ತುಳಸಿ ವಿವಾಹವು ಹಿಂದೂ ಧರ್ಮದಲ್ಲಿ ಹೆಚ್ಚಿನ ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ದಿನವನ್ನು ಆತ್ಯಂತ ಶುಭ ದಿನವೆಂದು ಪರಿಗಣಿಸಲಾಗಿದೆ. ತುಳಸಿ ದೇವಿಯು ಪ್ರತಿ ಮನೆಯಲ್ಲಿ ಉಪಸ್ಥಿತಿತರಿದ್ದಾಳೆ.ದೃಕ್ ಪಂಚಾಂಗದ ಪ್ರಕಾರ, ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯಂದು ತುಳಸಿ ವಿವಾಹವನ್ನು ನಡೆಸಲಾಗುತ್ತದೆ. ಈ ವರ್ಷ, ತುಳಸಿ ವಿವಾಹವನ್ನು ನವೆಂಬರ್ 24, 2023 ರಂದು ನಡೆಸಲಾಗುವುದು. ದ್ವಾದಶಿ ತಿಥಿ ನವೆಂಬರ್ 23 ರಂದು ರಾತ್ರಿ 09:01 ಕ್ಕೆ ಬರುತ್ತಿರುವುದರಿಂದ ಕೆಲವು ಭಕ್ತರು ನವೆಂಬರ್ 23, 2023 ರಂದು ಸಂಜೆ ತುಳಸಿ ವಿವಾಹವನ್ನು ಆಯೋಜಿಸಿರುತ್ತಾರೆ.
ತುಳಸಿ ವಿವಾಹವು ಹಿಂದೂ ಧರ್ಮದ ಮಹತ್ವದ ಆಚರಣೆಗಳಲ್ಲಿ ಒಂದಾಗಿದೆ, ಅಲ್ಲಿ ತುಳಸಿ ಸಸ್ಯ ಮತ್ತು ಶಾಲಿಗ್ರಾಮದ ಪವಿತ್ರ ಒಕ್ಕೂಟವನ್ನು ಆಚರಿಸಲಾಗುತ್ತದೆ ಮತ್ತು ಪೂಜಿಸಲಾಗುತ್ತದೆ. ತುಳಸಿ ಸಸ್ಯವು ದೇಶದ ಪ್ರತಿಯೊಬ್ಬ ಹಿಂದೂ ಮನೆಯಲ್ಲೂ ಹೆಚ್ಚಿನ ಮಹತ್ವವನ್ನು ಹೊಂದಿದೆ. ಸಂಪ್ರದಾಯದ ಪ್ರಕಾರ, ಕುಟುಂಬದ ಮಹಿಳೆ, ಬೆಳಿಗ್ಗೆ, ತಮ್ಮ ಮನೆಯಲ್ಲಿ ತುಳಸಿ ಗಿಡಕ್ಕೆ ನೀರು ಹಾಕುತ್ತಾರೆ, ಮತ್ತು ಸಂಜೆ, ದೀಪ ಮತ್ತು ಧೂಪದ್ರವ್ಯವನ್ನು ಬೆಳಗಿಸುತ್ತಾರೆ.
ತುಳಸಿ ಗಿಡವನ್ನು ಪೂಜಿಸುವ ಮೂಲಕ, ಭಕ್ತರು ದುಷ್ಟರನ್ನು ತಮ್ಮ ಜೀವನದಿಂದ ದೂರವಿರಿಸಬಹುದು ಎಂದು ನಂಬಲಾಗಿದೆ. ತುಳಸಿ ವಿವಾಹದ ಸಮಯದಲ್ಲಿ, ದಾಂಪತ್ಯ ಆನಂದ ಮತ್ತು ದೀರ್ಘಾಯುಷ್ಯವನ್ನು ಪಡೆಯಲು ತುಳಸಿ ಸಸ್ಯವನ್ನು ಶಾಲಿಗ್ರಾಮದೊಂದಿಗೆ ವಿಲೀನಗೊಳಿಸುವುದನ್ನು ಆಚರಿಸಲಾಗುತ್ತದೆ.
ನಮ್ಮ ಹಿಂದೂ ಪುರಾಣಗಳ ಪ್ರಕಾರ ಒಂದು ಬಾರಿ ವಿನಾಯಕ ಗಂಗಾನದಿಯ ದಡದಲ್ಲಿ ತಪಸ್ಸು ಮಾಡುತ್ತಿರುವಾಗ ಅದೇ ಸಮಯದಲ್ಲಿ ತುಳಸಿ ಎನ್ನುವ ಮಹಿಳೆ ಅಲ್ಲಿಗೆ ಧಾವಿಸಿ ಗಣೇಶನನ್ನು ಮೋಹಿಸುತ್ತಾಳೆ.
