ಬೆಂಗಳೂರು: ಬಳಕೆದಾರರ ಸುರಕ್ಷತೆ ಮತ್ತು ಯುವಜನತೆಯ ಯೋಗಕ್ಷೇಮ ಕುರಿತಾದ ತನ್ನ ಬದ್ಧತೆಯನ್ನು ವಿಸ್ತರಿಸುವ ಸಲುವಾಗಿ ಮೆಟಾ ಇಂದು ಕರ್ನಾಟಕದಲ್ಲಿ ಡಿಜಿಟಲ್ ಸುರಕ್ಷಾ ಶೃಂಗಸಭೆಯನ್ನು ಆಯೋಜಿಸಿತ್ತು. ಈ ಶೃಂಗಸಭೆಯಲ್ಲಿ ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐಟಿ ಮತ್ತು ಬಿಟಿ) ಸಚಿವರಾದ ಗೌರವಾನ್ವಿತ ಪ್ರಿಯಾಂಕ್ ಖರ್ಗೆ ಭಾಗವಹಿಸಿದ್ದರು. ಜೊತೆಗೆ ವಿವಿಧ ಕ್ರಿಯೇಟರ್ಗಳು, ಶಿಕ್ಷಣತಜ್ಞರು, ಸಿಎಸ್ಓ ಪಾಲುದಾರರು ಮತ್ತು ಪೋಷಕ ಸಮುದಾಯಗಳ ಸದಸ್ಯರು ಭಾಗವಹಿಸಿದ್ದರು.
ಈ ವರ್ಷದ ಆರಂಭದಲ್ಲಿ, ಪ್ರತಿಯೊಬ್ಬರಿಗೂ ಸುರಕ್ಷಿತ ಮತ್ತು ಅಂತರ್ಗತ ಅಂತರ್ಜಾಲವನ್ನು ನೀಡುವ ತನ್ನ ಪ್ರಯತ್ನ ಸಾಧನೆಗೆ ಮೆಟಾ, ಡಿಜಿಟಲ್ ಸುರಕ್ಷಾ ಶೃಂಗಸಭೆಯನ್ನು ಪ್ರಾರಂಭಿಸಿತು. ಇದು ಯುವ ಜನರ ಒಳಿತಿಗಾಗಿ ಡಿಜಿಟಲ್ ಶಿಕ್ಷಣ ಮತ್ತು ಸಾಕ್ಷರತೆಯನ್ನು ಒದಗಿಸುವಿಕೆ, ಮಕ್ಕಳ ಸುರಕ್ಷತೆ, ತಪ್ಪು ಮಾಹಿತಿಯನ್ನು ನಿಭಾಯಿಸುವುದು ಮತ್ತು ಮೆಟಾ ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಿರುವ ವಿವಿಧ ಸುರಕ್ಷತಾ ಟೂಲ್ಗಳು ಮತ್ತು ಸಂಪನ್ಮೂಲಗಳ ಕುರಿತಾದ ಬಳಕೆದಾರರ ಒಟ್ಟಾರೆ ಶಿಕ್ಷಣ ನೀಡುವ ಕ್ರಮಗಳನ್ನು ಒಳಗೊಂಡಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐಟಿ ಮತ್ತು ಬಿಟಿ) ಸಚಿವರಾದ ಗೌರವಾನ್ವಿತ ಪ್ರಿಯಾಂಕ್ ಖರ್ಗೆ ಅವರು, “ಭಾರತ ದೇಶವು ತ್ವರಿತವಾದ ಡಿಜಿಟಲ್ ಅಳವಡಿಕೆಗೆ ಸಾಕ್ಷಿಯಾಗಿದೆ. ಇದು ಆನ್ಲೈನ್ನಲ್ಲಿ ತಮ್ಮ ಯೋಗಕ್ಷೇಮವನ್ನು ಕಾಪಾಡಲು ಬಳಕೆದಾರರಿಗೆ ಸುಲಭವಾಗಿ ದೊರಕಬಹುದಾದ ಟೂಲ್ಗಳು ಮತ್ತು ಸಂಪನ್ಮೂಲಗಳನ್ನು ಒದಗಿಸಬೇಕಾದ ಅಗತ್ಯವನ್ನು ಉಂಟುಮಾಡುತ್ತದೆ. ಕರ್ನಾಟಕ ಸರಕಾರವು ಕ್ರಿಯಾಶೀಲವಾದ ಮತ್ತು ಒಳಗೊಳ್ಳುವಿಕೆಯ ಇಂಟರ್ನೆಟ್ ಪರಿಸರವನ್ನು ರಚಿಸಲು ವಿವಿಧ ಪಾಲುದಾರರು ಮತ್ತು ತಜ್ಞರೊಂದಿಗೆ ಕೆಲಸ ಮಾಡಲು ಬದ್ಧವಾಗಿದೆ. ಈ ನಿಟ್ಟಿನಲ್ಲಿ ಜನರು, ವಿಶೇಷವಾಗಿ ಮಹಿಳೆಯರು ಮತ್ತು ಯುವಜನರನ್ನು ಆನ್ಲೈನ್ನಲ್ಲಿ ಸುರಕ್ಷಿತವಾಗಿಡಲು ಮೆಟಾದಂತಹ ಕಂಪನಿಗಳು ಸರ್ಕಾರದ ದೃಷ್ಟಿಕೋನಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಕರ್ನಾಟಕದ ಜನರ ಆನ್ಲೈನ್ ಬಳಕೆದಾರರ ಸುರಕ್ಷತೆಗೆ ಆದ್ಯತೆ ನೀಡುವ ಕುರಿತಾದ ಅವರ ಬೆಂಬಲವನ್ನು ನಾನು ಪ್ರಶಂಸಿಸುತ್ತೇನೆ” ಎಂದು ಹೇಳಿದರು.
