ಇಸ್ಲಾಮಾಬಾದ್ : ನೆರೆಯ ಪಾಕಿಸ್ಥಾನದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳಿಂದ ಅಲ್ಪ ಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಮಿತಿ ಮೀರಿದೆ. ನಿತ್ವೂ ಹಿಂದೂ ಹೆಣ್ಣು ಮಕ್ಕಳ ಅಪಹರಣ, ಬಲಾತ್ಕಾರದ ಮದುವೆ ಅಲ್ಲಿ ಸಹಜ ಸಂಗತಿಯೇ ಆಗಿದೆ. ಯಾವುದೇ ಮಾನವ ಹಕ್ಕು ಸಂಘಟನೆ ಅಥವಾ ಅಂತರ್ರಾಷ್ಟ್ರೀಯ ಮಾಧ್ಯಮ ಇದನ್ನು ಪ್ರಶಿಸುತ್ತಿಲ್ಲ. ಸ್ವಾತಂತರ್ಯ ಸಿಕ್ಕಾಗ ಶೇಕಡಾ 10 ರಷ್ಟಿದ್ದ ಹಿಂದೂಗಳ ಸಂಖ್ಯೆ ಇದು ಕೇವಲ ಶೇಕಡಾ 3 ಕ್ಕೆ ಬಂದು ನಿಂತಿದೆ.
ಈ ದೌರ್ಜನ್ಯವದ ವಿರುದ್ದ ಪಾಕಿಸ್ತಾನಿ ಹಿಂದೂ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಅವರು ಸಿಂಧ್ನಲ್ಲಿ ಹಿಂದೂಗಳ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. X ನಲ್ಲಿ ಕಮೆಂಟ್ ಮಾಡಿರುವ ಅವರು ಸಿಂಧಿ ಹಿಂದೂಗಳ ದುಃಸ್ಥಿತಿಯನ್ನು ಹಂಚಿಕೊಂಡು ಪ್ರತಿಯೊಬ್ಬರೂ ಹಿಂದೂ ಕಚ್ಚಿ ಸಮುದಾಯವನ್ನು ಬೆಂಬಲಿಸಬೇಕೆಂದು ಒತ್ತಾಯಿಸಿದರು. ಈ ಸಮುದಾಯವು ಕಳೆದ ನಾಲ್ಕು ದಶಕಗಳಿಂದ ಹಿಂಸೆ, ದೌರ್ಜನ್ಯ ಮತ್ತು ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಹಿಂದೂಗಳು ದೌರ್ಜನ್ಯದಿಂದಾಗಿಯೇ ನಿರಾಶ್ರಿತರಾಗಿದ್ದಾರೆ. ಪ್ರತಿದಿನ, ಹಿಂದೂಗಳು ಶೋಷಣೆಯ ಹೊಸ ಮಾರ್ಗವನ್ನು ಅಸಹಾಯಕರಾಗಿ ನೋಡುತಿದ್ದಾರೆ. ನಾವು ಹಿಂದೂ ಕಚ್ಚಿ ಸಮುದಾಯದೊಂದಿಗೆ ನಿಂತು ನ್ಯಾಯವನ್ನು ಕೇಳುವ ಸಮಯ ಬಂದಿದೆ ಎಂದಿದ್ದಾರೆ.
ಸಿಂಧ್ನಲ್ಲಿ ಮುಸ್ಲಿಂ ಭೂಮಾಲೀಕರೊಬ್ಬರು ಹಿಂದೂ ಅಲ್ಪಸಂಖ್ಯಾತರ ಆಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ ಎಂಬ ಮಾಧ್ಯಮ ವರದಿಗೆ ಪ್ರತಿಕ್ರಿಯಿಸಿದ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ. ವರದಿಯ ಪ್ರಕಾರ, ಇಸ್ಲಾಮಿಕ್ ಮತಾಂಧರು ಹಿಂದೂ ಸಮುದಾಯದ ಹಳ್ಳಿಗಳಿಗೆ ನುಗ್ಗಿ ಬೆಂಕಿ ಹಚ್ಚಿ ಅವರನ್ನು ನಿರಾಶ್ರಿತರನ್ನಾಗಿ ಮಾಡಿದ್ದಾರೆ.
ಹಿಂದೂ ದೇವಾಲಯಗಳ ಮೇಲಿನ ದಾಳಿಗಳ ಸುದೀರ್ಘ ಪಟ್ಟಿಯಲ್ಲಿ, ಈ ವರ್ಷ ಜುಲೈನಲ್ಲಿ ಕೇವಲ 24 ಗಂಟೆಗಳ ಅವಧಿಯಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಎರಡು ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಿ ಅಪವಿತ್ರಗೊಳಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಜುಲೈ 16 ರಂದು, ಸಿಂಧ್ನ ಕಾಶ್ಮೋರ್ ಪ್ರದೇಶದಲ್ಲಿ ರಾಕೆಟ್ ಲಾಂಚರ್ಗಳೊಂದಿಗೆ ಮತಾಂಧರ ಗ್ಯಾಂಗ್ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿತು.
