದ್ಧ ಸಾರಿಗೆ ಆಯ್ಕೆಗಳು ನಿರ್ಣಾಯಕವಾಗಿ ಪರಿಣಮಿಸಿವೆ. ದೇಶದಲ್ಲಿ ಎಲೆಕ್ಟ್ರಿಕ್ ಮತ್ತು ಹೈಡ್ರೋಜನ್ ಆಧಾರಿತ ವಾಹನಗಳತ್ತ ಹೆಚ್ಚು ಗಮನಹರಿಸುತ್ತಿರುವುದರಿಂದ ಮಾಲಿನ್ಯವನ್ನು ಕಡಿಮೆ ಮಾಡುವ ಮಧ್ಯಂತರ ಪರಿಹಾರದ ಅಗತ್ಯತೆ ಇದೆ. ನೈಸರ್ಗಿಕ ಅನಿಲವನ್ನು `ಪರಿವರ್ತನಾ ಇಂಧನ’ವೆಂದು ಗುರುತಿಸಿದ್ದು, ಇದು ಉತ್ತಮ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಟಾಟಾ ಮೋಟರ್ಸ್ ಭಾರತದ ಪ್ರಮುಖ ಆಟೋಮೋಬೈಲ್ ಕಂಪನಿಯಾಗಿದ್ದು, ನೈಸರ್ಗಿಕ ಅನಿಲ ಚಾಲಿತ ವಾಹನಗಳ ಅಭಿವೃದ್ಧಿಯಲ್ಲಿ ನಿರಂತರವಾಗಿ ತನ್ನದೇ ಆದ ಸಕ್ರಿಯ ಕೊಡುಗೆಯನ್ನು ನೀಡುತ್ತಿದೆ. ತನ್ನ ಪರಿಣತಿ ಮತ್ತು ನಾವೀನ್ಯತೆಯನ್ನು ಬಳಸಿಕೊಂಡು ಟಾಟಾ ಮೋಟರ್ಸ್ ಭಾರತದಲ್ಲಿ ಸುಸ್ಥಿರ ಸಾರಿಗೆ ಪರಿವರ್ತನೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ನೀತಿ ಆಯೋಗದ ವರದಿಯ ಅಂದಾಜಿನ ಪ್ರಕಾರ ಭಾರತದಲ್ಲಿ 2050 ರ ವೇಳೆಗೆ ಟ್ರಕ್ ಗಳ ಸಂಖ್ಯೆಯಲ್ಲಿ ನಾಲ್ಕುಪಟ್ಟು ಹೆಚ್ಚಳ ಕಂಡುಬರಲಿದೆ. ಈ ಹಿನ್ನೆಲೆಯಲ್ಲಿ ನೈಸರ್ಗಿಕ ಅನಿಲ ಆಧಾರಿತ ಇಂಧನಕ್ಕೆ ಪರಿವರ್ತನೆಯಾಗುವ ಅಗತ್ಯತೆಯನ್ನು ವರದಿ ಹೇಳಿದೆ. ಈ ಪರಿವರ್ತನೆಯು ಪರಿಸರ ರಕ್ಷಣೆ, ಸಾರ್ವಜನಿಕ ಆರೋಗ್ಯ ಮತ್ತು ವಾಣಿಜ್ಯ ವಾಹನಗಳ ಉದ್ಯಮದಲ್ಲಿ ಆರ್ಥಿಕ ಸುಸ್ಥಿರತೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ. ಮಾಲಿನ್ಯ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಇಂಧನ ಭದ್ರತೆ ನಿಟ್ಟಿನಲ್ಲಿ ಭಾರತ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (CNG) ಬಳಕೆಯನ್ನು ಹೆಚ್ಚು ಉತ್ತೇಜಿಸುತ್ತಿದೆ. ಸಿಎನ್ ಜಿ ಆರ್ಥಿಕವಾಗಿ ಪ್ರಯೋಜನಾಕಾರಿಯಾಗಿದ್ದು, ಭಾರತದಲ್ಲಿ ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆ ಮಾಡುತ್ತದೆ. ನಾವೀನ್ಯತೆ ಮತ್ತು ಸುಸ್ಥಿರ ಸಾರಿಗೆ ಪರಿಹಾರಗಳಿಗೆ ಮೀಸಲಾಗಿರುವ ಟಾಟಾ ಮೋಟರ್ಸ್ ಹೆಚ್ಚು ಪರಿಸರ ಸ್ನೇಹಿ ಮತ್ತು ಪರಿಣಾಮಕಾರಿ ಸಾರಿಗೆ ವ್ಯವಸ್ಥೆಯ ಬಗ್ಗೆ ಭಾರತ ಸರ್ಕಾರ ಇಟ್ಟುಕೊಂಡಿರುವ ನಿರೀಕ್ಷೆಯಂತೆ ವಾಣಿಜ್ಯ ವಾಹನ ವಲಯದಲ್ಲಿ CNG ಅಳವಡಿಕೆಯನ್ನು ಉತ್ತೇಜಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ. ವರದಿಗಳ ಪ್ರಕಾರ, ಕರ್ನಾಟಕವು 250 ಕ್ಕೂ ಹೆಚ್ಚು CNG ಕೇಂದ್ರಗಳನ್ನು ಹೊಂದಿದ್ದು, ಇದು ಶುದ್ಧ ಇಂಧನ ಆಯ್ಕೆಗಳ ಪ್ರವೇಶಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ.
