ಬೆಂಗಳೂರು: ಮದರ್ ಹುಡ್ ಹಾಸ್ಪಿಟಲ್ಸ್ ಯಶಸ್ವಿಯಾಗಿ ಮೆಡಿಕಲ್ ಎಜುಕೇಶನ್ (MED – CON) ಸಮ್ಮೇಳನವನ್ನು ಆಯೋಜಿಸಿತ್ತು. ಪುನರಾವರ್ತಿತ ಗರ್ಭಾವಸ್ಥೆಯ ವೇಳೆ ಸಂಭವಿಸಬಹುದಾದ ತೊಂದರೆಗಳು ಮತ್ತು ಅವುಗಳ ಉಲ್ಬಣತೆಯನ್ನು ಕಡಿಮೆ ಮಾಡುವ ವಿಚಾರವಾಗಿ ಈ ಕಾರ್ಯಕ್ರಮದಲ್ಲಿ ಬೆಳಕು ಚೆಲ್ಲಲಾಯಿತು. ಈ ಸಮ್ಮೇಳನದಲ್ಲಿ ಪ್ರೊ.ರಾಬರ್ಟ್ ಜಾನ್ ಐಟ್ಕೆನ್, ಪ್ರೊಫೆಸರ್, ಯೂನಿವರ್ಸಿಟಿ ಆಫ್ ನ್ಯೂಕ್ಯಾಸಲ್, ನ್ಯೂ ಸೌತ್ ವೇಲ್ಸ್, ಆಸ್ಟ್ರೇಲಿಯಾ ಮತ್ತು ಪ್ರೊ.ಹೆನ್ರಿಯೆಟ್ಟೆ ಸ್ವಾರ್ರೆ ನೀಲ್ಸನ್, ಚೇರ್ ಪ್ರೊಫೆಸರ್ OBGYN, ಡಿಪಾರ್ಟ್ ಮೆಂಟ್ ಆಫ್ ಮೆಡಿಸಿನ್, ಯೂನಿವರ್ಸಿಟಿ ಆಫ್ ಕೋಪೆಹೇಗನ್, ಡೆನ್ಮಾರ್ಕ್ ಅವರಂತಹ ಜಾಗತಿಕ ವಿಖ್ಯಾತಿ ಪಡೆದ ಪರಿಣತರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರಿನ ಚಾನ್ಸರಿ ಪೆವಿಲಿಯನ್ ನಲ್ಲಿ ಡಿಸೆಂಬರ್ 3, 2023 ರಂದು ನಡೆದ ಈ ಸಮ್ಮೇಳನದಲ್ಲಿ ಸುಮಾರು 160 ಕ್ಕೂ ಹೆಚ್ಚು ಆರೋಗ್ಯರಕ್ಷಣೆ ವೃತ್ತಿಪರರು ಪಾಲ್ಗೊಂಡಿದ್ದರು.
ಡಾ.ರಶ್ಮಿ ಪಾಟೀಲ್, ಕನ್ಸಲ್ಟೆಂಟ್ ಒಬ್ ಸ್ಟೆಟ್ರಿಶಿಯನ್ & ಗೈನಾಕಾಲಾಜಿಸ್ಟ್, ಲ್ಯಾಪ್ರೋಸ್ಕೋಪಿಕ್ ಸರ್ಜರಿ ಅಂಡ್ ಇನ್ ಫರ್ಟಿಲಿಟಿ ಸ್ಪೆಷಲಿಸ್ಟ್, ಬನಶಂಕರಿ, ಬೆಂಗಳೂರು ಇವರ ಸ್ವಾಗತ ಭಾಷಣದೊಂದಿಗೆ ಮೆಡ್-ಕಾನ್ ಆರಂಭವಾಯಿತು.ಪುನರಾವರ್ತಿತ ಗರ್ಭಧಾರಣೆಯ ನಷ್ಟ (RPL) ನಲ್ಲಿರುವ ಸಂಕೀರ್ಣತೆಗಳ ಬಗ್ಗೆ ಮಾಹಿತಿ ನೀಡಿದ ಅವರು, ಮಹಿಳೆಯರ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಅತ್ಯಗತ್ಯತೆ ಬಗ್ಗೆ ವಿವರಣೆ ನೀಡಿದರು.
