ಕೇರಳದ ಕೊಚ್ಚಿನ್ ನಲ್ಲಿರುವ ವೆಂಕಟೇಶ್ವರ ಹೋಟೆಲ್ ಮಾಲೀಕ ಸುಧಾಕರ್ ಪ್ರಭು ರಾತ್ರೋರಾತ್ರಿ ಇಂಟರ್ ನೆಟ್ ಸೆನ್ಸೇಷನ್ ಆಗಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರಂತೆ ಹೋಲಿಕೆಯನ್ನು ಕಂಡು ಅಭಿಮಾನಿಗಳು ಸಾಕಷ್ಟು ಆಶ್ಚರ್ಯಚಕಿತರಾಗಿದ್ದಾರೆ. ಕೇರಳದ ಸ್ಟಾಲ್ನಲ್ಲಿ ಚಹಾ ಮಾರುತ್ತಿರುವ ಸುಧಾಕರ್ ಸಹಜವಾಗಿಯೇ ದಿಗ್ಗಜ ನಟನ ಶೈಲಿ ಮತ್ತು ನೋಟವನ್ನು ಅಳವಡಿಸಿಕೊಂಡಿದ್ದಾರೆ.
ಭಾರತೀಯ ಸೂಪರ್ಸ್ಟಾರ್ ರಜನಿಕಾಂತ್ ಅವರ ಹೋಲಿಕೆ ಇರುವ ವ್ಯಕ್ತಿಯ ವೀಡಿಯೊ ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿದೆ. ದಕ್ಷಿಣ ಭಾರತದ ಸೂಪರ್ಸ್ಟಾರ್ ಹೋಲುವ ವ್ಯಕ್ತಿ ಚಹಾ ಅಂಗಡಿ ಮಾಲೀಕ. ಸುಧಾಕರ್ ಪ್ರಭು ಎಂದು ಹೆಸರಿಸಲಾದ ಈ ವ್ಯಕ್ತಿಗೆ ಲೆಜೆಂಡರಿ ನಟನಿಗೆ ವಿಲಕ್ಷಣವಾದ ಹೋಲಿಕೆ ಇದೆ. ವೈರಲ್ ಆಗಿರುವ ವೀಡಿಯೊದಲ್ಲಿ, ಪ್ರಭು ಒಂದು ಜೊತೆ ಶಾರ್ಟ್ಸ್ ಮತ್ತು ಶರ್ಟ್ ಧರಿಸಿರುವುದನ್ನು ಕಾಣಬಹುದು ಮತ್ತು ನಟನ ಮ್ಯಾನರಿಸಂನ್ನು ಅನುಸರಿಸುತ್ತ ಕೆಲವು ಜನರೊಂದಿಗೆ ಮಾತನಾಡುವುದನ್ನು ಕಾಣಬಹುದು.
ಕೇರಳದ ಕೊಚ್ಚಿಯ ಸ್ಟಾಲ್ನಲ್ಲಿ ಟೀ ಮಾರುವ ಸುಧಾಕರ್ ಪ್ರಭು ಅವರು ನಂಬಲಸಾಧ್ಯವಾದ ರೀತಿಯಲ್ಲಿ ರಜನಿಕಾಂತ್ ಅವರನ್ನು ಹೋಲುವ ಕಾರಣಕ್ಕಾಗಿ ಎಲ್ಲರೂ ಆಶ್ಚರ್ಯಕ್ಕೆ ಒಳಗಾಗಿದ್ದಾರೆ. ಇವರು ಸಾಮಾನ್ಯವಾಗಿ ಟೀ ಮಾರುವುದು, ಗ್ರಾಹಕರಿಗೆ ನಗುನಗುತ್ತಾ ಸೇವೆ ನೀಡುವುದು ಇವರ ಕಾಯಕ. ರಜನಿಕಾಂತ್ ಅವರ ವಿಲಕ್ಷಣ ಹೋಲಿಕೆ ಕೊಚ್ಚಿನ್ನಲ್ಲಿ ಚಿತ್ರೀಕರಣ ನಡೆಸುತ್ತಿದ್ದ ಚಿತ್ರತಂಡದ ಗಮನ ಸೆಳೆಯಿತು. ರಜನಿಕಾಂತ್ ಟೀ ಮಾರುತ್ತಿರುವುದನ್ನು ನೋಡಿದ ಸಿಬ್ಬಂದಿ ಬೆರಗಾದರು.
ನಾದಿರ್ಶಾ ಎಂಬ ಮಲಯಾಳಂ ನಿರ್ದೇಶಕರು ಫೇಸ್ಬುಕ್ನಲ್ಲಿ ಹಂಚಿಕೊಂಡ ನಂತರ ಅವರ ವೀಡಿಯೊಗಳು ವೈರಲ್ ಆಗಿವೆ. ಅಂದಿನಿಂದ, ಅವರು ಜನಪ್ರಿಯತೆಯನ್ನು ಗಳಿಸಿದ್ದಾರೆ ಮತ್ತು ಕೇರಳದ ವಿವಿಧ ಕಾರ್ಯಕ್ರಮಗಳಿಗೆ ಸಹ ಆಹ್ವಾನಿಸಲ್ಪಟ್ಟಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಅವರು ನಿಜ ಜೀವನದಲ್ಲಿ ಸರಳ ಜೀವಿ. ಅವರ ಜೀವನ ಶೈಲಿ, ಉಡುಗೆ ತೊಡುಗೆ ಮತ್ತು ಆತ್ಮೀಯವಾಗಿ ಮಾತಾನಾಡುವ ಶೈಲಿಗೆ ಹೆಚ್ಚಾಗಿ ಜನರು ಸಾಕಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿರುತ್ತಾರೆ. ನಿಜ ಜೀವನದಲ್ಲಿಯೂ ರಜನಿಕಾಂತ್ ಸರಳತೆಯಿಂದ ಇರುವುದರಿಂದಲೇ ಜನ ಸುಧಾಕರ್ ಪ್ರಭುವವರನ್ನು ಸ್ಟಾರ್ ನಟನೆಂದು ಭಾವಿಸಿದ್ದಾರೆ.