ತಕ್ಷಣವೇ ಗಣೇಶನ ಬಳಿ ಹೋಗಿ ತನ್ನನ್ನು ವಿವಾಹವಾಗುವಂತೆ ಬೇಡುತ್ತಾಳೆ. ಆದರೆ ಅದಕ್ಕೆ ವಿನಾಯಕ ವಿವಾಹ ವಾದರೆ ನನ್ನ ಬ್ರಹ್ಮಚರ್ಯ ಹಾಳಾಗಿ ನನ್ನ ತಪಸ್ಸಿಗೆ ಭಂಗವಾಗುತ್ತದೆ ಎಂದು ನಿರಾಕರಿಸುತ್ತಾರೆ. ಅದರಿಂದ ಕೋಪಗೊಂಡ ತುಳಸಿ ವಿ ನಾಯಕರನನ್ನು ನೀನು ಯಾವ ರೀತಿ ನನ್ನ ಬಯಕೆ ಈಡೇರಿಸಲಿಲ್ಲ ಹಾಗೆಯೇ ನಿನ್ನ ವಿವಾಹವು ಸಹ ಇಷ್ಟವಿಲ್ಲದೆ ಬಲವಂತವಾಗಿ ನಡೆಯುತ್ತದೆ ಎಂದು ಶಪಿಸುತ್ತಾಳೆ.
ಅದರಿಂದ ಕೋಪಗೊಂಡ ವಿನಾಯಕ ನೀನು ಮುಂಬರುವ ಜನ್ಮದಲ್ಲಿ ಒಬ್ಬ ಅಸುರರನ್ನು ವಿವಾಹವಾಗಿ ಬೇರೊಬ್ಬ ಪುರುಷನಿಂದ ಪಾತಿವ್ರತ್ಯ ಕಳೆದು ಕೊಳ್ಳುತ್ತಿಯ ಎಂದು ಶಪಿಸುತ್ತಾನೆ. ನಂತರ ಆ ತುಳಸಿಯೇ ಮುಂದಿನ ಜನ್ಮ ದಲ್ಲಿ ಕಾಲನೇಮಿ ಎನ್ನುವ ರಾಕ್ಷಸನಿಗೆ ವೃಂದ ಎನ್ನುವ ಹೆಸರಿನಿಂದ ಜನಿಸುತ್ತಾಳೆ.
ಒಂದು ದಿನ ಶಿವ ಹಾಗು ಇಂದ್ರನ ನಡುವೆ ನಡೆದ ಗಲಾಟೆಯಲ್ಲಿ ಶಿವ ಇಂದ್ರನನ್ನು ಭಸ್ಮವಾಗಿ ಸಲು ತನ್ನ ಮೂರನೇ ಕಣ್ಣನ್ನು ತೆರೆಯುತ್ತಾರೆ. ಆದರೆ ಅದೇ ಸಮಯದಲ್ಲಿ ಇಂದ್ರ ಶರಣು ಬೇಡಿದ ಕಾರಣ ಮೂರನೇ ಕಣ್ಣಿನಿಂದ ಉಕ್ಕಿ ಬರುತ್ತಿರುವ ಜ್ವಾಲೆ ದಿಕ್ಕನ್ನು ಸಮುದ್ರ ದೆಡೆಗೆ ಬದಲಾಯಿಸುತ್ತಾನೆ. ಶಿವ ಆ ಜ್ವಾಲೆಯಿಂದ ಜಲಂಧರ ಎನ್ನುವ ಅಸುರ ಜನಿಸುತ್ತಾನೆ.
ಶಿವನ ಕಣ್ಣಿನಿಂದ ಜನಿಸಿದ ಈ ಜಲಂಧರನಿಗೆ ಅಪಾರವಾದ ಶಕ್ತಿವಂತನಾಗಿರುತ್ತಾನೆ. ಇನ್ನು ವೃಂದಾ ವಿಷ್ಣುವಿನ ಪರಮ ಭಕ್ತೆ ಅತಿ ಸೌಂದರ್ಯವತಿ, ಅವಳ ಅಂದಕ್ಕೆ ಭಕ್ತಿ, ಶ್ರದ್ಧೆಗೆ ಆಕರ್ಷಿತ ನಾದ ಜಲಂಧರ ಆಕೆಯನ್ನು ಪ್ರೀತಿಸಿ ವಿವಾಹವಾಗುತ್ತಾನೆ. ವೃಂದಾಳ, ಪವಿತ್ರತೆ, ಭಕ್ತಿ, ಶ್ರದ್ಧೆಯಿಂದ ಜಲಂಧರನ ಬಲ ಪರಾಕ್ರಮ ಶಕ್ತಿ ಇನ್ನಷ್ಟು ಹೆಚ್ಚಾಗುತ್ತದೆ.
ಒಮ್ಮೆ ಜಲಂಧರ ದೇವತೆಗಳೊಡನೆ ಹೋರಾಡುತ್ತಿರುವಾಗ ವಿಷ್ಣು ದೇವತೆಗಳನ್ನು ರಕ್ಷಿಸಲು ಬರುತ್ತಾರೆ. ಇತ್ತ ಶಿವನೊಂದಿಗೂ ಹೋರಾಟಕ್ಕೆ ಇಳಿಯುತ್ತಾನೆ. ಆದರೆ ಜಲಂಧರನನ್ನು ಸೋಲಿಸಲು ಶಿವನಿಂದಲೂ ಆಗುವುದಿಲ್ಲ. ಇಬ್ಬರದ್ದು ಸಮಾನವಾದ ಶಕ್ತಿ. ಅದರೊಂದಿಗೆ ವೃಂದಾಳ ಪಾತಿವ್ರತ್ಯ, ಶಕ್ತಿ ಬೇರೆ ಸೇರಿ ಜಲಂಧರ ಎಲ್ಲರಿಗಿಂತಲೂ ಬಲಶಾಲಿಯಾಗಿರುತ್ತಾನೆ.
