ದೀಪಾವಳಿ ದೀಪಗಳ ಹಬ್ಬ ಮಾತ್ರವಲ್ಲ ಸಂತೋಷಗಳನ್ನು ಹಂಚುವುದರ ಜೊತೆಗೆ ಭಾಂದವ್ಯಗಳನ್ನು ಬೆಸೆಯುವ ಹಬ್ಬವೂ ಹೌದು. ತುಳುನಾಡಿನ ಹಿಂದೂ ಧರ್ಮದಲ್ಲಿ ಆಚರಿಸಲ್ಪಡುವ ಪ್ರಮುಖ ಹಬ್ಬಗಳಲ್ಲಿ ದೀಪಾವಳಿಯೂ ಒಂದು.
ದೀಪಾವಳಿ ಹಬ್ಬದಂದು ಮನೆಗಳೆಲ್ಲ ಹಣತೆ ದೀಪದಿಂದ ಸಿಂಗರಿಸಲ್ಪಡುತ್ತದೆ. ಸುತ್ತ ಮೂಡುವ ಬೆಳಕು ಮನೆಯ ಸುತ್ತಮುತ್ತಲಿನ ನಕಾರಾತ್ಮಕ ಶಕ್ತಿಗಳನ್ನು ದೂರಗೊಳಿಸಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ಮನೆ ಮನದಲ್ಲಿ ಖುಷಿಯನ್ನು ಏರ್ಪಡಿಸುತ್ತದೆ ಎಂಬುವುದು ಇಲ್ಲಿನ ನಂಬಿಕೆ.
ದೀಪಾವಳಿಯನ್ನು ಆಚರಣೆ ಹೊಸತನಗಳ ಹಬ್ಬ ಎಂದರೆ ತಪ್ಪಾಗದು, ಹಬ್ಬದ ಮೊದಲ ದಿನ ಎಣ್ಣೆ ಸ್ನಾನ, ಹೊಸ ಬಟ್ಟೆಗಳು, ಮನೆ ಅಲಂಕಾರ, ಬಗೆ ಬಗೆ ಸಿಹಿ ತಿಂಡಿಗಳು ಎಲ್ಲವೂ ಒಂದಕ್ಕೊಂದು ಮನಸೂರೆಗೊಳಿಸುವಂತಿರುತ್ತದೆ.
ದುಷ್ಟ ಸಂಹಾರದ ವಿಜಯೋತ್ಸವದ ಸಲುವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಗುತ್ತದೆ. ಪಟಾಕಿ ಎಂದೊಡನೆ ನೆನಪಾಗುವುದೇ ಬಾಲ್ಯದ ದಿನಗಳು ಹೊಸ ಬಟ್ಟೆ ಧರಿಸಿ,ಪೂಜೆ ಮುಗಿಸಿ ತಂದಿಟ್ಟ ಬಣ್ಣ ಬಣ್ಣದ ಪಟಾಕಿ ಸಿಡಿಸಲು ಕಾಯುತ್ತಿದ್ದ ನೆನಪುಗಳು. ಒಂದಿಷ್ಟು ಭಯವಿದ್ದರು ಖುಷಿಗೆ ಪಾರವೇ ಇರಲಿಲ್ಲ. ಎಲ್ಲರ ಜೊತೆಗೂಡಿ ಮಾಡಿದ ಮೋಜಿಗೆ ಸರಿಸಮ ಯಾವುದೂ ಇಲ್ಲ.
ದೀಪಾವಳಿ ಬರೀ ದೀಪಗಳ ಹಬ್ಬ ಮಾತ್ರವಲ್ಲ, ಈ ಹಬ್ಬದಂದು ಲಕ್ಷ್ಮೀ ಯನ್ನು ಆರಾಧಿಸಲಾಗುತ್ತದೆ.ರೈತರು ಫಸಲನ್ನು ಲಕ್ಷ್ಮೀಗೆ ಅರ್ಪಿಸುವುದರ ಮೂಲಕ ದೇವಿಯು ಸಮೃದ್ಧಿ ಹಾಗೂ ಸಂಪತ್ತನ್ನು ಕರುಣಿಸುತ್ತಾಳೆ ಎನ್ನುವ ನಂಬಿಕೆಯಿದೆ.
ಇದೇ ಸಮಯದಲ್ಲಿ ಗೋಪೂಜೆಯನ್ನು ಮಾಡುತ್ತಾರೆ ದೀಪಾವಳಿಯಂದು ಬಲೀಂದ್ರನ್ನು ಕರೆಯುವ ಸಂಪ್ರದಾವೂ ಇದೆ ಇದನ್ನು ಬಲಿ ಪಾಡ್ಯ ಎಂದೂ ಕರೆಯುತ್ತಾರೆ.
ಪ್ರಸ್ತುತ ಬದಲಾಗುತ್ತಿರುವ ಜನಗಳ ಮಧ್ಯೆ ಇಂದಿಗೂ ಹಳೇ ಸಂಪ್ರದಾಯ, ಆಚರಣೆಗಳು ಬದಲಾಗದೇ ಉಳಿದಿರುವುದು ಉಳಿಸಿಕೊಂಡು ಬಂದಿರುವುದೇ ಉತ್ತಮ ನಿದರ್ಶನ. ಮುಂದಿನ ಪೀಳಿಗೆಯು ಹೀಗೆಯೇ ಇರಲಿ ನಮ್ಮ ಧರ್ಮ, ನಮ್ಮ ಸಂಸ್ಕ್ರತಿ ಉಳಿಯಲಿ.
ಬರಹ: ಕಾವ್ಯ ಪ್ರಜೇಶ್, ಗಟ್ಟಿ
ಬೆಸೆಂಟ್ ಮಹಿಳಾ ಕಾಲೇಜು, ಮಂಗಳೂರು