ಕೊಯಮತ್ತೂರಿನ ಮದರ್ ಹುಡ್ ನ ಮಹಿಳಾ ಘಟಕದ ಕ್ಲಿನಿಕಲ್ ನಿರ್ದೇಶಕಿ ಡಾ,ಮೃದುಭಾಷಿಣಿ ಗೋವಿಂದರಾಜನ್ ಅವರು ಮಾತನಾಡಿ, “ಪದೇಪದೆ ಮರುಕಳಿಸುವ ಗರ್ಭಾವಸ್ಥೆಯ ನಷ್ಟವು ಮಹಿಳೆಯರ ಯೋಗಕ್ಷೇಮದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತದೆ. ಆದರೆ, ಹೊಸ ಸಂಶೋಧನೆಗಳು ಅವರಲ್ಲಿ ಭರವಸೆಯನ್ನು ಮೂಡಿಸುತ್ತಿವೆ. ಸೂಕ್ಷ್ಮಜೀವಿಗಳನ್ನು ಅರ್ಥ ಮಾಡಿಕೊಳ್ಳುವ ವಿಚಾರದಲ್ಲಿನ ಪ್ರಗತಿಗಳು ಮತ್ತು ಸ್ಪರ್ಮ್ ಡಿಎನ್ಎ ಫ್ರಾಗ್ಮೆಂಟೇಶನ್ ಇಂಡೆಕ್ಸ್ (DFI) ಪರೀಕ್ಷೆಯಂತಹ ಪ್ರಗತಿಗಳು ಉದ್ದೇಶಿತ ಇಂಟರ್ ವೆನ್ಷನ್ ಮತ್ತು ವೈಯಕ್ತಿಕ ಆರೈಕೆಯನ್ನು ನೀಡುತ್ತವೆ. ಇವುಗಳಲ್ಲಿ ಮುಂಚೂಣಿಯಲ್ಲಿ ಉಳಿಯಲು ನಾವು ಬದ್ಧರಾಗಿದ್ದೇವೆ. ಈ ಕ್ಷೇತ್ರದಲ್ಲಿನ ಪ್ರಗತಿಗಳು ಮಹಿಳೆಯರ ಸಬಲೀಕರಣ ಮತ್ತು ಯಶಸ್ವಿ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ. ನಾವು ಜ್ಞಾನದ ಗಡಿಗಳನ್ನು ಮುಂದೆ ಹೋಗುವಂತೆ ಮಾಡಲು, ಹೊಸ ಹೊಸ ಗಡಿಗಳನ್ನು ಅನ್ವೇಷಣೆ ಮಾಡಲು ಹಾಗೂ ಪುನರಾವರ್ತಿತ ಗರ್ಭಧಾರಣೆ ನಷ್ಟದಿಂದ ನರಳುತ್ತಿರುವವರಿಗೆ ಹೊಸ ಭರವಸೆಯನ್ನು ನೀಡುವ ಗುರಿಯನ್ನು ಹೊಂದಿದ್ದೇವೆ’’ ಎಂದರು.
ಪ್ರೊಫೆಸರ್ ಹೆನ್ರಿಯೆಟ್ ಸ್ವಾರ್ರೆ ನೀಲ್ಸನ್ ಅವರು, ಸ್ತ್ರೀ ಸಂತಾನೋತ್ಪತ್ತಿಯಲ್ಲಿ ಸೂಕ್ಷ್ಮಜೀವಿಗಳ ಪಾತ್ರ ಮತ್ತು ಪುನರಾವರ್ತಿತ ಗರ್ಭಧಾರಣೆಯ ನಷ್ಟಗಳಿಗೆ ಅವುಗಳ ಸಂಭಾವ್ಯ ಸಂಪರ್ಕದ ಕುರಿತು ಅದ್ಭುತ ಸಂಶೋಧನೆಯನ್ನು ಹಂಚಿಕೊಂಡರು.
