ಈ ಸಮ್ಮೇಳನವಾದ ಹದಿನೈದು ದಿನಗಳಲ್ಲಿಯೇ ತಿಲಕರು ಕಾಂಗ್ರೆಸ್ ಡೆಮೋಕ್ರಾಟಿಕ್ ಪಾರ್ಟಿ (ಕಾಂಗ್ರೆಸ್ ಪ್ರಜಾಸತ್ತೆಯ ಪಕ್ಷ)ವೆಂದು ಕರೆದುದರ ಘೋಷಣಾ ಪತ್ರವನ್ನು ಪ್ರಕಟಿಸಿದರು. : ಕಲ್ಕತ್ತೆಯ ವಿಶೇಷಾಧಿವೇಶನವು ಹೊರಡಿಸಬೇಕಾಗಿದ್ದ ಘೋಷಣಾಪತ್ರಕ್ಕೆ ಇದು ಚರ್ಚೆಗೆ ಅಧಾರಕರಡಾಗಿರಬೇಕೆಂದು ಅವರಿಚ್ಛಿಸಿದರು. ಇದು ಏಪ್ರಿಲ್ ೧೯೨೦ರ ನಡುಭಾಗದಲ್ಲಿ, ಕೊಲ್ಲಾಪುರದಲ್ಲಿ ಮಂದಗಾಮಿಗಳೂ ಬ್ರಾಹ್ಮಣೇತರರೂ ಸಭೆಯನ್ನು ಮುರಿಯಲು ಗೂಂಡಾಗಳನ್ನು ಗೊತ್ತುಪಡಿಸಿಕೊಂಡಿದ್ದರು ; ಆದರೆ ಪೋಲೀಸರೂ ಜಿಲ್ಲಾ ನ್ಯಾಯಾಧೀಶರೂ ಸೇರಿ ಅದನ್ನು ಎಷ್ಟು ಸುಲಭವಾಗಿ, ಬೇಗನೆ ತಹಬಂದಿಗೆ ತಂದರೆಂದರೆ, ಗಲಭೆಯ ಚಿಹ್ನೆ ಕೂಡಾ ಕಾಣಲಿಲ್ಲ.
ಹೆದರಿಕೆಯಿಲ್ಲದುದರಿಂದ, ಅಲ್ಲಿ ತೀವ್ರವಾದಿಗಳಾದರು. ಮತ್ತೆ ಕೆಲವರು ಭಾರತದಲ್ಲಿದ್ದಾಗ ಆ ಸುಧಾರಣೆಗಳು ಅಸಮರ್ಪಕ ಮತ್ತು ಸಾಲದೆಂದು ಹೇಳುತ್ತಿದ್ದರು. ಇಂಗ್ಲೆಂಡಿನಲ್ಲಿ ಅದೇ ಜನರೇ ಈ ಸುಧಾರಣೆಗಳು ಸರಿಯಾದುವೆಂದೂ ಒಪ್ಪಿಗೆಗೆ ಅರ್ಹವಾಗಿದೆಯೆಂದೂ ಹೇಳಿದರು. ಇದು ಕಾಂಗ್ರೆಸ್ಸಿಗರೂ ಹೋಂರೂಲ್ ಲೀಗಿನವರೂ ತುಂಬಾ ಮೊಂಡರೆಂದೂ ಹವಣರಿಯದವರೆಂದೂ ಬ್ರಿಟಿಷ್ ಜನತೆಗೆ ತೋರಿಕೊಡುವ ಉದ್ದೇಶದಿಂದ ಅಷ್ಟೇ. ಈ ರೀತಿಯ ಧೋರಣೆಯ ಬದಲಾವಣೆ ಪ್ರಯೋಜನವಿಲ್ಲದುದು. ಕೊನೆಯದಾಗಿ ನಾನು ನಿಮಗೂ, ನಾನು ಚುನಾವಣೆಗೆ ನಿಲ್ಲಬೇಕೆಂದು ಸೂಚಿಸಿರುವ ಗಂಗಾಧರರಾವ್ ದೇಶಪಾಂಡೆಯವರಿಗೂ ವಿಶೇಷವಾಗಿ ಹೇಳುವುದೇನೆಂದರೆ, ನನಗೇ ಆ ವಿಷಯದ ತೀರ್ಮಾನವನ್ನು ಬಿಟ್ಟುಬಿಡಿ. ನನ್ನ ದೈಹಿಕ ಬಲ, ಸಹಿಸುವ ಶಕ್ತಿಗಳು ಕುಗ್ಗುತ್ತಿದೆಯೆಂದು ನನಗೆ ಖಚಿತವಾಗಿ ಎನ್ನಿಸುತ್ತಿದೆ. ಆದುದರಿಂದ ದೈಹಿಕ ಶ್ರಮ ಮತ್ತು ನನ್ನ ಆರೋಗ್ಯಕ್ಕೆ ತೊಂದರೆಯಾಗುವಂತಹುದೇನನ್ನೂ ಕೈಗೊಳ್ಳಲೂ ನನಗೀಗ ಧೈರ್ಯವಿಲ್ಲ.”
