ಭಾರತದಲ್ಲಿ ಪ್ರತಿಯೊಂದು ಗಿಡವನ್ನು ಮನೆಮದ್ದಗಿಗಾಗಿ ಉಪಯೋಗಿಸುತ್ತಾರೆ, ಹಿಂದೂ ಧರ್ಮದಲ್ಲಿ ತುಳಸಿ ಗಿಡವು ಬಹಳ ಪವಿತ್ರಯಿಂದ ನೋಡಲಾಗುತ್ತದೆ. ವಿಷ್ಣುವಿಗೆ ಪ್ರಿಯಾವಾದ ತುಳಸಿ ಗಿಡವನ್ನು ಭಾರತದಲ್ಲಿ ಪ್ರತಿ ಮನೆಗಳಲ್ಲೂ ಬೆಳಸಿ ಪೂಜೆ ಮಾಡುತ್ತಾರೆ.
ತುಳಸಿ ಗಿಡದಲ್ಲಿ ಅನೇಕ ಔಷಧೀಯ ಗುಣಗಳಿವೆ ಅದನ್ನು ಪೂಜನೀಯ ಸ್ಥಾನವನ್ನು ಕೊಡಲಾಗಿದೆ. ಧಾರ್ಮಿಕ ಹಾಗೂ ಆರೋಗ್ಯದ ದೃಷ್ಟಿಯಿಂದ ಹಲವು ಮಹತ್ವಗಳನ್ನು ಹೊಂದಿರುವ ತುಳಸಿ ಗಿಡವು ಹೊಂದಿವೆ.
ಏಕಾದಶಿಯಂದು ತುಳಸಿ ಎಲೆಗಳನ್ನು ಕೀಳಬಾರದು. ಒಣಗಿದ ತುಳಸಿ ಗಿಡಗಳನ್ನು ಇಟ್ಟುಕೊಳ್ಳುವುದು, ಸಾಮಾನ್ಯಗಿಡಗಳಂತೆ ಎಸೆಯುವುದು ಸೂಕ್ತವಲ್ಲ. ಅದನ್ನು ನೀರಿನಲ್ಲಿ ವಿಸರ್ಜಿಸುವುದು ಸೂಕ್ತ, ಒಣಗಿದ ತುಳಸಿ ಗಿಡವನ್ನು ವಿಸರ್ಜಿಸಿದ ನಂತರ ತಕ್ಷಣವೇ ಹೊಸ ಗಿಡವನ್ನು ನೆಡಬೇಕು.
ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಪೂಜೆ ಸಲ್ಲಿಸಲಾಗತ್ತದೆ. ಈ ತುಳಸಿ ಗಿಡಕ್ಕೆ ಆಮ್ಲಜನಕ ಬಿಡುಗಡೆ ಮಾಡುವ ರೋಗ ನಿರೋಧಕ ಶಕ್ತಿ ಮತ್ತು ಔಷಧಿ ಗುಣಗಳಿವೆ. ಈ ಹಿನ್ನೆಲೆಯಲ್ಲಿ ತುಳಸಿಯ ಗಿಡಕ್ಕೆ ಬೆಳಿಗ್ಗೆ ಪೂಜೆ ಸಲ್ಲಿಸುವುದರಿಂದ ಉಸಿರಾಟಕ್ಕೆ ಶುದ್ಧ ಗಾಳಿ ಸಿಗುತ್ತದೆ.
ಭಾರತದಲ್ಲಿ ಪ್ರತಿ ವರ್ಷವು ತುಳಸಿ ಮದುವೆ ಎಂದು ಆಚರಿಸಲಾಗುತ್ತದೆ. ಅದ್ದೂರಿಯಾಗಿ ಕಬ್ಬು, ಮಾವಿನ ತೋರಣ, ಹಣ್ಣು, ಹೂವುಗಳಿಂದ, ಹುಣಸೇಕಾಯಿ, ನೆಲ್ಲಿಕಾಯಿ ಇಂದ ತುಳಸಿ ಗಿಡವನ್ನು ಅಲಂಕರಿಸಿ ಶಾಸ್ತ್ರೋಕ್ತವಾಗಿ ಪೂಜಿಸಲಾಗುತ್ತದೆ.