ಸೋಮವಾರದಿಂದ ಮುಂಬೈನ ಐಕಾನಿಕ್ ಕಪ್ಪು ಮತ್ತು ಹಳದಿ ‘ಪ್ರೀಮಿಯರ್ ಪದ್ಮಿನಿ’ ಟ್ಯಾಕ್ಸಿಗಳು ನಗರದಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿವೆ. ಮುಂಬೈ ಜನರ ಪ್ರೀತಿಯ ಕಾಲಿ ಪೀಲಿ ನೆಚ್ಚಿನ ಸವಾರಿ ಇನ್ನು ಮುಂದೆ ನೆನಪು ಮಾತ್ರ. ಮುಂಬೈ ನಗರಿಯಲ್ಲಿ ಎಲ್ಲೆಡೆ ಒಡಾಡುವ ಟ್ಯಾಕ್ಸಿ ಜನರನ್ನು ನಿದಿತ ಸ್ಥಳಗಳಿಗೆ ತಲುಪಿಸುವ ಜವಬ್ದಾರಿಯನ್ನು ನಿಬಾಯಿಸಿಕೊಂಡಿತ್ತು. ಕಳೆದ ಆರು ದಶಕಗಳಿಂದ ತನ್ನ ಸುದೀರ್ಘ ಸೇವೆಯನ್ನು ನೀಡುತ್ತಿತ್ತು.
ಒಊ-01-ಎಂ-2556 ಪರವಾನಗಿ ಪ್ಲೇಟ್ನೊಂದಿಗೆ ಕೊನೆಯದಾಗಿ ನೋಂದಾಯಿಸಲಾದ ಪ್ರೀಮಿಯರ್ ಪದ್ಮಿನಿ ಟ್ಯಾಕ್ಸಿ ಪ್ರಭಾದೇವಿ ನಿವಾಸಿ ಅಬ್ದುಲ್ ಕರೀಮ್ ಕರ್ಸೇಕರ್ ಅವರ ಮಾಲೀಕತ್ವದಲ್ಲಿದೆ.
ಅಂತಿಮ ಪ್ರೀಮಿಯರ್ ಪದ್ಮಿನಿ ಟ್ಯಾಕ್ಸಿಯು ಟಾರ್ಡಿಯೊ ಆರ್ಟಿಓ ನಲ್ಲಿ ಕಪ್ಪು-ಹಳದಿ ಬಣ್ಣದ ಲೈವರಿಯೊಂದಿಗೆ ಅಧಿಕೃತವಾಗಿ ನೋಂದಾಯಿಸಲ್ಪಟ್ಟಿದ್ದು ಇಗೀಗ ನೋಂದಾಣಿಯನ್ನು ರದ್ದುಗೊಳಿಸಲಾಗಿದೆ ಎಂದು ಸಾರಿಗೆ ಇಲಾಖೆಯ ಪ್ರತಿನಿಧಿ ದೃಢಪಡಿಸಿದ್ದಾರೆ. ನಗರದಲ್ಲಿ ಟ್ಯಾಕ್ಸಿಗಳ ಗರಿಷ್ಠ ವಯಸ್ಸನ್ನು 20 ವರ್ಷಗಳಿಗೆ ನಿಗದಿಪಡಿಸಲಾಗಿದ್ದು, ಮುಂಬೈಯಲ್ಲಿ ಇನ್ನು ಮುಂದೆ ಸೋಮವಾರದಿಂದ ತನ್ನ ಬೀದಿಗಳಲ್ಲಿ ಪ್ರೀಮಿಯರ್ ಪದ್ಮಿನಿ ಟ್ಯಾಕ್ಸಿ ಕಾಣಸಿಗುವುದಿಲ್ಲ.
ಈ ಎರಡು ಸರ್ವತ್ರ ಮತ್ತು ಅಗತ್ಯ ಸಾರ್ವಜನಿಕ ಸಾರಿಗೆ ವಿಧಾನಗಳನ್ನು ಕೆಲವೇ ವಾರಗಳಲ್ಲಿ ಹಿಂತೆಗೆದುಕೊಳ್ಳುವುದು ಮುಂಬೈನ ಸಾರಿಗೆ ಉತ್ಸಾಹಿಗಳಿಗೆ ನಾಸ್ಟಾಲ್ಜಿಯಾ ಭಾವನೆಯನ್ನುಂಟುಮಾಡಿದೆ. ಕೆಲವರು ಕನಿಷ್ಠ ಒಂದು ‘ಪ್ರೀಮಿಯರ್ ಪದ್ಮಿನಿ’ಯನ್ನು ನಿರಂತರ ಬಳಕೆಗಾಗಿ ಅಥವಾ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲು ಸಂರಕ್ಷಿಸಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
1970 ರ ದಶಕದಲ್ಲಿ “ಪ್ರೀಮಿಯರ್ ಪ್ರೆಸಿಡಂಟ್” ಮಾದರಿಯನ್ನು ರಾಣಿ ಪದ್ಮಿಣಿ ಹೆಸರಲ್ಲಿ “ಪ್ರೀಮಿಯರ್ ಪದ್ಮಿನಿ” ಎಂದು ಮರುನಾಮಕರಣ ಮಾಡಲಾಗಿತ್ತು.ಕೆಲವು ವರ್ಷಗಳ ಹಿಂದೆ, ನಗರದ ಅತಿದೊಡ್ಡ ಟ್ಯಾಕ್ಸಿ ಡ್ರೈವರ್ ಯೂನಿಯನ್ಗಳಲ್ಲಿ ಒಂದಾದ ಮುಂಬೈ ಟ್ಯಾಕ್ಸಿಮೆನ್ಸ್ ಯೂನಿಯನ್ ಕನಿಷ್ಠ ಒಂದು ‘ಕಾಳಿ-ಪೀಲಿ’ ಟ್ಯಾಕ್ಸಿಯನ್ನು ರಕ್ಷಿಸುವಂತೆ ಸರ್ಕಾರಕ್ಕೆ ಮನವಿ ಮಾಡಿತ್ತು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ಈ ನಿವೃತ್ತಿಯು ಬೆಸ್ಟ್ನ ಕೊನೆಯ ಐಕಾನಿಕ್ ಡೀಸೆಲ್-ಚಾಲಿತ ಡಬಲ್-ಡೆಕ್ಕರ್ ಕೆಂಪು ಬಸ್ಗಳ ನಿವೃತ್ತಿಯ ಹಾದಿಯನ್ನು ಹಿಡಿದಿದೆ. ಒಟ್ಟಿನಲ್ಲಿ ಮುಂಬೈ ಜನರ ನಾಡಿ ಮಿಡಿತ, ಸಂಚಾರ ಸಂಗಾತಿ ಇನ್ನು ಮುಂದೆ ರಸ್ತೆ ಮೇಲೆ ಕಾಣುವುದಿಲ್ಲ ಎನ್ನುವುದು ಇಲ್ಲಿನ ಜನರಿಗೆ ಭಾವನಾತ್ಮಕ ವಿಷಯವಾಗಿದೆ.