ಬೆಂಗಳೂರು: ಭಾರತದಲ್ಲಿ ಎಲೆಕ್ಟ್ರಿಕ್ ವಾಹನದ ಪ್ರವರ್ತಕರಾದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (ಟಿಪಿಇಎಂ), ಇಂದು ಪ್ರಮುಖ ಚಾರ್ಜ್ ಪಾಯಿಂಟ್ ಆಪರೇಟರ್ಗಳಾದ (ಸಿಪಿಓಗಳು), ಚಾರ್ಜ್ಜೋನ್, ಗ್ಲಿಡಾ, ಸ್ಟಾಟಿಕ್ ಮತ್ತು ಜಿಯಾನ್ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಭಾರತದಲ್ಲಿ ಚಾರ್ಜಿಂಗ್ ಮೂಲಸೌಕರ್ಯವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು, ಚಾರ್ಜಿಂಗ್ ಪರಿಸರ ವ್ಯವಸ್ಥೆಯಲ್ಲಿ ಪ್ರತಿ ಆಪರೇಟರ್ ಉಪಸ್ಥಿತಿ ಮತ್ತು ಟಿಪಿಇಎಂನ ಟೆಲಿಮ್ಯಾಟಿಕ್ಸ್ ಒಳನೋಟಗಳನ್ನು ಆಧರಿಸಿ ಈ ಒಪ್ಪಂದವು ಭಾರತದಲ್ಲಿ 1.15 ಲಕ್ಷಕ್ಕೂ ಹೆಚ್ಚು ಟಾಟಾ ಇವಿಗಳನ್ನು ಉತ್ಪಾದನೆ ಮಾಡುತ್ತದೆ. ತನ್ನ ಎಲೆಕ್ಟ್ರಿಕ್ ವಾಹನಗಳ ಮಾಲಿಕರು ಹೆಚ್ಚು ಭೇಟಿ ನೀಡುವ ಸ್ಥಳಗಳಲ್ಲಿ ಚಾರ್ಜರ್ಗಳನ್ನು ಸ್ಥಾಪಿಸಲು ಟಿಪಿಇಎಂ ನಾಲ್ಕು ಸಿಪಿಓಗಳಿಗೆ ಸಕ್ರಿಯವಾಗಿ ಸಹಾಯ ಮಾಡುತ್ತದೆ.
ಚಾರ್ಜ್ ಝೋನ್, ಗ್ಲಿಡಾ, (ಹಿಂದೆ ಫಾರ್ಟಮ್ ಚಾರ್ಜ್ & ಡ್ರೈವ್ ಇಂಡಿಯಾ ಎಂದು ಕರೆಯಲಾಗುತ್ತಿತ್ತು), ಸ್ಪಾಟಿಕ್ ಮತ್ತು ಜಿಯಾನ್ ದೇಶದ ಪ್ರಮುಖ ಸಿಪಿಓಗಳಾಗಿದ್ದು, ಇವು ಪ್ರಮುಖ ನಗರಗಳಲ್ಲಿ ಸಂಯೋಜಿತ ನೆಟ್ವರ್ಕ್ನೊಂದಿಗೆ ಸುಮಾರು 2 ಸಾವಿರಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್ಗಳನ್ನು ಒಳಗೊಂಡಿವೆ. ಈ ಸಿಪಿಓಗಳು ಈಗಾಗಲೇ ನಿರ್ಮಿಸಿರುವ ದೃಢವಾದ ಚಾರ್ಜಿಂಗ್ ವ್ಯವಸ್ಥೆಯು ಭಾರತದ ಸುಸ್ಥಿರತೆಗೆ ಬೆನ್ನೆಲುಬನ್ನು ರೂಪಿಸುತ್ತಿದೆ. ಈ ಹೊಸ ಸಹಯೋಗದ ಮೂಲಕ, ಮುಂದಿನ 12-15 ತಿಂಗಳೊಳಗೆ 10,000 ಹೆಚ್ಚುವರಿ ಚಾರ್ಜಿಂಗ್ ಪಾಯಿಂಟ್ಗಳನ್ನು ಹೊರತರಲು ಈ ಸಿಪಿಓಗಳು ಉದ್ದೇಶಿಸಿವೆ.
