ಬೆಂಗಳೂರು: ಭಾರತದ ಗ್ರಾಹಕರ ಕುಂದುಕೊರತೆ ಪರಿಹಾರ ವ್ಯವಸ್ಥೆಯಲ್ಲಿ ದಕ್ಷತೆಯನ್ನು ಹೆಚ್ಚಿಸಲು ವಿಸ್ತೃತ ಭಾಷಾ ಮಾದರಿ (ಎಲ್ಎಲ್ಎಂ)ಗಳನ್ನು ಹೇಗೆ ಬಳಕೆ ಮಾಡಿಕೊಳ್ಳಬಹುದು ಎಂಬುದನ್ನು ನಿರ್ಣಯಿಸಲು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯವು ಕೈಗೊಂಡಿರುವ ಸಂಶೋಧನಾ ಯೋಜನೆಗೆ ಮೆಟಾ ಇಂದು ತನ್ನ ಬೆಂಬಲವನ್ನು ಘೋಷಿಸಿದೆ. ಪ್ರಪಂಚ ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಜವಾಬ್ದಾರಿಯುತ ವ್ಯವಸ್ಥೆ ನಿರ್ಮಿಸುವ ಮತ್ತು ಓಪನ್ ಎಐ ಆವಿಷ್ಕಾರದ ವ್ಯವಸ್ಥೆಯನ್ನು ಉತ್ತೇಜಿಸುವ ಮೆಟಾದ ಪಯತ್ನಗಳ ಭಾಗವಾಗಿ ಇದನ್ನು ಕೈಗೊಳ್ಳಲಾಗಿದೆ. ಈ ಯೋಜನೆಯನ್ನು ಬಾಂಬೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಹಯೋಗದೊಂದಿಗೆ ಕಾರ್ಯಗತಗೊಳಿಸಲಾಗುತ್ತಿದೆ.
ನಾಗರಿಕ ಕೇಂದ್ರಿತ ಚಾಟ್ಬಾಟ್ ಮತ್ತು ಗ್ರಾಹಕ ಕಾನೂನಿನ ಅಡಿಯಲ್ಲಿ ಸಹಾಯಕ ಸಲಕರಣೆಯನ್ನು ಸೃಷ್ಟಿಸುವ ಮತ್ತು ಮೌಲ್ಯಮಾಪನ ಮಾಡುವ ನಿಟ್ಟಿನಲ್ಲಿ, ಬಹಿರಂಗವಾಗಿ ಲಭ್ಯವಿರುವ ಮೆಟಾದ ವಿಸ್ತೃತ ಭಾಷಾ ಮಾದರಿಯಾದ ಎಲ್ಲಾಮಾ-2 ಅನ್ನು ನಿಯಂತ್ರಿಸುವ ಸಾಧ್ಯತೆಯನ್ನು ಈ ಸಂಶೋಧನಾ ಕ್ರಮವು ಅನ್ವೇಷಿಸುತ್ತಿದೆ. ದಕ್ಷತೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಭಾರತದ ಗ್ರಾಹಕ ಕಾನೂನಿಗೆ ಸಂಬಂಧಿಸಿದಂತಹ ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ದೂರು ನೀಡುವ ಕಾರ್ಯವಿಧಾನದ ಬಗ್ಗೆ ಗ್ರಾಹಕರಿಗೆ ಮಾರ್ಗದರ್ಶನ ನೀಡಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಕಾನೂನುಗಳನ್ನು ಹುಡುಕಲು ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ ದಾಖಲೆಗಳ ಸಾರಾಂಶ ದೊರೆಯಲು ಅನುಕೂಲವಾಗುವಂತೆ ಈ ಸಂಶೋಧನೆ ಒಳಗೊಂಡರುವ ನಿರ್ಧಾರ ಸಹಾಯಕ ಟೂಲ್ ಅನ್ನು ವಿನ್ಯಾಸಗೊಳಿಸಲಾಗಿದೆ. ಮಾನವ ನಿರ್ಧಾರ ತಯಾರಕರ ಮೇಲ್ವಿಚಾರಣೆ ಮತ್ತು ನಿಯಂತ್ರಣದ ಸಂದರ್ಭದಲ್ಲಿ ಗ್ರಾಹಕರು ಮತ್ತು ಅಧಿಕಾರಿಗಳಿಗೆ ವಿಸ್ತೃತ ಭಾಷಾ ಮಾದರಿಗಳು ಹೇಗೆ ಸಹಾಯ ಮಾಡಲಿವೆ ಎಂಬುದನ್ನು ಇದು ಅನ್ವೇಷಿಸುತ್ತಿದೆ. ಜವಾಬ್ದಾರಿಯುತ ಸಂಶೋಧನಾ ಬದ್ಧತೆಗೆ ಅನುಗುಣವಾಗಿ, ಅಪಾಯ ತಗ್ಗಿಸುವಿಕೆಯ ವಿಧಾನಗಳು ಮತ್ತು ಅನ್ವೇಷಣೆಯ ಪ್ರತಿಹಂತಹದಲ್ಲೂ ಜವಾಬ್ದಾರಿಯುತ ವಿನ್ಯಾಸ ತತ್ವಗಳನ್ನು ಹೇಗೆ ನಿಯೋಜಿಸಲಾಗಿದೆ ಎಂಬುದನ್ನು ವಿವರಿಸುವ ಶ್ವೇತಪತ್ರವನ್ನು ಎನ್ಎಲ್ಎಸ್ಐಯು ಮತ್ತು ಐಐಟಿ ಬಾಂಬೆಗಳು ಬಿಡುಗಡೆ ಮಾಡಲಿವೆ.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಸುಧೀರ್ ಕೃಷ್ಣಸ್ವಾಮಿ, ‘ಕಾನೂನು ವ್ಯವಸ್ಥೆ ಸುಧಾರಣೆಗೆ ಸಹಾಯ ಮಾಡಲು ಕೃತಕ ಬುದ್ದಿಮತ್ತೆಯನ್ನು ಬಳಸಿಕೊಂಡು ಶೈಕ್ಷಣಿಕ ಸಂಶೋಧನೆ ಮತ್ತು ಕಾನೂನು ಸಂಶೋಧನೆಗೆ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಬದ್ಧವಾಗಿದೆ. ಗ್ರಾಹಕರ ಕಾನೂನಿನ ಕುರಿತಾದ ಈ ಯೋಜನೆ ಗ್ರಾಹಕರ ಹಕ್ಕುಗಳ ಕುರಿತಾದ ಜಾಗೃತಿಯನ್ನು ಹೆಚ್ಚಿಸಲು ಮತ್ತು ಎಲ್ಲಾಮಾ-2 ಮಾದರಿಯನ್ನು ನಿಯಂತ್ರಿಸುವ ಮೂಲಕ ಸಹಾಯವನ್ನು ಒದಗಿಸುವ ಗುರಿಯನ್ನು ಹೊಂದಿದೆ. ವಿಸ್ತೃತ ಭಾಷಾ ಮಾದರಿಯನ್ನು ಬಳಸಿಕೊಳ್ಳುವವರಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಅಂತರಶಾಸ್ತ್ರೀಯ ಸಂಶೋಧನೆಯಲ್ಲಿ ಎನ್ಎಲ್ಎಸ್ಐಯು ಅದ್ವಿತೀಯ ಸ್ಥಾನ ಪಡೆದುಕೊಂಡಿದೆ. ದೇಶದಲ್ಲಿನ ಗ್ರಾಹಕ ವಿವಾದಗಳನ್ನು ತೋರಿಸುವ ಭೂಸದೃಶ ನಕ್ಷೆಯನ್ನು ತಯಾರಿಸಲು ನಾವು ಭಾರತೀಯ ಕಾನೂನುಗಳ ಅಮೂಲ್ಯವಾದ ಗ್ರಂಥ ಸಂಗ್ರಹವನ್ನು ರಚಿಸುತ್ತೇವೆ ಮತ್ತು ಎಲ್ಲಾಮ ಮಾದರಿಗಳನ್ನು ತರಬೇತಿ ಮಾಡಲು ಈ ಗ್ರಂಥ ಸಂಗ್ರಹವನ್ನು ಬಳಸಿಕೊಳ್ಳುತ್ತೇವೆ. ಈ ಮಾದರಿಗೆ ನೀಡಲಾದ ವಸ್ತುವು ಪ್ರಸ್ತುತವಾಗಿದೆ, ವಿಶ್ವಾಸಾರ್ಹವಾಗಿದೆ ಮತ್ತು ಬಳಕೆದಾರ ಸ್ನೇಹಿಯಾಗಿದೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ಹೆಚ್ಚುವರಿಯಾಗಿ ಗ್ರಾಹಕ ಪರಿಹಾರವನ್ನು ಸಮರ್ಥವಾಗಿ ಬೆಂಬಲಿಸುವ ನಿರ್ಧಾರ ಸಹಾಯಕ ಸಾಧನದ ಮೂಲ ಮಾದರಿಯನ್ನು ಅಭಿವೃದ್ಧಿಪಡಿಸುತ್ತೇವೆ. ಭಾರತದಲ್ಲಿ ಕಾನೂನು ಸುಧಾರಣೆಗಳತ್ತ ಮಹತ್ವದ ಹೆಜ್ಜೆಯನ್ನು ಸೂಚಿಸುವ ಈ ಪರಿಣಾಮಕಾರಿಯಾದ ಉಪಕ್ರಮದ ಸಮಯದಲ್ಲಿ ನಾವು ಮೆಟಾ ಹಾಗೂ ಬಾಂಬೆ ಐಐಟಿ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್, ‘ಗ್ರಾಹಕರಿಗೆ ಸುರಕ್ಷಿತ ವಾತಾವರಣವನ್ನು ನಿರ್ಮಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಸಂಶೋಧನಾ ಯೋಜನೆಯ ಉದ್ಘಾಟನೆಯು ಗ್ರಾಹಕ ಹಕ್ಕುಗಳು ಮತ್ತು ಜಾಗೃತಿಯನ್ನು ಹೆಚ್ಚಿಸಲು ಕೃತಕ ಬುದ್ದಿಮತ್ತೆಯನ್ನು ಬಳಸಿಕೊಂಡು ಹೊಸ ಪರಿಹಾರಗಳನ್ನು ಮೌಲ್ಯಮಾಪನ ಮಾಡುವ ನಮ್ಮ ಯೋಜನೆಯ ಮುಂದಡಿಯಾಗಿದೆ. ಅಲ್ಲದೇ ಭಾರತದಲ್ಲಿ ಗ್ರಾಹಕರ ರಕ್ಷಣೆಗೆ ಸಂಬಂಧಿಸಿದಂತೆ ನಾವು ಕೈಗೊಳ್ಳುತ್ತಿರುವ ಪ್ರಯತ್ನಗಳಿಗೆ ಆಧಾರವಾಗಿದೆ. ಗ್ರಾಹಕ ವ್ಯವಹಾರಗಳ ಇಲಾಖೆಯ ಈ ಉಪಕ್ರಮವು ಮೆಟಾ, ಎನ್ಎಲ್ಎಸ್ಐಯು ಮತ್ತು ಐಐಟಿ ಬಾಂಬೆಯ ಬೆಂಬಲ ಪಡೆದುಕೊಂಡಿದೆ. ಹೀಗಾಗಿ ಗ್ರಾಹಕರ ಅನುಕೂಲದಲ್ಲಿ ಅಪ್ಲಿಕೇಶನ್ಗಳನ್ನು ಸೃಷ್ಟಿ ಮಾಡಲು ಮುಕ್ತವಾಗಿ ನಾವಿನ್ಯತೆಯನ್ನು ಬಳಕೆ ಮಾಡಿಕೊಳ್ಳಲು ಇದು ಮಹತ್ವದ ಹೆಜ್ಜೆಯಾಗಿದೆ’ ಎಂದು ಹೇಳಿದರು.
ಮೆಟಾದ ಗ್ಲೋಬಲ್ ಪಾಲಿಸಿಯ ಉಪಾಧ್ಯಕ್ಷ ಜೋಯಲ್ ಕಪ್ಲಾನ್ ಮಾತನಾಡಿ, ‘ಪರಿಶೋಧನೆ, ಮುಕ್ತ ವಿಜ್ಞಾನ ಮತ್ತು ಶೈಕ್ಷಣಿಕ ಉದ್ಯಮಗಳ ಪಾಲುದಾರಿಕೆಯೊಂದಿಗೆ ಕಳೆದ 1 ದಶಕದಿಂದ ಮೆಟಾ ತನ್ನ ಸಹಯೋಗವನ್ನು ಇರಿಸಿಕೊಂಡಿದೆ. ಹೆಚ್ಚಿನ ಜನರಿಗೆ ಪ್ರಯೋಜನ ಒದಗಿಸುವ ಮತ್ತು ಕ್ಷೇತ್ರ ಪರಿವರ್ತನೆಯ ತಂತ್ರಜ್ಞಾನಗಳಿಗೆ ಮುಕ್ತ ಸಂಶೋಧನೆಗಳು ಹೇಗೆ ಕಾರಣವಾಗಬಹುದು ಎಂಬುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಹೀಗಾಗಿ ಎಲ್ಲಾಮಾ-2 ವ್ಯವಸ್ಥೆಯನ್ನು ನಿಯಂತ್ರಿಸುವ ಎಐ ಪರಿಕರಗಳನ್ನು ನಿರ್ಮಿಸುವ ಎನ್ಎಲ್ಎಸ್ಐಯು ಸಂಸ್ಥೆಯ ಸಂಶೋಧನೆಗಳಿಗೆ ನಮ್ಮ ಬೆಂಬಲವನ್ನು ನೀಡಲು ನಾವು ಉತ್ಸುಕರಾಗಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಸಂಶೋಧಕರು, ಡೆವಲಪರ್ಗಳು ಮತ್ತು ಸ್ಟಾರ್ಟ್ಅಪ್ಗಳು ನಮ್ಮ ತಂತ್ರಜ್ಞಾನವನ್ನು ನಿರ್ಮಿಸಿ ಮತ್ತು ಪ್ರಯೋಗಿಸಿದಂತೆ, ಇದರ ಬಳಕೆಯ ಪ್ರಕರಣಗಳು, ಸುರಕ್ಷಿತ ಮಾದರಿಗಳ ನಿಯೋಜನೆ ಮತ್ತು ಗುಪ್ತ ಅವಕಾಶಗಳ ಬಗ್ಗೆ ನಾವು ಹೆಚ್ಚು ಕಲಿಯಬಹುದು’ ಎಂದು ಹೇಳಿದರು.