ಹೋಂರೂಲ್ ಲೀಗಿನ ಈ ವಾರ್ಷಿಕಾಧಿವೇಶನ ಮುಗಿದೊಡನೆಯೇ, ತಿಲಕರು ಮೇ ೨೭ರಂದು ಎ.ಐ.ಸಿ.ಸಿ.ಯಲ್ಲಿ ಭಾಗವಹಿಸಲು ಕಾಶಿಗೆ ಹೋದರು. ಅಲ್ಲಿಯ ವಿಚಾರ ವಿನಿಮಯದಲ್ಲಿ ಅವರು ಹೆಚ್ಚು ಭಾಗವಹಿಸಲಿಲ್ಲ. ಖಿಲಾಫರ್ ಮತ್ತು ಪಂಜಾಬ್ ಹತ್ಯಾಕಾಂಡದ ಪ್ರಶ್ನೆಗಳೇ ಸಮಿತಿಯ ಆಸಕ್ತಿಯನ್ನೆಲ್ಲಾ ಸೆಳೆದಿದ್ದುವು. ಗಾಂಧೀಜಿ ಮತ್ತು ಮುಸ್ಲಿಂ ನಾಯಕರು ತಮ್ಮ ಧೋರಣೆಯನ್ನು ಸ್ಥಿರಪಡಿಸಿ ತಿಳಿಸಬೇಕೆಂದೂ, ಈ ಎರಡೂ ವಿಚಾರಗಳ ಬಗ್ಗೆ ಪರಿಹಾರಕ್ಕಾಗಿ ಯೋಜನೆಯನ್ನು ಸಿದ್ಧ ಪಡಿಸಬೇಕೆಂದೂ, ಅವುಗಳಿಗೆ ತಾವು ನಿಸ್ಸಂಕೋಚವಾಗಿ ಬೆಂಬಲ ನೀಡುವುದಾಗಿಯೂ ತಿಲಕರು ಅವರಿಗೆ ತಿಳಿಸಿದರು. ಕಾಶಿಯ ಸಂಸ್ಕೃತ ಪಂಡಿತರು ತಿಲಕರಿಗೊಂದು ಸತ್ಕಾರ ಸಮಾರಂಭವನ್ನೇರ್ಪಡಿಸಿದರು. ಕಾಶಿಯಲ್ಲಿಯೇ ತಿಲಕರು ಮೂರು ಸಾರ್ವಜನಿಕ ಭಾಷಣಗಳನ್ನು ಮಾಡಿದರು. ಅಲ್ಲಿಂದ ಅವರು ಜಬ್ಬಲುರಕ್ಕೆ ತೆರಳಿ, ಅವರೂ ಪರ್ಡೆಯೂ ಜನ್ ೫ರಂದು ಸಾರ್ವಜನಿಕ ಭಾಷಣಗಳನ್ನು ಮಾಡಿದರು. ಅನಂತರ ಪುಣೆಗೆ ಹಿಂದಿರುಗಿದರು. ತಿಲಕರಿಗೆ ಅರ್ಪಿಸಿದ ನಿಧಿಯ ಸಂಬಂಧದಲ್ಲಿ ದಿವಂಗತ ಎ.