ಸ್ಮಾರ್ಟ್ ಪಾವತಿ ಗೇಟ್ವೇ ಅನ್ನು ರೋಲ್-ಔಟ್ ಮಾಡುವ ಸಾಧ್ಯತೆಯನ್ನು ಅನ್ವೇಷಿಸಲು ಟಿಪಿಇಎಂ ತನ್ನ ಸಹ ಬ್ರಾಂಡ್ ಆದಂತಹ ಆರ್ ಎಫ್ ಐ ಡಿ ಕಾರ್ಡ್ಗಳ ಮೂಲಕ ಕ್ರಮವಾಗಿ ಚಾರ್ಜ್ ಝೋನ್, ಗ್ಲಿಡಾ, ಸ್ಪಾಟಿಕ್ ಮತ್ತು ಜಿಯಾನ್ ನೊಂದಿಗೆ ಈ ಒಪ್ಪಂದದ ಮೂಲಕ ಕೆಲಸ ಮಾಡಲಿದ್ದು, ಇದು ಟಾಟಾ ಇವಿ ಬಳಕೆದಾರರಿಗೆ ಪಾವತಿಯನ್ನು ಸುಲಭಗೊಳಿಸುತ್ತದೆ. ಇದಲ್ಲದೆ, ಗ್ರಾಹಕರು ಈ ಸಂಬಂಧಿತ ಸಿಪಿಓಗಳಿಂದ ಲಾಯಲ್ಟಿ ಕಾರ್ಯಕ್ರಮಗಳ ಪ್ರಯೋಜನಗಳನ್ನು ಪಡೆಯಬಹುದು ಮತ್ತು ಯಾವುದೇ ಸಹಾಯಕ್ಕಾಗಿ ಮೀಸಲಾದ ಗ್ರಾಹಕ ಸಹಾಯ ಸಂಖ್ಯೆಗೆ ಕರೆ ಮಾಡಬಹುದು ಎಂಬುದನ್ನು ಈ ಒಪ್ಪಂದ ತಿಳಿಸುತ್ತದೆ.
ಎಂಓಯು ಸಹಿ ಕಾರ್ಯಕ್ರಮದಲ್ಲಿ ಮಾತನಾಡಿದ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ಮುಖ್ಯ ಕಾರ್ಯತಂತ್ರ ಅಧಿಕಾರಿ ಬಾಲಾಜೆ ರಾಜನ್, ‘ನಗರ ಪ್ರದೇಶದಲ್ಲಿ ಮಾಲಿನ್ಯವನ್ನು ಪರಿಹರಿಸಲು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇವಿ ಅಳವಡಿಕೆಯನ್ನು ವೇಗವಾಗಿ ನಿರ್ವಹಿಸಲು ಅಗತ್ಯವಿರುವ ಮತ್ತು ಅನುಕೂಲಕರವಾದ ಮೂಲ ಸೌಕರ್ಯವೆಂದರೆ ಅದು ಚಾರ್ಜಿಂಗ್ ಆಗಿದೆ. ರಾಷ್ಟ್ರವ್ಯಾಪಿ ಚಾರ್ಜಿಂಗ್ ಪರಿಸರ ವ್ಯವಸ್ಥೆ ಅಳವಡಿಸುವುದನ್ನು ವೇಗಗೊಳಿಸುವುದು ಇಂದಿನ ತುರ್ತು ಆಗಿದೆ. ಇ-ಮೊಬಿಲಿಟಿಯತ್ತ ಭಾರತದ ಪ್ರಯಾಣವನ್ನು ವೇಗಗೊಳಿಸಲು ಚಾರ್ಜ್ಜೋನ್, ಗ್ಲಿಡಾ, ಸ್ಟಾಟಿಕ್ ಮತ್ತು ಜಿಯಾನ್ ಜೊತೆಗಿನ ನಮ್ಮ ಕಾರ್ಯತಂತ್ರದ ಸಹಯೋಗವನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಈ ಸಹಯೋಗವು ಟಿಪಿಇಎಂನ ಸಾಟಿಯಿಲ್ಲದ ಇವಿ ಬಳಕೆಯ ಒಳನೋಟಗಳ ಪ್ರಯೋಜನವನ್ನು ಪಡೆದುಕೊಳ್ಳುವುದರ ಜೊತೆಗೆ ಸಿಪಿಓಗಳ ನವೀನ ಚಾರ್ಜಿಂಗ್ ಪರಿಹಾರಗಳು ಮತ್ತು ಉದ್ಯಮಶೀಲತೆಯನ್ನು ಹೆಚ್ಚಿಸುತ್ತದೆ. ಇದರೊಂದಿಗೆ 2025ರ ಆರ್ಥಿಕ ವರ್ಷದ ವೇಳೆಗೆ ದೇಶದಲ್ಲಿ 10,000+ ಹೆಚ್ಚುವರಿ ಚಾರ್ಜಿಂಗ್ ಪಾಯಿಂಟ್ಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದರು.
