ಜೆರುಸಲೇಮ್: ಭಾನುವಾರ ಸಾವಿರಾರು ಪ್ಯಾಲೆಸ್ತೀನ್ ನಾಗರಿಕರು ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ ಫಾರ್ ಪ್ಯಾಲೆಸ್ಟೈನ್ ರೆಫ್ಯೂಜೀಸ್ ಇನ್ ದಿ ನಿಯರ್ ಈಸ್ಟ್ (UNRWA) ಹಿಟ್ಟು ಮತ್ತು ಇತರ ಮೂಲಭೂತ ಬದುಕುಳಿಯುವ ವಸ್ತುಗಳನ್ನು ಪಡೆದುಕೊಳ್ಳಲು ಗಾಜಾದಲ್ಲಿರುವ ಯುಎನ್ ನೆರವು ಕೇಂದ್ರಗಳ ಗೋದಾಮುಗಳು ಮತ್ತು ವಿತರಣಾ ಕೇಂದ್ರಗಳನ್ನು ಲೂಟಿ ಮಾಡಿದ್ದಾರೆ ಎಂದು ವಿಶ್ವ ಸಂಸ್ಥೆಯ ಹೇಳಿಕೆ ತಿಳಿಸಿದೆ. UNRWA ಇದು ಪ್ಯಾಲೇಸ್ಟಿನಿಯನ್ ನಾಗರಿಕ ಸುವ್ಯವಸ್ಥೆ” ಸ್ಥಗಿತದ ಅಂಚಿನಲ್ಲಿರುವ ಚಿಹ್ನೆ ಆಗಿದೆ ಎಂದಿದೆ.
UNRWA ನ ಗಾಜಾ ಮುಖ್ಯಸ್ಥ ಥಾಮಸ್ ವೈಟ್, ಮಾತನಾಡಿ “ಮೂರು ವಾರಗಳ ಯುದ್ಧ ಮತ್ತು ಗಾಜಾದ ಮೇಲೆ ಬಿಗಿಯಾದ ಮುತ್ತಿಗೆಯ ನಂತರ ನಾಗರಿಕ ಸುವ್ಯವಸ್ಥೆಯು ಒಡೆಯಲು ಪ್ರಾರಂಭಿಸುತ್ತಿದೆ ಎಂಬುದು ಆತಂಕಕಾರಿ ಸಂಕೇತವಾಗಿದೆ ಎಂದರು. ಅಕ್ಟೋಬರ್ 21 ರಂದು ಈಜಿಪ್ಟ್ನಿಂದ ಗಾಜಾಕ್ಕೆ ಮಾನವೀಯ ಬೆಂಗಾವಲು ಪಡೆಗಳು ಸರಬರಾಜುಗಳನ್ನು ಸಂಗ್ರಹಿಸಲು ಗಾಜಾ ದ ಕೇಂದ್ರ ಪಟ್ಟಣವಾದ ಡೀರ್ ಎಲ್-ಬಾಲಾಹ್ನಲ್ಲಿರುವ ಗೋದಾಮುಗಳನ್ನು ಬಳಸಿಕೊಳ್ಳಲಾಗಿತ್ತು. “ಸಾವಿರಾರು ಜನರು ಗಾಜಾ ಪಟ್ಟಿಯ ಮಧ್ಯ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಹಲವಾರು UNRWA ಗೋದಾಮುಗಳು ಮತ್ತು ವಿತರಣಾ ಕೇಂದ್ರಗಳಿಗೆ ನುಗ್ಗಿದರು, ಗೋಧಿ ಹಿಟ್ಟು ಮತ್ತು ನೈರ್ಮಲ್ಯ ಸರಬರಾಜುಗಳಂತಹ ಇತರ ಮೂಲಭೂತ ಬದುಕುಳಿಯುವ ವಸ್ತುಗಳನ್ನು ಲೂಟಿ ಮಾಡಿಕೊಂಡು ಹೋದರು ಎಂದು ಅವರು ತಿಳಿಸಿದರು.
