ಬೆಂಗಳೂರು ಮೂಲದ ಸಂಘಟನೆ “ಅಲ್ಲಿ ಸೇರೋಣ” ಸಾರಿಗೆ ಮತ್ತು ವಸತಿ ಸ್ಥಳಗಳಿಂದ ಪ್ರದೇಶದ ಹೊಂದಾಣಿಕೆ ಅಂತರಗಳು ಮತ್ತು ಸಹ-ಸೃಷ್ಟಿಯ ಪರಿಹಾರಗಳತ್ತ ಮುನ್ನಡೆಯುವ ಪ್ರಮುಖರನ್ನು ಒಗ್ಗೂಡಿಸಿದೆ. 640ಕ್ಕೂ ಹೆಚ್ಚು ಅನೌಪಚಾರಿಕ ವಸತಿಗಳು ಬೆಂಗಳೂರಿನ ಜನಸಂಖ್ಯೆಯ ಶೇ.44ರಷ್ಟು ಜನಸಂಖ್ಯೆಗೆ ಅವಕಾಶ ಕಲ್ಪಿಸಿದ್ದು ಅನೌಪಚಾರಿಕ ವಲಯದ ನಿವಾಸಿಗಳು ಅಸ್ಥಿರ ಮನೆಗಳು, ಸೀಮಿತವಾದ ಸಾರಿಗೆ ಲಭ್ಯತೆ, ಆರ್ಥಿಕ ಮತ್ತು ಪಾರಿಸರಿಕ ಅನುಕೂಲಗಳ ಅಸಮರ್ಪಕ ವಿತರಣೆ ಮತ್ತು ನೀತಿಗಳಿಂದ ಸಂಕಷ್ಟ ಅನುಭವಿಸುತ್ತಾರೆ. ಈ ದೀರ್ಘಕಾಲೀನ ಸವಾಲುಗಳನ್ನು ಗುರುತಿಸಿ ಬೆಂಗಳೂರು ಕ್ರಿಯೇಟಿವ್ ಸರ್ಕಸ್ ನಲ್ಲಿ ನವೆಂಬರ್ 28ರಂದು ಮೊಬಿಲಿಟಿ ಮತ್ತು ವಸತಿ ವಲಯಗಳ ಪ್ರಮುಖ ಪಾಲುದಾರರನ್ನು ಒಗ್ಗೂಡಿಸಲಾಗಿತ್ತು.
“ನಗರಗಳನ್ನು ಯಾರು ರೂಪಿಸಿದರು ಮತ್ತು ನಗರಗಳನ್ನು ಯಾರಿಗಾಗಿ ರೂಪಿಸಲಾಯಿತು?” ಎಂಬ ವಸ್ತುವಿನ ಅಡಿಯಲ್ಲಿ ನಡೆದ ಈ ಕಾರ್ಯಕ್ರಮವು ಸಾರಿಗೆ, ಮೊಬಿಲಿಟಿ, ನಗರ ಯೋಜನೆ ಮತ್ತು ಆಚೆಗೂ ವಿಸ್ತರಿಸಿರುವ ಎಲ್ಲರನ್ನೂ ಒಳಗೊಂಡ ನಗಗರಗಳ ಬಹು ವಲಯಗಳ ವಿಧಾನಕ್ಕೆ ಹೆಚ್ಚು ಆದ್ಯತೆ ನೀಡಿತು.
ಈ ಸಭೆಯು ಬೆಂಗಳೂರಿನ ನಗರದ ಸವಾಲುಗಳಿಗೆ ಹೆಚ್ಚು ಆದ್ಯತೆ ನೀಡಿದ್ದು ನಗರದ ಸಂಘರ್ಷಗಳು ಮತ್ತು ಅಭಿವೃದ್ಧಿ, ಮೊಬಿಲಿಟಿ, ಸಾರಿಗೆ ಮತ್ತು ಮೂಲಸೌಕರ್ಯಗಳಿಗೆ ಗಮನ ನೀಡಿತು. ಈ ಸಭೆಯ ಪ್ರಮುಖಾಂಶವೆಂದರೆ “ನಗರಗಳನ್ನು ಯಾರು ರೂಪಿಸಿದರು ಮತ್ತು ನಗರಗಳನ್ನು ಯಾರಿಗಾಗಿ ರೂಪಿಸಲಾಯಿತು?” ಎಂಬ ವಿಷಯದ ಕುರಿತಾದ ಚರ್ಚೆ.
