ಮಂಗಳೂರು: ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಗರದ ವೆರಿಟೊ ಮೀಡಿಯಾ ಸಂಸ್ಥೆಯಲ್ಲಿ ಕನ್ನಡ ಭುವನೇಶ್ವರಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತ್ತು.
ಮಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲ್ಲಚ್ಚು ಪ್ರಕಾಶನ, ಅರುಣ್ಯ ಫೌಂಡೇಸನ್ ಇವರ ಪ್ರಯೋಜಕತ್ವದಲ್ಲಿ, 68ನೇ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ವಿಶೇಷ ಕಾರ್ಯಕ್ರಮ ವಿಚಾರ ಸಂಕಿರಣ ಮತ್ತು ಸಂವಾದವನ್ನು ಹಮ್ಮಿ ಕೊಳ್ಳಲಾಯಿತ್ತು.
ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನಿವೃತ್ತ ಅಪನ್ಯಾಸಕರು ಮತ್ತು ಸಾಹಿತಿ, ಡಾ. ಎಮ್ ಎಸ್ ಶಿವ ಪ್ರಕಾಶ್, ಕನ್ನಡ ಸಂಘಟಕರು ಯು ಎಚ್ ಖಲೀದ್ ಉಜಿರೆ, ಹಾಗೂ ಪೀಟರ್ ಪಿಂಟೊ ಆಗಮಿಸಿದರು.
ಈ ಸಂದರ್ಭದಲ್ಲಿ ಖ್ಯಾತ ಸಂಗೀತಗಾರ ಲಯನ್ ರೋನಿ ಕ್ರಾಸ್ತ ಉಪಸ್ಥಿತರಿದ್ದರು. ಕಲ್ಲಚ್ಚು ಪ್ರಕಾಶನದ ಮಹೇಶ್ ಆರ್ ನಾಯಕ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ವೆರಿಟೊ ಮೀಡಿಯಾದ ವ್ಯವಾಸ್ಥಪಾಕ ನಿರ್ದೇಶಕ ಶ್ರೀನಿವಾಸ ಪೆಜತ್ತಾಯ ವಂದಿಸಿದರು.