ಸುಲಭವಾಗಿ ದೊರೆಯುವ ಚಾರ್ಜಿಂಗ್ ಮೂಲಸೌಕರ್ಯ ಪರಿಸರ ವ್ಯವಸ್ಥೆಯು ಎಷ್ಟು ನಿರ್ಣಾಯಕ ಎಂಬುದನ್ನು ಜಾಗತಿ ಅಧ್ಯಯನ ವರದಿಗಳು ಸತತವಾಗಿ ತಿಳಿಸುತ್ತಿವೆ. ಅಲ್ಲದೇ ಚಾರ್ಜಿಂಗ್ ಮೂಲಸೌಕರ್ಯಗಳ ವಿಸ್ತರಣೆಯು ಇವಿಗಳನ್ನು ಅಳವಡಿಕೆಯಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂಬುದನ್ನು ಇವು ತೋರಿಸಿವೆ. ಪ್ರಮುಖ ಸಿಪಿಓಗಳು ಮತ್ತು ಟಿಪಿಇಎಂ ನಡುವಿನ ಈ ನವೀನ ಮುಕ್ತ ಸಹಯೋಗದಿಂದಾಗಿ ದೇಶದಲ್ಲಿ ಚಾರ್ಜಿಂಗ್ ಮೂಲಸೌಕರ್ಯಗಳ ಅಭಿವೃದ್ಧಿ ವೇಗಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಇವಿ ಅಳವಡಿಕೆಯನ್ನು ಮತ್ತಷ್ಟು ವ್ಯಾಪಕವಾಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಚಾರ್ಜಿಂಗ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಟಿಪಿಇಎಂ, ಟಾಟಾ ಪವರ್ನೊಂದಿಗೆ ನಿಕಟ ಸಹಭಾಗಿತ್ವವನ್ನು ಆರಂಭದಿಂದಲೂ ನಿರ್ವಹಿಸುತ್ತಿದೆ, ಇದರ ಪರಿಣಾಮವಾಗಿ ದೇಶಾದ್ಯಂತ 4,900 ಸಾರ್ವಜನಿಕ ಚಾರ್ಜರ್ಗಳು ಈಗಾಗಲೇ ಲಭ್ಯವಿವೆ. ಇದಲ್ಲದೆ, ಈ ಎರಡು ಕಂಪನಿಗಳು ಆರ್ ಎಫ್ ಐ ಡಿ ಕಾರ್ಡ್ ಆದಂತಹ ಇಝಡ್ ಚಾರ್ಜ್ ಕಾರ್ಡನ್ನು ಸಹ ಪ್ರಾರಂಭಿಸಿವೆ. ಇದು ಟ್ಯಾಪ್ ಮೂಲಕ ಚಾರ್ಜ್ ಮಾಡುವುದನ್ನು ಆರಂಭಿಸಲು ಗ್ರಾಹಕರಿಗೆ ಅವಕಾಶ ಮಾಡಿಕೊಡುತ್ತದೆ. ಇದರ ಜೊತೆಗೆ, ಬಿಪಿಸಿಎಲ್ ನೊಂದಿಗೆ ಕಾರ್ಯತಂತ್ರದ ಮೈತ್ರಿಯು ಮುಂದಿನ ವರ್ಷದಲ್ಲಿ 7,000 ಚಾರ್ಜರ್ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.