ಪ್ರೊ.ಹೆನ್ರಿಯೆಟ್ ಸ್ವಾರ್ರೆ ನೀಲ್ಸನ್, ಚೇರ್ ಪ್ರೊಫೆಸರ್ OBGYN, ಡಿಪಾರ್ಟ್ ಮೆಂಟ್ ಆಫ್ ಮೆಡಿಸಿನ್, ಯೂನಿವರ್ಸಿಟಿ ಆಫ್ ಕೋಪೆಹೇಗನ್, ಡೆನ್ಮಾರ್ಕ್ ಅವರು ಮಾತನಾಡಿ, “ಗರ್ಭಾಶಯದ ಕುಳಿಯಲ್ಲಿ ಬದಲಾಗುವ ಸೂಕ್ಷ್ಮಜೀವಿಯ ಸಮೂಹ ಮತ್ತು ಅದು ಸಂಪೂರ್ಣವಾಗಿ ಸಂತಾನೋತ್ಪತ್ತಿ ಪ್ರಕ್ರಿಯೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ. ಈ ಸೂಕ್ಷ್ಮ ಜೀವಿಗಳು ಸ್ಥಳೀಯವಾಗಿ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಹೇಗೆ ಪರಿಣಾಮವನ್ನು ಬೀರಬಹುದು ಮತ್ತು ಮಗುವನ್ನು ಹೊಂದುವ ಸಾಧ್ಯತೆಗಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತವೆ ಎಂಬುದರ ಬಗ್ಗೆ ಸಂಶೋಧನೆ ಸುಳಿವನ್ನು ನೀಡುತ್ತದೆ. ಗರ್ಭಾಶಯದಲ್ಲಿನ ಸೂಕ್ಷ್ಮಜೀವಿ ಮತ್ತು ಎಂಡೋಮೆಟ್ರಿಯಂ ಹೇಗೆ ಸಂವಹನ ನಡೆಸುತ್ತದೆ ಎಂಬುದರ ಬಗ್ಗೆ ಅನ್ವೇಷಣೆ ನಡೆಸಲು ಮಹಿಳೆಯರ ಸಂತಾನೋತ್ಪತ್ತಿ ಯೋಗಕ್ಷೇಮದ ಬಗ್ಗೆ ಪ್ರಮುಖ ಮಾಹಿತಿಯನ್ನು ನೀಡುತ್ತದೆ ಹಾಗೂ ಇದು ಉತ್ತಮ ಚಿಕಿತ್ಸೆಗಳಿಗೆ ಕಾರಣವಾಗಬಹುದು’’ ಎಂದು ಹೇಳಿದರು.
“ಮಾನವ ದೇಹದಲ್ಲಿ ಸೂಕ್ಷ್ಮಜೀವಿಗಳ ಸಂಯೋಜನೆಯಲ್ಲಿ ಆಗುವ ಬದಲಾವಣೆಗಳು ಫಲವತ್ತತೆ, ಗರ್ಭಧಾರಣೆಯ ಮೇಲೆ ಗಮನಾರ್ಹವಾದ ಪರಿಣಾಮ ಬೀರಬಹುದು ಮತ್ತು ಅಂತಿಮವಾಗಿ ಪುನರಾವರ್ತಿತ ಗರ್ಭಧಾರಣೆಯ ನಷ್ಟಗಳಿಗೆ ಕಾರಣವಾಗಬಹುದು’’ ಎಂದು ಡಾ.ನೀಲ್ಸನ್ ಎಚ್ಚರಿಕೆ ನೀಡಿದರು.