ಬಿ. ಕೊಟ್ಟರರೂ ಸಿಕ್ಕಿಹಾಕಿಕೊಂಡಿದ್ದ ಹಣದ ದುರುಪಯೋಗದ ಪ್ರಕರಣ ಒಂದಿದ್ದು ತಿಲಕರು ಆ ಬಗ್ಗೆ ಕೊನೆಯ ತೀರ್ಪಿನ ಮಾತನ್ನು ಹೇಳಿದರು. ೩೫೦೦ ರೂಪಾಯಿಗಳು ಕೊಟ್ಟರರ ಹತ್ತಿರವಿದ್ದು, ಅದರ ಚೆಕ್ಕನ್ನು ಹೇಗೆ ಮುರಿಸಿತೆಂದಾಗಲಿ, ಆ ಹಣವನ್ನು ಹೇಗೆ ಖರ್ಚುಮಾಡಿತಂದಾಗಲಿ ಹೇಳಲು ಅವರು ಅಸಮರ್ಥರಾಗಿದ್ದರು. ಕೊಬ್ಬಟ್ಟರರು ತಿಲಕರ ಮೆಚ್ಚುಗರೂ ಮತ್ತು ಉತ್ತಮ ಅನುಯಾಯಿಗಳೂ ಅಲ್ಲದೆ ರಾಷ್ಟ್ರೀಯ ಚಳವಳಿಯ ಪ್ರಗತಿಗಾಗಿ ಅಪಾರ ತ್ಯಾಗ ಮಾಡಿ ಕಷ್ಟನಷ್ಟಗಳನ್ನನುಭವಿಸಿದರು. ದಿನದಿನವೂ ರಾಜಕೀಯದ ಮಹತ್ವವನ್ನು ಮರಾಠಿ ಜನರು ತಿಳಿಯುವಂತೆ ಮಾಡಿದುದೇ ಕೊಬ್ಬಟ್ಟರರ ದೈನಿಕ ಪತ್ರಿಕೆ – ‘ಸಂದೇಶ’. ಆದರೆ ಆತ ಇದ್ದಕ್ಕಿದ್ದಂತೆಯೇ ತಿರುಗಿಬಿದ್ದು ತಿಲಕರ ರಾಜಕೀಯ ಧೋರಣೆಗಳನ್ನು ಸುಳ್ಳು ಕಾರಣಕ್ಕಾಗಿ ನಿಷ್ಕಾರಣವಾಗಿ ಕಟುನಿಂದ ಮಾಡಲಾರಂಭಿಸಿದರು. ಆತ ಹಣದ ತೊಂದರೆಯಲ್ಲಿ ಸಿಕ್ಕಿಕೊಂಡು, ಯಾವುದೋ ಗುಪ್ತವಾದ ಕೆಟ್ಟ ಪ್ರಭಾವಕ್ಕೆ ಬಿದ್ದು ಹಾಗೆ ಮಾಡಿದನೆಂದು ಎಲ್ಲರೂ ಆಡಿಕೊಳ್ಳುತ್ತಿದ್ದರು. ಕೊನೆಗೆ ತಿಲಕರು ವಿಧಿಯಿಲ್ಲದ ಈ ಪಕ್ಷದ ವ್ಯಕ್ತಿಯ ಬಗ್ಗೆ ಕೊನೆಯ ಹೇಳಿಕೆಯೊಂದನ್ನು ಕೊಡಲೇಬೇಕಾಯಿತು.