ಮೆಟಾ ಇಂಡಿಯಾದ ಉಪಾಧ್ಯಕ್ಷೆ ಸಂಧ್ಯಾ ದೇವನಾಥನ್ ಅವರು ಮಾತನಾಡುತ್ತಾ, “ಲಕ್ಷಾಂತರ ಜನರಿಗೆ, ವಿಶೇಷವಾಗಿ ಮಹಿಳೆಯರು ಮತ್ತು ಯುವ ಜನಜನತೆಗೆ ಧ್ವನಿಯನ್ನು ನೀಡುವ ಮೂಲಕ ದೇಶದಲ್ಲಿ ನಮ್ಮ ಆ್ಯಪ್ಗಳು ನಿರ್ವಹಿಸುತ್ತಿರುವ ಸಬಲೀಕರಣದ ಪಾತ್ರವನ್ನು ನಾವು ಅರಿತಿದ್ದೇವೆ. ಜನರು ಆನ್ಲೈನ್ನಲ್ಲಿ ಸುರಕ್ಷಿತ ಮತ್ತು ಸಕಾರಾತ್ಮಕ ಅನುಭವವನ್ನು ಪಡೆಯುವುದಕ್ಕಾಗಿ ನಾವು ಸರಿಯಾದ ಪಾಲಿಸಿಗಳು, ಉತ್ಪನ್ನಗಳು ಮತ್ತು ಮುನ್ನೆಚ್ಚರಿಕೆಗಳನ್ನು ಒದಗಿಸಲು ದಣಿವಿನ ಅರಿವೆಯೇ ಇಲ್ಲದೆ ಕೆಲಸ ಮಾಡುತ್ತೇವೆ. ದೇಶದ ಐಟಿ ಕೇಂದ್ರವಾಗಿರುವ ಕರ್ನಾಟಕಕ್ಕೆ ನಮ್ಮ ಡಿಜಿಟಲ್ ಸುರಕ್ಷಾ ಶೃಂಗಸಭೆಯನ್ನು ತಂದಿರುವುದಕ್ಕಾಗಿ ಮತ್ತು ಈ ಪ್ರದೇಶದಲ್ಲಿ ನಮ್ಮ ಉದ್ಯಮದ ಪ್ರಧಾನ ಪ್ರಯತ್ನಗಳನ್ನು ಮುಂದುವರಿಸಲು ನಾಗರಿಕ ಸಮಾಜದ ಸಂಘಟನೆಗಳು ಮತ್ತು ಪಾಲಿಸಿ ಸ್ಟೇಕ್ ಹೋಲ್ಡರ್ಗಳೊಂದಿಗೆ ಹೇಗೆ ಪಾಲುದಾರಿಕೆಯನ್ನು ಮುಂದುವರಿಸಬಹುದು ಎಂಬುದರ ಕುರಿತು ಅರ್ಥಪೂರ್ಣ ಸಂವಾದದಲ್ಲಿ ತೊಡಗಿಸಿಕೊಳ್ಳಲು ನಾನು ಸಂತೋಷಪಡುತ್ತೇನೆ” ಎಂದರು.
