ನವದೆಹಲಿ : ಭಾರತವನ್ನು ಜಾಗತಿಕ ಕೌಶಲ್ಯದ ಕೇಂದ್ರವಾಗಿಸುವ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿಗದಿಪಡಿಸಿರುವ ದೂರದೃಷ್ಟಿಯ ಉದ್ದೇಶಕ್ಕೆ ಅನುಗುಣವಾಗಿ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ(ಎನ್.ಎಸ್.ಡಿ.ಸಿ.) ಇತ್ತೀಚೆಗೆ ಒಸಾಕಾ ಮತ್ತು ಟೋಕಿಯೋ ನಗರಗಳಲ್ಲಿ ಎರಡು ಪರಿಣಾಮಕಾರಿ ಬಿಸಿನೆಸ್ ಮ್ಯಾಚ್ ಮೇಕಿಂಗ್ ಸೆಮಿನಾರ್ ಗಳನ್ನು ಆಯೋಜಿಸಿತ್ತು. ಈ ವಿಚಾರ ಸಂಕಿರಣಗಳು ಪಾಲುದಾರರು ಮತ್ತು ಉದ್ಯಮದ ನಾಯಕರಿಗೆ ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಭಾರತೀಯ ಅಭ್ಯರ್ಥಿಗಳ ಅಪಾರ ಸಾಮರ್ಥ್ಯವನ್ನು ಪ್ರದರ್ಶಿಸಲು ಅರಿವು ಮೂಡಿಸುವ ಪ್ರಮುಖ ವೇದಿಕೆಯಾಗಿದ್ದವು.
ಜೆಐಟಿಸಿಒ ಜೊತೆಯಲ್ಲಿ ಒಸಾಕಾ ಮತ್ತು ಟೋಕಿಯೋದಲ್ಲಿ ನಡೆದ ಎರಡು ಯಶಸ್ವಿ ವಿಚಾರ ಸಂಕಿರಣಗಳನ್ನು ನಡೆಸಿತು ಮತ್ತು ಭಾರತವನ್ನು ಗ್ಲೋಬಲ್ ಸ್ಕಿಲ್ ಹಬ್ ಆಗಿ ಸ್ಥಾನೀಕರಿಸಿದೆ
ಜಪಾನ್ ಇಂಟರ್ನ್ಯಾಷನಲ್ ಟ್ರೈನೀ ಅಂಡ್ ಸ್ಕಿಲ್ಡ್ ವರ್ಕರ್ ಕೋಆಪರೇಷನ್ ಆರ್ಗನೈಸೇಷನ್(ಜೆಐಟಿಸಿಒ) ಮತ್ತು ಭಾರತದ ರಾಯಭಾರ ಕಛೇರಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ವಿಚಾರ ಸಂಕಿರಣಗಳು ಒಂದು ಪ್ರಾಥಮಿಕ ಉದ್ದೇಶ ಹೊಂದಿದ್ದವು: ಇಂಟಿಯನ್ ಸೆಂಟಿಂಗ್ ಆರ್ಗನೈಸೇಷನ್ಸ್(ಎಸ್.ಒ)ಗಳ ದೃಗ್ಗೋಚರತೆ ಹೆಚ್ಚಿಸುವುದು ಮತ್ತು ಜಪಾನ್ ನ ಕುಶಲಿ ಕಾರ್ಮಿಕರ ಕೊರತೆಯನ್ನು ನಿವಾರಿಸುವಲ್ಲಿ ಭಾರತವು ಪ್ರಸ್ತುತಪಡಿಸುತ್ತಿರುವ ಪರಿಣಾಮಕಾರಿ ಮೌಲ್ಯ ಪ್ರತಿಪಾದನೆಯನ್ನು ಎತ್ತಿ ತೋರಿಸುವುದು.