ಸಿಪಿಓಗಳ ಅಭಿಪ್ರಾಯಗಳು
ಈ ಒಪ್ಪಂದದ ಕುರಿತಾಗಿ ಪ್ರತಿಕ್ರಿಯಿಸಿದ ಚಾರ್ಜ್ ಝೋನ್ನ ಸಂಸ್ಥಾಪಕ ಮತ್ತು ಸಿಇಒ ಕಾರ್ತಿಕೇಯ್ ಹರಿಯಾನಿ, ‘ವಿದ್ಯುತ್ ಚಲನಶೀಲತೆಯ ಉನ್ನತ ಬೆಳವಣಿಗೆಯ ಹಂತಕ್ಕೆ ನಮ್ಮ ಉದ್ಯಮವು ಸಾಕ್ಷಿಯಾಗಿದೆ. ನಾವು ಕಾರ್ಯತಂತ್ರದ ಸಹಭಾಗಿತ್ವಕ್ಕಾಗಿ ಆಟೋಮೋಟಿವ್ OEM ಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ಅಲ್ಲದೇ ಹೆಚ್ಚಿನ ವೇಗದಲ್ಲಿ ಚಾರ್ಜಿಂಗ್ ಮೂಲಸೌಕರ್ಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಟಾಟಾ ಮೋಟಾರ್ಸ್ನೊಂದಿಗಿನ ನಮ್ಮ ಈ ಸಹಭಾಗಿತ್ವವು ಈಗ ನೆಕ್ಸಾನ್ ಇವಿ, ಟಿಗೋರ್ ಇವಿ, ಟಿಯಾಗೋ ಇವಿ ಮತ್ತು ಮುಂಬರುವ ಮಾದರಿಗಳು ಸೇರಿದಂತೆ ವಿವಿಧ ಶ್ರೇಣಿಯ ಎಲೆಕ್ಟ್ರಿಕ್ ಕಾರುಗಳ ಮೂಲಕ ಇವಿ ಬಳಕೆದಾರರಿಗೆ ತಡೆರಹಿತ ಅನುಭವನನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ’ ಎಂದು ಹೇಳಿದರು.