ಪ್ರೊ.ರಾಬರ್ಟ್ ಜಾನ್ ಐಟ್ಕೆನ್ ಅವರು ಮಾತನಾಡಿ, “ಮಹಿಳೆಯರಲ್ಲಿ ಪುನರಾವರ್ತಿತ ಗರ್ಭಾವಸ್ಥೆಯ ನಷ್ಟಗಳ ಮೇಲೆ ಪುರುಷ ಅಂಶದ ಪ್ರಭಾವ ಸಾಕಷ್ಟಿರುತ್ತದೆ. ಪುರುಷ ಸಂತಾನೋತ್ಪತ್ತಿಯ ವಯಸ್ಸಾದ ಪರಿಣಾಮಗಳು ಪುನರಾವರ್ತಿತ ಗರ್ಭಾವಸ್ಥೆಯ ನಷ್ಟಗಳು ಪ್ರಮುಖ ಕಾರಣವಾಗುತ್ತವೆ ಮತ್ತು 37 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಲ್ಲಿ ಫಲವತ್ತತೆಯ ಪ್ರಮಾಣ ಕಡಿಮೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಪುರುಷನ ವಯಸ್ಸಿಗೆ ಸಂಬಂಧಿಸಿದ ಫಲವತ್ತತೆಯ ಸಮಸ್ಯೆಗಳು ಗಮನಾರ್ಹವಾದ ಸವಾಲುಗಳಾಗಿ ಉಳಿದಿವೆ. ಇಂತಹ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುವ ಅಗತ್ಯವಿದೆ’’ ಎಂದು ಹೇಳಿದರು.
ಈ ಮೆಡ್-ಕಾನ್ ಸ್ಪರ್ಮ್ DFI ಪರೀಕ್ಷೆಯನ್ನು ಒಳಗೊಂಡಂತೆ ತಾಂತ್ರಿಕ ಪ್ರಗತಿಯ ಬಗ್ಗೆಯೂ ಬೆಳಕು ಚೆಲ್ಲಿತು. ಪುನರಾವರ್ತಿತ ಗರ್ಭಧಾರಣೆಯ ನಷ್ಟಗಳೊಂದಿಗೆ ಹೋರಾಟ ಮಾಡುತ್ತಿರುವ ವ್ಯಕ್ತಿಗಳಿಗೆ ಭರವಸೆಯನ್ನು ಮೂಡಿಸುವ ನಿಟ್ಟಿನಲ್ಲಿ ಈ ಪರೀಕ್ಷೆಯು ನೆರವಾಗುತ್ತದೆ. ಇಂತಹ ಪರೀಕ್ಷೆಗಳು ವೀರ್ಯದಲ್ಲಿ DNA ಹಾನಿಯ ಪ್ರಮಾಣವನ್ನು ಮೌಲ್ಯಮಾಪನ ಮಾಡುತ್ತದೆ. ಇದು ಪುರುಷ ಫಲವತ್ತತೆ ಮತ್ತು ಭ್ರೂಣದ ಬೆಳವಣಿಗೆಯಲ್ಲಿ ನಿರ್ಣಾಯಕವಾದ ಅಂಶವಾಗಿರುತ್ತದೆ. ಸಂಭಾವ್ಯ ವೀರ್ಯ ಹಾನಿಯನ್ನು ಗುರುತಿಸುವ ಮೂಲಕ ಮತ್ತು ವೀರ್ಯದ ಗುಣಮಟ್ಟವನ್ನು ನಿರ್ಣಯಿಸುವ ಮೂಲಕ ವೀರ್ಯ DNA ವಿಘಟನೆಯ ಸೂಚ್ಯಂಕ DFI ಪರೀಕ್ಷೆಯು ಪ್ರಮುಖ ರೋಗ ನಿರ್ಣಯ ಸಾಧನವಾಗಿ ಮಾರ್ಪಟ್ಟಿದೆ. ಈ ಮೂಲಕ ಹೊಸ ಹೊಸ ಸಂಶೋಧನೆ ಮತ್ತು ಚಿಕಿತ್ಸೆಯ ಮಾರ್ಗಗಳನ್ನು ಅನ್ವೇಷಣೆ ಮಾಡಲು ಅನುವು ಮಾಡಿಕೊಡುತ್ತದೆ.
