ಉತ್ತರ ಪ್ರದೇಶದ ಅಲಿಗಢದ ನೊಂದ ವ್ಯಕ್ತಿಯೊಬ್ಬರು ಸಾಲದ ಸುಳಿಯಲ್ಲಿ ಸಿಲುಕಿ ಸಂಕಷ್ಟದ ಪರಿಸ್ಥಿತಿಯಲ್ಲಿ ಎದುರಿಸುತ್ತಿದ್ದಾರೆ. ಅಂತಿಮವಾಗಿ ತಮ್ಮ ಆರ್ಥಿಕ ಸಂಕಷ್ಟವನ್ನು ಪರಿಹರಿಸಲು ಹತಾಶ ತಂದೆ ಮನವಿಗೆ ಮುಂದಾಗಿದ್ದಾರೆ. ಇ-ರಿಕ್ಷಾ ಚಾಲಕ ರಾಜ್ಕುಮಾರ್, ಸ್ಥಳೀಯ ಬಸ್ ನಿಲ್ದಾಣದಲ್ಲಿ ತನ್ನ ಕೊರಳಲ್ಲಿ ಫಲಕವನ್ನು ಪ್ರದರ್ಶಿಸಿ, ಜನರನ್ನು ಸೆಳೆಯುವ ಪ್ರಯತ್ನ ಮಡಿದ್ದಾರೆ. ಭರಿಸಲಾಗದ ಸಾಲದಿಂದಾಗಿ ತನ್ನ ಮಗನನ್ನು 5-6 ಲಕ್ಷ ರೂ.ಗಳಿಗೆ ಮಾರಲು ಸಿದ್ಧರಾಗಿದ್ದಾರೆ.
ಆಸ್ತಿ ಖರೀದಿಸಲು ಲೇವಾದೇವಿಗಾರರಿಂದ 50,000 ರೂಪಾಯಿ ಸಾಲ ಪಡೆದ ರಾಜ್ಕುಮಾರ್ಗೆ ಸಂಕಷ್ಟ ಶುರುವಾಯಿತು. ಕಾಲಾನಂತರದಲ್ಲಿ, ಸಾಲ ನೀಡಿದ ವ್ಯಕ್ತಿ ಪರಿಸ್ಥಿತಿಯನ್ನು ಕುಶಲತೆಯಿಂದ ನಿರ್ವಹಿಸಿದ್ದಾನೆ. ರಾಜ್ಕುಮಾರ್ ಅವರನ್ನು ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ಅಸಹಾಯಕ ಸ್ಥಿತಿಗೆ ತಂದು ಬಿಟ್ಟರು. ಇದರ ಪರಿಣಾಮವಾಗಿ, ರಾಜ್ಕುಮಾರ್ ತಮ್ಮ ಹಣದ ಜೋತೆ, ಖರೀದಿಸಲು ಉದ್ದೇಶಿಸಿದ ಆಸ್ತಿ ಮತ್ತು ಇ-ರಿಕ್ಷಾವನ್ನು ಕಳೆದುಕೊಂಡರು. ಇ-ರಿಕ್ಷಾ ಅವರ ಕುಟುಂಬಕ್ಕೆ ಆದಾಯದ ಮೂಲವಾಗಿತ್ತು.
ಲೇವಾದೇವಿಗಾರನ ನಿರಂತರ ಕಿರುಕುಳ ಮತ್ತು ಅವಮಾನವು ರಾಜ್ಕುಮಾರ್ಗೆ ನೆಮ್ಮದಿಯನ್ನು ಹಾಳುಮಾಡಿತ್ತು. ಸಾಲದಿಂದ ತನ್ನ ಕುಟುಂಬದ ಮುಂದೆ ಆಗಾಗ್ಗೆ ಮುಜುಗರಕ್ಕೊಳಗಾಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಅಷ್ಟಲ್ಲದೆ ಕುಟುಂಬವು ಅನೇಕ ಬಾರಿ ತಮ್ಮ ಮನೆಯಿಂದ ಹೊರ ಬೀಳುವ ಪರಿಸ್ಥಿತಿಯನ್ನು ಎದುರಿಸಿತು.