ಐಐಟಿ ಬಾಂಬೆಯ ಪ್ರೊಫೆಸರ್ ಮತ್ತು ಪ್ರಸಿದ್ಧ ಭಾಷಾ ನೈಸರ್ಗಿಕ ಭಾಷಾ ಸಂಸ್ಕರಣೆ ಮತ್ತು ಮಷೀನ್ ಲರ್ನಿಂಗ್ ತಜ್ಞ ಪ್ರೊ. ಪುಷ್ಪಕ್ ಭಟ್ಟಾಚಾರ್ಯ ಮಾತನಾಡಿ, ‘ಮೆಟಾದ ಎಲ್ಲಾಮ-2 ವಿಸ್ತೃತ ಭಾಷಾ ಮಾದರಿ ಒಂದು ಉತ್ತಮ ಉದಾಹರಣೆಯಾಗಿದ್ದು, ಇದು ಸಾಮಾಜಿಕ ಉಪಯೋಗಕ್ಕಾಗಿ ಅಪಾರ ಸಾಮರ್ಥ್ಯದೊಂದಿಗೆ ಎಐನಲ್ಲಿ ಪ್ರಮುಖ ರೋಮಾಂಚನಕಾರಿ ಬೆಳವಣಿಗೆಯಾಗಿದೆ. ಡೋಮೇನ್ – ಕೆಲಸ – ಭಾಷೆ ಈ ಮೂರರ ಜೋಡಿ ಅಭೂತಪೂರ್ವ ರೀತಿಯಲ್ಲಿ ಎಲ್ಎಲ್ಎಂಗಳನ್ನು ಹೊಂದಿಸಲಾಗಿದೆ. ಉದಾಹರಣೆಗೆ ಕಾನೂನು – ಚಾಟ್ಬಾಟ್ – ಇಂಗ್ಲೀಷ್ ಅಥವಾ ಕೃಷಿ – ಭಾವನೆ – ಮರಾಠಿ. ಎನ್ಎಲ್ಪಿ, ಎಂಎಲ್ ಮತ್ತು ಎಲ್ಎಲ್ಎಂಗಳಲ್ಲಿ ನಮಗೆ ಇರುವ ದೀರ್ಘ ಮತ್ತು ಆಳವಾದ ಪರಿಣತಿಯೊಂದಿಗೆ ನಾವು ಪ್ರಶ್ನೆಗಳಿಗೆ ಉತ್ತರಿಸುವ ಅತ್ಯಂತ ಪ್ರಭಾವಶಾಲಿ ಸಮಸ್ಯೆಗೆ ಕಾನೂನು ಡೊಮೈನ್ನಲ್ಲಿ ಕೆಲಸ ಮಾಡಲು ಮೆಟಾ, ಎನ್ಎಲ್ಎಸ್ಐಯು ಮತ್ತು ಡಿಒಸಿಎ ಜೊತೆ ಕೆಲಸ ಮಾಡಲು ಉತ್ಸುಕರಾಗಗಿದ್ದೇವೆ’ ಎಂದು ಹೇಳಿದರು.
GenAI ಸಂಶೋಧನೆಯಲ್ಲಿ ಮೆಟಾ ಮುಂಚೂಣಿ ಉದ್ಯಮವಾಗಿದೆ ಮತ್ತು ಭಾರತದಲ್ಲಿ ದೃಢವಾದ ಎಐ ವ್ಯವಸ್ಥೆಯನ್ನು ನಿರ್ಮಿಸುವ ಪಾಲುದಾರಿಕೆಯನ್ನು ಹೊಂದಿದೆ. ಎಐ ಮಾದರಿಗಳನ್ನು ನಿರ್ಮಿಸಲು ಮಕ್ತ ವಿಧಾನವನ್ನು ನಂಬುತ್ತದೆ ಮತ್ತು ಅವುಗಳನ್ನು ಜವಾಬ್ದಾರಿಯುತ ರೀತಿಯಲ್ಲಿ ಮುನ್ನಡೆಸಲು ಉದ್ಯಮ, ಸರ್ಕಾರ, ನಾಗರಿಕ ಸಮಾಜ ಮತ್ತು ಅಕಾಡೆಮಿ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದೆ.