ಗುರುಗ್ರಾಮ: ಟಾಟಾ ಮೋಟಾರ್ಸ್ನ ಅಂಗಸಂಸ್ಥೆ ಮತ್ತು ಭಾರತದ ಇವಿ ಕ್ರಾಂತಿಯ ಪ್ರವರ್ತಕನಾದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ (ಟಿಪಿಇಎಂ), ಇಂದು ಗುರುಗ್ರಾಮದ ಸೆಕ್ಟರ್ 14 ಮತ್ತು ಸೋಹ್ನಾ ರಸ್ತೆಯಲ್ಲಿರುವ ಪ್ರಮುಖ ಆಟೋ ಹಬ್ಗಳಲ್ಲಿ ಇವಿ ಗ್ರಾಹಕರಿಗೆ ಸೇವೆಯನ್ನು ಒದಗಿಸಲು ತನ್ನ ಟಾಟಾ.ಇವಿ ಮಳಿಗೆಗಳನ್ನು ಪ್ರಾರಂಭಿಸಿದೆ. ಈ ಮಳಿಗೆಗಳು ಜನವರಿ 07, 2024 ರಿಂದ ಸಾರ್ವಜನಿಕರಿಗೆ ತೆರೆದಿರುತ್ತವೆ.
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಬೆಳವಣಿಗೆಯ ಪಥದಲ್ಲಿ ಸಾಗುತ್ತಿರುವುದರಿಂದ, ಇವಿ ಮಾಲೀಕರು ಸುಧಾರಿತ ತಂತ್ರಜ್ಞಾನ, ಸುಸ್ಥಿರ ಅಭ್ಯಾಸಗಳು ಮತ್ತು ವೈಯಕ್ತಿಕಗೊಳಿಸಿದ ಸೇವೆಗಳ ತಡೆರಹಿತ ಮಿಶ್ರಣವನ್ನು ಪಡೆಯಬಹುದಾದ್ದರಿಂದ ಗ್ರಾಹಕರ ಸಂಖ್ಯೆಯು ವೇಗವಾಗಿ ಜಾಸ್ತಿಯಾಗುತ್ತಿದೆ. ಈ ವಿಕಾಸಗೊಳ್ಳುತ್ತಿರುವ ಟ್ರೆಂಡ್ ಗಳಿಗೆ ಅನುಗುಣವಾಗಿ, ಟಿಪಿಇಎಂ ಮಾರಾಟ ಮತ್ತು ಸೇವಾ ಅನುಭವದ ಮೊದಲ ಭೌತಿಕ ಅಭಿವ್ಯಕ್ತಿಯಾಗಿ ತನ್ನ ಹೊಸ ಬ್ರ್ಯಾಂಡ್ ಗುರುತಾದ ಟಾಟಾ.ಇವಿ ಅನ್ನು ಆರಂಭಿಸಿದೆ. ಸಾಂಪ್ರದಾಯಿಕ 4-ವೀಲರ್ ಶೋರೂಮ್ಗಳಿಗಿಂತ ವಿಭಿನ್ನವಾಗಿ ರೂಪಾಂತರಿಸಿದ, ಟಾಟಾ.ಇವಿ ಮಳಿಗೆಗಳನ್ನು ತನ್ನ ಪ್ರಮುಖ ಮೌಲ್ಯಗಳಾದ ಸುಸ್ಥಿರತೆ, ಸಮುದಾಯ ಮತ್ತು ತಂತ್ರಜ್ಞಾನದ ಆಧಾರದಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಶೋರೂಮ್ಗಳು ‘ಮೂವ್ ವಿತ್ ಮೀನಿಂಗ್’ನ ಮೂಲ ಫಿಲಾಸಫಿಗೆ ಪೂರಕವಾಗಿವೆ ಮತ್ತು ಇವಿ ಸಮುದಾಯಕ್ಕೆ ತಲ್ಲೀನಗೊಳಿಸುವ ಸ್ಥಳಕ್ಕೆ ಆಹ್ವಾನ ನೀಡುತ್ತವೆ.