ಕಳೆದ ಮೂರು ವರ್ಷಗಳಲ್ಲಿ, ಆನ್ಲೈನ್ ಸುರಕ್ಷತೆಯನ್ನು ಉತ್ತೇಜಿಸುವ ಸಲುವಾಗಿ ಮೆಟಾ 30ಕ್ಕೂ ಹೆಚ್ಚು ಸುರಕ್ಷತಾ ಟೂಲ್ಗಳು ಮತ್ತು ಫೀಚರ್ಗಳನ್ನು ಬಿಡುಗಡೆ ಮಾಡಿದೆ. ಇಂದು ಹೆಚ್ಚು ಶೇಕಡಾವಾರು ಆನ್ಲೈನ್ ಬಳಕೆದಾರರು ಹದಿಹರೆಯದವರಾಗಿರುವುದರಿಂದ, ಮೆಟಾ ತನ್ನ ಯುವ ಜನತೆಯ ಯೋಗಕ್ಷೇಮ ಪಾಲಿಸುವ ಪ್ರಯತ್ನಗಳ ಭಾಗವಾಗಿ ಹಲವು ಉಪಕ್ರಮಗಳು ಮತ್ತು ಟೂಲ್ಗಳ ಸರಣಿಯನ್ನು ಪರಿಚಯಿಸಿದೆ. ಇನ್ಸ್ಟಾಮ್ಗ್ರಾಮ್ನಲ್ಲಿನ ‘ಕ್ವೈಟ್ ಮೋಡ್’ ನಂತಹ ಫೀಚರ್ಗಳು ಅದರದೇ ಭಾಗವಾಗಿದೆ, ಆ ಫೀಚರ್ ಮೂಲಕ ಹದಿಹರೆಯದ ಬಳಕೆದಾರರು ಆ್ಯಪ್ನಲ್ಲಿ ಕಳೆಯುವ ಸಮಯ ಮತ್ತು ಅವರು ಏನು ನೋಡುತ್ತಾರೆ ಎಂಬುದರ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಲು ಸಹಾಯ ಮಾಡುತ್ತದೆ.
ಇದಲ್ಲದೆ, ಇತರ ಇತ್ತೀಚಿನ ಫೀಚರ್ಗಳಾದ ಪೇರೆಂಟಲ್ ಸೂಪರ್ ವಿಷನ್ ಟೂಲ್ಗಳು ಮತ್ತು ಫ್ಯಾಮಿಲಿ ಸೆಂಟರ್, ಇನ್ಸ್ಟಾಮ್ಗ್ರಾಮ್ನಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ತಮ್ಮ ಹದಿಹರೆಯದವರ ಅನುಭವಗಳನ್ನು ತಿಳಿದುಕೊಳ್ಳಲು ಪೋಷಕರಿಗೆ ನೆರವಾಗುತ್ತವೆ. ಪೇರೆಂಟಲ್ ಸೂಪರ್ ವಿಷನ್ ಟೂಲ್ಗಳು ಯುವ ಬಳಕೆದಾರರ ಪೋಷಕರಿಗೆ ಇನ್ಸ್ಟಾಮ್ಗ್ರಾಮ್ನಲ್ಲಿ ಸಮಯವನ್ನು ನಿರ್ವಹಿಸಲು ಅನುಮತಿ ನೀಡಿದರೆ, ಫ್ಯಾಮಿಲಿ ಸೆಂಟರ್, ಎಜುಕೇಷನ್ ಹಬ್ ಅನ್ನು ಒಳಗೊಂಡಿದೆ. ಇಂಥದ್ದೇ ಟೂಲ್ಗಳನ್ನು ಮೆಸೆಂಜರ್ನಲ್ಲಿಯೂ ಪರಿಚಯಿಸಲಾಗಿದ್ದು, ಆ ಮೂಲಕ ಪೋಷಕರು ತಮ್ಮ ಹದಿಹರೆಯದ ಮಕ್ಕಳು ಹೇಗೆ ಸಮಯ ಕಳೆಯುತ್ತಾರೆ ಮತ್ತು ಯಾರ ಜೊತೆ ಸಂವಾದಿಸುತ್ತಾರೆ ಎಂಬುದನ್ನು ತಿಳಿಯಬಹುದಾಗಿದೆ. ಇದರೊಂದಿಗೆ ಮೆಟಾ ಇನ್ನೂ ಹೊಸ ಟೂಲ್ಗಳನ್ನು ಪರಿಚಯಿಸಿದ್ದು, ಅವು ಇನ್ಸ್ಟಾಗ್ರಾಮ್ ಡಿಎಂ ಮತ್ತು ಮೆಸೆಂಜರ್ನಲ್ಲಿ ಅನಗತ್ಯ ಸಂವಹನಗಳಿಗೆ ಮಿತಿಯನ್ನೊಡ್ಡುತ್ತದೆ ಮತ್ತು ಫೇಸ್ಬುಕ್ನಲ್ಲಿ ಹದಿಹರೆಯದವರಿಗೆ ಸಮಯದ ಮಿತಿಹಾಕಿಕೊಳ್ಳಲು ಕ್ರಮ ವಹಿಸುತ್ತದೆ.