ಸೇರಿದರು. ಆಗ ತಿಲಕರು ತಮ್ಮ ಮಗನನ್ನು ಯಾವುದೋ ಸಣ್ಣ ಕಾರಣಕ್ಕಾಗಿ ಮುಂಬಯಿಯಿಗೆ ಓಡಿಬಂದನೆಂದೂ, ಹೆಣ್ಣು ಮಕ್ಕಳು ತವರು ಮನೆಯನ್ನು ಕಂಡರೆ ವಿಪರೀತ ಪ್ರೀತಿ ತೋರುತ್ತಿರುವರೆಂದೂ ಹಾಸ್ಯ ಮಾಡಿದರು ! ತಮ್ಮ ವ್ಯವಹಾರಗಳ ಬಗ್ಗೆ ಯಾವುದೇ ರೀತಿಯ ಸೂಚನೆಗಳನ್ನೂ, ಬೇರೆಯವರು ಬಲವಂತ ಮಾಡಿದರೂ, ಅವರು ಕೊಡಲಿಲ್ಲ. “ನಾನಿನ್ನು ಐದು ವರ್ಷಗಳ ಕಾಲ ಸಾಯುವುದಿಲ್ಲ. ಆ ಬಗ್ಗೆ ಖಂಡಿತವಾಗಿರಿ’ ಎಂದು ಬಿಟ್ಟರು. ೨೮ನೆಯ ತಾರೀಕು ಜ್ವರ ತಗ್ಗಿತು, ನಾಡಿಯೂ ಸಮವಾಯಿತು. ವೈದ್ಯರೂ ಸೇರಿ ಎಲ್ಲರೂ ಅದು ಉತ್ತಮ ಚಿಹ್ನೆಯೆಂದು ಸಂತೋಷಿಸಿದರು. ಆದರೆ ನಿಜವಾಗಿ, ಆರುವ ಮೊದಲು ದೀಪದ ಕೊನೆಯ ಮಿಂಚು ಮಾತ್ರ ಅದು! ಮಧ್ಯಾಹ್ನ ಮತ್ತೆ ಜ್ವರ ಬಂದು, ತಿಲಕರಲ್ಲಿ ನಿಶ್ಯಕ್ತಿಯ ಚಿಹ್ನೆ ಕಾಣಿಸಿಕೊಂಡಿತು. ಜ್ಞಾನ ತಪ್ಪಿಹೋಗಿ, ಸನ್ನಿಯ ಕನವರಿಕೆ (Delirium) ಆರಂಭವಾಯಿತು. ಜುಲೈ ೨೯ರಂದು ಕೂಡ ಹೆಚ್ಚು ಕಡಿಮೆ ಅದೇ ಸ್ಥಿತಿಯೇ! ಇನ್ನೊಂದು ತೊಡಕು ಕೂಡ ಕಾಣಿಸಿಕೊಂಡಿತು. ಅವರ ಹೊಟ್ಟೆಯು ಉಬ್ಬರಿಸಿಕೊಂಡಿತು. ಈ ತೊಡಕನ್ನು ಬಹಳ ಚಾಕಚಕ್ಯತೆಯಿಂದ ವೈದ್ಯರು ಪರಿಹರಿಸಿದರು. ೩೦ನೆಯ ತಾರೀಕು ಹೃದಯ ಶೂಲೆಯು ಕಾಣಿಸಿ, ತೀವ್ರವಾಗಿ ಪರಿಣಮಿಸಿತು. ಆದರೆ ವೈದ್ಯರು ಸಮಯಕ್ಕೆ ಸರಿಯಾದ ಪ್ರಯತ್ನ ನಡೆಸಿ, ಅದನ್ನು ಇಳಿಸಿದರು. ಅನಂತರ ಅವರಿಗೆ ಮೂರು ಬಾರಿ ಶೂಲೆಯು ಬಂದರೂ, ಅಷ್ಟು, ಪ್ರಬಲವಾಗಿರಲಿಲ್ಲ. ೩೦ ಮತ್ತು ೩೧ರಂದು ಕೂಡ ಅದೇ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಮುಂದುವರಿದರು. ನಾಡಿಯ ಮಿಡಿತವೂ ಹದಗೆಟ್ಟು ದುರ್ಬಲವಾಗಿತ್ತು. ಹೃದಯ ಸತ್ವರಹಿತವಾಗುತ್ತಾ ಬಂತು. ರಾತ್ರಿ ೧೦-೩೦ರ ವೇಳೆಗೆ ಹೃದಯವು ಸುಸ್ತಾದಂತೆ ಕಾಣಿಸಲಾರಂಭಿಸಿತು. ಉಸಿರಾಟವು ಹೆಚ್ಚುಹೆಚ್ಚು ಕಷ್ಟವಾಗುತ್ತಾ ಬಂತು. ಅಂದು ಮಧ್ಯರಾತ್ರಿಯ ನಂತರ, ೧೯೨೦ರ ಆಗಸ್ಟ್ ೧ರ ಬೆಳಗಿನ ಜಾವದ ೧೨-೫೦ಕ್ಕೆ, ತಿಲಕರನ್ನು ಸಾವು ಕರೆದೊಯ್ದಿತು
ಮುಗಿಯಿತು…….