ಇದರಲ್ಲಿ ಬೆಂಗಳೂರಿನ ಐತಿಹಾಸಿಕ ಅಭಿವೃದ್ಧಿಯನ್ನು ಹಾಗೂ ನಿರ್ಧಾರ ಕೈಗೊಳ್ಳುವಲ್ಲಿ ದುರ್ಬಲ ವರ್ಗಗಳ ಪ್ರಾಮುಖ್ಯತೆಯ ಕುರಿತು ಚರ್ಚೆ ನಡೆಯಿತು.
ಅಲ್ಲಿ ಸೇರೋಣ ಪ್ರತಿನಿಧಿ ಕನ್ಷಿಕ್ ಕಬಿರಾಜ್, “ಉತ್ತಮ ನಗರ ಸಾರಿಗೆ ವ್ಯವಸ್ಥೆಗಳು ಹೊಗೆ ಹೊರಸೂಸುವಿಕೆ ಕಡಿಮೆ ಮಾಡುವ ದೃಷ್ಟಿಕೋನದಿಂದ ಮಾತ್ರವೇ ಅಲ್ಲದೆ ಅವು ನಿವಾಸಿಗಳ ಜೀವನದ ಉತ್ತಮ ಗುಣಮಟ್ಟ ದೃಢೀಕರಿಸುವಲ್ಲಿಯೂ ಮುಖ್ಯವಾಗಿವೆ. ಈ ಸಭೆಯ ಮೂಲಕ ನಾವು ಎಲ್ಲ ಕ್ಷೇತ್ರಗಳ ಪ್ರಮುಖರನ್ನು ನೈಜವಾದ ಹೊಸ ವಲಯಗಳ ಸಹಯೋಗ ತರಲು ಮತ್ತು ಎಲ್ಲರಿಗೂ ಜೀವಿಸಬಲ್ಲ ನಗರ ಸೃಷ್ಟಿಸುವಲ್ಲಿ ಚರ್ಚಿಸಲು, ಹಂಚಿಕೊಳ್ಳಲು ಮತ್ತು ಆಲೋಚನೆ ರೂಪಿಸಲು ಒಟ್ಟಿಗೆ ತರುವುದು ನಮ್ಮ ಗುರಿಯಾಗಿದೆ” ಎಂದರು.
“ಶ್ರೇಷ್ಠ ನಗರವು ಜನರು, ಅವಕಾಶಗಳು ಮತ್ತು ಈ ಎರಡರ ನಡುವಿನ ಸ್ಥಳ ಈ ಮೂರು ಅಂಶಗಳಿಂದ
ರೂಪುಗೊಂಡಿರುತ್ತದೆ. ಬೆಂಗಳೂರು ಜನರು ಮತ್ತು ಅವಕಾಶಗಳ ನಡುವಿನ ಅಂತರವನ್ನು ಹೆಚ್ಚು ಪರಿಣಾಮಕಾರಿಯಾಗಿ ತುಂಬ ಬೇಕಾಗಿದೆ. ಅದಕ್ಕೆ ತಕ್ಕಷ್ಟು ಬಂಡವಾಳ, ಆವಿಷ್ಕಾರಕ ನಗರ ಯೋಜನೆ ಮತ್ತು ಸಾರ್ವಜನಿಕ ಸಾರಿಗೆಯ ಉನ್ನತೀಕರಣ ಅಗತ್ಯವಾಗಿದೆ. ಈ ಕ್ರಮಗಳಿಗೆ ಆದ್ಯತೆ ನೀಡುವ ಮೂಲಕ ನಗರವು ಹೆಚ್ಚು ನ್ಯಾಯಯುತ, ಎಲ್ಲರನ್ನೂ ಒಳಗೊಳ್ಳುವ ನಗರ ಪ್ರದೇಶವಾಗಲಿದ್ದು ವಾಹನಗಳಿಂದ ಸಾರ್ವಜನಿಕ ಸ್ಥಳಗಳನ್ನು ಮರು ಪಡೆಯಬಹುದು ಮತ್ತು ಅದರ ನಿವಾಸಿಗಳ ಒಟ್ಟಾರೆ ಜೀವನದ ಗುಣಮಟ್ಟ ಸುಧಾರಿಸಬಹುದು” ಎಂದು ಬೆಂಗಾವಾಕ್ ನ ಲೀಡ್ ಡಿಸೈನರ್ ಪ್ರವರ್ ಚೌಧರಿ ಹೇಳಿದರು.