ಈ ವಿಚಾರ ಸಂಕಿರಣಗಳು ಪ್ರಮುಖ ಸರ್ಕಾರದ ಸಂಸ್ಥೆಗಳಿಂದ ಮೌಲ್ಯಯುತ ಬೆಂಬಲ ಪಡೆದಿದ್ದು ಅದರಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ(ಎಂ.ಎಸ್.ಡಿ.ಇ) ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂ.ಇ.ಎ) ಮತ್ತು ಭಾರತದಲ್ಲಿ ಜಪಾನ್ ರಾಯಭಾರ ಕಛೇರಿ ಒಳಗೊಂಡಿವೆ. ಈ ವಿಚಾರ ಸಂಕಿರಣಗಳು ಎರಡು ಪ್ರಮುಖ ಸರ್ಕಾರದಿಂದ ಸರ್ಕಾರಕ್ಕೆ ಉಪಕ್ರಮಗಳ ಸುತ್ತಲೂ ನಿರ್ದಿಷ್ಟವಾಗಿ ಕೇಂದ್ರೀಕೃತವಾಗಿದ್ದವು: ಟೆಕ್ನಿಕಲ್ ಇಂಟರ್ನ್ ಟ್ರೈನಿಂಗ್ ಪ್ರೋಗ್ರಾಮ್(ಟಿಐಟಿಪಿ) ಅಕ್ಟೋಬರ್ 2017ರಂದು ಪ್ರಾರಂಭಿಸಲಾಗಿದೆ ಮತ್ತು ಸ್ಪೆಸಿಫೈಡ್ ಸ್ಕಿಲ್ಡ್ ವರ್ಕರ್(ಎಸ್.ಎಸ್.ಡಬ್ಲ್ಯೂ) ಪ್ರೋಗ್ರಾಮ್, ಜನವರಿ 2021ರಲ್ಲಿ ಪ್ರಾರಂಭವಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಪ್ರಸ್ತುತವಿರುವ ಕೌಶಲ್ಯಗಳ ಅಂತರ ತುಂಬಲು ಉಪಯುಕ್ತ ಚರ್ಚೆಗಳನ್ನು ನಡೆಸಿದ್ದು ವೈವಿಧ್ಯಮಯ ಸಂಸ್ಥೆಗಳನ್ನು ಪ್ರತಿನಿಧಿಸಿದ್ದರು. ಇದರಲ್ಲಿ ಭಾರತೀಯ ಸ್ಟೇಕ್ ಹೋಲ್ಡರ್ ಆರ್ಗನೈಸೇಷನ್ಸ್(ಎಸ್.ಒ.)ಗೆ ಜಪಾನೀಸ್ ಸೂಪರ್ ವೈಸಿಂಗ್ ಆರ್ಗನೈಸೇಷನ್ಸ್(ಎಸ್.ವಿ.ಒ) ಮತ್ತು ಇಂಪ್ಲಿಮೆಂಟಿಂಗ್ ಆರ್ಗನೈಸೇಷನ್ಸ್(ಐ.ಒ.ಗಳು)ಗಳೊಂದಿಗೆ ಸಹಯೋಗ ಹೊಂದಲು ಪರಿಣಾಮಕಾರಿ ವೇದಿಕೆ ಸೃಷ್ಟಿಸುವುದು ಒಳಗೊಂಡಿತ್ತು.
ಜಪಾನ್ ಮತ್ತು ಭಾರತೀಯ ಸಂಸ್ಥೆಗಳಿಂದ 45 ಮಂದಿ ಅಭ್ಯರ್ಥಿಗಳು ಮತ್ತು 40 ಕಂಪನಿಗಳು ಭಾಗವಹಿಸಿದ್ದವು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರಲ್ಲಿ ಒಸಾಕಾ ಕೋಬ್ ನ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಕಾನ್ಸುಲ್ ಹೆಡ್ ಆಫ್ ಚಾನ್ಸೆರಿ ಶ್ರೀ ಅನಿಲ್ ಕುಮಾರ್ ರಾತೂರಿ, ಜೆಐಟಿಸಿಒದ ಡೆಪ್ಯುಟಿ ಜನರಲ್ ಮ್ಯಾನೇಜರ್ ಇಂಟರ್ನ್ಯಾಷನಲ್ ಅಫೇರ್ಸ್ ಶ್ರೀ ಮಸಟೊ ಕುಮೆ, ಸಿಇಒ ಆಫೀಸ್ ಅಂಡ್ ಸ್ಟ್ರಾಟಜಿಯ
ಜನರಲ್ ಮ್ಯಾನೇಜರ್ ಶ್ರೀ ನಿತಿನ್ ಕಪೂರ್, ಎನ್.ಎಸ್.ಡಿ.ಸಿ.ಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಶ್ರೀ ಅನ್ಷುಲ್ ಸಿಂಘಾಲ್ ಉಪಸ್ಥಿತರಿದ್ದರು. ವರ್ಚುಯಲ್ ರೂಪದಲ್ಲಿ ಭಾಗವಹಿಸಿದವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಒಐಎ ಡಿವಿಷನ್ ನ ಡೆಪ್ಯುಟಿ ಸೆಕ್ರೆಟರಿ ಶ್ರೀ ಭೂಪೇಂದ್ರ ಸಿಂಗ್, ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ಸಚಿವಾಲಯದ ಅಂತಾರಾಷ್ಟ್ರೀಯ ಸಹಯೋಗದ ಡೆಪ್ಯುಟಿ ಡೈರೆಕ್ಟರ್ ಧೃತಿ ಪಾಂಡೆ ಭಾಗವಹಿಸಿದ್ದರು.
