ನವರಾತ್ರಿಯ ಹಬ್ಬವನ್ನು ಪ್ರಸ್ತುತ ಭಾರತದಾದ್ಯಂತ ಆಚರಿಸಲಾಗುತ್ತದೆ. ಹಲವಾರು ಸುಂದರವಾದ ದೇವಾಲಯಗಳನ್ನು ಹೂವು, ದೀಪಗಳಿಂದ ಅಲಂಕರಿಸಿರುವುದನ್ನು ಕಾಣಬಹುದು. ವಿಶಾಖಪಟ್ಟಣಂನ ಕುರುಪಮ್ ಮಾರ್ಕೆಟ್ನಲ್ಲಿರುವ 146 ವರ್ಷಗಳಷ್ಟು ಹಳೆಯದಾದ ದೇವಾಲಯ ಕನ್ಯಕಾ ಪರಮೇಶ್ವರಿ ಅಮ್ಮಾವರಿ ದೇವಸ್ಥಾನ ಅದರ ಅಲಂಕಾರವನ್ನು ಕಂಡು ಭಕ್ತರು ಆಶ್ಚರ್ಯಚಕಿತರಾದರು. ಕೋಟ್ಯಂತರ ಮೌಲ್ಯದ ಕರೆನ್ಸಿ ನೋಟುಗಳು ಮತ್ತು ಚಿನ್ನಾಭರಣಗಳಿಂದ ದೇವಾಲಯವನ್ನು ಅಲಂಕರಿಸಲಾಗಿದೆ. ದೇವಾಲಯದ ಅಲಂಕರಣಕ್ಕೆ ಮತ್ತು ವಿಶೇಷವಾಗಿ ಕನ್ಯಕಾ ಪರಮೇಶ್ವರಿ ದೇವಿಯ ವಿಗ್ರಹಕ್ಕೆ ಬಳಸಲಾದ ಕರೆನ್ಸಿ ಒಟ್ಟು 2 ಕೋಟಿ ರೂಪಾಯಿ ಎನ್ನಲಾಗಿದೆ.
ಈ ದೇವಾಲಯದಲ್ಲಿ 10 ದಿನಗಳ ನವರಾತ್ರಿ ಉತ್ಸವದಲ್ಲಿ, ದೇವಿಯ ಅನೇಕ ಅವತಾರಗಳನ್ನು ಪೂಜಿಸಲಾಯಿತ್ತು. ಬೆಳಗಿನ ಜಾವ ವಿಶೇಷ ಅಭಿಷೇಕ ನಡೆಸಿ ದೇವಿಯ ಕೃಪೆಗೆ ಪಾತ್ರರಾದರು. ಹಾಲು, ಮೊಸರು, ಶ್ರೀಗಂಧ, ಜೇನು ಮತ್ತು ಕೆಲವು ಹಣ್ಣಿನ ರಸಗಳು ಸೇರಿದಂತೆ 18 ವಿಧದ ದ್ರವಗಳನ್ನು ಬಳಸಿ ಅಭಿಷೇಕವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ದೇವಿಯನ್ನು ಆಭರಣಗಳು ಮತ್ತು 108 ಚಿನ್ನದ ಹೂವುಗಳಿಂದ ಅಲಂಕರಿಸಲಾಯಿತು. ಅಲಂಕಾರಕ್ಕಾಗಿ ಸುಮಾರು ಆರು ಕೆಜಿ ಚಿನ್ನಾಭರಣಗಳು, ಚಿನ್ನದ ಸೀರೆ, ಚಿನ್ನದ ಬಿಸ್ಕತ್ತುಗಳು, ಆರು ಕೆಜಿ ಬೆಳ್ಳಿ ವಸ್ತುಗಳು, ಬೆಳ್ಳಿ ಬಿಸ್ಕತ್ತುಗಳು ಮತ್ತು ಎರಡು ಕೋಟಿ ಭಾರತೀಯ ಕರೆನ್ಸಿಯನ್ನು ಬಳಸಲಾಗಿದೆ.
ದೇವಸ್ಥಾನದ ಆಡಳಿತ ಮಂಡಳಿಯವರ ಪ್ರಕಾರ ಕಳೆದ 20 ವರ್ಷಗಳಿಂದ ಶರಣ ನವರಾತ್ರಿ ಉತ್ಸವದಲ್ಲಿ ದೇವಿಗೆ ನೋಟುಗಳು ಮತ್ತು ಚಿನ್ನ ಮತ್ತು ಬೆಳ್ಳಿಯ ಆಭರಣಗಳಿಂದ ಅಲಂಕರಿಸಲಾಗುತ್ತಿದೆ. ಪೂಜೆಗಾಗಿ ಅಮ್ಮನವರ (ದೇವಿ) ಮುಂದೆ ಕರೆನ್ಸಿ ಮತ್ತು ಚಿನ್ನವನ್ನು ಇಡುವುದು ಅವರಿಗೆ ಅದೃಷ್ಟ ಎಂದು ಜನರ ನಂಬಿಕೆ. ಇವೆಲ್ಲವೂ ಸಾರ್ವಜನಿಕ ಕೊಡುಗೆ. ದೇವಾಲಯದ ಸಂಪ್ರದಾಯದಂತೆ, ದೇವಿಯ ವಿಗ್ರಹವನ್ನು ದೇವಿ ನವರಾತ್ರಿ ಉತ್ಸವದಲ್ಲಿ (ದೇವರು ಮಹಾಲಕ್ಷ್ಮಿಯ ಅವತಾರವನ್ನು ತೆಗೆದುಕೊಳ್ಳುವ ದಿನ) ಚಿನ್ನದ ಆಭರಣಗಳು ಮತ್ತು ವಿವಿಧ ಮುಖಬೆಲೆಯ ಕರೆನ್ಸಿ ನೋಟುಗಳಿಂದ ಅಲಂಕಾರಿಸಲಾಗುತ್ತದೆ.