ಇಸ್ರೇಲ್-ಹಮಾಸ್ ಯುದ್ಧದ ಆರಂಭಿಕ ಹಂತದಲ್ಲಿ, ಯಹೂದಿ ರಾಜ್ಯವು ಮೂಲತಃ ಗಾಜಾಕ್ಕೆ ಆಹಾರ, ನೀರು, ಔಷಧ ಮತ್ತು ಇಂಧನ ವಿತರಣೆಯ ಮೇಲೆ ಸಂಪೂರ್ಣ ದಿಗ್ಬಂಧನವನ್ನು ವಿಧಿಸಿತು. ಆದಾಗ್ಯೂ, ಇದು ನಂತರ ಮಾನವೀಯ ನೆರವು ಬೆಂಗಾವಲುಗಳನ್ನು – ಇಂಧನವನ್ನು ಹೊರತುಪಡಿಸಿ – ಈಜಿಪ್ಟ್ನಿಂದ ಸರಬರಾಜುಗಳನ್ನು ತರಲು ಅವಕಾಶ ಮಾಡಿಕೊಟ್ಟಿದೆ. UNRWA ಪ್ರಕಾರ, ಅಂದಿನಿಂದ 84 ಸಹಾಯ ಟ್ರಕ್ಗಳು ಗಾಜಾಕ್ಕೆ ಸಾಮಾಗ್ರಿಗಳನ್ನು ಸಾಗಿಸಿವೆ. ಆದರೆ ಸರಬರಾಜು ತುಂಬಾ ಕಡಿಮೆ ಆಗಿದೆ. ಸಂಘರ್ಷದ ಮೊದಲು, ಯುಎನ್ ಅಂಕಿಅಂಶಗಳ ಪ್ರಕಾರ ದಿನಕ್ಕೆ ಸರಾಸರಿ 500 ಟ್ರಕ್ಗಳು ಸರಬರಾಜುಗಳನ್ನು ಗಾಜಾಕ್ಕೆ ಸಾಗಿಸುತಿದ್ದವು. ಶಾಂತಿಕಾಲದಲ್ಲಿಯೂ ಸಹ ಗಾಜಾ ಪಟ್ಟಿಗೆ ಹೊರ ದೇಶಗಳಿಂದಲೇ ಸಂಪೂರ್ಣ ಆಹಾರ ಮತ್ತು ಇತರ ಮೂಲಭೂತ ವಸ್ತುಗಳು ಸರಬರಾಜಾಗಬೇಕಿದೆ.
UNRWA ನ ಗಾಜಾ ಮುಖ್ಯಸ್ಥ ವೈಟ್ ಮಾತನಾಡಿ ಈಜಿಪ್ಟ್ನಿಂದ ಟ್ರಕ್ಗಳಲ್ಲಿ ಗಾಜಾ ಪಟ್ಟಿಗೆ ಬರುವ ಮಾನವೀಯ ನೆರವು ಸಾಕಷ್ಟಿಲ್ಲದಿರುವುದರಿಂದ ಮಾರುಕಟ್ಟೆಯಲ್ಲಿ ಸರಬರಾಜುಗಳು ಖಾಲಿಯಾಗುತ್ತಿವೆ. ಜನರು ಮೂಲಭೂತ ವಸ್ತುಗಳ ಕೊರತೆಯಿಂದ ತೀವ್ರವಾಗು ಬಳಲುತಿದ್ದಾರೆ ಆದರೆ ನಮಗೆ ಸರಬರಾಜು ಅತ್ಯಲ್ಪ ಪ್ರಮಾಣದಲ್ಲಿದೆ ಎಂದು ಅವರು ಹೇಳಿದರು.
ಬಿಬಿಸಿಯೊಂದಿಗೆ ಮಾತನಾಡಿದ ಅಬೀರ್ ಎಟೆಫಾ, “ಬಾಟಮ್ ಲೈನ್ ಎಂದರೆ ಜನರು ಹತಾಶರಾಗಿದ್ದಾರೆ, ಅವರು ಹಸಿದಿದ್ದಾರೆ.” ಫೋನ್ ಮತ್ತು ಇಂಟರ್ನೆಟ್ ಬ್ಲ್ಯಾಕ್ಔಟ್ಗಳು ಗೋದಾಮುಗಳು ಮತ್ತು ವಿತರಣಾ ಕೇಂದ್ರಗಳಲ್ಲಿನ ಘಟನೆಗಳಿಗೆ ಕೊಡುಗೆ ನೀಡಿರಬಹುದು ಎಂದು ಎಟೆಫಾ ಹೇಳಿದರು. ವಿತರಣಾ ತಂಡಗಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗದ ಕಾರಣ ಆಹಾರದ ವಿತರಣೆಯನ್ನು ನಿಲ್ಲಿಸಬೇಕಾಯಿತು ಎಂದು ಅವರು ಹೇಳಿದರು. ಆದರೆ ಸೇವೆಯು ನಿಧಾನವಾಗಿ ಹಿಂತಿರುಗುತ್ತಿರುವ ಕಾರಣ ನಾವು ಇಂದು ಪುನರಾರಂಭಿಸುತ್ತಿದ್ದೇವೆ ಎಂದರು.
ಮೊದಲ ಅರಬ್-ಇಸ್ರೇಲಿ ಯುದ್ಧದ ನಂತರ 1949 ರಲ್ಲಿ UNRWA ಅನ್ನು ಸ್ಥಾಪಿಸಲಾಯಿತು. ಇದು ಗಾಜಾ, ವೆಸ್ಟ್ ಬ್ಯಾಂಕ್, ಜೋರ್ಡಾನ್, ಸಿರಿಯಾ ಮತ್ತು ಲೆಬನಾನ್ನಲ್ಲಿ ಶಾಲೆಗಳು, ಪ್ರಾಥಮಿಕ ಆರೋಗ್ಯ ರಕ್ಷಣೆ ಮತ್ತು ಮಾನವೀಯ ನೆರವು ಸೇರಿದಂತೆ ಸಾರ್ವಜನಿಕ ಸೇವೆಗಳನ್ನು ಒದಗಿಸುತ್ತದೆ.