ಮೈಸೂರು: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಸಮೀಪದ ಮಾಕೋಡು ಗ್ರಾಮದಲ್ಲಿ ದಲಿತ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿದ ಪ್ರಕರಣ ದಾಖಲಾಗಿದೆ.
ಡ್ರಮ್ಸ್ ನುಡಿಸಲು ಮತ್ತು ದೇವಾಲಯದ ಕಾರ್ಯಕ್ರಮವನ್ನು ಘೋಷಿಸಲು ನಿರಾಕರಿಸಿದ್ದಕ್ಕೆ ಸಂಬಂಧಿಸಿ ಈ ಘಟನೆ ನಡೆದಿದೆ. ಇಲ್ಲಿನ ಸ್ಥಳೀಯ ನಿವಾಸಿ ಕುಮಾರ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಘೋಷಿಸಲು ಕುಮಾರ್ ಅವರು ಪರಮಯ್ಯ ಅವರಿಗೆ ಡ್ರಮ್ ನುಡಿಸುವಂತೆ ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ತಾನು ಡ್ರಮ್ಸ್ ನುಡಿಸುವುದನ್ನು ನಿಲ್ಲಿಸಿದ್ದೇನೆ ಎಂದು ಪರಮಯ್ಯ ಕುಮಾರ್ಗೆ ತಿಳಿಸಿದರು.
ಕುಮಾರ್ ಆತನ್ನು ಬಲವಂತಪಡಿಸಿದ್ದರಿಂದ ಪರಮಯ್ಯ ತನ್ನ ಮಗ ಬಸವರಾಜ್ ನೊಂದಿಗೆ ಕೆಲಸವನ್ನು ಪ್ರಾರಂಭಿಸಿದನು. ಅವರು ದೇವಾಲಯದ ಬಳಿ ಬಂದಾಗ, ಆರಂಭದಲ್ಲಿ ಡ್ರಮ್ಸ್ ನುಡಿಸಲು ನಿರಾಕರಿಸಿದ್ದಕ್ಕಾಗಿ ಆರೋಪಿ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು ಮತ್ತು ಪರಮಯ್ಯ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.
ಪರಮಯ್ಯ ಅವರನ್ನು ಪಿರಿಯಾಪಟ್ಟಣ ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಮಗ ಕುಮಾರ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.