ಮಂಗಳೂರು: ಲಯನ್ ಜಿಲ್ಲಾ ಮಟ್ಟದ ‘ಲಯನ್ಸ್ ಸಿಂಗಿಂಗ್ ಸ್ಟಾರ್ಸ್’ ಕಾರ್ಯಕ್ರಮ ಲಯನ್ ಸೇವಾ ಮಂದಿರದಲ್ಲಿ ಯಶಸ್ವಿಯಾಗಿ ಇತ್ತೀಚೆಗೆ ನೆರವೇರಿತು.
130 ಸದಸ್ಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಹಾಡಿನ ಮೂಲಕ ವ್ಯಕ್ತಪಡಿಸಿದರು.ಸಭಾಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವ ಪ್ರತಿಭೆ ಕುಮಾರಿ ಅಪೇಕ್ಷಾ ಪೈ ಹಾಗೂ ಕುಮಾರಿ ತನುಶ್ರೀ ಇವರನ್ನು ಸನ್ಮಾನ ಪತ್ರ ಹಾಗೂ ರು.5000 ಕೊಟ್ಟು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಲಯನ್ ಜಿಲ್ಲಾ ಗವರ್ನರ್ ಲ| ಡಾ| ಮೆಲ್ವಿನ್ ಡಿಸೋಜಾ ದಂಪತಿಗಳು, ಕಾರ್ಯಕ್ರಮದ ಮುಖ್ಯ ಸಂಯೋಜಕ ಲ| ಸೈಮನ್ ಲೋಬೊ, ಉಪಸಂಯೋಜಕರು, ಜಿಲ್ಲಾ ಸಂಪುಟ ಸದಸ್ಯರು, ಜಿಲ್ಲಾ ಲಿಯೋ ಅಧ್ಯಕ್ಷೆ ಡಾ| ರಂಜಿತಾ ಶೆಟ್ಟಿ, ಮುಖ್ಯ ಸಲಹೆಗಾರರಾಗಿ 2nd ವೈಸ್ ಜಿಲ್ಲಾ ಗವರ್ನರ್ ಲ| ಅರವಿಂದ್ ಶೆಣೈ ಹಾಜರಿದ್ದರು.ಪ್ರಾಂತೀಯ ಮಟ್ಟದ ಅಂತಾಕ್ಷರಿ ಸ್ಪರ್ಧೆಯನ್ನು ಲ| ಕುಂಬ್ಳೆ ನರಸಿಂಹ ಪ್ರಭು ಯಶಸ್ವಿಯಾಗಿ ನೆರವೇರಿಸಿ ಕೊಟ್ಟರು.