ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ೨೦೨೩ ರ ಸಾಹಿತ್ಯ ವಿಭಾಗದಲ್ಲಿ ಕಲ್ಲಚ್ಚು ಪ್ರಕಾಶನದ ಮಹೇಶ್ ಆರ್. ನಾಯಕ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂದು ಜರುಗಿದ ರಾಜ್ಯೋತ್ಸವ ಕರ್ಯಕ್ರಮದಲ್ಲಿ ಆರೋಗ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಪ್ರಶಸ್ತಿ ಪ್ರಧಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಹೇಶ್, “ಈ ಸಲ ಸುರ್ಣ ರ್ನಾಟಕ ಸಂಭ್ರಮದ 2023ರ ” ದ ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ” ಸಾಹಿತ್ಯ ವಿಭಾಗದಲ್ಲಿ ನನಗೆ ಲಭಿಸುವುದರ ಮೂಲಕ ಸಾಕಾರಗೊಂಡಿದೆ. ಈ ಪಯಣದ ಹಾದಿಯಲ್ಲಿ ಕೈ ಜೋಡಿಸಿದ ಸಹಕರಿಸಿದ, ಮರ್ಗರ್ಶನ ಮಾಡಿದ ಪ್ರತಿಯೊಬ್ಬರಿಗೂ ನನ್ನ ಈ ಹೆಮ್ಮೆಯಲ್ಲಿ ಪಾಲಿದೆ. ಮುಂದಿನ ಬೆಳವಣಿಗೆಯಲ್ಲೂ ನಿಮ್ಮ ಈ ಪೋತ್ಸಾಹವಿರಲಿ. ಪ್ರಶಸ್ತಿ ಎಂಬುದು ದೂರ ಪ್ರಯಾಣದ ನಡುವಿನ ಒಂದು ಚಹಪಾನದ ಒಂದು ಹತ್ತದಿನೈದು ನಿಮಿಷಗಳ ಸ್ಟಾಪ್ ವಿನಹ ಫೈನಲ್ ಡೆಸ್ಟಿನೇಷನ್ ಅಲ್ಲ ಎಂಬ ಅತೀ ಸೂಕ್ಷ್ಮ ಅರಿವು ನನಗಿದೆ. ಅದಾಗಿಯೂ ಹತ್ತಾರು ಖಾಸಗಿ ಪ್ರಶಸ್ತಿಗಳ ನಡುವೆ ಇದು ಘನ ಸರಕಾರದ ಪ್ರಶಸ್ತಿ ಎಂದು ಅತೀವ ಸಂತಸ ಮತ್ತು ಹೆಮ್ಮೆಯೂ ಇದೆ. ” ಎಂದು ರ್ಷ ವ್ಯಕ್ತಪಡಿಸಿದರು.
ಮಹೇಶ್ ಆರ್. ನಾಯಕ್ ಕನ್ನಡ, ಕೊಂಕಣಿ ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿದ್ದು, ಕಲ್ಲಚ್ಚು ಪ್ರಕಾಶನದ ಮೂಲಕ 90 ರಷ್ಟು ಸಾಹಿತ್ಯ ಕೃತಿಗಳನ್ನು ರಾಜ್ಯದ 25ಕ್ಕೂ ಮಿಕ್ಕಿ ಲೇಖಕ ಮಿತ್ರರ ಬರವಣಿಗೆಯ ಸಹಕಾರದಿಂದ ಪ್ರಕಟಿಸಿದ್ದಾರೆ. ಸ್ವತಃ ಬರಹಗಾರರಾಗಿರುವ ಮಹೇಶ್, 30ಕ್ಕಿಂತಲೂ ಅಧಿಕ ಸ್ವರಚಿತ ಕನ್ನಡದ ವಿವಿಧ ಪ್ರಕಾರದ ಕೃತಿಗಳನ್ನು ಪ್ರಕಟಿಸಿದ್ದಾರೆ. ರಾಷ್ಟ್ರ-ಅಂತರಾಷ್ಟ್ರೀಯ ವಲಯದ ೪೦ಕ್ಕೂ ಅಧಿಕ ಸಾಹಿತ್ಯ ಸಮಾವೇಶಗಳಲ್ಲಿ ಮಹೇಶ್ ಭಾಗವಹಿಸಿದ್ದಾರೆ. ಕಲೆ, ಹೋರಾಟ, ಚಳುವಳಿ, ಸಂಘಟನೆ, ನಾಟಕ ಸಮುದಾಯ ಸಾಮಾಜಿಕ ನ್ಯಾಯ ಚಟುವಟಿಕೆಗಳಲ್ಲಿ ಮಹೇಶ್ ಸಕ್ರೀಯರಾಗಿದ್ದಾರೆ.