ಮತ್ತೊಂದು ದಾಳಿಯಲ್ಲಿ, ಜುಲೈ 16 ರ ರಾತ್ರಿ ಕರಾಚಿಯ ಸೋಲ್ಜರ್ ಬಜಾರ್ನಲ್ಲಿ 150 ವರ್ಷಗಳಷ್ಟು ಹಳೆಯದಾದ ಹಳೆಯ ಮಾರಿ ಮಾತಾ ಮಂದಿರವನ್ನು ಬುಲ್ಡೋಜರ್ಗಳನ್ನು ಬಳಸಿ ಕೆಡವಲಾಯಿತು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಅಪ್ರಾಪ್ತ ಹಿಂದೂ ಹುಡುಗಿಯರ ಮೇಲಿನ ದೌರ್ಜನ್ಯ, ತಾರತಮ್ಯ, ಅಪಹರಣ ಮತ್ತು ಬಲವಂತದ ಮತಾಂತರದ ಭಯಾನಕ ವರದಿಗಳು ಪಾಕಿಸ್ತಾನದಿಂದ ವಿಶೇಷವಾಗಿ ಸಿಂಧ್ ಪ್ರದೇಶದಿಂದ ನಿತ್ಯವೂ ವರದಿ ಆಗುತ್ತಿವೆ. ಇತ್ತೀಚಿನ ವರದಿಯೊಂದರ ಪ್ರಕಾರ ಕಳೆದ ಹನ್ನೆರಡು ವರ್ಷಗಳಲ್ಲಿ ಸುಮಾರು ಹದಿನಾಲ್ಕು ಸಾವಿರ ಹಿಂದೂ ಹುಡುಗಿಯರ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಧಾರ್ಮಿಕ ಮತಾಂತರದ ಪ್ರಕರಣಗಳು ಈ ಪ್ರದೇಶದಲ್ಲಿ ವರದಿಯಾಗಿವೆ ಮತ್ತು ಇನ್ನೂ ಹೆಚ್ಚಿನವು ವರದಿಯಾಗಿಲ್ಲ.
ವೀಡಿಯೊ ಸಂದೇಶದಲ್ಲಿ ಸಿಂಧ್ ನಿವಾಸಿ ಮತ್ತು ಲಿಯಾಕತ್ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದ ನಿವೃತ್ತ ವೈದ್ಯ ವೀರ್ಜಿ ಲೂಂಡ್ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ವಿಡಿಯೋದಲ್ಲಿ ಅವರು ಭಾರತ-ಪಾಕ್ ಗಡಿಯನ್ನು ತೆರೆಯುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಮನವಿ ಮಾಡಿದ್ದಾರೆ. ಪಾಕಿಸ್ತಾನದಲ್ಲಿರುವ ಮತಾಂಧ ದುಷ್ಕರ್ಮಿಗಳ ಕಿರುಕುಳದಿಂದ ಪಾರಾಗಲು ಭಾರತಕ್ಕೆ ಬರಲು ಸಿದ್ಧರಿರುವ ಪಾಕಿಸ್ತಾನಿ ಹಿಂದೂಗಳಿಗೆ ವೀಸಾ ನೀಡಬೇಕೆಂದು ಅವರು ಭಾರತ ಸರ್ಕಾರವನ್ನು ಒತ್ತಾಯಿಸಿದರು.
ಇತ್ತೀಚಿನ ಮಾನವ ಹಕ್ಕುಗಳ ವೀಕ್ಷಕರ 2023 ಫ್ಯಾಕ್ಟ್ ಶೀಟ್ 2022 ರಲ್ಲಿ, ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ 124 ಮಹಿಳೆಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗಿದೆ ಎಂದು ಬಹಿರಂಗಪಡಿಸಿದೆ. ಈ ಪೈಕಿ 81 ಹಿಂದೂಗಳು, 42 ಕ್ರಿಶ್ಚಿಯನ್ನರು ಮತ್ತು ಒಬ್ಬರು ಸಿಖ್ ಮಹಿಳೆ ಆಗಿದ್ದಾರೆ. ಇದಲ್ಲದೆ, ಶೇಕಡಾ 23 ರಷ್ಟು ಹುಡುಗಿಯರು 14 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಅವರಲ್ಲಿ 36 ಪ್ರತಿಶತ 14 ರಿಂದ 18 ವರ್ಷ ವಯಸ್ಸಿನವರು ಮತ್ತು ಸಂತ್ರಸ್ಥರಲ್ಲಿ ಕೇವಲ 12 ಪ್ರತಿಶತದಷ್ಟು ವಯಸ್ಕರು ಮತ್ತು 28 ವರ್ಷ ವಯಸ್ಸಿನವರು ಎಂದು ಫ್ಯಾಕ್ಟ್ ಶೀಟ್ ಬಹಿರಂಗಪಡಿಸಿದೆ. 2022 ರಲ್ಲಿ ಹಿಂದೂಗಳ ಬಲವಂತದ ಮತಾಂತರಕ್ಕೆ ಸಿಂಧ್ ಅತ್ಯಂತ ಕುಖ್ಯಾತಿ ಪಡೆದಿದೆ. ವಿಶೇಷವಾಗಿ 2022 ರಲ್ಲಿ, ಬಲವಂತದ ಧಾರ್ಮಿಕ ಮತಾಂತರದ ಪ್ರಕರಣಗಳಲ್ಲಿ 65% ಸಿಂಧ್ನಲ್ಲಿ, 33% ಪಂಜಾಬ್ನಲ್ಲಿ ಮತ್ತು 0.8% ಖೈಬರ್ ಪಖ್ತುಂಕ್ವಾ ಮತ್ತು ಬಲೂಚಿಸ್ತಾನ್ನಲ್ಲಿ ಕ್ರಮವಾಗಿ ವರದಿಯಾಗಿದೆ. ಸಿಂಧ್ ಪ್ರಾಂತ್ಯದಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ವಾಸಿಸುತಿದ್ದಾರೆ.