ಟೋಕಿಯೋದಲ್ಲಿ ಈ ಕಾರ್ಯಕ್ರಮದಲ್ಲಿ 40 ಕಂಪನಿಗಳು ಮತ್ತು 17 ಇಂಡಿಯನ್ ಸೆಂಡಿಂಗ್ ಆರ್ಗನೈಸೇಷನ್ಸ್ ನಿಂದ 50+ ಅಭ್ಯರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾರತದ ರಾಯಭಾರ ಕಛೇರಿ, ನಿಫ್ಕೊ ಮತ್ತು ಝೆನ್ ಕೆನ್ ಅಲ್ಲದೆ ಎನ್.ಎಸ್.ಡಿ.ಸಿ. ಇಂಡಿಯಾ ತಂಡದ ಪ್ರಮುಖ ಅತಿಥಿಗಳು ಭಾಗವಹಿಸಿದ್ದರು. ಭಾರತದ ರಾಯಭಾರ ಕಛೇರಿಯ ಮೊದಲ ಕಾರ್ಯದರ್ಶಿ ಶ್ರೀ ಸಂಜೀವ್ ಮಚಂದ, ಅವರು ಭಾರತದಲ್ಲಿ ಮಾನವ ಸಂಪನ್ಮೂಲಗಳ ಕುರಿತು ವಿಷಯ ಮಂಡನೆ ಮಾಡಿದರು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಒಐಎ ಡಿವಿಷನ್ ನ ಡೆಪ್ಯುಟಿ ಸೆಕ್ರೆಟರಿ ಶ್ರೀ ಭೂಪೇಂದ್ರ ಸಿಂಗ್(ವರ್ಚುಯಲ್), ಜೆಐಟಿಸಿಒ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಶ್ರೀ ಶಿಂಪೀ ಸುಗ್ಯುರಾ, ಜನರಲ್ ಮ್ಯಾನೇಜರ್, ಸಿಇಒ ಆಫೀಸ್ ಅಂಡ್ ಸ್ಟ್ರಾಟಜಿ ಶ್ರೀ ನಿತಿನ್ ಕಪೂರ್, ಎನ್.ಎಸ್.ಡಿ.ಸಿ.ಯ ಅಡ್ವೈಸರ್ ಶ್ರೀ ಇಸಮು ಕೊಯಮಾ ಮತ್ತು ಎನ್.ಎಸ್.ಡಿ.ಸಿ.ಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಶ್ರೀ ಅನ್ಷುಲ್ ಸಿಂಘಾಲ್ ಮತ್ತು ಜಪಾನಿನ ಕಾರ್ಪೊರೇಟ್ ಗಳು ಮತ್ತು ನೇಮಕ ಸಂಸ್ಥೆಗಳಾದ ನಿಫ್ಕೊ ಇಂಕ್., ಫೋರ್ಥ್ ವ್ಯಾಲಿ, ಝೆನ್ ಕೆನ್ ಕಾರ್ಪೊರೇಷನ್ ಇತ್ಯಾದಿ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದವು.
ಈ ಉಪಕ್ರಮವನ್ನು ಪ್ರಶಂಸಿಸಿದ ಎನ್.ಎಸ್.ಡಿ.ಸಿ.ಯ ಸಿಇಒ ಮತ್ತು ಎನ್.ಎಸ್.ಡಿ.ಸಿ ಇಂಟರ್ನ್ಯಾಷನಲ್ ಎಂ.ಡಿ. ಶ್ರೀ ವೇದ್ ಮಣಿ ತಿವಾರಿ, “ಭಾರತಕ್ಕೆ ಜಾಗತಿಕವಾಗಿ ಕುಶಲಿ ಕಾರ್ಯಪಡೆಯ ಅಗತ್ಯಗಳಿಗೆ ಗಮನಾರ್ಹವಾಗಿ ಪೂರೈಸುವ ಸಾಮರ್ಥ್ಯವಿದೆ ಎಂದು ದೃಡವಾಗಿ ನಂಬಿದ್ದೇವೆ” ಎಂದರು.
“ನಮ್ಮ ಅಭ್ಯರ್ಥಿಗಳು ಜಪಾನ್ ನ ಹಲವಾರು ಕೈಗಾರಿಕೆಗಳ ಬೇಡಿಕೆಗಳನ್ನು ಪೂರೈಸಲು ಸನ್ನದ್ಧರಾಗಿದ್ದಾರೆ ಮತ್ತು ಸಹಯೋಗದ ಪ್ರಯತ್ನಗಳ ಮೂಲಕ ನಾವು ಪ್ರತಿಭೆಯ ತಡೆರಹಿತ ವಿನಿಮಯ ಮಾಡಿಕೊಳ್ಳಬಹುದು. ಭಾರತ ಮತ್ತು ಜಪಾನ್ ನಡುವಿನ ಈ ಸಹಯೋಗವು ಪರಸ್ಪರ ಪ್ರಗತಿ ಮತ್ತು ಅಭಿವೃದ್ಧಿಗೆ ಅಪಾರ ಭರವಸೆ ತಂದಿದೆ ಮತ್ತು ನಾವು ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಸದೃಢ, ಫಲದಾಯಕ ಬಾಂಧವ್ಯ ರೂಪಿಸಲು ಬದ್ಧರಾಗಿದ್ದೇವೆ” ಎಂದರು. ಈ ವಿಚಾರ ಸಂಕಿರಣಗಳ ಸಂದರ್ಭದಲ್ಲಿ ಟಿಐಟಿಪಿ ಕಾರ್ಯಕ್ರಮಗಳ ಕೆಲವು ಫಲಾನುಭವಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಕಾರ್ಮಿಕ ಮಾರುಕಟ್ಟೆಯ ಪೂರೈಕೆ ಮತ್ತು ಬೇಡಿಕೆ, ಕಲಿತ ಪಾಠಗಳು ಮತ್ತು ಶ್ರೇಷ್ಠ ರೂಢಿಗಳನ್ನು ಅರ್ಥ ಮಾಡಿಕೊಳ್ಳಲು ತಜ್ಞರಿಗೆ ನೆರವಾದರು. ಇದು ಸಾರ್ವಜನಿಕ ಮತ್ತು ಖಾಸಗಿ ಪಾಲುದಾರರ ನಡುವೆ ಉತ್ತಮ ಸಂವಾದಕ್ಕೂ ಅವಕಾಶ ಕಲ್ಪಿಸಿತು.