ನೂತನ ಶೋರೂಂಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಎಂಡಿ ಶೈಲೇಶ್ ಚಂದ್ರ, “1 ಲಕ್ಷಕ್ಕೂ ಹೆಚ್ಚು ಟಾಟಾ ಇವಿ ಗ್ರಾಹಕರಿಂದ ಸಂಗ್ರಹಿಸಲಾದ ಅಭಿಪ್ರಾಯಗಳಿಂದ ಇವಿ ಗ್ರಾಹಕರು ವಿಭಿನ್ನ ರೀತಿಯ ಗ್ರಾಹಕ ಅನುಭವವನ್ನು ಬಯಸುತ್ತಾರೆ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಜಗತ್ತು ಹೇಗೆ ವಿಕಸನಗೊಳ್ಳುತ್ತಿದೆ ಎಂಬುದರ ಕುರಿತು ಅವರು ಸೂಕ್ಷ್ಮವಾಗಿರುತ್ತಾರೆ, ಚಾಲನಾ ವೆಚ್ಚದ ಬಗ್ಗೆ ಬಹಳ ಜಾಗೃತರಾಗಿರುತ್ತಾರೆ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಬಯಸುತ್ತಾರೆ. ಇದು ಹೊಸ ಬ್ರ್ಯಾಂಡ್ ಅಸ್ಮಿತೆಯ ಮೌಲ್ಯಗಳಾದ ಸುಸ್ಥಿರತೆ, ಸಮುದಾಯ ಮತ್ತು ತಂತ್ರಜ್ಞಾನಕ್ಕೆ ಅನುಗುಣವಾಗಿದೆ. ಈ ಹೊಸ ಫ್ಲ್ಯಾಗ್ಶಿಪ್ ಶೋರೂಮ್ಗಳು, ಈ ಬ್ರ್ಯಾಂಡ್ ಫಿಲಾಸಫಿಯ ಮೊದಲ ಭೌತಿಕ ಅಭಿವ್ಯಕ್ತಿಗಳಾಗಿವೆ ಮತ್ತು ಅದಕ್ಕೆ ಅನುಗುಣವಾಗಿ ನಾವು ಗ್ರಾಹಕರ ಪ್ರಯಾಣವನ್ನು ರೂಪಿಸುತ್ತೇವೆ. ನಾವು ನಮ್ಮ ಗ್ರಾಹಕರನ್ನು ಸಶಕ್ತಗೊಳಿಸಲು ಬಯಸುತ್ತೇವೆ. ಆದ್ದರಿಂದ ಗ್ರಾಹಕರ ಕೂಟಗಳು/ಸೇವೆಗಳು, ಸುಸ್ಥಿರತೆ-ಕೇಂದ್ರಿತ ಕಾರ್ಯಾಗಾರಗಳು ಮತ್ತು ಗ್ರಾಹಕರಿಗಾಗಿ ಈವೆಂಟ್ಗಳು ಆಯೋಜಿಸಲು ಅನುಕೂಲವಾಗುವಂತೆ ಸಾಮರಸ್ಯದ ಸಮುದಾಯದ ಸ್ಥಳವಾಗಿ ರೂಪಿಸುವ ಯೋಜನೆಗಳನ್ನು ನಾವು ಹೊಂದಿದ್ದೇವೆ. ಈ ಶೋರೂಮ್ಗಳು ಕೇವಲ ಇವಿಗಳನ್ನು ರಿಟೇಲ್ ಮಾರಾಟ ಮಾಡುವುದಲ್ಲದೆ, ಅವು ಗುರುಗ್ರಾಮ್ನಲ್ಲಿನ ಟಾಟಾ.ಇವಿ ಸಮುದಾಯ ಕೇಂದ್ರಗಳಾಗಿವೆ. ಈ ಎರಡು ಶೋರೂಮ್ಗಳಿಂದ ಪ್ರಾರಂಭ ಮಾಡುವುದರ ಮೂಲಕ ಮತ್ತು ಮುಂದಿನ 12-18 ತಿಂಗಳುಗಳಲ್ಲಿ ನಾವು ತರಲು ಯೋಜಿಸಿರುವ ಹಲವು ಪ್ರದರ್ಶನಗಳ ಜೊತೆಗೆ, ಇ-ಮೊಬಿಲಿಟಿಯ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಆಟೋಮೋಟಿವ್ ಉದ್ಯಮದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ನಾವು ಉದ್ದೇಶಿಸಿದ್ದೇವೆ” ಎಂದು ಹೇಳಿದರು.
ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿ.ನ ಮಾರ್ಕೆಟಿಂಗ್, ಸೇಲ್ಸ್ ಆಂಡ್ ಸರ್ವೀಸ್ ಸ್ಟ್ರಾಟೆಜಿ, ಹೆಡ್ ವಿವೇಕ್ ಶ್ರೀವತ್ಸ, “ಮಳಿಗೆಗಳಲ್ಲಿನ ಅನುಭವದ ಪ್ರತಿಯೊಂದು ಅಂಶವನ್ನು ಟಾಟಾ.ಇವಿ ಸ್ಟೋರ್ಗಳಲ್ಲಿ ಮರುರೂಪಿಸಲಾಗಿದೆ. ಡಿಜಿಟಲ್, ಭೌತಿಕ ಮತ್ತು ಮಾನವ ಅಂಶಗಳು ಸಾಮರಸ್ಯಗೊಂಡು ಪ್ರತೀ ಹಂತದಲ್ಲೂ ನಮ್ಮ ಸಮುದಾಯವನ್ನು ಮೆಚ್ಚಿಕೊಳ್ಳುವ ಜೊತೆಗೆ ಒಂದು ಅನನ್ಯವಾದ ಸ್ಮರಣೀಯವಾದ ಕಾರು-ಖರೀದಿಯ ಅನುಭವವನ್ನು ನೀಡುತ್ತವೆ. ಇವಿ ಖರೀದಿದಾರರ ವಿಭಿನ್ನ ನಿರೀಕ್ಷೆಗಳನ್ನು ಗುರುತಿಸಿ, ಗ್ರಾಹಕ ಸ್ನೇಹಿ ವಾತಾವರಣದಲ್ಲಿ ಮಾಹಿತಿ, ಸಲಹೆ ಮತ್ತು ಮಾರ್ಗದರ್ಶನವನ್ನು ನೀಡುವಂತೆ ಅಂಗಡಿಯನ್ನು ವಿನ್ಯಾಸಗೊಳಿಸಲಾಗಿದೆ. ಅನುಭವವನ್ನು ಉನ್ನತೀಕರಿಸಲು ನಾವು ತಂತ್ರಜ್ಞಾನದ ಶಕ್ತಿಯನ್ನು ಬಳಸುತ್ತಿರುವಾಗಲೂ, ಮಾನವ ಸ್ಪರ್ಶವು ಯಾವಾಗಲೂ ಪ್ರಮುಖವಾಗಿರುತ್ತದೆ. ಹೊಸ ರಿಟೇಲ್ ಹುದ್ದೆಗಳಿಂದ ಹಿಡಿದು ನಮ್ಮ ಬ್ರ್ಯಾಂಡ್ನಲ್ಲಿ ಆಳವಾಗಿ ತೊಡಗಿಕೊಂಡಿರುವ ಶ್ರದ್ಧಾವಂತ ವ್ಯಕ್ತಿಗಳವರೆಗೆ, ನಮ್ಮ ಎಲೆಕ್ಟ್ರಿಕ್ ಮನೆ ಬೆಚ್ಚಗಿನ ಮತ್ತು ಸ್ವಾಗತಾರ್ಹ, ಸ್ನೇಹಪರ ಮತ್ತು ವಿನೋದ ಸ್ವಭಾವ ಹೊಂದಿರುವಂತೆ ಸಿದ್ಧಗೊಳಿಸಲಾಗಿದೆ” ಎಂದು ಹೇಳಿದರು.