ವೃಂದಾಳಿಗೆ ತನ್ನ ಪಾತಿವ್ರತ್ಯ ಇರುವ ವರೆಗೂ ತನ್ನ ಗಂಡನ ಪ್ರಾಣಕ್ಕೆ ಏನೂ ಆಗುವುದಿಲ್ಲವೆಂದು ಬ್ರಹ್ಮ ದೇವ ವರ ನೀಡಿರುತ್ತಾರೆ. ವಿಧಿಯಿಲ್ಲದೆ ವೃಂದಾಳ ಪಾತಿವ್ರತ್ಯ ಹಾಳು ಮಾಡಬೇಕೆಂದು ನಿರ್ಧರಿಸಿದ ವಿಷ್ಣು ಜಲಂಧರನ ರೂಪದಲ್ಲಿ ವೃಂದಾಳ ಪಾತಿವ್ರತ್ಯ ಹಾಳುಮಾಡುತ್ತಾರೆ.
ನಂತರ ವಿಷ್ಣು ತನ್ನ ನಿಜರೂಪಕ್ಕೆ ಬದಲಾದಾಗ ತಾನು ಭಕ್ತಿಯಿಂದ ಶೃದ್ಧೆಯಿಂದ ಪೂಜಿಸುವ ವಿಷ್ಣು ತನ್ನನ್ನು ಮೋಸ ಮಾಡಿರುವುದು ವೃಂದಾಳಿAದ ಸಹಿಸ ಲಾಗುವುದಿಲ್ಲ. ಅದಕ್ಕೆ ವೃಂದ ವಿಷ್ಣುವನ್ನು ಮನಸಾಕ್ಷಿ ಇಲ್ಲದ ನೀನು ಕಲ್ಲಾಗು ಎಂದು ಶಪಿಸುತ್ತಾಳೆ. ವಿಷ್ಣು ಅವಳ ವೇದನೆ ಅರ್ಥ ಮಾಡಿಕೊಂಡು ವೃಂದಾಳ ಶಾಪ ಸ್ವೀಕರಿಸುತ್ತಾನೆ.
ನಡೆದ ಸಂಗತಿಯು ತಿಳಿದು ವೃಂದ ತನ್ನ ತಪ್ಪಿಗೆ ವಿಷ್ಣುವಿನ ಬಳಿ ಕ್ಷಮೆ ಯಾಚಿಸುತ್ತಾಳೆ. ಅದಕ್ಕೆ ವಿಷ್ಣು ವೃಂದ ನೀನು ಮುಂದಿನ ಜನ್ಮ ದಲ್ಲಿ ತುಳಸಿ ಎಂಬ ಹೆಸರಿನಿಂದ ಪವಿತ್ರವಾದ ಗಿಡವಾಗಿ ಜನಿಸುತ್ತಿಯ ಪ್ರತಿ ಪೂಜೆಯಲ್ಲೂ ಅವಶ್ಯಕವಾಗಿ ಇರುತ್ತೀಯ. ನೀನು ಇಲ್ಲದೆ ಯಾವುದೇ ಶುಭ ಕಾರ್ಯ ನಡೆಯುವುದಿಲ್ಲ ವೆಂದು ವರ ನೀಡುತ್ತಾರೆ. ಹಾಗೆ ವೃಂದಾಳ ಶಾಪದಿಂದ ವಿಷ್ಣುವಿನ ಅಂಶ ಸಾಲಿಗ್ರಾಮದಂತೆ ಬದಲಾಗುತ್ತದೆ ಜಲಂಧರನ ಶಕ್ತಿ ವೃಂದ ಪಾತಿವ್ರತ್ಯ ಕಳೆದು ಹೋದ ಕಾರಣ ಕ್ಷೀಣಿಸುತ್ತದೆ.
ಆಗ ಶಿವ ಜಲಂಧರನ್ನು ಸಂಹರಿಸುತ್ತಾರೆ. ಇತ್ತ ವೃಂದ ಪರಪುರುಷ ನಿಂದ ತನ್ನ ದೇಹ ಮೈಲಿಗೆಯ ಆದ ಕಾರಣ ಅವಳು ಅಗ್ನಿಗೆ ಆಹುತಿ ಯಾಗುತ್ತಾಳೆ. ಅದರ ನಂತರ ತುಳಸಿ ಗಿಡ ದಂತೆ ಪವಿತ್ರವಾಗಿ ಜನಿ ಸುತ್ತಾಳೆ. ವೃಂದ ಮರಣಿಸಿದ ಸ್ಥಳವೇ ವೃಂದಾವನವಾಗಿ ಬದಲಾಗುತ್ತದೆ. ಇದು ತುಳಸಿಯ ಕಥೆ.