ಭಾರತ ಮತ್ತು ಜಪಾನ್ ಹಲವಾರು ಕೌಶಲ್ಯಾಭಿವೃದ್ಧಿ ಉಪಕ್ರಮಗಳಿಗೆ ಸಹಯೋಗ ಹೊಂದಿದ್ದು ಅವುಗಳಲ್ಲಿ ಇಂಡಿಯಾ-ಜಪಾನ್ ಸ್ಕಿಲ್ ಡೆವಲಪ್ ಮೆಂಟ್ ಕೌನ್ಸಿಲ್ ನಂತಹ ಸಂಸ್ಥೆಗಳು ವೃತ್ತಿ ಶಿಕ್ಷಣ, ತರಬೇತಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಸಹಕಾರವನ್ನು ಉತ್ತೇಜಿಸುತ್ತವೆ. 2016ರಲ್ಲಿ ಎರಡೂ ದೇಶಗಳು “ಮ್ಯಾನುಫ್ಯಾಕ್ಚರಿಂಗ್ ಸ್ಕಿಲ್ ಟ್ರಾನ್ಸ್ ಫರ್ ಪ್ರೊಮೋಷನ್ ಪ್ರೋಗ್ರಾಮ್”ಗೆ ಸಹಿ ಹಾಕಿದ್ದು ಇದು ಜಪಾನೀ ಮಾದರಿಯ ಉತ್ಪಾದನಾ ಕೌಶಲ್ಯಗಳು ಮತ್ತು ರೂಢಿಗಳೊಂದಿಗೆ 10 ವರ್ಷಗಳಿಗೂ ಮೇಲ್ಪಟ್ಟು 30,000 ವ್ಯಕ್ತಿಗಳಿಗೆ ತರಬೇತಿ ನೀಡಲು ಒಪ್ಪಂದವಾಗಿದೆ. ಮೂವತ್ತೈದು ಜಪಾನ್-ಇಂಡಿಯಾ ಇನ್ಸ್ ಟಿಟ್ಯೂಟ್ಸ್ ಫಾರ್ ಮ್ಯಾನುಫ್ಯಾಕ್ಚರಿಂಗ್(ಜೆಐಎಂ) ಮತ್ತು 11 ಜಪಾನೀಸ್ ಎಂಡೋವ್ಡ್ ಕೋರ್ಸಸ್(ಜೆಇಸಿ) ಅನ್ನು ಭಾರತದ ವಿವಿಧ ರಾಜ್ಯಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ.
2017ರಲ್ಲಿ ಟಿಐಟಿಪಿ ಎಂಒಸಿಗೆ ಸಹಿ ಮಾಡಿದ್ದು ಇದು ಕೌಶಲ್ಯಾಭಿವೃದ್ಧಿ ವಲಯದಲ್ಲಿ ಭಾರತ ಮತ್ತು ಜಪಾನ್ ನಡುವಿನ ದ್ವಿಪಕ್ಷೀಯ ಸಹಯೋಗವನ್ನು ಗಮನಾರ್ಹವಾಗಿ ವಿಸ್ತರಿಸಲು ಸಹಿ ಮಾಡಲಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಭಾರತದಿಂದ ಆಯ್ದ ಅಭ್ಯರ್ಥಿಗಳು ಮೂರರಿಂದ ಐದು ವರ್ಷಗಳ ಇಂಟರ್ನ್ ಶಿಪ್ ಅನ್ನು ಜಪಾನ್ ನಲ್ಲಿ ಪಡೆಯಲಿದ್ದು ನಂತರ ಅವರು ಭಾರತಕ್ಕೆ ಹಿಂದಿರುಗಬೇಕು ಮತ್ತು ಜಪಾನ್ ನಲ್ಲಿ ಪಡೆದ ಕೌಶಲ್ಯಗಳನ್ನು ಬಳಸಿಕೊಳ್ಳಬೇಕು.