ಶೋರೂಮ್ ತನ್ನ ವಿನ್ಯಾಸದಿಂದ ಹಿಡಿದು ಅಂತಿಮ ನಿರ್ಮಾಣದವರೆಗೆ ಮತ್ತು ದಿನನಿತ್ಯದ ಕಾರ್ಯಾಚರಣೆಗಳವರೆಗೆ ಸುಸ್ಥಿರತೆ ಕುರಿತಾದ ತಮ್ಮ ಬಲವಾದ ಬದ್ಧತೆಯನ್ನು ಸಾರುತ್ತದೆ. ಈ ಮಳಿಗೆಗಳು ಕಂಪನಿಯ ಸುಸ್ಥಿರತೆ ಕಡೆಗಿನ ಅಚಲವಾದ ಬದ್ಧತೆಯ ಸ್ಪಷ್ಟವಾದ ಅಭಿವ್ಯಕ್ತಿಯಾಗಿದೆ. ಇಲ್ಲಿ ಬಳಸಿದ ಎಲ್ಲಾ ಪ್ರಮುಖ ವಸ್ತುಗಳು ಮರುಬಳಕೆ ಮಾಡಿದಂತಹವು ಅಥವಾ ಮರುಬಳಕೆ ಮಾಡಬಹುದಾದವು, ಅವುಗಳಲ್ಲಿ ಎಲ್ಲಕ್ಕೂ ಗ್ಲೋಬಲ್ ಗ್ರೀನ್ ಸರ್ಟಿಫೈಯರ್ ಗಳು ಸುಸ್ಥಿರತೆಯ ಪ್ರಮಾಣೀಕರಣ ನೀಡಿದ್ದಾರೆ. ಶೋರೂಂ ಅನ್ನು ನಿರ್ಮಿಸುವಾಗ ಸ್ಥಳೀಯವಾಗಿ ದೊರೆತ ಮೂಲದ ವಸ್ತುಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ, ಆ ಮೂಲಕ ಹೆಚ್ಚಿನ-ಎಮಿಷನ್ ಒಳಗೊಂಡ ಸಾರಿಗೆಯ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆಗೊಳಿಸಲಾಗಿದೆ.
ಈ ಶೋರೂಮ್ನ ಎರಡನೇ ಕೇಂದ್ರಬಿಂದು ಸಮುದಾಯ. ಏಕೆಂದರೆ ಈ ಸ್ಥಳವನ್ನು ಸಂದರ್ಶಕರನ್ನು ಟಾಟಾ ಇವಿ ಖರೀದಿಸಲು ಆಹ್ವಾನಿಸುವುದಕ್ಕೆ ಮಾತ್ರ ರಚಿಸಲಾಗಿಲ್ಲ, ಜೊತೆಗೆ ಬ್ಲೂ ಟೋಕೈಯಿಂದ ಕಾಫಿಯನ್ನು ನೀಡುವುದು, ಸಹ ಇವಿ ಅಳವಡಿಕೆದಾರರೊಂದಿಗೆ ಭೇಟಿ ಮಾಡುವುದು ಮತ್ತು ಸಮುದಾಯ ಕ್ಯಾಲೆಂಡರ್ನಲ್ಲಿ ಪಟ್ಟಿ ಮಾಡಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಎಲ್ಲವೂ ಸೇರಿಕೊಂಡಿದೆ. ಖರೀದಿಯನ್ನು ಮೀರಿ ಅರ್ಥಪೂರ್ಣ ಸಂವಹನಕ್ಕಾಗಿ ಈ ಮಳಿಗೆಯನ್ನು ಹಬ್ ಅನ್ನಾಗಿ ಪರಿವರ್ತಿಸಲಾಗಿದೆ.
ಈ ವಿನ್ಯಾಸ ಕೇಂದ್ರದ ಮೂರನೇ ಸ್ಥಂಭ ತಂತ್ರಜ್ಞಾನ. ಡಿಜಿಟಲ್ ಅಂಶಗಳನ್ನು ಚಿಂತನಶೀಲವಾಗಿ ಸಂಯೋಜಿಸಲಾಗಿರುವ ಮಳಿಗೆಯು ತನ್ನ ಸಂದರ್ಶಕರನ್ನು ಪ್ರೋತ್ಸಾಹಿಸುವ ಮತ್ತು ಅವರಿಗೆ ಭಾರವಾಗಿಸದಿರುವ ಗುರಿಯನ್ನು ಹೊಂದಿದೆ. ಕೇಂದ್ರದ ಸ್ಕ್ರೀನ್ ಗಳು ಈಗಾಗಲೇ ಇವಿ ವಾಹನ ಖರೀದಿಸಿರುವ ಮಾಲೀಕರ ಪ್ರಶಂಸಾಪತ್ರಗಳನ್ನು ಒದಗಿಸುತ್ತದೆ, ಇವಿಗಳ ಕುರಿತ ಕಾಳಜಿಗಳು ಮತ್ತು ಇತಿಹಾಸಗಳನ್ನು ತಿಳಿಸುತ್ತದೆ, ಗ್ರಾಹಕರು ತಮ್ಮ ಟಾಟಾ ಇವಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಉತ್ಸುಕರನ್ನಾಗಿ ಮಾಡುವ ಕಸ್ಟಮೈಸೇಷನ್ ಆಯ್ಕೆಗಳು ಮತ್ತು ಅವರ ಇವಿಗಳ ಡೆಲಿವರಿ ಅನು ಸ್ವೀಕರಿಸಲು ಬರುವ ಕುಟುಂಬಗಳಿಗೆ ವೈಯಕ್ತೀಕರಿಸಿದ ಸ್ವಾಗತಗಳನ್ನು ಒದಗಿಸುತ್ತದೆ.
4-ವೀಲರ್ ಇವಿ ವಿಭಾಗದಲ್ಲಿ ಶೇ.71ಕ್ಕಿಂತ ಹೆಚ್ಚಿನ ಮಾರುಕಟ್ಟೆ ಪಾಲನ್ನು ಹೊಂದಿರುವ ಟಿಪಿಇಎಂ ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ನವೀನ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ತನ್ನ ಪ್ರವರ್ತಕ ಮನೋಭಾವವನ್ನು ಸ್ಥಿರವಾಗಿ ಪ್ರದರ್ಶಿಸಿದೆ. ಮೊಬಿಲಿಟಿಯ ಭವಿಷ್ಯವನ್ನು ಸಕ್ರಿಯವಾಗಿ ರೂಪಿಸುವ ಜವಾಬ್ದಾರಿಯನ್ನು ಹೊಂದಿರುವ ಕಂಪನಿಯು ಇತ್ತೀಚೆಗೆ 1 ಲಕ್ಷ ಟಾಟಾ ಇವಿಗಳನ್ನು ಮಾರಾಟ ಮಾಡುವ ಮೈಲಿಗಲ್ಲನ್ನು ದಾಟಿದೆ. ತಡೆರಹಿತ ಸಂಪರ್ಕ, ಅತ್ಯಾಧುನಿಕ ವಿನ್ಯಾಸ, ಅಸಾಧಾರಣ ಕಾರ್ಯಕ್ಷಮತೆ ಮತ್ತು ತನ್ನ ಎಲೆಕ್ಟ್ರಿಕ್ ವಾಹನ ಶ್ರೇಣಿಯಾದ್ಯಂತ ರಾಜಿಯಾಗದ ಸುರಕ್ಷತೆಯ ಮೇಲೆ ಕೇಂದ್ರೀಕರಿಸುವ ಮೂಲಕ ಇವಿ ವಿಭಾಗದಲ್ಲಿ ಹೊಸ ಮಾನದಂಡಗಳನ್ನು ರೂಪಿಸುವ ಗುರಿಯನ್ನು ಕಂಪನಿಯು ಹೊಂದಿದೆ. ಸಮುದಾಯ, ಸುಸ್ಥಿರತೆ ಮತ್ತು ತಂತ್ರಜ್ಞಾನದ ಮೇಲೆ ಗಮನ ಕೇಂದ್ರೀಕರಿಸಿರುವ ಟಿಪಿಇಎಂ ಸಾರಿಗೆ ಭವಿಷ್ಯವನ್ನು ಮರುವ್ಯಾಖ್ಯಾನಿಸುತ್ತಿದೆ.