ಡಾ.ಆಶಾ ಬಾಕ್ಸಿ, ಸೀನಿಯರ್ ಲೀಡ್ ಕನ್ಸಲ್ಟೆಂಟ್, ಒಬ್ ಸ್ಟೆಟ್ರಿಕ್ಸ್, ಗೈನಾಕಾಲಾಜಿ ಅಂಡ್ ರೀಪ್ರೊಡಕ್ಟಿವ್ ಮೆಡಿಸಿನ್, ವೈಸ್ ಪ್ರೆಸಿಡೆಂಟ್ FOGSI – ವೆಸ್ಟ್ ಜೋನ್, ಟ್ರೆಸಸರ್. ಐಎಸ್ಎಆರ್, ಅವರು ಮಾತನಾಡಿ, “ರೋಗ ನಿರೋಧಕ ಶಾಸ್ತ್ರದ ಸಂಕೀರ್ಣವಾದ ಲ್ಯಾಂಡ್ ಸ್ಕೇಪ್ ನೊಳಗೆ APLA/ Auto-Immune Factor, APLA(ಆಂಟಿ ಫಾಸ್ಫೋಲಿಪಿಡ್ ಆಂಟಿಬಾಡಿ)ಯ ಉಪಸ್ಥಿತಿ ಮತ್ತು ಪರಿಣಾಮಗಳು ಸ್ವಯಂ ನಿರೋಧಕ ಡೈನಾಮಿಕ್ಸ್ ಗೆ ಆಳವಾದ ರೀತಿಯಲ್ಲಿ ಒಳನೋಟಗಳನ್ನು ಅನ್ಲಾಕ್ ಮಾಡಲು ಒಂದು ಸವಾಲು ಮತ್ತು ಕೀಲಿಯಂತಿವೆ. ಇದು ಆರೋಗ್ಯ ಮತ್ತು ಉತ್ತಮ ಅಂಶಗಳ ಮೇಲೆ ಬೆಳಕು ಚೆಲ್ಲುತ್ತದೆ’’ ಎಂದು ಹೇಳಿದರು.
ಡಾ.ರಮ್ಯಾ ಜಯರಾಮ್ ಅವರು ಮಾತನಾಡಿ, “ಗರ್ಭಾಶಯದಲ್ಲಿನ ಅಸಹಜತೆಗಳು ಗರ್ಭಧಾರಣೆ ಮತ್ತು ಗರ್ಭಾವಸ್ಥೆಯನ್ನು ಕೊಂಡೊಯ್ಯುವ ಪ್ರಕ್ರಿಯೆಯಲ್ಲಿ ಹಲವಾರು ಸವಾಲುಗಳನ್ನು ತಂದೊಡ್ಡಲು ಕಾರಣವಾಗಬಹುದು. ಆದಾಗ್ಯೂ, ತಂತ್ರಜ್ಞಾನ, ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿ ಆಗುತ್ತಿರುವ ಪ್ರಗತಿಗಳು, ಸಂಶೋಧನೆಗಳೊಂದಿಗೆ ಇಂತಹ ಸವಾಲುಗಳನ್ನು ಎದುರಿಸಲು ನಾವು ಶಕ್ತಿಯುತನ ಸಾಧನಗಳನ್ನು ಹೊಂದಿದ್ದೇವೆ. ಅತ್ಯಾಧುನಿಕ ತಂತ್ರಗಳು, ವೈಯಕ್ತೀಕರಿಸಿದ ಚಿಕಿತ್ಸೆಗಳು ಮತ್ತು ಸಮಗ್ರ ಸಮಾಲೋಚನೆಯನ್ನು ನಿಯಂತ್ರಿಸುವ ಮೂಲಕ ಗರ್ಭಾಶಯದ ಅಂಶದ ಬಂಜೆತನವನ್ನು ಹೋಗಲಾಡಿಸಲು ಮತ್ತು ಯಶಸ್ವಿಯಾಗಿ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳಲು ನಾವು ದಂಪತಿಗಳಿಗೆ ಅನುವು ಮಾಡಿಕೊಡಬಹುದಾಗಿದೆ. ಮದರ್ ಹುಡ್ ನ ಮಹಿಳಾ ಕೇಂದ್ರದಲ್ಲಿ ಗರ್ಭಾಶಯದ ಅಂಶದ ಬಂಜೆತನದ ಅಡಚಣೆಗಳನ್ನು ನಿವಾರಿಸಲು ಮತ್ತು ಪಿತೃತ್ವದ ಕನಸುಗಳನ್ನು ಈಡೇರಿಸಿಕೊಳ್ಳಲು ದಂಪತಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ನಾವು ಇತ್ತೀಚಿನ ಚಿಕಿತ್ಸಾ ವಿಧಾನಗಳು ಮತ್ತು ಸಮಗ್ರ ಆರೈಕೆ ಒದಗಿಸಲು ಬದ್ಧರಾಗಿದ್ದೇವೆ’’ ಎಂದರು.
