ಮಂಗಳೂರು: ಬ್ಯಾಂಕ್ ಆಫ್ ಬರೋಡಾ ಮಂಗಳೂರು ವಲಯದ ಶಾಖೆಯಿಂದ “ಭ್ರಷ್ಟಾಚಾರ ತ್ಯಜಿಸಿ, ರಾಷ್ಟ್ರಕ್ಕೆ ಬದ್ಧರಾಗಿರಿ” ಎಂಬ ಧ್ಯೇಯದೊಂದಿಗೆ ಭಾರತದ ಉಕ್ಕಿನ ಮನುಷ್ಯ ಶ್ರೀ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯ ಸ್ಮರಣಾರ್ಥ 31 ಅಕ್ಟೋಬರ್ ರಂದು ವಾಕಥಾನ್ ಆಯೋಜಿಸಿತು.
ಐಪಿಎಸ್ ಅನುಪಮ್ ಅಗರ್ವಾಲ್ ಅತಿಥಿಯಾಗಿ ಭಾಗವಹಿಸಿ ವಾಕಥಾನ್ಗೆ ಚಾಲನೆ ನೀಡಿದರು. ವಿಜಯ ಟವರ್ಸ್ ಜ್ಯೋತಿ ವೃತ್ತದಿಂದ, ಎ.ಬಿ.ಶೆಟ್ಟಿ ವೃತ್ತದವರೆಗೆ ವಾಕಥಾನ್ ನಡೆಯಿತು. ಕೆಎಸ್ಪಿಎಸ್, ಎಸಿಪಿ ಟ್ರಾಫಿಕ್, ಗೀತಾ ಕುಲಕರ್ಣಿ, ಪ್ರಧಾನ ವ್ಯವಸ್ಥಾಪಕರು ಮತ್ತು ಮಂಗಳೂರು ಬ್ಯಾಂಕ್ ಆಫ್ ಬರೋಡಾ ವಲಯ ಮುಖ್ಯಸ್ಥರಾದ ಗಾಯತ್ರಿ ಆರ್, ಮಂಗಳೂರು ವಲಯದ ಡಿಜಿಎಂ ಮತ್ತು ಉಪ ವಲಯ ಮುಖ್ಯಸ್ಥರಾದ ರಮೇಶ್ ಕಾನಡೆ, ನೆಟ್ವರ್ಕ್ ಡಿಜಿಎಂ ಅಶ್ವಿನಿ ಕುಮಾರ್, ಮಂಗಳೂರು ನಗರದ ಪ್ರಾದೇಶಿಕ ವ್ಯವಸ್ಥಾಪಕರಾದ ಎಂವಿಎಸ್ ಪ್ರಸಾದ್, ವಲಯದ ಸಿಬ್ಬಂದಿಗಳು, ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ಮತ್ತು ನಗರ ಶಾಖೆಯ ಕಛೇರಿಯ ಸಿಬ್ಬಂದಿಗಳು ವಾಕಥಾನ್ನಲ್ಲಿ ಭಾಗವಹಿಸಿದ್ದರು.