ಮಧ್ಯಪ್ರದೇಶದ ಸ್ಥಳೀಯ ಕಾನ್ಸ್ಟೆಬಲ್ ಒಬ್ಬರು ಹಾವಿಗೆ ಚುಂಬಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದೆ. ಕ್ರಿಮಿನಾಶಕ ಮಿಶ್ರಿತ ನೀರನ್ನು ಸೇವಿಸಿದ ಹಾವನ್ನು ಬಾಯಿಂದ ಬಾಯಿಗೆ ಸಿಪಿಆರ್ ನೀಡುವ ಮೂಲಕ ಪುನರುಜ್ಜೀವನಗೊಳಿಸಲು ಕಾನ್ಸ್ಟೆಬಲ್ ಅತುಲ್ ಶರ್ಮಾ ಪ್ರಯತ್ನಿಸುತ್ತಿರುವುದನ್ನು ವೀಡಿಯೊ ಸಮಾಜಿಕ ಮಾದ್ಯಮದಲ್ಲಿ ಹರಿದಾಡುತ್ತಿದೆ.
ವಿಷರಹಿತವಾಗಿದ್ದ ಹಾವು ಮಧ್ಯಪ್ರದೇಶದ ನರ್ಮದಾಪುರಂನಲ್ಲಿರುವ ವಸತಿ ಪ್ರದೇಶದಲ್ಲಿ ಪೈಪ್ಲೈನ್ಗೆ ತೆವಳಿತ್ತು. ಹಾವನ್ನು ಹೊರತೆಗೆಯಲು ವಿಫಲರಾದ ನಿವಾಸಿಗಳು ಅದನ್ನು ಕೊಲ್ಲುವ ಭರವಸೆಯಿಂದ ಪೈಪ್ಗೆ ಕೀಟನಾಶಕ ತುಂಬಿದ ನೀರನ್ನು ಸುರಿದರು. ಆದರೆ ಹಾವು ಪ್ರಜ್ಞೆ ತಪ್ಪಿ ಬಿದ್ದಿದ್ದು, ಪೊಲೀಸರು ಅದನ್ನು ಹೊರತೆಗೆದಿದ್ದಾರೆ.
ಈ ಸೂಪರ್ ಕಾಪ್ನ ಬ್ರೇವ್ ಆಕ್ಟ್ ಶ್ಲಾಘನೆಯನ್ನು ಪಡೆಯುತ್ತದೆ. ಆದರೆ ತಜ್ಞರು ಇದರ ಪರಿಣಾಮದ ಕುರಿತು ಅನುಮಾನ ವ್ಯಕ್ತ ಪಡಿಸುತ್ತಾರೆ. ಶರ್ಮಾ ಹಾವಿನ ಬಾಯಿಗೆ ಸಿಪಿಆರ್ ನೀಡುವ ಮೊದಲು ಅದು ಇನ್ನೂ ಜೀವಂತವಾಗಿದೆಯೇ ಎಂದು ಎಚ್ಚರಿಕೆಯಿಂದ ಪರೀಕ್ಷಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಹಾವಿನ ದೇಹದಿಂದ ಕೀಟನಾಶಕವನ್ನು ತೊಳೆಯಲು ಹಾವಿನ ಮೇಲೆ ಶುದ್ಧ ನೀರನ್ನು ಸಿಂಪಡಿಸಿದರು. ಶರ್ಮಾ ತನ್ನ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸುತ್ತಿದ್ದAತೆ, ಹಾವು ತನ್ನ ಬಾಲ ಮತ್ತು ತಲೆಯನ್ನು ಚಲಿಸಲು ಪ್ರಾರಂಭಿಸಿತು. ಈ ಸೂಪರ್ ಕಾಪ್ಗಾಗಿ ಹರ್ಷೋದ್ಗಾರ ಮಾಡಿದ ಪ್ರೇಕ್ಷಕರಿಗೆ ತುಂಬಾ ಸಂತೋಷವಾಗಿದೆ.
ಶರ್ಮಾ ಅವರ ಧೈರ್ಯಶಾಲಿ ಕಾರ್ಯವು ಅವರ ಸಹಾನುಭೂತಿ ಮತ್ತು ಧೈರ್ಯವನ್ನು ಮೆಚ್ಚಿದ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಪ್ರಶಂಸೆಯನ್ನು ಗಳಿಸಿದೆ. ಆದರೆ ಕೆಲವು ಪಶುವೈದ್ಯರು ಮತ್ತು ವನ್ಯಜೀವಿ ತಜ್ಞರು ಅವರ ವಿಧಾನದವನ್ನು ಪ್ರಶ್ನಿಸಿದ್ದಾರೆ. ಸಾಂಪ್ರದಾಯಿಕ ಸಿಪಿಆರ್ ಹಾವಿನಲ್ಲಿ ಉಸಿರಾಟವನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.
ಮಧ್ಯಪ್ರದೇಶದ ಕಾನ್ಸ್ಟೆಬಲ್ ಹಾವಿಗೆ ಸಿಪಿಆರ್ ನೀಡುವ ಪ್ರಯತ್ನವನ್ನು ಚಿತ್ರಿಸಿರುವ ವೈರಲ್ ವೀಡಿಯೊ ವ್ಯಾಪಕ ಗಮನ ಸೆಳೆದಿದೆ. ಆಶ್ಚರ್ಯಕರ ಘಟನೆಯೊಂದರಲ್ಲಿ, ಕೀಟನಾಶಕಗಳಿಂದ ಕಲುಷಿತಗೊಂಡ ನೀರನ್ನು ಸೇವಿಸಿದ ನಂತರ ನಿಶ್ಚಲವಾಗಿದ್ದ ಹಾವನ್ನು ಪುನರುಜ್ಜೀವನಗೊಳಿಸಲು ಅಧಿಕಾರಿಯು ಬಾಯಿಯಿಂದ ಬಾಯಿಗೆ ಪುನಶ್ಚೇತನ ನೀಡಲು ಪ್ರಯತ್ನಿಸಿದು ವೀಕ್ಷಕರನ್ನು ಬೆಚ್ಚಿಬೀಳಿಸಿದ ಈ ವೀಡಿಯೊ ಆನ್ಲೈನ್ನಲ್ಲಿ ತ್ವರಿತವಾಗಿ ಪ್ರಸಾರವಾಯಿತು. ಅನೇಕರು ಕಾನ್ಸ್ಟೆಬಲ್ ಅವರ ಕಾರ್ಯವನ್ನು ಶ್ಲಾಘಿಸಿದರು.