ಅದೇ ರೀತಿಯಲ್ಲಿ ಏಪ್ರಿಲ್ 2019ರಲ್ಲಿ ಜಪಾನ್ ಸರ್ಕಾರವು `ಸ್ಪೆಸಿಫೈಡ್ ಸ್ಕಿಲ್ಡ್ ವರ್ಕರ್’ ಅನ್ನು ಪರಿಚಯಿಸಿದ್ದು ಅದರಲ್ಲಿ ಭಾರತದ ಯುವಜನರಿಗೆ ಜಪಾನ್ ನಲ್ಲಿ ಉದ್ಯೋಗ ಪಡೆದುಕೊಳ್ಳಲು ಮತ್ತು ಉಳಿಯಲು ಅವಕಾಶ ನೀಡುತ್ತದೆ. ಜಪಾನ್ `ಸ್ಪೆಸಿಫೈಡ್ ಸ್ಕಿಲ್ಡ್ ವರ್ಕರ್’ ಅನ್ನು ಜಪಾನ್ ನಲ್ಲಿನ ಕಾರ್ಮಿಕರ ಕೊರತೆಯನ್ನು ತುಂಬಲು ಪರಿಚಯಿಸಿದ್ದು ನಿರ್ದಿಷ್ಟ ಪರಿಣಿತಿ ಮತ್ತು ಕೌಶಲ್ಯಗಳನ್ನು ಒಳಗೊಂಡ ವಿದೇಶಿ ಮಾನವ ಸಂಪನ್ಮೂಲಗಳನ್ನು ಒಪ್ಪಿಕೊಳ್ಳುತ್ತದೆ. ಜುಲೈ 2022ರಂತೆ ಜಪಾನ್ ಎಸ್.ಎಸ್.ಡಬ್ಲ್ಯೂ ಮೆಮೊರಾಂಡಂ ಆಫ್ ಕೋಆಪರೇಷನ್(ಎಂಒಸಿ)ಯಲ್ಲಿ ಭಾರತ ಒಳಗೊಂಡು 15 ದೇಶಗಳೊಂದಿಗೆ ಸಹಿ ಹಾಕಿದೆ ಮತ್ತು ಜಪಾನ್ 2021ರಲ್ಲಿ ಭಾರತ ಮತ್ತು ಜಪಾನ್ ನಡುವೆ `ಸ್ಪೆಸಿಫೈಡ್ ಸ್ಕಿಲ್ಡ್ ವರ್ಕರ್’ ಅನುಷ್ಠಾನಕ್ಕೆ ಒಡಂಬಡಿಕೆಗೆ ಸಹಿ ಹಾಕಿದೆ.
ಎನ್.ಎಸ್.ಡಿ.ಸಿ.ಯ ಶೇ.100 ಅಧೀನ ಸಂಸ್ಥೆ ಎನ್.ಎಸ್.ಡಿ.ಸಿ. ಇಂಟರ್ನ್ಯಾಷನಲ್ ಉದ್ಯೋಗಾವಕಾಶಗಳನ್ನು ಉತ್ತೇಜಿಸುವ ಮತ್ತು ಆರ್ಥಿಕ ಪ್ರಗತಿಯನ್ನು ವಿಸ್ತರಿಸುವ ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ ಉಪಕ್ರಮಗಳಿಗೆ ಸೌಲಭ್ಯ ಒದಗಿಸುವ ಸಮಗ್ರವಾದ ವಲಯಗಳ ಪಟ್ಟಿಗೆ ಪೂರೈಕೆ ಮಾಡುತ್ತದೆ. ಅವುಗಳಲ್ಲಿ ವಸ್ತ್ರ, ಆರೋಗ್ಯಸೇವೆ, ಕಟ್ಟಡ ನಿರ್ಮಾಣ, ಆತಿಥ್ಯ ಮತ್ತು ರೈಲ್ವೆ ಒಳಗೊಂಡಿವೆ. ಕೌಶಲ್ಯಾಭಿವೃದ್ಧಿಯಲ್ಲಿ ಭಾರತ ಮತ್ತು ಜಪಾನ್ ಜಂಟಿ ಉಪಕ್ರಮಗಳು ಅವುಗಳ ದೇಶದ ಗಡಿಗಳನ್ನು ಮೀರಿ ವಿಸ್ತರಿಸಿವೆ. ಅವು ತಮ್ಮ ಸಹಯೋಗಕ್ಕೆ ಅಂತಾರಾಷ್ಟ್ರೀಯ ಮೊಬಿಲಿಟಿಯೇ ಕೇಂದ್ರ ಬಿಂದು ಎಂಬ ಹಂಚಿಕೊಂಡ ದೃಷ್ಟಿಕೋನ ಹೊಂದಿವೆ. ಈ ಸಾಮೂಹಿಕ ಗುರಿಯು 21ನೇ ಶತಮಾನದಲ್ಲಿ ಸವಾಲುಗಳನ್ನು ಎದುರಿಸಲು ಮತ್ತು ಅವಕಾಶಗಳನ್ನು ಬಳಸಿಕೊಳ್ಳಲು ಜಾಗತಿಕವಾಗಿ ಸಮರ್ಥ ಕಾರ್ಯಪಡೆ ಅತ್ಯಂತ ಮುಖ್ಯ ಎಂಬ ದೃಢ ನಂಬಿಕೆಯಲ್ಲಿ ಬೇರೂರಿದೆ.