ಮೆಡ್ –ಕಾನ್ ಪರಿಣತರಿಗೆ ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು, ಅದ್ಭುತವಾದ ಸಂಶೋಧನೆಗಳ ಬಗ್ಗೆ ಚರ್ಚಿಸಲು ಮತ್ತು ಪುನರಾವರ್ತಿತ ಗರ್ಭಧಾರಣೆಯ ನಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಂಭಾವ್ಯ ಚಿಕಿತ್ಸಾ ಪರಿಹಾರಗಳನ್ನು ಅನ್ವೇಷಣೆ ಮಾಡಲು ಒಂದು ಕ್ರಿಯಾತ್ಮಕವಾದ ವೇದಿಕೆಯನ್ನು ಕಲ್ಪಿಸಿಕೊಟ್ಟಿತು. ಮದರ್ ಹುಡ್ ನ ಮಹಿಳಾ ಕೇಂದ್ರವು ಸಂತಾನೋತ್ಪತ್ತಿ ಆರೋಗ್ಯ ರಕ್ಷಣೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಬದ್ಧವಾಗಿದೆ ಮತ್ತು ಪುನರಾವರ್ತಿತ ಗರ್ಭಧಾರಣೆಯ ನಷ್ಟದ ಸವಾಲುಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು ಮತ್ತು ದಂಪತಿಗಳಿಗೆ ಬೆಂಬಲವಾಗಿ ನಿಲ್ಲುತ್ತದೆ.
ಕಾರ್ಯಕ್ರಮದ ಅಂತ್ಯದಲ್ಲಿ ಡಾ.ರಶ್ಮಿ ಪಾಟೀಲ್, ಕನ್ಸಲ್ಟೆಂಟ್ ಒಬ್ ಸ್ಟೆಟ್ರಿಶಿಯನ್ & ಗೈನಾಕಾಲಾಜಿಸ್ಟ್, ಲ್ಯಾಪ್ರೋಸ್ಕೋಪಿಕ್ ಸರ್ಜರಿ ಅಂಡ್ ಇನ್ಫರ್ಟಿಲಿಟಿ ಸ್ಪೆಷಲಿಸ್ಟ್, ಬನಶಂಕರಿ, ಬೆಂಗಳೂರು ಅವರು, ಗರ್ಭಾಶಯದಲ್ಲಿನ ಅಸಮರ್ಪಕ ಕ್ರಿಯೆಗಳು ಗರ್ಭಾಶಯದ ಪ್ರಕ್ರಿಯೆಗೆ ಹೇಗೆ ಅಡ್ಡಿಯಾಗುತ್ತವೆ ಎಂಬುದರ ಬಗ್ಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಗರ್ಭಾವಸ್ಥೆಯನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಣೆ ಮಾಡಬೇಕೆಂದೂ ಅವರು ಕಿವಿಮಾತು ಹೇಳಿದರು.