ಒಪ್ಪಂದದ ಕುರಿತು ಪ್ರತಿಕ್ರಿಯಿಸಿದ ಗ್ಲಿಡಾದ ಕಾರ್ಯನಿರ್ವಾಹಕ ನಿರ್ದೇಶಕ ಅವಧೇಶ್ ಕುಮಾರ್ ಝಾ, ‘ಭಾರತದಲ್ಲಿ ವೇಗವಾಗಿ ಇವಿ ಅಳವಡಿಕೆಯನ್ನು ಸಕ್ರಿಯಗೊಳಿಸುತ್ತಿರುವ ಹೊತ್ತಿನಲ್ಲಿ ಗ್ಲಿಡಾ ಮತ್ತು ಟಿಪಿಇಎಂ ಸಹಭಾಗಿತ್ವವು ಸೂಕ್ತವಾಗಿದೆ. ಸಹಭಾಗಿತ್ವವು ಅನುಕೂಲಕರ ಗ್ರಾಹಕ ಟಚ್ ಪಾಯಿಂಟ್ಗಳಲ್ಲಿ ಚಾರ್ಜಿಂಗ್ ಮೂಲಸೌಕರ್ಯವನ್ನು ಇನ್ನಷ್ಟು ಹೆಚ್ಚಿಸುವ ಅವಕಾಶಗಳನ್ನು ತೆರೆಯುತ್ತದೆ. ಹೆದ್ದಾರಿ ಮತ್ತು ನಗರ ಕೇಂದ್ರಗಳಲ್ಲಿ ಚಾರ್ಜಿಂಗ್ ವ್ಯಾಪ್ತಿಯನ್ನು ಹೆಚ್ಚಿಸುವುದು, ಅನುಕೂಲಕರ ಅನ್ವೇಷಣೆ ಮತ್ತು ಇವಿ ಡ್ಯಾಶ್ಬೋರ್ಡ್ನಲ್ಲಿ ಮೂಲಸೌಕರ್ಯ ವಸ್ತುಗಳನ್ನು ಚಾರ್ಜ್ ಮಾಡುವ ಸ್ಥಿತಿ ಸೇರಿದಂತೆ ಈ ಪಾಲುದಾರಿಕೆ ಗ್ರಾಹಕ ಸ್ನೇಹಿ ಅನುಭವವನ್ನು ಹೆಚ್ಚಿಸುತ್ತದೆ. ಇವಿ ಬಳಕೆದಾರರ ಅವಶ್ಯಕತೆಗಳನ್ನು ಪೂರೈಸಲು ಗ್ಲಿಡಾ ಮತ್ತು ಟಿಪಿಇಎಂ ಎರಡೂ ಒಟ್ಟಾಗಿ ಶ್ರಮಿಸುತ್ತವೆ ಮತ್ತು ಅತ್ಯುನ್ನತ ಮಾನದಂಡಗಳ ಚಾರ್ಜಿಂಗ್ ಸೇವೆಯನ್ನು ಒದಗಿಸುತ್ತವೆ ಎಂದು ನಾವು ಭಾವಿಸುತ್ತೇವೆ’ ಎಂದು ಹೇಳಿದರು.
ಒಪ್ಪಂದದ ಕುರಿತು ಪ್ರತಿಕ್ರಿಯಿಸಿದ ಸ್ಟಾಟಿಕ್ನ ಸಂಸ್ಥಾಪಕ ಮತ್ತು ಸಿಇಒ ಅಕ್ಷಿತ್ ಬನ್ಸಾಲ್, ‘ಗುಣಮಟ್ಟ, ಸುಸ್ಥಿರತೆ ಮತ್ತು ಗ್ರಾಹಕ ತೃಪ್ತಿಗೆ ಸಂಬಂಧಿಸಿದ ಮೌಲ್ಯಗಳನ್ನು ಸ್ಟಾಟಿಕ್ನಲ್ಲಿ ನಾವು ಟಿಪಿಇಎಂ ನೊಂದಿಗೆ ಹಂಚಿಕೊಳ್ಳುತ್ತೇವೆ. ಈ ಪಾಲುದಾರಿಕೆಯು ಕೇವಲ ವ್ಯಾಪಾರದ ಸಂಬಂಧಕ್ಕಿಂತ ಹೆಚ್ಚಿನದನ್ನು ಪ್ರತಿನಿಧಿಸುತ್ತದೆ; ಭವಿಷ್ಯದ ಬಗ್ಗೆ ನಮ್ಮ ಹಂಚಿಕೆಯ ದೃಷ್ಟಿಗೆ ಇದು ಸಾಕ್ಷಿಯಾಗಿದೆ. ಒಟ್ಟಾಗಿ, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪರಿಚಯಿಸುವ ಮೂಲಕ ನಾವು ಇವಿಯನ್ನು ಮರುವ್ಯಾಖ್ಯಾನಿಸುವ ಗುರಿಯನ್ನು ಹೊಂದಿದ್ದೇವೆ ಮತ್ತು ಮುಂಬರುವ ವರ್ಷಗಳಲ್ಲಿ ಉದ್ಯಮವನ್ನು ರೂಪಿಸುವ ಪರಿಹಾರಗಳನ್ನು ಪರಿಚಯಿಸುತ್ತೇವೆ’ ಎಂದು ಹೇಳಿದರು.