“ಸಾಲದಾತನು ನನ್ನ ಮಕ್ಕಳ ಮುಂದೆ ನನಗೆ ಕಿರುಕುಳ ನೀಡುತ್ತಾನೆ ಮತ್ತು ಅವಮಾನಿಸುತ್ತಿದ್ದನು. ಅವನು ನನ್ನನ್ನು ಮತ್ತು ನನ್ನ ಕುಟುಂಬವನ್ನು ಮನೆಯಿಂದ ಹೊರಹಾಕಿದನು. ನನ್ನ ಕುಟುಂಬವನ್ನು ಬೆಂಬಲಿಸುವ ಏಕೈಕ ಸಾಧನವಾದ ನನ್ನ ಇ-ರಿಕ್ಷಾವನ್ನು ತೆಗೆದುಕೊಂಡು ಹೋಗಲಾಗಿದೆ. ನಾನು’ ನ್ಯಾಯಕ್ಕಾಗಿ ಹಲವು ದಿನಗಳಿಂದ ಸ್ಥಳೀಯ ಪೊಲೀಸ್ ಠಾಣೆಗೆ ಭೇಟಿ ನೀಡುತ್ತಿದ್ದೇನೆ, ಆದರೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎಂದು ರಾಜ್ಕುಮಾರ್ ಮಾಹಿತಿ ನೀಡಿದ್ದಾರೆ.
ರಾಜ್ಕುಮಾರ್ ಅವರು ಈಗಾಗಲೇ ಲೇವಾದೇವಿದಾರರಿಗೆ 6,000 ರೂ.ಗಳನ್ನು ಮರುಪಾವತಿಸಿದ್ದಾರೆ ಮತ್ತು ಉಳಿದ ಸಾಲವನ್ನು ಇತ್ಯರ್ಥಗೊಳಿಸಲು ತೀವ್ರ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿಕೊಂಡರು.
ರಾಜ್ಕುಮಾರ್ ಮತ್ತು ಅವರ ಕುಟುಂಬದವರ ಮನವಿಯ ವೀಡಿಯೊ ವ್ಯಾಪಕವಾಗಿ ಎಲ್ಲೆಡೆ ಪ್ರಸಾರವಾದ ಹಿನ್ನೆಯಲ್ಲಿ ಪರಿಸ್ಥಿತಿ ಅರಿತುಕೊಂಡ ಪೊಲೀಸರು ಆರೋಪಿ ಲೇವಾದೇವಿಗಾರನನ್ನು ಬಂಧಿಸಿದ್ದಾರೆ.
ಮನುಷ್ಯನ ಅಸಹಾಯಕತೆ ಎಂತಹ ದಿನಗಳನ್ನು ತೋರಿಸುತ್ತದೆ. ಸಾಮನ್ಯವಾಗಿ ಆರ್ಥಿಕ ಸಮಸ್ಯೆಯು ಜನರನ್ನು ತಮ್ಮ ಕೈಯಲ್ಲಿ ಕೆಲವೊಮ್ಮೆ ಮಾಡಬಾರದಂತಹ ಕೆಲಸವನ್ನು ಮಾಡಿಸುತ್ತದೆ. ಆದರೆ ಈ ತರದ ಅನಿವಾರ್ಯ ಪರಿಸ್ಥಿತಿ ಯಾರಿಗೂ ಬಾರದೇ ಇರಲ್ಲಿ. ತಾವೂ ಹೆತ್ತ ಮಗನನ್ನೇ ಮಾರಟಕ್ಕೆ ಇಡುವಂತಹ ಮನಸ್ಥಿತಿಗೆ ತಲುಪಿದೆ. ಇದು ನಮ್ಮ ಸಮಾಜಕ್ಕೆ ಹಿಡಿದಿರುವ ಕನ್ನಡಿ ಸಾಲದ ಸುಳಿಯಲ್ಲಿ ಸಿಲುಕಿರುವವರ ಬದುಕು ಹೇಗೆ ಕ್ಷಣ ಮಾತ್ರದಲ್ಲಿ ಬದಲಾಗುತ್ತದೆ.