ಬೆಳಗಾವಿ: ಟಿಪ್ಪರ್ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 12 ವರ್ಷದ ಬಾಲಕಿ ಹಾಗೂ ಓರ್ವ ಸಜೀವ ದಹನವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬಂಬರಗಾ ಕ್ರಾಸ್ ಬಳಿ ನಡೆದಿದೆ.
ಮೃತರು ಸಂಬಂಧಿಕರು. ಮೃತರನ್ನು ಬಂಬರಗಾ ನಿವಾಸಿ ಮೋಹನ್ ಮಾರುತಿ ಬೆಳಗಾಂವ್ಕರ್ (24) ಮತ್ತು ಮಚ್ಚೆ ಗ್ರಾಮದ ಸಮೀಕ್ಷಾ ದೇಯೇಕರ್ ಎಂದು ಗುರುತಿಸಲಾಗಿದೆ.
ಬುಧವಾರ ತಡರಾತ್ರಿ ಬಂಬರಗಾ ಕ್ರಾಸ್ ಬಳಿ ಕಾರು ಟಿಪ್ಪರ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ವರದಿ ತಿಳಿಸಿದೆ. ಪರಿಣಾಮವಾಗಿ ಟಿಪ್ಪರ್ ನ ಡೀಸೆಲ್ ಟ್ಯಾಂಕ್ ಗೆ ಹಾನಿಯಾಗಿದ್ದು, ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಈ ಡಿಕ್ಕಿಯು ವೇಗವಾಗಿ ಮತ್ತು ಅನಿಯಂತ್ರಿತ ಬೆಂಕಿಗೆ ಕಾರಣವಾಯಿತು, ಕಾರು ಮತ್ತು ಟಿಪ್ಪರ್ ಎರಡನ್ನೂ ಆವರಿಸಿತು.
ಮದುವೆ ಸಮಾರಂಭದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಸಂತ್ರಸ್ತರು ಬೆಂಕಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ಸ್ಥಳೀಯರು ಮತ್ತು ದಾರಿಹೋಕರು ಧಾವಿಸಿ ನಾಲ್ವರಲ್ಲಿ ಇಬ್ಬರನ್ನು – ಮಹೇಶ್ ಬೆಳಗಾಂವ್ಕರ್ ಮತ್ತು ಸ್ನೇಹಾ ಬೆಳಗುಂಡ್ಕರ್ ಅವರನ್ನು ಕಾರಿನಿಂದ ಹೊರತೆಗೆಯುವಲ್ಲಿ ಯಶಸ್ವಿಯಾದರು.
ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು, ಅಗ್ನಿಶಾಮಕ ಇಲಾಖೆ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.ಕಾಕತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಟಿಪ್ಪರ್ ವಾಹನದ ಚಾಲಕ ಪೊಲೀಸರಿಗೆ ಶರಣಾಗಿದ್ದಾನೆ.