ಒಪ್ಪಂದದ ಬಗ್ಗೆ ಮಾತನಾಡಿದ ಜಿಯಾನ್ ಚಾರ್ಜಿಂಗ್ನ ಮುಖ್ಯಸ್ಥ ಮತ್ತು ಸಿಇಒ ಕಾರ್ತಿಕೇಯನ್ ಕೆಪಿ, ‘ಜಿಯಾನ್ ಚಾರ್ಜಿಂಗ್ನಲ್ಲಿ ಕೇವಲ ಚಾರ್ಜರ್ಗಳನ್ನು ಹೊಂದುವುದು ಸಾಕಾಗುವುದಿಲ್ಲ, ಆದರೆ ಗ್ರಾಹಕರು ಅವಲಂಬಿಸಬಹುದಾದ ಚಾರ್ಜಿಂಗ್ ಸ್ಟೇಷನ್ಗಳನ್ನು ಹೊಂದಿರುವುದು ಹೆಚ್ಚು ಮುಖ್ಯವಾಗುತ್ತದೆ ಎಂಬುದನ್ನು ನಾವು ನಂಬುತ್ತೇವೆ. ಇಂದು ನಾವು ಟಿಪಿಇಎಂ ನೊಂದಿಗೆ ನಮ್ಮ ಪಾಲುದಾರಿಕೆಯನ್ನು ಘೋಷಿಸಲು ಉತ್ಸುಕರಾಗಿದ್ದೇವೆ. ಇವಿಗಳಲ್ಲಿ ದೇಶದ ಮೊದಲಿಗನಾಗಿ ಟಿಪಿಇಎಂ ಕಾಣಿಸಿಕೊಂಡಿದೆ. ಅನುಕೂಲಕರ, ಸಮಗ್ರ ಮತ್ತು ಸಂಬಂಧಿತ ಇವಿ ಮಾಲೀಕರಿಗೆ ಚಾರ್ಜಿಂಗ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಈ ಸಹಭಾಗಿತ್ವವು ನಮಗೆ ಸಹಾಯ ಮಾಡುತ್ತದೆ. ಮುಖ್ಯವಾಗಿ ನಮ್ಮ ಸಂಸ್ಥೆಯು ಇವಿ ಮಾಲೀಕರು ನಂಬಬಹುದಾದ ನೆಟ್ವರ್ಕ್ ಅನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಒಂದು ದೃಢವಾದ ಇವಿ ಚಾರ್ಜಿಂಗ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಜಿಯಾನ್ ಗೆ ಸಹಾಯ ಮಾಡಲು ಟಿಪಿಇಎಂ ಪ್ರಮುಖ ಇವಿ ಓಇಎಂ ಆಗಿ ಈ ಪಾಲುದಾರಿಕೆಗೆ ತರಬಹುದು ಎಂದು ಭಾವಿಸಿದ್ದೇವೆ. ಪ್ರಮುಖ ಚಾರ್ಜ್ ಪಾಯಿಂಟ್ ಆಪರೇಟರ್ ಆಗಿ, ಚಾರ್ಜಿಂಗ್ ನಡವಳಿಕೆಗಳು ಮತ್ತು ಮಾದರಿಗಳ ಕುರಿತು ನಮಗಿರುವ ಒಳನೋಟ ಮತ್ತು ಡೇಟಾವು ಗ್ರಾಹಕಸ್ನೇಹಿ ಅನುಭವವನ್ನು ಹೆಚ್ಚಿಸಲು ಸಹಾಯ ಮಾಡಲಿದೆ’ ಎಂದು ಹೇಳಿದರು.