ಫೇಸ್ಬುಕ್ನ ಇತರ ಫೀಚರ್ಗಳು ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಗೆ ಬೇಕಾದ ಸಂಪನ್ಮೂಲಗಳನ್ನು ಒಳಗೊಂಡಿದೆ, ಅದು ಸೇಫ್ಟಿ ಸೆಂಟರ್ನಲ್ಲಿ ಕಂಡುಬರುತ್ತದೆ. ಅದನ್ನು ಆನ್ಲೈನ್ನಲ್ಲಿ ಯುವಜನತೆಯ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಬೆಂಬಲಿಸುವ ಪಾಲಿಸಿಗಳು, ಸಂಪನ್ಮೂಲಗಳು ಮತ್ತು ಟೂಲ್ಗಳನ್ನು ಒದಗಿಸುವುದರೊಂದಿಗೆ ಪೋಷಕರು, ಕಾಳಜಿ ಒದಗಿಸುವವರು ಮತ್ತು ಶಿಕ್ಷಕರನ್ನು ಬೆಂಬಲಿಸುವ ಸಲುವಾಗಿ ವಿನ್ಯಾಸಗೊಳಿಸಲಾಗಿದೆ, ಹಾಗೆಯೇ ಪ್ಲಾಟ್ಫಾರ್ಮಿನಲ್ಲಿ ನ್ಯಾವಿಗೇಟ್ ಮಾಡುವ ಸಂದರ್ಭದಲ್ಲಿ ಮಹಿಳೆಯರಿಗೆ ಅಗತ್ಯವಿರುವ ಎಲ್ಲಾ ಸುರಕ್ಷತಾ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಪ್ರವೇಶಾವಕಾಶವನ್ನು ಒದಗಿಸುತ್ತದೆ. ಈ ಎರಡೂ ಟೂಲ್ಗಳು ಕನ್ನಡದಲ್ಲಿ ಮತ್ತು ಇತರ 10 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ.
ಮೆಟಾ ಕುರಿತು:
ಜನರು ಕನೆಕ್ಟ್ ಆಗಲು, ಸಮುದಾಯಗಳನ್ನು ಹುಡುಕಲು ಮತ್ತು ಬಿಸಿನೆಸ್ಗಳನ್ನು ಬೆಳೆಸಲು ನೆರವಾಗುವ ತಂತ್ರಜ್ಞಾನಗಳನ್ನು ಮೆಟಾ ಕಟ್ಟಿಕೊಡುತ್ತದೆ. 2004ರಲ್ಲಿ ಫೇಸ್ಬುಕ್ ಪ್ರಾರಂಭವಾದಾಗ, ಮೆಸೆಂಜರ್, ಇನ್ಸ್ಟಾಗ್ರಾಮ್, ವಾಟ್ಸ್ಆ್ಯಪ್ನಂತಹ ಆ್ಯಪ್ಗಳ ಮೂಲಕ ಜನರು ಕರೆಕ್ಟ್ ಆಗುವ ರೀತಿಯನ್ನೇ ಬದಲಿಸಿತು, ಆ ಮೂಲಕ ಪ್ರಪಂಚದಾದ್ಯಂತ ಇರುವ ಕೋಟ್ಯಂತರ ಜನರನ್ನು ಸಶಕ್ತಗೊಳಿಸಿತು. ಪ್ರಸ್ತುತ, ಮೆಟಾ ಸಾಮಾಜಿಕ ತಂತ್ರಜ್ಞಾನದಲ್ಲಿ ಮುಂದಿನ ಪ್ರಗತಿಯನ್ನು ಸಾಧಿಸಲು ನೆರವಾಗಲು ಆಗ್ಮೆಂಟೆಡ್ ಮತ್ತು ವರ್ಚುವಲ್ ರಿಯಾಲಿಟಿಯಂತಹ ತಲ್ಲೀನಗೊಳಿಸುವ ಅನುಭವಗಳನ್ನು ಒದಗಿಸಲು 2ಡಿ ಸ್ಕ್ರೀನ್ಗಳನ್ನು ದಾಟಿ ಮುಂದೆ ಸಾಗುತ್ತಿದೆ.