ಈ ಪರಿವರ್ತನೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಭಾರತ ತನ್ನ ನೈಸರ್ಗಿಕ ಅನಿಲ ಮೂಲಸೌಕರ್ಯಕ್ಕೆ ಸಾಕಷ್ಟು ರಚನಾತ್ಮಕ ಹೂಡಿಕೆಯನ್ನು ಮಾಡುತ್ತಿದೆ. 2030 ರ ವೇಳೆಗೆ ದೇಶದಲ್ಲಿ 27,000 ಕ್ಕೂ ಅಧಿಕ CNG ಕೇಂದ್ರಗಳನ್ನು ಕಾರ್ಯಾಚರಣೆ ಮಾಡುವ ಯೋಜನೆಯನ್ನು ಹೊಂದಿದೆ. ಗ್ಯಾಸ್ ಗ್ರಿಡ್, ಹೆಚ್ಚುವರಿ LNG ಟರ್ಮಿನಲ್ ಗಳು ಮತ್ತು ಬಯೋ-ಸಿಎನ್ ಜಿ ಕಾರ್ಯಕ್ರಮಕ್ಕಾಗಿ SATAT ಯಂತಹ ರಾಷ್ಟ್ರೀಯ ಉಪಕ್ರಮಗಳೊಂದಿಗೆ ವಿಸ್ತಾರವಾಗಿ ನೈಸರ್ಗಿಕ ಅನಿಲ ಲಭ್ಯವಾಗುವಂತೆ ಮಾಡುವ ಯೋಜನೆಗಳನ್ನು ರೂಪಿಸಲಾಗಿದೆ. ಅನಿಲ –ಆಧಾರಿತ ವಾಹನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ತೆರಿಗೆ ಸಾಲ ಮತ್ತು ಸಬ್ಸಿಡಿಯಂತಹ ಪ್ರೋತ್ಸಾಹಗಳನ್ನು ನೀಡಲಾಗುತ್ತಿದೆ. ಹೊಸ ನೈಸರ್ಗಿಕ ಅನಿಲ ಬೆಲೆ ಕಾರ್ಯವಿಧಾನದ ಸರ್ಕಾರದ ಅನುಮೋದನೆಯು ಪೆಟ್ರೋಲ್ ಮತ್ತು ಡೀಸೆಲ್ ಗೆ ಹೋಲಿಸಿದರೆ CNG ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಇದು ಭಾರತದ ಸುಸ್ಥಿರ ಸಾರಿಗೆ ಪ್ರಯಾಣದಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಟಾಟಾ ಮೋಟರ್ಸ್ ನ ಟ್ರಕ್ಸ್ ವಿಭಾಗದ ಉಪಾಧ್ಯಕ್ಷ ಮತ್ತು ಬ್ಯುಸಿನೆಸ್ ಹೆಡ್ ರಾಜೇಶ್ ಕೌಲ್ ಅವರು ಮಾತನಾಡಿ, “ಟಾಟಾ ಮೋಟರ್ಸ್ ನಲ್ಲಿ ನಾವು ಸುಸ್ಥಿರ ಇಂಧನಗಳ ಪರಿವರ್ತನೆಯಲ್ಲಿ ಮುಂಚೂಣಿಯಲ್ಲಿದ್ದೇವೆ. ನಮ್ಮ ವಿಸ್ತಾರವಾದ CNG ಚಾಲಿತ ವಾಣಿಜ್ಯ ವಾಹನಗಳು ಮತ್ತು 2045 ರ ವೇಳೆಗೆ ನಿವ್ವಳ ಶೂನ್ಯ ಮಾಲಿನ್ಯದ ಗುರಿ ತಲುಪುವ ನಿಟ್ಟಿನಲ್ಲಿ ಹೊಂದಿರುವ ನಮ್ಮ ಬದ್ಧತೆಯಿಂದ ಸುಸ್ಥಿರ ಲಾಜಿಸ್ಟಿಕ್ ಅನ್ನು ಹೆಚ್ಚಳ ಮಾಡುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದೇವೆ. ಆಟೋ ಎಕ್ಸ್ ಪೋ 2023 ರಲ್ಲಿ ನೈಸರ್ಗಿಕ ಅನಿಲ, ಎಲೆಕ್ಟ್ರಿಕ್ ಮತ್ತು ಹೈಡ್ರೋಜನ್ ಆಯ್ಕೆಗಳ ನಮ್ಮ ಪ್ರದರ್ಶನವು ಸಾರಿಗೆ ವಲಯದ ಭವಿಷ್ಯವನ್ನು ರೂಪಿಸುವ ನಮ್ಮ ಸಮರ್ಪಣೆಗೆ ಸಾಕ್ಷಿಯಾಗಿದೆ. CNG-ಚಾಲಿತ ವಾಹನಗಳ ಬೇಡಿಕೆಯು ಹೆಚ್ಚಾದಂತೆ ಅನುಕೂಲಕರವಾದ ಕಾರ್ಯನಿರ್ವಹಣೆಯ ಅರ್ಥಶಾಸ್ತ್ರ ಮತ್ತು ಹೆಚ್ಚುತ್ತಿರುವ ಲಭ್ಯತೆಯಿಂದಾಗಿ, ಶೂನ್ಯ ಮಾಲಿನ್ಯ ವಾಹನಗಳ ಕಡೆಗೆ ಉದ್ಯಮದ ಪ್ರಯಾಣದಲ್ಲಿ ನೈಸರ್ಗಿಕ ಅನಿಲವು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದನ್ನು ನಾವು ನಂಬುತ್ತೇವೆ. ಈ ದಿಸೆಯಲ್ಲಿ ನಾವು ಒಟ್ಟಾಗಿ ಹಸಿರು ಮತ್ತು ಹೆಚ್ಚು ಪರಿಣಾಮಕಾರಿಯಾದ ಭವಿಷ್ಯದತ್ತ ದಾಪುಗಾಲು ಇಟ್ಟಿದ್ದೇವೆ’’ ಎಂದರು.